ಪುಟ:Mysore-University-Encyclopaedia-Vol-6-Part-5.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತದಲ್ಲಿ ಕೀತಿ೯ಗಳಿಸಿದ್ದ ಈತ ಅ೦ತಾರಾಷ್ಟ್ರೀಯ ಕುಸ್ತಿಯಲ್ಲಿ ಭಾಗವಹಿಸಿ ಭಾರತಕ್ಕೆ ಕೀತಿ೯ ತ೦ದೇ ತರುತ್ತಾನೆ ಎ೦ಬ ಅಚಲ ವಿಶ್ವಾಸ ಬ೦ಗಾಲದ ದೊಡ್ಡ ಶ್ರೀಮ೦ತ ಸರತ್ ಕುಮಾರ್ ಮಿತ್ರನಿಗೆ ಇತ್ತು. 1910ರಲ್ಲಿ ಲ೦ಡನ್ನಿನಲ್ಲಿ ಜಾನ್ ಬುಲ್ ವಿಶ್ವಕುಸ್ತಿ ಚಾ೦ಪಿಯಾನ್ ಷಿಪ್ ಸ್ಪಧೆ೯ ನಡೆಯುವುದಿತ್ತು. ಈ ಸ್ಪಧೆ೯ಯಲ್ಲಿ ಭಾಗವಹಿಸಲು ಸರತ್ ಕುಮಾರ ಮಿತ್ರ ಅವರು ಗಾಮ ಮತ್ತು ಇಮಾ೦ ಭಕ್ಷ ಇಅವರಿಬ್ಬರ ಖಚಿ೯ನ ಹೊಣೆಯನ್ನು ತಾವೆ ಪೂಣ೯ವಹಿಸಿಕೊ೦ಡು ಲ೦ಡನ್ನಿಗೆ ಕರೆದೊಯ್ದರು. ಲ೦ಡನ್ನಿನಲ್ಲಿ ವಿಶ್ವಕುಸ್ತಿ ಸ್ಪಧೆ೯ಯಲ್ಲಿ ಭಾಗವಹಿಸಲು ಅತ್ಯ೦ತ ಉತ್ಸಾಹದಿ೦ದ ಹೋದ ಗಾಮನಿಗೆ ಆ ಸ್ಪಧೆ೯ಯಲ್ಲಿ ಭಾಗವಹಿಸಲು ಅವಕಾಶ ದೊರೆಯಲಿಲ್ಲ.ಇದಕ್ಕೆ ಕಾರಣ ಗಾಮ 5 7" ಮಾತ್ರ ಎತ್ತರವಿದ್ದು ತೂಕದಲ್ಲಿ 250 ಪೌ೦ಡು ಇದ್ದುದು.ಇವನು ಇತರ ಕ್ಯಾತ ಪೈಲ್ವಾನರ ಜೊತೆ ಸೆಣಸಾಡಲಾರನೇ೦ಬುದೇ ಅವರು ಕೈಗೊ೦ಡ ತೀಮಾ೯ನ. ಇದರಿ೦ದಾಗಿ ಇಅವನಿಗೆ ಅವಮಾನವಾದ೦ತಾಯಿತು. ಅಸಾಧಾರಣ ಕೋಪದಿಂದ ಸ್ಪಧೆ೯ ನಡೆಯಲ್ಲಿದ್ದ ಕ್ರೀಡಾಂಗಣದಲ್ಲಿ ನಿಂತು ಇಡೀ ಇಂಗ್ಲೆಂಡಿನಲ್ಲಿ ಯಾರೇ ಆದರೂ ಸರಿ ತನ್ನನ್ನು ಗೆಲ್ಲುವುದಿರಲಿ ತನ್ನ ಜೊತೆ 5 ನಿಮಿಷಗಳ ಕಾಲ ನಿಂತು ಹೋರಾಡಿದರೆ ಅವರಿಗೆ ತಾನೇ 15 ಪೌಂಡುಗಳನ್ನು ಬಹುಮಾನವಾಗಿ ಕೊಡುವುದಾಗಿ ಸವಾಲು ಹಾಕಿದ. ಇವನ ಜೊತೆ ಹೋರಾಡಲು ಬಂದ ಮೂರು ಜನ ಪೈಲ್ವಾನರನ್ನು 2 ನಿಮಿಷದೊಳಗೆ ಸೋಲಿಸಿದ. ಎರಡನೆಯ ದಿನ ತನ್ನ ಜೊತೆ ಕುಸ್ತಿ ಮಾಡಲು ಬಂದ 12 ಜನ ಪೈಲ್ವಾನರುಗಳಿಗೂ ಅದೇ ಗತಿ ಕಾಣಿಸಿ, ಪ್ರೇಕ್ಷ್ ಕರಿಗೆ ದಿಗ್ಬ್ರ್ ಮೆ ಹಿಡಿಸಿದ.

ಇದಾದ ಅನಂತರ ವಿಶ್ವಕುಸ್ತಿ ಸ್ಪರ್ಧೆಯ ವ್ಯವಸ್ತಾಪಕರು ಇವನಿಗೆ ವಿಶ್ವಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲೇಬೇಕಾಯಿತು. 1910ರ ಸೆಪ್ಟೆಂಬರ್ 10ರಂದು ಈತ ಖ್ಯಾತಿವೆತ್ತ ಅಮೆರಿಕದ ಕುಸ್ತಿಪಟ್ಟು ಇ. ರೋಲರ್ ನನ್ನು ಎದುರಿಸಬೀಕಾಯಿತು. ರೋಲರ್ ನನ್ನು 15 ನಿಮಿಷಗಳಲ್ಲಿ 12 ಸಾರಿ ಕೆಡವಿ ಪ್ರೇಕ್ಷ್ ಕರು ಹುಚ್ಚೆದ್ದು ಕುಣಿಯುವಂತೆ ಮಾಡಿದ. ಅನಂತರ ವಿಶ್ವಚಾಂಪಿಯನ್ ಎನಿಸಿಕೊಂಡಿದ್ದ ಆಸ್ಟ್ರೇಲಿಯದ ಜಿಬಿಸ್ಕೊನನ್ನು ಎದುರಿಸಿದ. ದಿಗ್ಗಜಗಳಂತೆ ಇಬ್ಬ್ ರೂ ಹೋರಾಡಿದರು. ಸತತವಾಗಿ ಮೂರು ಗಂಟೆಗಳ ಕಾಲ ನಡೆದ ಈ ಪಂದ್ಯದಲ್ಲಿ ಈತ ಜಿಬಿಸ್ಕೊನನ್ನು ಹಲವಾರು ಬಾರಿ ಸೋಲಿಸಿದ್ದ. ಕುಸ್ತಿಪಂದ್ಯದ ನೀತಿನಿಯಮಗಳನ್ನು ರೆಫರಿಗಳು ಸರಿಯಾಗಿ ಪಾಲಿಸದೆ ಪಕ್ಷ್ ಪಾತ ತೋರಿಸಿದರಂತೆ. ಪಂದ್ಯ ಅಂತ್ಯವಾಗಲಿಲ್ಲವೆಂದು ಹೇಳಿ ಮಾರೆನೆಯ ದಿವಸಕ್ಕೆ ಪಂದ್ಯವನ್ನು ಮುಂದೂಡಲಾಯಿತು. ಮಾರನೆಯ ದಿನ ಗಾಮ ಅತ್ಯಂತ ಉತ್ಸಾಹದಿಂದ ಕುಸ್ತಿಯ ಕಣಕ್ಕೆ ಹಾಜರಾದ. ಆದರೆ, ಹಿಂದಿನ ದಿವಸ ಗಾಮನಿಂದ ಮೈಮೂಳೆ ಮುರಿಸಿಕೊಂಡಿದ್ದ ಜಿಬಿಸ್ಕೊ ಹಾಸಿಗೆಯಿಂದ ಏಳುವುದು ಸಾಧ್ಯವಾಗದೆ ಸ್ಪರ್ಧೆಗೆ ಗೈರುಹಾಜರಾದ. ಅಂದೇ ಈತ ವಿಶ್ವಕುಸ್ತಿ ಪ್ರಶಸ್ತಿಯನ್ನು ಗೆದ್ದುಕೊಂಡು ವಿಶ್ವಚಾಂಪಿಯನ್ ಬಿರುದಿನೊಡನೆ ಭಾರತದ ಕೀರ್ತಿಪತಾಕೆಯನ್ನು ಎತ್ತಿಹಿಡಿದ. ಕೆಲವು ತಿಂಗಳ ಅನಂತರ ಈತ ಜಿಬಿಸ್ಕೊನನ್ನು ಪಾಟಿಯಾಲದಲ್ಲೂ ಎದುರಿಸಿದ. ಜಿಬಿಸ್ಕೊಗೆ ಇವನ ಜೊತೆ ಮತ್ತೆ ಕುಸ್ತಿ ಮಾಡುವುದು ಇಷ್ಟ್ ವಿರಲಿಲ್ಲ. ಆದರೆ ಅವನ ದೇಶದ ಜನ ವಿಶ್ವಚಾಂಪಿಯನ್ ಷಿಪ್ ಬಿರುದನ್ನು ಮತ್ತೆ ಪಡೆಯುವಂತೆ ಜಿಬಿಸ್ಕೊನನ್ನು ಪ್ರೇರೇಪಿಸಿದರು. ಆದರೆ ಈ ಸಾರಿ ಗಾಮ ಕೇವಲ ಎರಡು ಸೆಕೆಂಡುಗಳಲ್ಲಿ ಜಿಬಿಸ್ಕೊನನ್ನು ಸೋಲಿಸಿ ಇಡೀ ವಿಶ್ವದಲ್ಲಿ ಅಜೇಯನೆನಿಸಿಕೊಂಡ. ಆರಂಭಿಕ ಪಂದ್ಯಗಳು ಸಮವಾದರೂ ಸು. 5,000 ಪಂದ್ಯಗಳಲ್ಲಿ ಈತ ಅಜೇಯನಾಗಿದ್ದ.

1919ರಲ್ಲಿ ಜಲಿಯನ್ ವಾಲಾ ಪ್ರಕರಣದ ಸಂದರ್ಭದಲ್ಲಿ ಬಂಧಿಸಲ್ಪಟ್ಟ್ ವರಲ್ಲಿ ಇವನೂ ಒಬ್ಬ್. ಕಾರಾಗೃಹ ವಾಸದ ಅವಧಿಯಲ್ಲಿ ಇವನೊಂದಿಗೆ ಜೈಲಿನ ಸಿಬ್ಬಂದಿ ಸಾಧಾರಣ ವ್ಯಕ್ತಿಯೊಂದಿಗೆ ವ್ಯವಹರಿಸುವಂತೆಯೇ ವ್ಯವಹರಿಸಿತು. ಆದ್ದರಿಂದ ಇವನ ಬಾಳಿನ ನಿಯಮಬದ್ಧ್ ತೆಗೆ ಭಂಗ ಬಂತು. ಕಸರತ್ ಹಾಗೂ ಮಾಲಿಗಳ ಅಭಾವದಿಂದ ಇವನಿಗೆ ಸಾಧಾರಣ ಜ್ವರ ಕಣಿಸಿಕೊಂಡಿತು. ಮೈಕೈಯಲ್ಲಿ ನೋವು ಕಾಣಿಸಿತು. ಇನ್ನು ಆಹಾರದ ವಿಷಯವಂತೂ ಹೇಳುವ ಹಾಗೇ ಇರಲಿಲ್ಲ. ಈ ಸಂದರ್ಭದ ದುರುಪಯೋಗ ಪಡೆಯಲು ಅಧಿಕಾರಿಗಳು ಎಷ್ಟೇ ಆಸೆ ತೋರಿಸಿದರೂ ಈತ ಅದಾವುದಕ್ಕು ಬಗ್ಗಲಿಲ್ಲ. ತನ್ನ ಇತರ ರಾಜಕೀಯ ಚಳವಳಿಗಾರರ ವಿಷಯ ಹೇಳಲಿಲ್ಲ. ಬೇಸತ್ತ ಅಧಿಕಾರಿಗಳು ಕೊನೆಗೆ ಇವನನ್ನು ಬಿಡುಗಡೆಗೊಳಿಸಬೇಕಾಯಿತು.

ಈತ ತನ್ನ್ ಬದುಕಿನ ಕೊನೆಯ ದಿನಗಳಲ್ಲಿ ಪಡಬಾರದ ಕಷ್ಟ್ ಗಳನ್ನು ಎದುರಿಸಬೇಕಾಯಿತು. ಭಾರತ ಸರ್ಕಾರದಿಂದ ಯಾವ ಪುರಸ್ಕಾರವು ಇವನಿಗೆ ಸಿಗಲಿಲ್ಲ. ಅನ್ನ ಆಹಾರಗಳಿಲ್ಲದೆ ಸಾಯುವ ದುರ್ಗತಿ ಬಂತು. ಇವನಿಗೆ ಒದಗಿದ ಈ ದುರ್ಗತಿಯನ್ನು ಕಂಡು ಪಾಕಿಸ್ತಾನದ ಸರ್ಕಾರ ಧನಸಹಾಯ ಮಾಡುವುದಾಗಿ ಭರವಸೆಯಿತ್ತು ಗಾಮರನ್ನು ತನ್ನಲ್ಲಿಗೆ ಕರೆಸಿಕೊಂಡಿತು. ಕೊನೆ ಕೊನೆಯ ದಿನಗಳಲ್ಲಿ ತನ್ನ ಮೂಗಿನ ಮೇಲೆ ಕುಳಿತ ನೊಣವನ್ನ್ನು ಕೂಡ ಕೈಯಿಂದ ಹೊಡೆದು ಓಡಿಸಲಾಗದಷ್ಟು ನಿಶ್ಯಕ್ತನಾಗಿದ್ದ ಸ್ಥಿತಿಯಲ್ಲಿ ಈತ ಪಾಕಿಸ್ತಾನದಲ್ಲಿ 1953ರಲ್ಲಿ ನಿಧನನಾದ.

ಗಾಮ, ವಾಸ್ಕೋ ಡ : ಸು. 1460-1524. ಪೋರ್ಚುಗೀಸ್ ನಾವಿಕ. ಭಾರತಕ್ಕೆ ಸಮುದ್ರಮಾರ್ಗ ಕಂಡುಹಿಡಿದವ. ಜನನ, ಆಲೇಂತೇಜೂ ಪ್ರಾಂತದ ಸ್ಪೆನ್ಸ್ನಲ್ಲಿ. ಗಾಮನ ಬಾಲ್ಯದ ಬಗ್ಗೆ ವಿವರಗಳು ತಿಳಿದುಬಂದಿಲ್ಲ. 1492ರಲ್ಲಿ ಕೆಲವು ಫ್ರೆಂಚ್ ಹಡಗುಗಳನ್ನು ವಶಪಡಿಸಿಕೊಳ್ಳುವ ಸೈನ್ಯಕಾರ್ಯಚರಣೆಯಲ್ಲಿ ಈತ ಪಾತ್ರವಹಿಸಿದ್ದ. ಗುಡ್ ಹೋಪ್ ಭೂಶಿರವನ್ನು ಕಂಡುಹಿಡಿದ ಬಾರ್ತಲೋಮ್ಯು ಡೀಯಷನ ಕಾರ್ಯವನ್ನು ಮುಂದುವರಿಸಿ ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡುಹಿಡಿಯುವ ಕಾರ್ಯದಲ್ಲಿ ಪೋರ್ಚುಗಲ್ ದೊರೆ ಎರಡನೆಯ ಜಾನನಿಂದ ನಿಯುಕ್ತನಾದ. ಈ ಅನ್ವೇಷಣ ಯಾತ್ರೆ 1497ರ ಜುಲೈ 8 ರಂದು ಲಿಸ್ಬನಿನಿಂದ ಹೊರಟಿತು. ಗಾಮನ ವಶದಲ್ಲಿ ನಾಲ್ಕು ಹಡಗುಗಳಿದ್ದವು. ಇವನ ಯಾತ್ರೆ ಕ್ಯಾನರೀ ದ್ವೀಪಗಳನ್ನು ತಲುಪಿದ್ದು ಜುಲೈ 15 ರಂದು. ನಾವಿಕರ ತಂಡ ಆ ತಿಂಗಳ 26ರಂದು ಕೇಪ್ ವರ್ಡ್ ದ್ವೀಪಗಳನ್ನು ತಲುಪಿತು. ಆಗಸ್ಟ್ 3 ರವರೆಗೂ ಅಲ್ಲೇ ತಂಗಿದ್ದು, ಗಿನೀ ಕೊಲ್ಲಿಯ ಪ್ರವಾಹಕ್ಕೆ ಸಿಲುಕದಂತೆ ದಕ್ಷಿಣ ಅಟ್ಲಾಂಟಿಕ್ ಮೂಲಕ ಬಳಸು ದಾರಿಯಲ್ಲಿ, ಗುಡ್ ಹೋಪ್ ಭೂಶಿರದ ಕಡೆಗೆ ಸಾಗಿ, ನವೆಂಬರ್ 7 ರಂದು ಸೇಂಟ್ ಹೆಲೀನಾ ಕೊಲ್ಲಿ ಸೇರಿತು. ನವೆಂಬರ್ 16ರ ವರೆಗೂ ಅಲ್ಲೇ ಇದ್ದು ಅನಂತರ ಮುಂದುವರಿದ ಪ್ರಯಾಣ ಪ್ರತಿಕೂಲ ಮಾರುತಗಳಿಂದಾಗಿ ತಡವಾಗಿ ಗುಡ್ ಹೋಪ್ ಭೂಶಿರವನ್ನು ಬಳಸಿ ಮಾಸೆಲ್ ಕೊಲ್ಲಿ ತಲುಪಿ, ಡಿಸೆಂಬರ್ 8ರಂದು ಅಲ್ಲಿಂದ ಹೊರಟು 25 ರಂದು ನಟ್ಯಾಲ್ ತೀರವನ್ನು ಸೇರಿತು. ಮರುವರ್ಷದ ಮಾರ್ಚ್ 2ರಂದು ಮೊಜಾಂಬಿಕ್ ತಲುಪಿತು. ಗಾಮ ಮತ್ತು ಇವನ ಸಹಪ್ರಯಾಣಿಕರು ಮುಸ್ಲಿಮರೆಂದು ನಂಬಿ ಅಲ್ಲಿನ ಸುಲ್ತಾನ ಗಾಮನಿಗೆ ಇಬ್ಬರು ಚಾಲಕರ ನೆರವು ನೀಡಿದ. ಪೋರ್ಚುಗೀಸರು ಕ್ರೈಸ್ತರೆಂಬುದನ್ನು ತಿಳಿದು ಆ ಚಾಲಕರಲ್ಲೊಬ್ಬ ಇವರನ್ನು ತ್ಯಜಿಸಿದ. ಗಾಮ ಮೊಂಬಾಸವನ್ನು ತಲುಪಿದ್ದು ಏಪ್ರಿಲ್ 7ರಂದು. ಮಲಿಂಡಿಯಲ್ಲಿ ತಂಗಿ, ಕಲ್ಲಿಕೋಟೆಗೆ ಹಾದಿ ಗೊತ್ತಿದ್ದ ಚಾಲಕನೊಬ್ಬನ ನೆರವಿನಿಂದ ಈತ ಯಾನ ಮೊಂದುವರಿಸಿದ. 23 ದಿನಗಳ ಕಾಲ ಹಿಂದೂಸಾಗರದಲ್ಲಿ ಸಾಗಿದ ಮೇಲೆ ಘಟ್ಟಗಳು ಕಾಣಿಸಿದುವು. ಮೇ 20ರಂದು ಗಾಮ ಕಲ್ಲಿಕೋಟೆ ತಲುಪಿದ. ಭಾರತವನ್ನು ತಲುಪಿದ್ದರ ಕುರುಹಾಗಿ ಗಾಮ ಅಲ್ಲೊಂದು ಶಿಲಾಸ್ತಂಭ ನೆಟ್ಟ. ಅಲ್ಲಿಯ ಜಾಮೊರಿನ್ ದೊರೆಂದ ಗಾಮನಿಗೆ ಸ್ವಾಗತ ದೊರಕಿತು. ಆದರೆ ಅಲ್ಲಿಯ ಕೆಲವು ಮುಸ್ಲಿಂ ವ್ಯಾಪಾರಿಗಳ ವಿರೋಧದಿಂದಗಿ ದೊರೆಯೊಂದಿಗೆ ಯಾವ ಒಪ್ಪಂದವನ್ನೂ ಇವನಿಗೆ ಮಾಡಿಕೊಳ್ಳಲಾಗಲಿಲ್ಲ.

ಆಗಸ್ಟ ತಿಂಗಳ ಕೊನೆಯಲ್ಲಿ ಗಾಮ ಭಾರತದಿಂದ ಹಿಂದಕ್ಕೆ ಹೊರಟ. ಅಂಜೆದಿವ ದ್ವೀಪಕ್ಕೆ ಹೋಗಿ ಅಲ್ಲಿಂದ ಮಲಿಂಡಿಗೆ ಪ್ರಯಾಣ ಬೆಳೆಸಿದ. ಮಾರುತಗಳು ಅನುಕೂಲಪ್ರದವಾಗಿರಲಿಲ್ಲವಾದ್ದರಿಂದ ಅರಬ್ಬೀ ಸಮುದ್ರವನ್ನು ದಾಟಲು ಇವನಿಗೆ ಮೂರು ತಿಂಗಳುಗಳ ಕಾಲ ಬೇಕಾಯಿತು. ನಾವಿಕರಲ್ಲಿ ಅನೇಕರು ಕಾಯಿಲೆಯಿಂದ ಸತ್ತರು. ಮರುವರ್ಷ ಮಾರ್ಚ್ ತಿಂಗಳಲ್ಲಿ ಗುಡ್ ಹೋಪ್ ಭೂಶಿರವನ್ನು ಬಳಸಿ ಮೊಂದುವರಿಯುವಾಗ ಬಿರುಗಾಳಿಯಿಂದ ತೊಂದರೆಯಾಯಿತು. ಉಳಿದಿದ್ದ ಎರಡು ಹಡಗುಗಳೂ ಪರಸ್ಪರ ಬೇರ್ಪಟ್ಟವು. ಗಾಮ ಟರ್ಸೇಯಿರ ದ್ವೀಪವನ್ನು ತಲುಪಿ ತನ್ನ ಹಡಗನ್ನು ಲಿಸ್ಬನಿಗೆ ಮುಂದಾಗಿ ಕಳಿಸಿದ. ಅವನು ಲಿಸ್ಬನ್ ತಲಪಿದ್ದು ಸೆಪ್ಟೆಂಬರ್ 9ರಂದು. ಟರ್ಸೇಯಿರದಲ್ಲಿ ತೀರಿಕೊಂಡಿದ್ದ ಸೋದರನಿಗಾಗಿ ಶೋಕವನ್ನಾಚರಿಸಿ ಸೆಪ್ಟೆಂಬರ್ 18ರಂದು ಗಾಮ ವಿಜಯ ಮೆರೆವಣಿಗೆಯಲ್ಲಿ ಲಿಸ್ಬನ್ ಪ್ರವೇಶಿಸಿದ. ದೊರೆ 1ನೆಯ ಮ್ಯಾನ್ಯುಯೆಲ್ ಇವನಿಗೆ ಡಾಂ ಎಂಬ ಬಿರುದನ್ನೂ ವರ್ಷಾಶನವನ್ನೂ ನೆಲದ ಉಂಬಳಿಯನ್ನೂ ಕೊಟ್ಟು ಗೌರವಿಸಿದ.

ಅನಂತರ ದೊರೆಯ ಆದೇಶದಂತೆ ಕವ್ರಾಲ್ ಎಂಬುವನು ಭಾರತಕ್ಕೆ ಬಂದು ಕಲ್ಲಿಕೋಟೆಯಲ್ಲಿ ಕೋಟಿಯೊಂದನ್ನು ಸ್ಥಾಪಿಸಿದ. ಅಲ್ಲಿ ಉಳಿದಿದ್ದ ಪೋರ್ಚುಗೀಸರು ಕವ್ರಾಲನ ನಿರ್ಗಮನಾನಂತರ ಕೊಲೆಗೆ ಈಡಾದರು. ಇದಕ್ಕೆ ಪ್ರತೀಕಾರ ಮಾಡಬೇಕೆಂಬ