ಪುಟ:Mysore-University-Encyclopaedia-Vol-6-Part-5.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾರ್ನೆಟ್, ಡೇವಿಡ್ - ಗಾರ್ಫೀಲ್ಡ್, ಜೇಮ್ಸ್ ಏಬ್ರಂ

ಕರ್ನಾಟಕದಲ್ಲಿ ಈ ಖನಿಜ ವಿಸ್ತಾರವಾಗಿ ಹರಡಿದ್ದು ಪ್ರತಿಯೊಂದು ಜಿಲ್ಲೆಯಲ್ಲಿಯ ಅನೇಕ ವಿಧದ ಪದರು ಶಿಲೆ, ನೈಸ್, ಸುಣ್ಣಶಿಲೆ ಮುಂತಾದವುಗಳಲ್ಲಿ ಸಂಪರ್ಕ ರಾಪಾಂತರ ಖನಿಜವಾಗಿ ದೊರೆಯುತ್ತದೆ.

ಗಾರ್ನೆಟ್, ಡೇವಿಡ್: ೧೮೯೨-೧೯೮೧. ಇಂಗ್ಲೀಷ್ ಕಾದಂಬರಿಕಾರ. ಹುಟ್ಟಿದ್ದು ಬ್ರೈಟನ್ನಲ್ಲಿ. ಪಿತಾಮಹ ರಿಚರ್ಡ್ ಗಾರ್ನೆಟ್ ಪ್ರಸಿದ್ಧ ಗ್ರಂಥಪಾಲ. ತಂದೆ ಎಡ್ವರ್ಡ್ ಗಾರ್ನೆಟ್ ನಾಟಕಕಾರ. ತಾಯಿ ಕಾನ್ಸ್ ಟೆನ್ಸ್ ರಷ್ಯನ್ ಕಾದಂಬರಿಗಳ ಅನುವಾದಕಿ. ಹೀಗಾಗಿ ಈತ ಸಾಹಿತ್ಯಕ ವಾತಾವರಣ್ದಲ್ಲೇ ಬೆಳೆದ. ಈತನ ವಿದ್ಯಾಭ್ಯಾಸ ದಕ್ಷಿಣ ಕೆನ್ಸಿಂಗ್ ಟನ್ನಿನ ರಾಯಲ್ ಕಾಲೇಜಿನಲ್ಲಿ ನಡೆಯಿತು. ಅಲ್ಲಿ ಐದು ವರ್ಷ ಸಸ್ಯವಿಜ್ಞಾನವನ್ನು ಅಭ್ಯಸಿಸಿದ. ಲಂಡನ್ನಿನ ಟ್ಯುಟೋರಿಯಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಬ್ರಿಟಿಷರ ಕೈದಿಯಾಗಿದ್ದ ವಿನಾಯಕ ಸಾವರ್ಕರರನ್ನು ಬಿಡಿಸಲು ನಡೆದ ಗುಪ್ತಚರ್ಯೆಯಲ್ಲಿ ಈತ ಭಾಗವಹಿಸಿದ್ದ. ೧೯೧೯ರಲ್ಲಿ ಸೊಹೊನಲ್ಲಿ ಪುಸ್ತಕಗಳ ಅಂಗಡಿಯೊಂದನ್ನು ತೆರೆದ. ಈತನ ಮೊದಲ ಪುಸ್ತಕ ಲೇಡಿ ಇನ್ಟು ಫಾಕ್ಸ್(೧೯೨೩) ಒಂದು ಕಾದಂಬರಿ. ಇದರಲ್ಲಿ ಹೆಂಡತಿಯೊಬ್ಬಳು ನರಿಯಾಗಿ ಮಾರ್ಪಾಟಾದ ಘಟನೆಯೊಂದನ್ನವಲಂಬಿಸಿದಂತೆ ಕಲ್ಪಿತ ಕಥೆಯೊಂದನ್ನು ಹೆಣೆದಿದ್ದಾನೆ. ಈ ಕಾದಂಬರಿ ಈತನಿಗೆ ಹತಾರ್ನ್ಡನ್ ಮತ್ತು ಟೇಟ್ ಮೆಮೊರಿಯಲ್ ಬಹುಮಾನಗಳನ್ನು ತಂದುಕೊಟ್ಟೀತು(೧೯೨೩). ಎ ಮ್ಯಾನ್ ಇನ್ ದಿ ಜೂ(೧೯೨೪), ದಿ ಸೆಯ್ಲಲರ್ಸ್ ರಿಟರ್ನ್(೧೯೨೫). ಗೊ ಷಿ ಮಸ್ಟ್!(೧೯೨೭), ನೊ ಲವ್(೧೯೨೯), ದೊ ಗ್ರ್ಯಾಸ್ ಹಾರ್ಪರ್ ಕಮ್(೧೯೩೧)- ಇವು ಈತನ ಇತರ ಕಾದಂಬರಿಗಳು. ದಿ ಗೋಲ್ಡನ್ ಎಕೊ(೧೯೫೩) ಮತ್ತು ಫ್ಲವರ್ ಆಫ್ ದಿ ಫಾರೆಸ್ಟ್(೧೯೫೫)- ಇವು ಈತನ ಆತ್ಮವೃತ್ತಗಳು. ಎ ಟೆರಿಬಲ್ ಡೆ(೧೯೩೨) ಎಂಬುದು ಸಣ್ಣಕತೆಗಳ ಸಂಕಲನ. ೧೯೫೨ರಲ್ಲಿ ಈತನಿಗೆ ಸಿ.ಬಿ.ಇ ಪದವಿ ಲಭಿಸಿತು.

ಗಾರ್ನೆಟ್, ರಿಚರ್ಡ್: ೧೮೩೫-೧೯೦೬. ಇಂಗ್ಲೀಷ್ ಕತೆಗಾರ, ಜೀವನ ಚರಿತ್ರೆಗಳ ಕರ್ತೃ. ಈತನ ತಂದೆಬ್ರಿಟಿಷ್ ಮ್ಯೂಸಿಯಂನ ಮುದ್ರಿತ ಗ್ರಂಥ ಭಾಗದ ಸಹಾಯಕ ಪಾಲಕನಾಗಿದ್ದ. ಹುಟ್ಟಿದ್ದು ಲಿಚ್ ಫೀಲ್ಡ್ನಲ್ಲಿ. ವಿದ್ಯಾಭ್ಯಾಸ ಬ್ಲೂಂಸ್ಬರೀ ಶಾಲೆಯಲ್ಲಿ. ೧೮೫೧ರಲ್ಲಿ ಬ್ರಿಟಿಷ್ ಮ್ಯೂಸಿಯಂನ ಸಹಾಯಕ ಗ್ರಂಥಪಾಲನಾಗಿ ಸೇರಿ ಸುಮಾರು ೫೦ ವರ್ಷಗಳ ಕಾಲ ಅಮೂಲ್ಯ ಸೇವೆ ಸಲ್ಲಿಸಿದ. ನಿಂತು ಹೋಗಿದ್ದ ಪುಸ್ತಕಗಳ ಪಟ್ಟಿಯನ್ನು ಮುಂದುವರಿಸಿ ಮುಗಿಸಿದ. ಹೊಸ ಬಗೆಯ ಪುಸ್ತಕ ಕಪಾಟುಗಳನ್ನು ಸೇರಿಸಿದ ಕೀರ್ತಿ ಇವನದು. ಈ ಅವಧಿಯಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳ ಬಗ್ಗೆ ಅಪಾರ ಜ್ಞಾನವನ್ನು ಬಳಸಿಕೊಂಡ. ಗ್ರೀಕ್, ಜರ್ಮನ್, ಇಟಾಲಿಯನ್, ಸ್ಪ್ಯಾನಿಷ್, ಪೋರ್ಚುಗೀಸ್ ಭಾಷೆಗಳಿಂದ ಅನುವಾದ ಮಾಡಿದುದಲ್ಲದೇ ಕೆಲವು ಕವನಗಳನ್ನು ಬರೆದ. ಕಾರ್ಲೈಲ್, ಮಿಲ್ಟನ್, ಬ್ಲೇಕ್, ಎಮರ್ಸನ್ ಇವರ ಜೀವನ ಚರಿತ್ರೆಗಳನ್ನು ಬರೆದುದಲ್ಲದೆ ಡಿಕ್ಷನರಿ ಆಫ್ ನ್ಯಾಷನಲ್ ಬಯಾಗ್ರಫಿ ಎಂಬ ಕೋಶಕ್ಕೆ ಮತ್ತು ಇತರ ವಿಶ್ವಕೊಶಗಳಿಗೆ ಅನೇಕ ಲೇಖನಗಳನ್ನು ನೀಡಿದ. ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ರೆಲಿಕ್ಸ್ ಆಫ್ ಷೆಲಿ(೧೮೬೨) ಮತ್ತು ಇಟಲಿಯ ಸಾಹಿತ್ಯ ಚರಿತ್ರೆ(೧೮೯೮)- ಇವು ಈತನ ಮುಖ್ಯಕೃತಿಗಳು. ದಿ ಟ್ವೈಲೈಟ್ ಆಫ್ ದಿ ಗಾಡ್ಸ್(೧೮೮೮) ನವುರು ವಿಡಂಬನೆಯಿಂದ ಕೂಡಿದ, ಮನಸ್ಸನ್ನೊಲಿಸುವ ನೀತಿಕಥೆಗಳ ಸಂಕಲನ. ಇದರಲ್ಲಿ ಆನಂದ, ದಿ ಮಿರಕಲ್ ವರ್ಕರ್ ಎಂಬ ಕಥೆ ಸ್ವಾರಸ್ಯವಾದದ್ದು. ಬುದ್ಧನ ಅಣ್ತಿಯನ್ನು ಮೀರಿ ಪವಾಡಗಳಿಂದ ಬೌದ್ಧದರ್ಮವನ್ನು ಹರಡಲು ಪ್ರಯತ್ನಿಸಿ ಪಾದುಪಟ್ಟ ಆನಂದನ ಕಥೆ ಇದರ ವಸ್ತು.

ಗಾರ್ಪೈಕ್: ಆಸ್ಟಿಯಿಕ್ತಿಸ್ ವರ್ಗದ ಲೆಪಿಸಾಸ್ಟಿಯೈಫಾರ್ಮೀಸ್ ಗಣದ ಲೆಪಿಸಾಸ್ಟಿಡೀ ಕುಟುಂಬಕ್ಕೆ ಸೇರಿದ ಮೀನುಗಳಿಗಿರುವ ಸಾಮಾನ್ಯ ಹೆಸರು. ಗಾರ್ಪೈಕ್ಗಳು ಉತ್ತರ ಅಮೆರಿಕ ಮತ್ತು ಮಧ್ಯ ಅಮೆರಿಕದ ಸಿಹಿ ನೀರು ಮತ್ತು ಅಳಿವೆಗಳಲ್ಲಿ ಕಾಂಸಿಗುತ್ತದೆ. ಇವುಗಳ ಹೋಲಾಸ್ಟಿಯನ್ ಗುಂಪಿಗೆ ಸೇರಿದ ಮೀನುಗಳು. ಇವು ಬಲು ಪ್ರಾಚೀನ ಬಗೆಯವು . ಮೀಸೋಜೋಯಿಕ್ ಕಾಲದಿಂದಲೂ ಅಸ್ತಿತ್ವದಲ್ಲಿವೆಯೆಂದು ಹೇಳಲಾಗಿದೆ. ವಿಕಸನ ಪಥದಲ್ಲಿ ಅತ್ಯಂತ ಮುಂದುವರೆದ ಎಲುಬು ಮೇನುಗಳಾದ ಟೀಲಾಸ್ಟಿಯನ್ ಮೀನುಗಳ ಪೂರ್ವಜ ಮೀನುಗಳು. ಪ್ರಸ್ತುತ ೧೦ ಪ್ರಭೇದಗಳು ಮಾತ್ರ ಈ ಗುಂಪಿನಲ್ಲಿವೆ. ಗಾರ್ಪೈಕ್ಗಳಿಗೆ ತೆಳುವಾದ , ಕೊಳವೆಯಂಥ ದೇಹ, ಕೊಕ್ಕಿನಂತೆ ಉದ್ದವಾದ ಮತ್ತು ಹಲವಾರು ಸಾಲು ಹಲ್ಲುಗಳುಳ್ಳ ಮೂತಿ, ನುಣುಪಾದ, ಹೊಳೆಯುವ ದೃಢವಾದ ಗನಾಯ್ಡ್ ಆಕೃತಿಯ ಹುರುಪೆಗಳು, ಚಿಕ್ಕ ಈಜುರೆಕ್ಕೆಗಳು, ಬಾಲದ ರೆಕ್ಕೆಗೆ ಹತ್ತಿರವಿರುವ ಬೆನ್ನಿನ ಈಜುರೆಕ್ಕೆ, ಇವು ಈ ಮೀನಿನ ಪ್ರಮುಖ ಲಕ್ಷಣಗಳು. ಇವು ಮಾಂಸಹಾರಿ ಮೀನುಗಳು. ಸಮಾನ್ಯವಾಗಿ ನಿಧಾನ ಪ್ರವೃತ್ತಿಯ ಮೀನುಗಳಾಗಿದ್ದು ತನ್ನ ಬೇಟೆ ಕಂಡಾಗ ಚುರುಕಾಗಿ ಮೇಲೆರೆಗಿ ಕಬಳಿಸುತ್ತವೆ. ಅತ್ಯಂತ ದೊಡ್ಡದಾದ ಗಾರ್ಪೈಕ್ ದೈತ್ಯ ಆಲಿಗೇಟರ್ ಗಾರ್(ಲೆಪಿಸೊಸ್ಟಿಯಸ್ ಟ್ರಿಸ್ಟೋಯಿಕಸ್) ಮೀನು ಸುಮಾರು ೩.೫ ಮೀಟರಿಗೂ ಉದ್ದವಾಗಿ ಬೆಳೆಯುತ್ತದೆ. ಇನ್ನೊಂದು ಪ್ರಬೇಧ ಲೆ. ಆಸಿಯಸ್(ಲಾಂಗ್ನೋಸ್ ಗಾರ್).

ಗಾರ್ಪೈಕ್ ಗಳಿಗೆ ಶತ್ರುಗಳು ಕಡಿಮೆ. ಇವುಗಳ ಗಡುಸಾದ ಗ್ಯಾನಾಯ್ಡ್ ಹುರುಪೆಗಳ ಹೊದಿಕೆ ತುಂಬ ಗಟ್ಟಿಯಾಗಿರುವುದರಿಂದ ಇವನ್ನು ಬೇರೆ ಮೀನುಗಳು ತಿನ್ನಲಾರವು. ಅಲ್ಲದೆ ಇವುಗಳ ಮೊಟ್ಟೆಗಳು ಸಹ ಬಹಳ ವಿಷಪೂರಿತವಾಗಿರುವುದರಿಂದ ಯಾವ ಪ್ರಾಣಿಗಳೂ ಇವನ್ನು ತಿನ್ನುವದಿಲ್ಲ. ಇದರಿಂದಾಗಿ ಕೆಲವು ಸಲ ಇವು ಸಂಖ್ಯೆಯಲ್ಲಿ ವೃದ್ಧಿಗೊಂಡು ಬೇರೆ ಮೀನುಗಳಿಗೆ ಹಾನಿಕಾರಕವಾಗುವುದುಂಟು.

ಗಾರ್ಫೀಲ್ಡ್, ಜೇಮ್ಸ್ ಏಬ್ರಂ: ೧೮೩೧-೮೧. ಅಮೆರಿಕ ಸಂಯುಕ್ತ ಸಂಸ್ಥಾನದ ಇಪ್ಪತ್ತನೆಯ ಅಧ್ಯಕ್ಷ. ಒಹಾಯೊ ರಾಜ್ಯದ ಕಹಾಗ ಕೌಂಟಿಯ ಆರೆಂಜ್ ಎಂಬ ನಗರದ ಬಳಿ ಸಣ್ಣ ಹೊಲವೊಂದರ ಗುಡಿಸಲೊಂದರಲ್ಲಿ ೧೮೩೧ರ ನವೆಂಬರ್ ೧೯ರಂದು ಹುಟ್ಟಿದ. ಗಾರ್ಫೀಲ್ಡನಿಗೆಕೇವಲ ಎರಡು ವರ್ಷ ವಯಸ್ಸಾಗಿದ್ದಾಗ ತಂದೆ ತೀರಿಕೊಂಡ. ಸಂಸಾರ ಬಡತನವನ್ನು ಎದುರಿಸಬೇಕಾಯಿತು. ತಾಯಿ ಧೈರ್ಯದಿಂದ ತನ್ನ ಹಿರಿಯ ಮಗನೊಂದಿಗೆ ಹೊಲದ ಕೆಲಸ ನಿರ್ವಹಿಸಿದಳು. ಮಕ್ಕಳು ತಾಯಿಯ ಅಂಕೆಯಲ್ಲಿ ಸುಶಿಕ್ಷಿತರಾಗಿ ಬೆಳೆದರು. ದುಡಿಮೆಯ ಬೆಲೆ ಅರಿತರು. ಚರ್ಚಿನಲ್ಲಿ ಶ್ರದ್ಧೆ ಮೂಡಿಸಿ ಕೊಂಡರು.

೧೮೫೬ರಲ್ಲಿ ಗಾರ್ಫೀಲ್ಡ್ ವಿಲಿಯಮ್ಸ್ ಕಾಲೇಜಿನಿಂದ ಪದವೀಧರನಾದ. ಅನಂತರ ಸ್ವಲ್ಪ ಕಾಲ ಹಿರಾಯ್ನಲ್ಲಿಯ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕನಾಗಿದ್ದ. ಕ್ರೈಸ್ತವಲಯದಲ್ಲಿ ಒಳ್ಳೆಯ ಉಪನ್ಯಾಸಕನೆಂದು ಇವನಿಗೆ ಹೆಸರು ಬಂದಿತ್ತು. ಹೊಸದಾಗಿ ಸ್ಥಾಪಿತವಾಗಿದ್ದ ರಿಪಬ್ಲಿಕನ್ ಪಕ್ಷದ ಕಡೆಗೆ ಈತನ ಒಲವು ಬೆಳೆದಿತ್ತು. ೧೮೫೯ರಲ್ಲಿ ಒಹಾಯೊ ವಿಧಾನ ಮಂಡಲಕ್ಕೆ ಸದಸ್ಯನಾಗಿ ಆಯ್ಕೆ ಹೊಂದಿದ. ಅಮೆರಿಕನ್ ಅಂತರ್ಯುದ್ಧ ಕಾಲದಲ್ಲಿ ಇವನು ಸೇನೆಗೆ ಯೋಧರನ್ನು ಸಂಗ್ರಹಿಸಿ ಸ್ವತಃ ಕರ್ನಲ್ ಆಗಿ ಹೋರಡಿದ. ಎರಡು ವರ್ಷಗಳಲ್ಲಿ ಇವನು ಮೇಜರ್ ಜನರಲ್ ದರ್ಜೆಗೆ ಎರಿದ್ದ.

೧೯ನೆಯ ಒಹಾಯೊ ಜಿಲ್ಲೆಯಿಂದ ಕಾಂಗ್ರೆಸಿಗೆ ಗಾರ್ಫೀಲ್ಡನ ಆಯ್ಕೆಯಾಯಿತು(೧೮೬೩). ಚೈತನ್ಯಶೀಲನೂ ದಕ್ಷನೂ ಸ್ನೇಹಪ್ರಿಯನೂ ಆಗಿದ್ದ ಗಾರ್ಫೀಲ್ಡ್ ಬಹು ಬೇಗ ಖ್ಯಾತಿ ಗಳಿಸಿದ. ಮುಂದಿನ ಹದಿನಾರು ವರ್ಷಗಳ ಅವಧಿಯಲ್ಲಿ ನಡೆದ