ಪುಟ:Mysore-University-Encyclopaedia-Vol-6-Part-5.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

'ಗಾಲ್ಫ್'

                                        ೨೫೧

ವಿಶ್ವದ ಪ್ರಧಾನ ಕ್ಲಬ್ ಆದ ರಾಯಲ್ ಅಂಡ್ ಏನ್ಷಂಟ್ ಕ್ಲಬ್ ಭವನವನ್ನು 1840ರಲ್ಲಿ ಕಟ್ಟಲಾಯಿತು. ಇಂಗ್ಲೆಡಿನ ರಾಜರ ಹಾಗೂ ಆತನ ಹತ್ತಿರ ಸಂಬಂಧಿಗಳ ಪೋಷಣೆ ಪಡೆದಿದ್ದ ಈ ಕ್ಲಬ್ ಇಂದು ಗಾಲ್ಫ್ ಆಟದ ಬಗ್ಗೆ ನಿರ್ಣಾಯಕ ಸಂಸ್ಥೆ ಎನಿಸಿದೆ.ನಿಯಮಗಳನ್ನು ರೂಪಿಸುವ ಹಾಗೂ ತಿದ್ದುಪಡಿ ಮಾಡುವ ಅಧಿಕಾರ ಈ ಕ್ಲಬ್ ಗೆ ಇದೆ. ಇದರ ತೀರ್ಮಾನಗಳನ್ನು ಅಮೆರಿಕ ಸಂಯುಕ್ತಸಂಸ್ಥಾನಗಳನ್ನು ಬಿಟ್ಟು ವಿಶ್ವದ ಉಳಿದೆಲ್ಲ ಎಡೆಗಳಲ್ಲೂ ಸ್ವೀಕರಿಸಲಾಗುತ್ತದೆ. 1951ರಲ್ಲಿ ರಾಯಲ್ ಅಂಡ್ ಏನ್ಷಂಟ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ಗಾಲ್ಫ್ ಸಂಸ್ಥೆಗಳು ಒಂದು ಕಡೆ ಕಲೆತು ಆಟಕ್ಕೆ ವಿಶ್ವದಾದ್ಯಂತ ಒಂದೇ ರೀತಿಯ ನಿಯಮಗಳನ್ನು ಇಟ್ಟುಕೊಳ್ಳಲು ಒಪ್ಪಿಕೊಂಡವು. ಅನಂತರ ಚೆಂಡಿನ ಪ್ರಮಾಣ ಒಂದನ್ನು ಬಿಟ್ಟು (ಅಮೆರಿಕದ ಚೆಂಡಿನ ವ್ಯಾಸ 4.27 ಸೆಂಮೀ ಇಂಗ್ಲೆಂಡಿನ ಚೆಂಡಿನ ವ್ಯಾಸ 3.75 ಸೆಂಮೀ) ಉಳಿದೆಲ್ಲ ಅಂಶಗಳಲ್ಲೂ ಇವೆರಡು ಸಂಸ್ಥೆಗಳ ನಿಯಮಗಳಲ್ಲೂ ಸಾಮರಸ್ಯವಿದೆ.

ಬ್ರಿಟಿಷ್ ಓಪನ್ ಅಂಡ್ ಅಮೆಚೂರು ಚಾಂಪಿಯನ್ ಷಿಪ್ ಹಾಗೂ ಇಂಗ್ಲೆಂಡಿನ ವಾಕರ್ ಕಪ್ ಪಂದ್ಯಗಳು ರಾಯಲ್ ಅಂಡ್ ಏನ್ಷಂಟ್ ಕ್ಲಬ್ಬಿನ ಅಧಿಕಾರ ವ್ಯಾಪ್ತಿಗೆ ಒಳಗಾಗಿರುತ್ತವೆ.

ಅಮೆರಿಕದಲ್ಲಿ 1779ರಿಂದ ಗಾಲ್ಫ್ ಆಡಲಾಗುತ್ತಿದೆಯಾದರೂ ಮುಂದೆ ಓಂದು ಶತಮಾನಕಾಲ ಈ ಆಟ ಅಷ್ಟು ಪ್ರಚಾರ ಪಡೆದಿರಲಿಲ್ಲ. 1887ರಿಂದ ಈಚೆಗೆ ಈ ಆಟವನ್ನು ಅಮೆರಿಕದಲ್ಲಿ ನಿಯತ ರೂಪದಲ್ಲಿ ಆಡಲಾಗುತ್ತಿದೆ. ಸ್ಕಾಟ್ಲೆಂಡಿನ ರಾಬರ್ಟ್ ಲಾಕ್ ಹಾರ್ಟ್ ಎಂಬಾತ ಕೆಲವು ಗಾಲ್ಫ್ ಚೆಂಡುಗಳನ್ನೂ ದಾಂಡುಗಳನ್ನೂ ತಂದು ಅಮೆರಿಕದಲ್ಲಿ ತನ್ನ ಮಿತ್ರರರಿಗೆ ಹಾಗೂ ನೆರೆಯವರಿಗೆ ಕೊಟ್ಟು ಗಾಲ್ಫ್ ಆಟದಲ್ಲಿ ಆಸಕ್ತಿ ಕುದುರಿಸಿದನೆನ್ನಲಾಗಿದೆ. 1888ರಲ್ಲಿ ಈತನಿಗೆ ನೆರೆಯವನಾದ ರೀಡನಿಗೂ ಗಾಲ್ಫ್ ಪಂದ್ಯ ನಡೆಯಿತು. ಅನಂತರ ಸೇಂಟ್ ಆಂಡ್ರೂಸ್ ಕ್ಲಬ್ ಸ್ಥಾಪಿತಿವಾಯಿತು. 1897ರಲ್ಲಿ ಕ್ಲಬ್ ನ ನಿವೇಶನವನ್ನು ನ್ಯೂಯಾರ್ಕ್ ನಗರದ ಮೌಂಟ್ ಹೋಪ್ ಗೆ ವರ್ಗಾಯಿಸಲಾಯಿತು.

ಮುಂದೆ 5 ವರ್ಷಗಳಲ್ಲಿ ಸುಮಾರು 20 ಕ್ಲಬ್ ಗಳು ಹುಟ್ಟಿಕೊಂಡವು. 1900ರ ವೇಳೆಗೆ ಅಮೆರಿಕ ಸಂಯುಕ್ತ ಸಂಸ್ಥಾನದಾದ್ಯಂತ ಬೇಸಿಗೆಯಲ್ಲಿ ಈ ಆಟ ಆಡಲಾಗುತಿತ್ತು. 1920ರ ವೇಳೆಗೆ ಅಮೆರಿಕದಲ್ಲಿ 2,800 ಗಾಲ್ಫ್ ಮೈದಾನಗಳು ಇದ್ದುವು.

1894ರ ಡಿಸೆಂಬರ್ 22ರಂದು ಐದು ಪ್ರಮುಖ ಕ್ಲಬ್ ಗಳ ಪ್ರತಿನಿಧಿಗಳು ಸಭೆ ಸೇರಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ಗಾಲ್ಫ್ ಸಂಸ್ಥೆ ಆರಂಭಿಸಿದರು. ಈ ಸಂಸ್ಥೆ ಇಂದು ಈ ವಿಭಾಗದಲ್ಲಿ ಗಾಲ್ಫ್ ಬಗ್ಗೆ ಆಡಳಿತ ನಡೆಸುತ್ತಿದೆ.

ಮಹಿಳೆಯರೂ ಉತ್ತಮ ಸಂಖ್ಯೆಯಲ್ಲಿ ಈ ಆಟ ಆಡುತ್ತಿದ್ದಾರೆ. ಗಾಲ್ಫ್ ಚೆಂಡನ್ನು ತುಂಬಿಸುವ ಬದ್ದು ಅಥವಾ ಕುಳಿ ಇರುವ ಸ್ಥಳದಲ್ಲಿ ಮಟ್ಟಸವಾದ ಒ೦ದು ಚದರವಿರುತ್ತದೆ.ಈ ಚದರ ಮಧ್ಯೆ ನಾಲ್ಕುವರೆ

ಅ೦ಗುಲ ವ್ಯಾಸದ ಗುಳಿ ಇರುತ್ತದೆ. ಯಾವ ಗುಳಿಯ ಅನತ೦ರ ಯಾವ ಗುಳಿ ತು೦ಬಿಸಬೇಕೆ೦ದನ್ನು ಹೇಳುತ್ತದೆ.