ಪುಟ:Mysore-University-Encyclopaedia-Vol-6-Part-5.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾತಿಕ್ ವಾಸ್ತು ಶೈಲಿ ಗಾಜುಗಳ ಬಳಕೆ ಹೆಚ್ಚಿದಂತೆ, ಬಣ್ಣದ ವೈವಧ್ಯವೂ ಹೆಚ್ಚುದುದು ಸಹಜವೇ ಆಗಿದೆ. ೧೨ನೇ ಶತಮಾನದಲ್ಲಿ ನೀಲಿ ಬಣ್ಣ ವಿಶೇಷವಾಗಿ ತಿಳಿಯಾಗಿದ್ದಿತು. ೧೩ನೇಯ ಶತಮಾನದಲ್ಲಿ ಅದು ಗಾಢವಾಯಿತು. ಈ ಕಟ್ಟಡಗಳನ್ನು ಕಟ್ಟಲು ಧನಸಹಾಯ ಮಾಡಿದವರ ಚಿತ್ರಗಳನ್ನು ಷಾರ್ಟ್ರದ ಈ ಗಾಜುಗಳ ಮೇಲೆ ಕೆತ್ತಲಾಗಿದೆಯೆಂದು ಅನೇಕರು ಅಭಿಪ್ರಾಯಪಡುತ್ತಾರೆ.

     ೧೩ನೇಯ ಶತಮಾನದ ಮಧ್ಯಭಾಗದಿಂದ ೧೪ನೆಯ ಶತಮಾನದ ಅಂತ್ಯದವರೆಗೆ ಇಂಗ್ಲೆಂಡ್ ಮತ್ತು ಫ್ರಾನ್ಸ್ ಗಳಲ್ಲಿ ಸರ್ವತೋಮುಖವಾದ ಬೆಳೆವಣಿಗೆಯುಂಟಾಯಿತು.ಅದರಲ್ಲಿಯೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಈ ಎರಡು

ದೇಶಗಳೂ ತಮ್ಮದೇ ಆದ ಸಂಸ್ಕೃತಿಯನ್ನು ರೂಢಿಸಿಕೊಂಡವು. ಇದರ ಜೊತೆಗೆ ಸೂಕ್ಷ್ಮಾಭಿರುಚಿ ಬೆಳೆಯಿತು. ಇವುಗಳೆಲ್ಲವೂ ಆ ಕಾಲದ ವಾಸ್ತುಶಿಲ್ಪದ ಮೇಲೂ ಪರಿಣಾಮವನ್ನು ಬೀರುಣಾಮವನ್ನು ಬೀರಿದುವು. ೧೩ನೇಯ ಶತಮಾನದ ಮಧ್ಯಭಾಗದಿಂದ ೧೪ನೇಯ ಶತಮಾನದ ಕೊನೆಯವರೆಗಿನ ವಾಸ್ತುಶಿಲ್ಪವನ್ನು ರಿಫೈನ್ಡ್ ಗಾತಿಕ್ ಎಂದು ಕರೆಯುತ್ತಾರೆ. ಗಾತಿಕ್ ವಾಸ್ತು ಶೈಲಿಯಲ್ಲೇ ಇದು ಅತ್ಯುತ್ತಮ ಮಟ್ಟದ್ದು ಎಂದು ವಿದ್ವಾಂಸರ ಮತ.

     ಅರೇಕಾಲಿನಂತ ತ್ರಿಜ್ಯ ಪಟ್ಟಿಗಳುಳ್ಳ ಗುಂಡು ಕಿಟಕಿಗಳು ಪ್ರಾರಂಭವಾದದ್ದು ಈ ಕಾಲದಲ್ಲಿ. ಕಿಟಕಿಯ ಮಧ್ಯದ ಬಿಂದುವಿನಿಂದ ಸೂರ್ಯನ ಕಿರಣಗಳಂತೆ ತ್ರಿಜ್ಯಪಟ್ಟಿಗಳು ಹೊರಹೊಮ್ಮಿ, ಈ ಶೈಲಿಗೆ ರೇಯನಂಟ್ ಎಂಬ ಹೆಸರನ್ನು ತಂದುಕೊಟ್ಟಿವೆ. ಒಂಬತ್ತನೆಯ ಲೂಯಿ ಪ್ಯಾರಿಸ್ ನಲ್ಲಿ ೧೨೪೮ರಲ್ಲಿ ಕಟ್ಟಲಾದ ಸೇಂಟ್ ಚ್ಯಾಪೆಲ್ ನಲ್ಲಿ ಈ ರೀತಿಯ ಗುಂಡು ಕಿಟಕಿಗಳು ಮೊದಲ ಬಾರಿಗೆ ಬಳಕೆಗೆ ಬಂದುವು. ಇಲ್ಲಿ ಊರೆಗಾಗಿ ಬಳಸಿರುವ ಕಲ್ಲನ್ನೂ ಬಿಟ್ಟರೆ ಮಿಕ್ಕೆಲ್ಲ ಕಡೆಗಳಲ್ಲಿಯೂ ಬಣ್ಣದ ಗಾಜು ವಿಶೇಷವಾಗಿದೆ. ೧೯ನೇ ಶತಮಾನದಲ್ಲಿ ಈ ಕಟ್ಟಡವು ಪುನರುಜ್ಜೀವನಗೊಂಡಿದ್ದರೂ ೧೩ನೇ ಶತಮಾನಕ್ಕೆ ಸೇರಿದ ಒಳಗಿನ ಅಲಂಕಾರಗಳು ಈ ಕಿಟಕಿಗಳಿಗೆ ಮಾಡಿರುವ ಹತ್ತಾರು ವರ್ಣಚಿತ್ರಗಳ ಅಲಂಕಾರಗಳು ಇಂದಿಗೂ ಅಚ್ಚಳಿಯದೆ ಉಳಿದು ಬಂದಿವೆ.ಒಳಭಾಗದಲ್ಲಿ ಕ್ರೈಸ್ತಗುರುಗಳ ವಿಗ್ರಹಗಳಿವೆ. ಇದಕ್ಕಿಂತಲೂ ಹೆಚ್ಚು ಆಕರ್ಷಕವಾದದ್ದು ಶೈಲಿಯ ದೃಷ್ಟಿಯಿಂದ ಹೆಚ್ಚು ಬೆಳೆವಣಿಗೆಯನ್ನು ತೋರ್ಪಡಿಸುವ ಕಟ್ಟಡವೆಂದರೆ ಬೋವೇ ಕತೀಡ್ರಲ್ ೧೨೪೭ರಲ್ಲಿ ಪ್ರಾರಂಭಿಸಲಾದ ಈ ಕಟ್ಟಡದ ಗೋಪುರ ಸು.೪೭ಮೀ. ಎತ್ತರದಾಗಿತ್ತು. ೧೨೭೨ರಲ್ಲಿ ಇದನ್ನು ಪೂರ್ಣಹೊಳಿಸಲಾಯಿತು. ಆದರೆ ಬಹು ಎತ್ತರವೂ ವಿಶಾಲವೂ ಆದ ಈ ಕಟ್ಟಡದ ತಳಪಾಯ ಭದ್ರವಿಲ್ಲದ್ದರಿಂದ ೧೨೮೪ರಲ್ಲಿ ಇಡೀ ಕಟ್ಟಡ ಕುಸಿದುಬಿತ್ತು. ಇದರ ಪುನರುಜ್ಜೀವನವಾದದ್ದು ೧೬ನೆಯ ಶತಮಾನದಲ್ಲಿ. ವಿಲ್ಲರ್ಡ್ ಡಿ ಹೊನ್ ಕೋರ್ಟ್ ಎಂಬ ಫ್ರೆಂಚ್ ಶಿಲ್ಪಿ ಸುಮಾರು ಇದೇ ಕಾಲದಲ್ಲಿ ಯುರೋಪಿನಲ್ಲೆಲ್ಲ ಸಂಚರಿಸಿ ತಾನೂ ನೋಡಿದ ಪೂರ್ಣಗೊಂಡಿದ್ದ, ಅಪೂರ್ಣವಾಗಿದ್ದ ಎಲ್ಲ ಕತೀಡ್ರಲ್ ಗಳ ಚಿತ್ರಗಳನ್ನು ಸುಂದರವಾಗಿ ಬರೆದಿಟ್ಟಿದ್ದಾನ. ಈ ಚಿತ್ರಗಳಿಂದ ಆಗಿನ ಕಾಲದಲ್ಲಿ ಕಟ್ಟಡಗಳನ್ನು ಕಟ್ಟುತ್ತಿದ್ದ ಕ್ರಮ, ಶಿಲ್ಪಿಗಳು ಬಳಸುತ್ತಿದ್ದ ಸಲಕರಣೆಗಳು ಮುಂತಾದವುಗಳ ಬಗ್ಗೆ ವಿಶೇಷ ಮಾಹಿತಿ ದೊರಕುತ್ತವೆ.

ಈ ಕಾಲದ ಶಿಲ್ಪಕ್ಕೆ ಉದಾಹರಣೆಯಾಗಿ ರೀಮ್ಸ್ ಕತೀಡ್ರಲ್ ನ ಪಶ್ಚಿಮ ಮಹಾದ್ವಾರವನ್ನು ನೋಡಬಹುದು. ಕ್ರಿಸ್ತ ಅವತಾರ ಮಾಡುವನೆಂದು ಗೇಬ್ರಿಯಲ್ ಮೇರಿ ಕನ್ಯೆಗೆ ಮುನ್ಸೂಚನೆ ಕೊಡುವ ಮತ್ತು ಮೇರಿ ಎಲಿಜ಼್ಬೆತಳನ್ನು ಸಂದರ್ಶಿಸಿದ - ಈ ಎರಡು ಶಿಲ್ಪ ಫಲಕಗಳು ಬಹು ಸುಂದರವಾದವು. ಗಾತಿಕ್ ಕಲೆ ಯುರೋಪಿನ ಎಲ್ಲು ಭಾಗಗಳಲ್ಲಿಯೂ ಕಂಡು ಬಂದರೂ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮತ್ತು ಇಟಲಿಗಳಲ್ಲಿ ಇದರ ಪ್ರಾಬಲ್ಯ ಹೆಚ್ಚು. ಇಲ್ಲೆಲ್ಲ ಶುದ್ಧ ಗಾತಿಕ್ ಶೈಲಿಯೊಂದಿಗೆ ಸ್ಥಳೀಯ ಶೈಲಿ ಬೆರೆತಿರುವುದನ್ನು ಕಾಣಬಹುದು. ಕ್ಯಾಂಟರ್ ಬರಿ ಕತೀಡ್ರಲ್ ನ ಪೂರ್ವಭಾಗ ೧೧೭೪ರಲ್ಲಿ ಬೆಂಕಿಗೆ ಆಹುತಿಯಾಗಿ, ಅದರ ಪುನರ್ನಿರ್ಮಾಣ ಕಾರ್ಯ ಈ ಕಾಲದಲ್ಲಿ ಪ್ರಾರಂಭವಾಯಿತು. ಇದರಲ್ಲಿ ಇಂಗ್ಲೆಂಡಿನ ಸ್ಥಳೀಯ ಲಕ್ಷಣಗಳ ವಿಶೇಷವಾಗಿ ಕಾಣಬರುತ್ತದೆ. ೧೨೨೦ರಲ್ಲಿ ಪ್ರಾರಂಭವಾಗಿ ೧೨೪೦ರಲ್ಲಿ ಪೂರ್ಣಗೊಳಿಸಲ್ಪಟ್ಟ ಸ್ಯಾಲಿಸ್ ಬರಿ ಕತೀಡ್ರಲ್ ಇಂಗ್ಲಿಷ್ ಗಾತಿಕ್ ಶೈಲಿಗೆ ಉತ್ತಮ ಉದಾಹರಣೆ. ಇದರಲ್ಲಿ ಅಲಂಕಾರಕ್ಕೆ ಹೆಚ್ಚು ಗಮನ ಕೊಟ್ಟಿರುವುದು ಕಾಣಬರುತ್ತದೆ. ಇದೇ ಪ್ರವೃತ್ತಿ ಇಂಗ್ಲಿಷ್ ಗಾತಿಕ್ ಶೈಲಿಯಲ್ಲಿ ಎದ್ದು ಕಾಣುತ್ತದೆ. ಜರ್ಮನಿಯಲ್ಲಿ ಮೊದಮೊದಲು ರೋಮನೆಸ್ಕ್ ಶೈಲಿಯೇ ವಿಶೇಷವಾಗಿ ಅಭಿವೃದ್ಧಿ ಹೊಂದಿದ್ದು, ಗಾತಿಕ್ ಶೈಲಿಯ ಕಟ್ಟಡಗಳಲ್ಲೂ ಇದನ್ನೇ ಅಳವಡಿಸವಲಾಗಿತ್ತು. ಕಲೋನ್ ನ ಕತೀಡ್ರಲ್ ನ್ನು ಕಟ್ಟಿದ (೧೨೪೮) ಶಿಲ್ಪಿ ಫ್ರಾನ್ಸ್ ದೇಶದಲ್ಲಿ ಶಿಕ್ಷಣ ಪಡೆದವನಾದುದರಿಂದ ಇಲ್ಲಿ ಫ್ರೆಂಚ್ ಶೈಲಿಯೇ ವಿಶೇಷವಾಗಿ ಕಾಣುತ್ತದೆ. ಹಲೆನ್ ಕಿರ್ಚ್ ಎಲಿಜಬೆತ್ ಕಿರ್ಚ್ ಗಳ ಅಂಗಳ, ಪೂಜಾಗೃಹಗಳಲ್ಲಿ ರಿಫೈನ್ಡ್ ಗಾತಿಕ್ ಶೈಲಿಯನ್ನು ಗಮನಿಸಬಹುದು. ಈ ಕಾಲದ ಜರ್ಮನ್ ಗಾತಿಕ್ ಶಿಲ್ಪಗಳಲ್ಲಿ ಕಾಣಬರುವ ಮುಖ್ಯ ಲಕ್ಷಣವೆಂದರೆ ಚಲನೆ. ಶಿಲ್ಪಗಳು ಚಲಿಸುತ್ತಿವೆಯೊ ಎನ್ನುವ ರೀತಿಯಲ್ಲಿ ಅವನ್ನು ಕೆತ್ತಿರುವುದು ಇಲ್ಲಿನ ವೈಶಿಷ್ಟ್ಯ್. ಸ್ಪೇನಿನಲ್ಲಿ ಅವಿಲ ಕತೀಡ್ರಲ್ ನಿಂದ ಪ್ರಾರಂಭವಾಗಿ ಗಾತಿಕ್ ಶೈಲಿ ಬೆಳೆದುಬಂತು. ಇಲ್ಲಿನ ಕಮಾನು ಛಾವಣೆ ಪ್ರಾರಂಭದೆಶೆಯೆ ಗಾತಿಕ್ ಶೈಲಿಗೆ ಸೇರಿದುದು. ಅಲ್ಲಿಂದ ಮುಂದೆ ಇದೇ ಶೈಲಿ ಬೆಳೆಯಿತು. ಟೊಲೆಡೊ ಮತ್ತು ಬರ್ಗೋಸ್ ಕೆತೀಡ್ರಲ್ ಗಳಲ್ಲಿ ಎತ್ತರಕ್ಕಿಂತ ವಿಶಾಲತೆಗೆ ಹೆಚ್ಚು ಪ್ರಾಮುಖ್ಯ ಕೊಟ್ಟಿರುವುದು ಕಂಡು ಬರುತ್ತದೆ. ಪಲ್ಮಿ, ಸೆವಿಲ್ ಕತೀಡ್ರಲ್ ಗಳು ಹೊರನೋಟದಿಂದ ಭಿನ್ನ ರೀತಿಯವೆಂದೂ ಕಂಡುಬಂದರೂ ಅವು ಗಾತಿಕ್ ಶೈಲಿಯ ಕಟ್ಟಡಗಳೆನ್ನುವುದರಲ್ಲಿ ಸಂದೇಹವೇ ಇಲ್ಲ. ಗಾತಿಕ್ ಶಿಲ್ಪಶೈಲಿ ಸ್ಪೇನಿನಲ್ಲಿ ಸುಮಾರು ೧೮ನೆಯ ಶತಮಾನದವರೆಗೂ ಬಳಕೆಯಲ್ಲಿತ್ತು. ಗಾತಿಕ್ ಶಿಲ್ವ ಶೈಲಿಯನ್ನು ತನ್ನ ಹೆಚ್ಚಿನ ಅನುಕೂಲಕ್ಕೆ ಅಳವಡಿಸಿಕೊಂಡ ದೇಶಗಳಲ್ಲಿ ಇಟಲಿ ಬಹು ಪ್ರಮುಖವಾದುದು. ಸ್ಥಳೀಯ ಲಕ್ಷಣಗಳೂ ಗಾತಿಕ್ ಶಿಲ್ಪಲಕ್ಷಣಗಳೂ ಮಿಳಿತಗೊಂಡು ಪುನರುಜ್ಜೀವನ ಶೈಲಿಯ ಉದಯಕ್ಕೆ ಕಾರಣವಾದ.