ಪುಟ:Mysore-University-Encyclopaedia-Vol-6-Part-6.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಡುಗ

ಗಿಡಿಂಗ್ಸ್ ನ ಪ್ರಕಾರ ಸಮಾಜವಿಕಾಸ ಮೂಲಭೂತವಾಗಿ ವ್ಯಕ್ತಿಗಳ ಮತ್ತು ಗುಂಪುಗಳ ಶಕ್ತಿಸಾಮರ್ಥ್ಯಗಳ ಸಮತೋಲನ ಸ್ಥಿತಿಯನ್ನು ಅವಲಂಬಿಸಿದೆ. ಈ ಸಮತೋಲನ ಸ್ಥಿತಿ ಜಡವಾದುದಲ್ಲ.ಅದು ಮಾನವನ ನಿರಂತರ ಪ್ರಯತ್ನದ ಪರಿಣಾಮವಾಗಿ ಚಲನಾತ್ಮಕ ಸಮತೋಲನವನ್ನು ಹೊಂದುತ್ತದೆ .ಸಮಾಜದಲ್ಲಿ ವ್ಯಕ್ತಿಗಳೆಲ್ಲ ಸಾಮರ್ಥ್ಯ ಮತ್ತು ಸ್ಥಾನಗಳಲ್ಲಿ ಸಮತೋಲ ಇದ್ದರೆ,ಆಗ ಸಮಾಜದಲ್ಲಿ ಆಂತರಿಕ ನ್ಯಾಯ ಮತ್ತು ವ್ಯವಸ್ಥೆ ಸ್ಥಾಪಿತವಾಗುತ್ತದೆ. ಈ ಸಮತೋಲ ರಾಷ್ಟ್ರೀಯ ಜೀವನದಲ್ಲಿ ಸ್ಥಾಪಿತವಾದರೆ ಆಂತರಾಷ್ಟ್ರೀಯ ಶಾಂತಿಗೆ ಸಹಾಯಕವಾಗುತ್ತದೆ

    ಗಿಡಿಂಗ್ಸ್ ನ ಸುಪ್ರಸಿದ್ದ ಗ್ರಂಥವಾದ ಸಮಾಜಶಾಸ್ತ್ರತತ್ತ್ವಗಳು ಎಂಬುದು ೧೮೯೬ರಲ್ಲಿ ಪ್ರಕಟವಾಯಿತು. ಈ ಪುಸ್ತಕ ಏಳು ಭಾಷೆಗಳಲ್ಲಿ ಭಾಷಾಂತರಗೊಂಡಿದೆ.೧೯೨೨ರಲ್ಲಿ ಮಾನವ ಸಮಾಜದ ತತ್ತ್ವಗಳ ಅಧ್ಯಯನಗಳನ್ನು ಕುರಿತ ಸ್ಪೆಡೀಸ ಇನ್ ದಿ ಥಿಯೊರಿ ಆಫ್ ಹ್ಯೂಮನ್ ಸೊಸೈಟಿ ಎಂಬ ಪುಸ್ತಕ ಪ್ರಕಟವಾಯಿತು. ಈ ಎರಡು ಪುಸ್ತಕಗಳಲ್ಲಿ ಗಿಡಿಂಗ್ಸ್ ನ ಸಮಾಜಶಾಸ್ತ್ರದ ತತ್ತ್ವಗಳು ಸಮಗ್ರವಾಗಿ ನಿರೂಪಿತವಾಗಿವೆ. ಆತನ ಪ್ರಕಾರ ಸಾಮಾಜಿಕ ಜೀವನ ಮಾನವನ ಸಾಮಾನ್ಯ ಸ್ವಭಾವದ ಅರಿವಿನಿಂದುಂಟಾದ ತದೇಕ ಪ್ರಜ್ಞೆಯ ಫಲ. ಮಾನವನ ಸಾಮಾಜಿಕ ಜೀವನ ಕೇವಲ ನೈಸರ್ಗಿಕವೇ ಹೊರತು ಸಾಮೂಹಿಕ ಚರ್ಯೆ ಎಂಬ ಮೂಲ ಪ್ರವೃತ್ತಿಯ ಪರಿಣಾಮವಲ್ಲ. ಅದು ಮಾನವನಲ್ಲಿರುವ ಮಾನಸಿಕ ಪ್ರಕ್ರಿಯೆಗಳು ಪರಿಣಾಮ. ಒಂದು ಗೊತ್ತಾದ ಉದ್ದೀಪನಕ್ಕೆ ಇಬ್ಬರು ಅಥವಾ ಹೆಚ್ಚು ಜನರು  ಏಕರೀತಿಯ ಅನುಕ್ರಿಯೆಗಳನ್ನು ತೋರಿಸುತ್ತಾರೆ. ಇದೇ ತದೇಕ ಪ್ರಜ್ಙೆಗೆ ಅಗತ್ಯವಾದ ಮೂಲಾಧಾರ. ಒಂದು ಗೊತ್ತಾದ ಉದ್ದೀಪನಕ್ಕೆ ಏಕರೂಪವಾದ ಅನುಕ್ರಿಯೆ ಇದ್ದರೆ, ಆಗ ಸಮಾಜದಲ್ಲಿ ಐಕ್ಯ ಏರ್ಪಡುತ್ತದೆ. ಒಂದು ಉದ್ದೀಪನಕ್ಕೆ-ಅದು ಸಾಮಾಜಿಕ ಮೌಲ್ಯವಾಗಿರಬಹುದು. ಒಂದು ಅಭಿಪ್ರಾಯವಾಗಿರಬಹುದು -ವಿವಿಧ ಅನಿಕ್ರಿಯೆಗಳಿದ್ದರೆ ಸ್ಪರ್ಧೆ ಸಂಘರ್ಷಣೆ ಮೊದಲಾದವು ಉದ್ಭವವಾಗುತ್ತದೆ. ಸಾಮಾಜಿಕ ಜೀವನದಲ್ಲಿ ಮಾನಸಿಕ ಪ್ರಕ್ರಿಯೆಗಳಿಗೆ ಹೆಚ್ಚಿನ ಪ್ರಾಮುಖ್ಯ ಕೊಡುವ ಅಮೆರಿಕ ಸಂಯುಕ್ತಸಂಸ್ಥಾನಗಳ ಸಮಾಜಶಾಸ್ತ್ರ ಪರಂಪರೆ ಗಿಡಿಂಗ್ಸ್ ನ ಬರವಣಿಗೆಗಳೂ ಸ್ಪೂರ್ತಿಯನ್ನಿತ್ತಿವೆ ಎಂಬುದು ನಿಜವಾದ ಮಾತು.
       ಗಿಡಿಂಗ್ಸ್ ಮೂಲಸಂಕಲ್ಪಾನುಸಾರವಾದ ಜಗದ್ವಿಕಾಸವಾದವನ್ನು ಅನುಮೋದಿಸಿ, ವೈಜ್ಙಾನಿಕ ಅಭಿವೃದ್ದಿ ಮಾನವನ ಸಮಾಜವಿಕಾಸವನ್ನು ಉತ್ಕೃಷ್ಟದೆಶೆಗೆ ತೆಗೆದುಕೊಂಡು ಹೋಗುವುದೆಂಬ ಆಶಾಭಾವನೆಯನ್ನು ಹೊಂದಿದೆ.
   ದಿ ಸೈಂಟಿಫಿಕ್ ಸ್ಟಡಿ ಆಫ್ ಹ್ಯೂಮನ್ ಸೊಸೈಟಿ (೧೯೨೪),ಡೆಮಾಕ್ರಸಿ ಅಂಡ್ ಎಂಪೈರ್ (೧೯೦೦).ವೆಸ್ಟರ್ನ್ ಹೆಮಿಸ್ಪಿಯರ್ ಇನ್ ದಿ ವರ್ಲ್ಡ್ ಆಫ್ ಟುಮಾರೊ(೧೯೧೫),ದಿ ರೆಸ್ಪಾನ್ಸಿಬಲ್ ಸ್ಟೇಟ್ (೧೯೧೮),ದಿ ಮೈಟಿ ಮೆಡಿಸನ್ (೧೯೩೦),ಸಿವಿಲಿಜ್ಗೇಷನ್ ಅಂಡ್ ಸೊಸೈಟಿ(೧೯೩೨)-ಇವು ಗಿಡಿಂಗ್ಸ್ ನ ಇತರೆ ಗ್ರಂಥಗಳು.
  ಗಿಡುಗ : ಫಾಲ್ಕನಿಫಾರ್ಮೀಸ್ ಗಣದ ಫಾಲ್ಕನಿಡೀ ಕುಟುಂಬಕ್ಕೆ ಸೇರಿದ ಒಂದು ಹಿಂಸ್ರಪಕ್ಷಿ(ಫಾಲ್ಕಿನ್,ಹಾಕ್). ಡೇಗೆ ಇದರ ಪರ್ಯಾಯ ನಾಮ.ಹದ್ದು,ರಣಹದ್ದು,ಗರಿಡ,ಆಸ್ಟ್ರೆ ಮೂಂತಾದ ಹಕ್ಕಿಗಳಿಗೆ ಬಲು ಹತ್ತಿರದ ಸಂಬಂಧಿ. ಕ್ಯಾರಕ್ಯಾರ, ಫಾಲ್ಕೊ,ಮೈಕ್ರೊಹೀರ್ಯಾಕ್ಸ್ ಮುಂತಾದ ಜಾತಿಗಳಿಗೆ ಸೇರಿದ ಪ್ರಭೇದಗಳಿಗೆಲ್ಲ ಗಿಡಗ ಎಂಬ ಹೆಸರೇ ಅನ್ವಯವಾಗುತ್ತದೆ.ಗಿಡಗಳ ಗಾತ್ರಗಳಲ್ಲಿ ಭಿನ್ನತೆ ಉಂಟು.ಕೆಲವು ಕೇವಲ ೧೬ ಸೆಂಮೀ ಉದ್ದವಿದ್ದರೆ ,ಇನ್ನು ಕೆಲವು ೬೦ ಸೆಂಮೀ ಉದ್ದವಿರುವುದುಂಟು (ಉದಾಹರಣೆ ಉತ್ತರ ಮೇರುವಿನ ತಂಡ್ರಾಪ್ರದೇಶದಲ್ಲಿರುವ ಜರಫಾಲ್ಕನ್).ಎಲ್ಲಿ ಗಿಡುಗಗಳೂ ಹಗಲಿನಲ್ಲಿ ಮಾತ್ರ ಬೇಟೆಯಾಡುತ್ತವೆ. ಇವುಗಳು ಕೊಕ್ಕು ಚೂಪಾಗಿ,ಬಲವಗಿ ಕೊಕ್ಕೆಯಿಂದ ಬಾಗಿದೆ. ಕೊಕ್ಕಿನ ಬುಡದಲ್ಲಿ ಮೇಲೆ ಮಾಂಸಲವಾದ ಸೆರೆ ಎಂಬ ಸಂವೇದನೀಯ ಚರ್ಮವಿದೆ.ನಾಸಿಕ ರಂಧ್ರಗಳ ಹೊರಕ್ಕೆ ತೆರೆಯುವುದು ಇದರ ಮೇಲೆಯೇ. ರೆಕ್ಕೆಗಳು ಮಲಯುತವಾಗಿಯೂ ದೇಹದ ಗಾತ್ರಕ್ಕೆ ಹೋಲಿಸಿದರೆ ಉದ್ದವಾಗಿಯೂ ಇವೆ.ಇವುಗಳ ತುದಿ ಬಲು ಚೂಪು.ಕಾಲಿನ ಹರಡು ಭಾಗದಲ್ಲಿ ಗರಿಗಳಿಲ್ಲ. ತೊಡೆಯ ಭಾಗ ಮಾತ್ರ ಸಡಿಲವಾದ ಗರಿಗಳಿಂದ ಅವೃತವಾಗಿದ್ದು ಒಂದು ರೀತಿಯ ಬಿಗಿಚಡ್ಡಿ ಧರಿಸಿದಂತೆ ಕಾಣುತ್ತದೆ 
   ರೆಂಬೆಗಳನ್ನು ಹಿಡಿಯಲು ಅನುಕೂಲವಾಗುವಂತೆ ಕಾಲಿನ ಬೆರಳು ಹಿಂದಕ್ಕೆ ತಿರುಗಿದೆ. ಬೆರುಳುಗಳಲ್ಲಿ ಉದ್ದವಾದ ನಖಗಳಿವೆ.
    ಅತ್ಯಂತ ಬಲಯುತವಾದ ಹಾಗೂ ವೇಗವಾದ ಹಾರಾಟಕ್ಕೆ ಗಿಡುಗ ಪ್ರಸಿದ್ಧವಾಗಿದೆ. ಹೀಗೆ ಹಾರಾಡುತ್ತಿರುವಾಗ ಅದರ ಚುರುಕು ದೃಷ್ಟಿಗೆ ಆಹಾರ ಪ್ರಾಣಿಯೇನಾದರೂ ಕಂಡರೆ ರಿವ್ವನೆ ಶರವೇಗದಿಂದ ಅದರ ಮೇಲೆರಗಿ ತನ್ನ ಅತ್ಯಂತ ಹರಿತವಾದ ನಖಗಳಿಂದ ಒಂದೇ ಏಟಿಗಿ ಅದನ್ನು ಹೊಡೆದು ಸಾಯಿಸುತ್ತದೆ. ಸತ್ತ ಪ್ರಾಣಿ ನೆಲಕ್ಕೆ ಬಿದ್ದಮೇಲೆ ಮತ್ತೊಮ್ಮೆ ಸುತ್ತುಹಾಕಿ ಕೆಳಕ್ಕಿಳಿದು ಅದನ್ನು ವಿರಾಮವಾಗಿ ತಿನ್ನುತ್ತವೆ. ಪ್ರಾಣಿಗಳ ಮೇಲೆ ಎರಗುವಾಗ ಇದರ ಹಾರಾಟದ ವೇಗ ಗಂಟೆಗೆ ಸು.೨೮೦ ಕಿಮೀ ಇರುತ್ತದೆ ಎಂದು ಅಂದಾಜು ಮಾಡಲಾಗಿದೆ. ಗಿಡಗವೊಂದು ತನ್ನ ಎರೆಯ ಮೇಲೆ ಎರಗುವ ದೃಶ್ಯ ಪ್ರಕೃತಿಯಲ್ಲಿನ ಅತ್ಯಂತ ರೋಮಾಂಚಕ ನೋಟಗಳಲ್ಲೊಂದು 
     ಗಿಡಗಗಳು ಗೂಡುಗಳನ್ನು ಕಟ್ಟುವುದಿಲ್ಲ.ಕೆಲವು ನೆಲದ ಮೇಲೆಯ ಮೊಟ್ಟೆಗಳನ್ನಿಡುವುವಾದರೆ ಇನ್ನು ಕೆಲವು ಬೆಟ್ಟಗಳ ಪ್ರಪಾತುಗಳ ಚಾಚುಗಳಲ್ಲಿ ಮೊಟ್ಟೆ ಯಿಡುತ್ತವೆ.ಅನೇಕ ಸಲ ಕಾಗೆ,ಹದ್ದು ಮುಂತಾದವು ತ್ಯಜಿಸಿದ ಹಳೆಯ ಗೂಡುಗಳನ್ನು ಇವು ಬಳಸುತ್ತವೆ.ಮೊಟ್ಟೆಗಳ ಸಂಖ್ಯೆ ೨-೫ರ ವರೆಗೆ ವ್ಯತ್ಯಾಸವಾಗುತ್ತದೆ. ಕಾವು ಕೂಡುವ ಅವಧಿ ಸುಮಾರು ೪ ವಾರಗಳು. ಕಾವುಕೂರವ ಕೆಲಸ ಹೆಣ್ಣಿನದು.ಅಪರೂಪವಾಗಿ ಗಂಡು ಗಿಡುಗವೂ ಕಾವು ಕೂಡಬಹುದು. ಮರಿ ಗಿಡುಗಗಳು ೪-೬ ವಾರಗಳ ಅನಂತರ ಸ್ವತಂತ್ರ ಜೀವನ ನಡೆಸಲು  ಸಮರ್ಥವಾಗುತ್ತವೆ.
  ಗಿಡಗಗಳನ್ನು ಸಾಕಿ,ಶಿಕ್ಷಣ ಕೊಟ್ಟು ಜಿಂಕೆ,ಗೆಜೆಲ್ ಮುಂತಾದ ಪ್ರಾಣಿಗಳ ಮತ್ತು ಕೆಲವು ಬಗೆಯ ಹಕ್ಕಿಗಳ ಬೇಟೆಗೆ ಬಳಸುವುದು ಹಿಂದಿನ ಕಾಲದಲ್ಲಿ ಜನ ಪ್ರಿಯ ವಿಹಾರವಾಗಿತ್ತು.
ಇದರ ವಿವರಗಳಿಗೆ ನೋಡಿ -ಗಿಡುಗ ಸಾಕಣೆ