ಪುಟ:Mysore-University-Encyclopaedia-Vol-6-Part-6.pdf/೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೪ ಗಿಡುಗ ಸಾಕಣಿ

  ಗಿಡುಗಗಳಲ್ಲಿ ಮುಖ್ಯವಾದ ಬಗೆಗಳನ್ನು ಮುಂದೆ ವಿವರಿಸಲಾಗಿದೆ

1.ಫಾಲ್ಕೊ ಬಯಾರ್ಮಿಕಸ್ ಜಗರ್: ಭಾರತದಲ್ಲಿ ಕಾಣಬರುವ ಗಿಡುಗ ಇದು. ಕಾಡುಕಾಗೆಯ ಗಾತ್ರಕ್ಕಿದೆ. ಇದರ ದೇಹದ ಬಣ್ಣ ಬೂದಿಮಿಶ್ರಿತ ಕಂದು. ಹೊಟ್ಟೆಯ ಭಾಗಲ್ಲಿ ಕಂದುಮಚ್ಚೆಗಳುಳ್ಳ ಬಿಳಿಯ ಬಣ್ಣ ಉಂಟು. ಬಯಲು ಭೂಮಿಯಲ್ಲಿ ಕ್ರಿಷಿ ಭೂಮಿಯ ಬಳಿ ಇದರ ವಾಸ. ಪಾರಿವಾಳಗಳೇ ಇದರ ಪ್ರಮುಖ ಆಹಾರ. ಇಲಿ, ಓತಿಕೇತ, ಮಿಡತೆ,ಕೊಡತಿ, ಕೀಟ ಮುಂತಾದವನ್ನೂ ತಿನ್ನುತ್ತದೆ. ಮರಗಳ ಮೇಲೆ ಇಲ್ಲವೆ ಪ್ರಪಾತಗಳ ಸಂದುಗಳಲ್ಲಿ ಗೂಡುಕಟ್ಟಿ ಮೊಟ್ಟೆಯಿಡುತ್ತದೆ.ಗೂಡು ಕಟ್ಟುವ ಕಾಲ ಜನವರಿಯಿಂದ ಏಪ್ರಿಲ್ ವರೆಗೆ.