ಪುಟ:Mysore-University-Encyclopaedia-Vol-6-Part-7.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಜುರಾತಿನ ಇತಿಹಾಸ

ಸಾಧ್ಯತೆಯನ್ನು ತೋರಿಸಿತೊಟ್ಟರು. ಮುಂದೆ ಜಿ. ಜೆ.ವೈನೆರೈಟ್ ನರ್ಮದಾ ನದಿತೀರದ ಚಂದೋಡ್ನಿಂದ ಅರಬ್ಬೀ ಸಮುದ್ರದವರೆಗೆ, ಅಂದರೆ ಸುಮಾರು ೧೧೦ಕಿಮೀ ದೂರದ ನದಿ ಪ್ರದೇಶವನ್ನು ಕೂಲಂಕುಷವಾಗಿ ಪರೀಕ್ಷಿಸಿದರು. ಯುರೋಪಿನ ಅಶೂಲಿಯನ್ ಪದ್ಧತಿಯ ಶಿಲಾ ಉಪಕರಣಗಳಂತಿರುವ ಆದಿಶಿಲಾಯುಗದ ಕೈಗೊಡಲಿ ಮತ್ತು ಮಚ್ಚುಗತ್ತಿಯಂಥವು ಮತ್ತ್ತು ಲೆವಾಲ್ವ ಪದ್ಧತಿಯ ಗಟ್ಟಿಗಳು ದೊರೆತವು.ಇವು ಯುರೋಪಿನ ಕೊನೆಯ ಮಧ್ಯಂತರ ಹಿಮ ಒರವಾಹ ಕಾಲದ ಒಂದು ಭಾಗಕ್ಕೆ ಸೇರಿದವೆಂದು ಕಾಣುತ್ತವೆ.

ಸಾಬರಮತಿ, ಮಾಹಿ ಮತ್ತು ನರ್ಮದಾ ನದಿಗಳ ಪ್ರದೇಶದಲ್ಲಿ ಸೂಕ್ಷ್ಮ ಶಿಲಯುಗದ ಅನೇಕ ನೆಲಗಳು ೧೯೪೧ರಿಂದ ಈಚೆಗೆ ಬೆಳಕಿಗೆ ಬಮ್ದಿವೆ. ಇವುಗಳಲ್ಲಿ ಲಾಂಘನಾಜ್ ಎಂಬ ಒಂದು ನೆಲೆಯನ್ನು ವಿಶೇಷವಾಗಿ ಸಂಕಾಳಿಯಾ ಮತ್ತು ಅವರ ಸಹದ್ಯೋಗಿಗಳು ಪರೀಕ್ಷಿಸಿ ೧೯೪೪-೬೩ರ ನಡುವೆ ಇಲ್ಲಿ ಉತ್ಖನನ ನಡೆಸಿ, ಅಲ್ಲಿಯ ಸೂಕ್ಷ್ಮ ಶಿಲಾಯುಗದ ಜನಜೀವನದ ಕೆಲವೊಂದು ವಿಷಯಗಳನ್ನು ಬೆಳಕಿಗೆ ತಂದಿದ್ದಾರೆ.ಈಜನ ಅಲ್ಲಲ್ಲಿ ಮರುಳುದಿಣ್ಣೆಗಳ ಮೇಲೆ ಹಾಗು ನದಿಗಳ ದಂಡೆಗಳ ಮೇಲೆ ವಾಸಿಸುತ್ತಿದ್ದರು. ಆದರೆ ಇವರ ವಸತಿಗೃಹಗಳ ಅವಶೇಷಗಳೇನೂ ದೊರೆತಿಲ್ಲ. ಪ್ರಾಯಶಃ ಮಣ್ಣು ಬಳಿಯದ, ಗಿಡ ಸೊಪ್ಪುಗಳ ತಡಿಕೆಯುಳ್ಳ ಗುಡಿಸಲುಗಳನ್ನು ಕಟ್ಟೀಕೊಂಡಿದ್ದರೆಂದು ತೋರುತ್ತದೆ. ಇವರು ಮೊದಲು ಆಗೇಟ್, ಜಾಸ್ಪರ್, ಬೆಣಚುಕಲ್ಲು ಮುಂತಾದವುಗಳಿಂದ ಅತಿ ಸ್ಣ್ಣ, ತ್ರಿಕೋಣಾಕೃತಿಯ, ನೀಳವಾದ ಚಕ್ಕೆಗಳ ವಿವಿಧ ಉಪಕರಣಗಳನ್ನೂ ಕ್ರಮೇಣ, ಅಪರೂಪವಾಗಿ ಮಧ್ಯೆ ತೂತುಳ್ಳ ಕವಣೆಗಲ್ಲುಗಳನ್ನೂ ನಯಮಾಡಿ ಮೇಲ್ಮೈಯುಳ್ಳ ಕೊಡಲಿಗಳನ್ನೂ ಮಾಡಿಕೊಳ್ಳುತ್ತಿದ್ದರು. ಈ ಕಲ್ಲುಗಳನ್ನು ೫೦ ರಿಂದ ೧೫೦ ಕಿಮೀ ದೂರದ ಪ್ರದೇಶಗಳಿಂದ ತರಿಸಿಕೊಳ್ಳುತ್ತಿದ್ದಾರೆಂದು ಕಾಣುತ್ತದೆ. ಇವರು ಆಹಾರಕ್ಕಾಗಿ ಖಡ್ಗಮೃಗ, ಕಾಡುಹಂದಿ, ನೀಲ್ಗಾಯ್, ಚಿಗರಿ ಮುಂತಾದ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಮಜ್ಜೆಗಾಗಿ ಎಲುಬುಗಳನ್ನು ಸೀಳಿದ, ಮಿದುಳಿಗಾಗಿ ತಲೆಬುರುಡೆಗಳನ್ನು ಒದೆದ ಗುರುತುಗಳು ಇಲ್ಲಿ ದೊರೆತ ಪ್ರಾಣಿಗಳ ಎಲುಬುಗಳಲ್ಲಿ ತೋರಿಬಂದಿವೆ.ಮೀನು ಆಮೆಗಳು ಇವರ ಆಹಾರವಾಗಿದ್ದವು. ಇವರು ಅರ್ಧಗೋಲಾಕೃತಿಯ ಗುಡಾಣದಂಥ ಮತ್ತು ಇತರ ಅರೆಸುಟ್ಟ ಮಣ್ಣಿನ ಪಾತ್ರೆಗಳನ್ನು ಮಾಡುತ್ತಿದ್ದರು. ಇವುಗಳಲ್ಲಿ ಕೆಲವು ಪಾತ್ರೆಗಳ ಮೇಲೆ, ಅವು ಅರೆಹಸಿಯಾಗಿದ್ದಾಗ, ಮೊನಚಾದ ಕಡ್ಡಿಯಿಂದ, ರೇಖಾಚಿತ್ರಗಳನ್ನು ಕೊರೆಯುತ್ತಿದ್ದರು. ಕೆಮ್ಮಣ್ಣನ್ನು ನೀರಿನಲ್ಲಿ ಕದಡಿಕೆಲವು ಪಾತ್ರೆಗಳ ಮೇಲೆ ಬಳಿಯುತ್ತಿದ್ದರು. ಶವಗಳ ಕಾಲನ್ನು ಹಿಂದಕ್ಕೆ ಮಡಚಿ, ತಲೆ ಬಲಮಗ್ಗುಲಿಗೆ ಬರುವಂತೆ ಮಾಡಿ ಪೂರ್ವ ಪಶ್ಚಿಮವಾಗಿ ಅವನ್ನು ಕುಣಿಗಳಲ್ಲಿ ಮಲಗಸಿ ಮುಚ್ಚುತ್ತಿದ್ದರು. ಈ ಜನ ಮಿಶ್ರಜನಾಂಗದವರಾಗಿದ್ದು ಇವರಲ್ಲಿ ಮೆಡಿಟರೆನಿಡ್ ಮತ್ತು ಮೆಡಿಡ್ ಜನಾಂಗಗಳ ಲಕ್ಷಣಗಳಿದ್ದವೆಂಬುದು ಉತ್ಖನನದಲ್ಲಿ ದೊರೆತ ಅಸ್ತಿಪಂಜರಗಳ ಅವಶೇಷಗಳಿಂದ ತಿಳಿದುಬರುತ್ತದೆ. ಈ ಸಂಸ್ಕೃತಿ ಪ್ರಶ.ಪೂ ಸುಮಾರು ೨೦೦೦ಕ್ಕೆ ಇತ್ತೆಂದು ಹೇಳಬಹುದು. ರಂಗಪುರದಲ್ಲೂ , ಹರಪ್ಪ ಸಂಸ್ಕೃತಿಯ ಅವಶೇಷಗಳ ಕೆಳಭಾಗದಲ್ಲಿ, ಈ ಶಿಲಾಯುಗದ ಅವಶೇಷಗಳು ತೋರಿಬಂದಿವೆ.

ಸಿಂಧೂ ಬಯಲಿನ(ಹರಪ್ಪ) ನಾಗರಿಕತೆಯ ಅನೇಕ ನೆಲೆಗಳು ೧೯೩೪ರಿಂದ ಈಚೆಗೆ ಬೆಳಕಿಗೆ ಬಂದಿವೆ. ಮುಖ್ಯವಾಗಿ ರಂಗಪುರ, ರೋಜ್ಡಿ, ದೇಸಲ್ಪುರ, ಸೋಮನಾಥ, ಲೋಥಾಲ್ ಮತ್ತು ಸುರಕೋಟಡ ನೆಲೆಗಳಲ್ಲಿ ಉತ್ಖನನಗಳನ್ನು ನಡೆಸಿ, ಈ ನಾಗರಿಕತೆಯ ಬಗ್ಗೆ ಕೆಲವು ಹೊಸ ವಿಶಷಯಗಳನ್ನು ತಿಳಿದುಕೊಳ್ಳಲಾಗಿದೆ. ಲೋಥಾಲ್ನಲ್ಲಿ ದೊರೆತ ಈ ನಾಗರಿಕತೆಯನ ಅವಶೇಷಗಳಲ್ಲಿ ಹಡಗು ಕಟ್ಟೆ ಬಹು ಮುಖ್ಯವಾದ್ದು. ಇದು ಆ ಜನರ ಸಮುದ್ರ ವ್ಯಾಪಾರದ ಸಾಮರ್ಥ್ಯವನ್ನು ತೋರಿಸುತ್ತದೆ. ಪ್ರಪಂಚದಲ್ಲಿಯೇ ಇದು ಅತ್ಯಂತ ಪ್ರಾಚೀನವಾದ್ದು. ಹರಪ್ಪ, ಮೊಹೆಂಜೋದಾರೊಳಗೆ ಅನಂತರ, ಭಾರತದಲ್ಲಿ ದೊರೆತ ಈ ನಾಗರಿಕತೆಯ ದೊಡ್ಡ ನಗರಗಳಲ್ಲಿ ಲೋಥಾಲ್ ಒಂದು. ಇದು ಅಹಮದಾಬಾದ್ ಜಿಲ್ಲೆಯಲ್ಲಿದೆ; ಆನಗರದ ದಕ್ಷಿಣಕ್ಕೆ, ಸು.೧೦೦ ಕಿಮೀ ದೂರದಲ್ಲಿ ಇದೆ. ಈ ಪ್ರಾ‍ಚೀನ ನಗರ ಉನ್ನತಿಯಲ್ಲಿದ್ದಾಗ ಅರಬ್ಬಿ ಸಮುದ್ರ ಇದರ ಸಮೀಪದವರೆಗೂ ವಿಸ್ತರಿಸಿತ್ತು. ಕ್ರಮೇಣ ಸಮುದ್ರ ಮಟ್ಟದಿಂದ ಇಳಿತದಿಂದ ಈ ಪ್ರದೇಶ ಸಮುದ್ರದಿಂದ ದೂರವಾಯಿತು. ಇಲ್ಲಿಯ ನಗರ ಸಂಸ್ಕೃತಿಯ ಬೆಳವಣಿಗೆಯಲ್ಲಿ ಎರಡು ಹಂತಗಳು ತೋರುತ್ತವೆ. ಪೂರ್ವದ ಹಂತದಲ್ಲಿ ಇದು ಹರಪ್ಪ ನಗರದ ಹಾಗೆ, ಆದರೆ ಸಣ್ಣ ಗಾತ್ರದಲ್ಲಿ, ಕ್ರಮಬದ್ಧವಾಗಿ ಕಟ್ಟಲಾದ ನಗರವಾಗಿತ್ತು. ನಗರದ ಪ್ರಮುಖಾ ಭಾಗ ಬಲವಾದ ಗೋಡೆಯಿಂದ ಆವೃತವಾಗಿತ್ತು. ಹೊರಭಾಗದಲ್ಲಿ ಸುಮಾರು ಒಂದೂವರೆ ಕಿಮೀ ದೂರದಲ್ಲಿ ವಾಯವ್ಯದ ಕಡೆಗೆ ಒಣ್ದು ಸ್ಮಶಾನವೂ ಪೂರ್ವಭಾಗದಲ್ಲಿ ಚತುರ್ಭುಜಾಜೃತಿಯ ಹಡಗುಕಟ್ಟೆಯೂ(೨೧೩ಮೀ×೩೬ಮೀ) ಇದ್ದವು. ಇದು ೪.೨೦ಮೀ ಎತ್ತರವಿತ್ತೆಂಬುದಾಗಿ ಉತ್ಖನನದಲ್ಲಿ ಕಂಡುಬಂದಿದೆ; ಇನ್ನೂ ಎತ್ತರವಿದ್ದಿರಬಹುದು.

ನಗರದಲ್ಲಿ ಆರು ಭಾಗಗಳಿದ್ದವು. ಪ್ರತಿಯೊಂದು ಭಾಗದಲ್ಲೂ ವಿಶಾಲವಾದ ಇಟ್ಟಿಗೆ ಕಟ್ಟೆಯ ಮೇಲೆ ಮನೆಗಳನ್ನು ಕಟ್ಟಲಾಗಿತ್ತು. ಪೂರ್ವಪಶ್ಚಿಮ ಮತ್ತು ಉತ್ತರದಕ್ಷಿಣವಾಗಿ ಹಾದುಹೋಗುವ ಎರಡೆರಡು ಬೀದಿಗಳಿದ್ದವು ಮತ್ತು ಎರಡೆರಡು ಓಣಿಗಳಿದ್ದವು. ಒಂದು ಬೀದಿಯ ಬದಿಯಲ್ಲಿ ಸಾಲಾಗಿ ಮನೆಗಳಿದ್ದವು. ಇವಲ್ಲದೆ ಎದುರುಬದುರಾಗಿರುವ ಎರಡು ಮೂರು ಕೋಣೆಗಳುಳ್ಳ ಮನೆಗಳಿದ್ದವು. ಇವು ಅಂಗಡಿಗಳಾಗಿದ್ದಿರಬಹುದು. ದೊಡ್ಡಮನೆಗಳು ಮುಂಭಾಗದಲ್ಲಿ ಅಂಗಳಗಳಿಂದ ಕೂಡಿದ್ದವು. ಮತ್ತೆ ಕೆಲವು ಮನೆಗಳ ಮಧ್ಯದಲ್ಲಿ ಅಂಗಳಹಳಿದ್ದು ಸುತ್ತಲೂ ಕೋಣೆಗಳಿದ್ದವು ಚಿನಿವಾರರ, ಇತರ ಲೋಹ ಕೆಲಸ ಮಾಡುವವರ ಮನೆಗಳು ಸಣ್ಣವಿದ್ದವು. ನಗರನೈರ್ಮಲ್ಯ ವ್ಯವಸ್ಥೆ ಚೆನ್ನಗಿತ್ತು. ಈ ಬೀದಿಯ ಬದಿಯ ದೊಡ್ಡ ಚರಂಡಿಗಳಿಗೆ ಮನೆಯ ಒಳ ಚರಂಡಿಗಳನ್ನು ಸೇರಿಸಲಾಯಿತು. ಮನೆಗಳಲ್ಲಿ ಬಿಟುಮೆನ್ ಸವರಿದ ನೆಳವುಳ್ಳ ಸ್ನಾನಗ್ರಹಗಳು, ಶೌಚಗೃಹ ಮತ್ತು ಹಿಂಗುಣಿಗಳಿದ್ದವು. ನಗರದ ದಕ್ಷಿಣ ಭಾಗದಲ್ಲಿ ಎತ್ತರದ ಕಟ್ಟೆಯ ಮೇಲೆ ನಿರ್ಮಿಸಿದ ದೊಡ್ಡದೊಂದು ಮನೆಗೆ ಸುವ್ಯವಸ್ಥಿತವೂ ವಿಶಾಲವೂ ಆದ ಚರಂಡಿಯೂ ಪ್ರತ್ಯೇಕ ಬಾವಿಯೂ ಇದ್ದವು. ರೋಜ್ಡಿಯಲ್ಲಿ ಈ ನಾಗರಿಕತೆಯ ಕೊನೆಯ ಹಂತದಲ್ಲಿ ತುಂಡುಕಲ್ಲುಗಳಿಂದ ಮನೆಗಳನ್ನು ಕಟ್ಟಲಾಗಿತ್ತು. ಸುರ್ಕೋಟಡದಲ್ಲಿ ನಗರದ ಸುತ್ತಲೂ ರಕ್ಷಣಾರ್ಥವಾಗಿ ಬಲವಾದ ಗೋಡೆಗಳಿದ್ದುವು.

ಹರಪ್ಪದಲ್ಲಿಯ ಹಾಗ್ರ್ ಲೋಥಾಲಿನಲ್ಲಿ ಕೆಂಪುವರ್ಣದ ಮೃಣ್ಪಾತ್ರೆಗಳು ವೈವಿಧ್ಯಪೂರಿತವಾಗಿದ್ದು, ಕಪ್ಪು ನೀಲಿ ಬಣ್ಣಗಳ ಚಿತ್ರಗಳಿಂದ ಅಲಂಕೃತವಾಗಿದ್ದುವು; ದೇಸಲ್ಪುರದಲ್ಲಿ ಕಪ್ಪು ನೀಲಿ ಮತ್ತು ಕೆಂಪು ಕೂಡಿದ ಚಿತ್ರಗಳಿಂದ ಅಲಂಕೃತವಾಗಿದ್ದುವು. ಜೊತೆಗೆ ಇಲ್ಲಿ ಮಾತ್ರ ಮತ್ತೊಂದು ವಿಧವಾದ, ಕೆಂಪು ಕಪ್ಪು ಬಣ್ಣವುಳ್ಳ ದ್ವಿವರ್ಣ ಪಾತ್ರೆಗಳು ಉಪಯೋಗದಲ್ಲಿದ್ದುವು. ಕಂಚು ಅಥವಾ ತಾಮ್ರದ ಉಪಕರಣಗಳ ಜೊತೆಗೆ ಪ್ಲಿಂಟ್ ಕಲ್ಲಿನ ನೀಳ ಚಕ್ಕೆಗಳು ನಿತ್ಯ ಕೆಲಸಗಳಿಗೆ ಬೇಕಾಗುವ ಉಪಕರಣಗಳಾಗಿ ಉಪಯೋಗದಲ್ಲಿದ್ದುವು.