ಪುಟ:Mysore-University-Encyclopaedia-Vol-6-Part-7.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಜರಾತಿನ ಇತಿಹಾಸ ಸುಟ್ಟ ಮಣ್ಣಿನಿಂದ,ಆನೆಯ ಮತ್ತು ಇತರ ದಂತಗಳಿಂದ,ಒಳ್ಳೆಯ ಜಾತಿಯ ಕಲ್ಲುಗಳಿಂದ,ತಾಮ್ರ,ಚಿನ್ನ ಮುಂತಾದವುಗಳಿಂದ ಮಾಡಿದ ವಿವಿಧ ಆಕಾರಗಳ ಆಭರಣಗಳು ಅಲ್ಲಿಯ ಜನರ ಕುಶಲಕೆಲಸಕ್ಕೆ,ಸೌಂದರ್ಯಪ್ರಿಯತೆಗೆ ಸಾಕ್ಷಿಗಳಾಗಿವೆ.ಒಂದು ಚಿನ್ನದ ಸರದಲ್ಲಿ ೫ ಲಕ್ಷ ಅತಿ ಸಣ್ಣ ಗುಂಡುಗಳು ಮತ್ತು ಕೊಳವೆಗಳಿದ್ದುವು.ಒಂದು ತಾಮ್ರದ ನಾಯಿಯ ಗೊಂಬೆಯ ಮುಖಭಾವ ಮಾರ್ಮಿಕವಾಗಿದೆ.ತಾಮ್ರ,ಕಂಚಿನಕೊರೆಯುವ ತಂತಿ ಒಂದು ಮುಖ್ಯವಾದ ಶೋಧ. ಚದುರಂಗದ ಕಾಯಿಗಳಾಗಿದ್ದಿರಬಹುದಾದ ಹೋತದ ತಲೆಯುಳ್ಳ,ಪ್ರಾಣಿ,ಎತ್ತು ಮುಂತಾದ ಗೊಂಬೆಗಳು ಆಕರ್ಷಕವಾಗಿವೆ.ಸು.೧೭.೫ ಸೆಂಮೀ ಉದ್ದದ,೧.೭ ಮಿಮೀ ಅಂತರದಲ್ಲಿ ಎಳೆದ ಗೆರೆಗುಳುಳ್ಳ ದಂತದ ಅಳತೆಪಟ್ಟಿ,ಸುಣ್ಣ ಮಣ್ಣಿನ ಅಳತೆಗುಂಡುಗಳು ಇವು ಇವರ ಮಾಪನ --ನದ ಗುರುತುಗಳಾಗಿವೆ.ಮಣ್ಣಿನ ಗೊಂಬೆಗಳಲ್ಲಿ ಒಂದು ಕುದುರೆಯಹಾಗೆ ಇದೆ.ಇದು ಕುದುರೆಯೋ ಹೇಸರಗತ್ತೆಯೋ ಅಷ್ಟು ಸ್ಪಷ್ಟವಾಗಿಲ್ಲ.ಕುದುರೆಯಾಗಿದ್ದಲ್ಲಿ ಈ ನಾಗರಿಕತೆಯ ಜನರಲ್ಲಿ ಈ ಪ್ರಾಣಿ ಉಪಯೋಗದಲ್ಲಿದ್ದುದು ಪ್ರಥಮ ಬಾರಿಗೆ ತಿಳಿದ ಹಾಗಾಹುತ್ತದೆ.ಹರಪ್ಪ,ಮೊಹೆಂಜೋದಾರೊಗಳಲ್ಲಿ ದೊರೆತಹಾಗೆ ಲೋಥಾಲಿನಲ್ಲಿಯೂ ಆಕ್ಷರಗಳುಳ್ಳ ಚಿತ್ರಿತ ಮುದ್ರಿಕೆಗಳು ದೊರೆತಿವೆ;ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿಯ ಸಮಕಾಲೀನ ಸಂಸ್ಕ್ರತಿಯ ಗುರುತುಗಳಲ್ಲಿ ಒಂದಾದ ದುಂಡು ಮುದ್ರಿಕೆಗಳು ಒಂದೆರಡು ಇಲ್ಲಿ ದೊರೆತು ಈ ಎರಡೂ ಪ್ರದೇಶಗಳ ನಡುವಿನ ಸಮುದ್ರವ್ಯಾಪಾರ ಸಂಬಂಧವನ್ನುಇವು ಪುಷ್ಟೀಕರಿಸಿವೆ.ಹರಪ್ಪ ಮೊಹೆಂಜೋದಾರೊ ಪ್ರದೇಶಕ್ಕೆ ಮತ್ತು ಗುಜರಾತಿನ ಸೌರಾಷ್ಟ್ರಭಾಗಕ್ಕೆ ಭೂಮಾರ್ಗ ಸಂಪರ್ಕವೂ ಇತ್ತು ಎಂಬುದು ಕಚ್ಛ್ ಪ್ರದೇಶದ ಉತ್ಖನನದಿಂದ ತಿಳಿದುಬಂದಿದೆ. ಅಲ್ಲಿ ಎರಡು ವಿಧವಾದ ಶವಸಂಸ್ಕಾರ ಪದ್ಧತಿಗಳು ಇದ್ದುವು:ಶವವನ್ನು ಉತ್ತರ ದಕ್ಷಿಣವಾಗಿ ಅಥವಾ ಕ್ವಚಿತ್ತಾಗಿ ಪೂರ್ವ ಪಶ್ವಿಮವಾಗಿ ಹುಗಿಯುವುದು;ಇಲ್ಲವೇ ಶವದ ಅಸ್ಥಿಗಳನ್ನು ಕಾಲಕ್ರಮದಲ್ಲಿ ಸಂಗ್ರಹಿಸಿ ಮೈಣ್ ಪಾತ್ರೆಯಲ್ಲಿ ಹಾಕಿ ಅವನ್ನು ಕ್ರಮವಾಗಿ ಹುಗಿಯುವುದು.ಅಪರೂಪವಾಗಿ ಶವದ ಕುಣಿಯ ಬದಿಯನ್ನು ಇಟ್ಟಿಗೆಗಳಿಂದ ಭದ್ರ ಮಾಡುತ್ತಿದ್ದದ್ದುಂಟು. ಎರಡನೆಯ ಹಂತದಲ್ಲಿ ಹರಪ್ಪ್ ನಾಗರಿಕತೆ ಇಳಿಮುಖವಾದ ಲಕ್ಷಣಗಳು ತೋರುವುವು.ಅಲ್ಲ ಪ್ಲಿಂಟ್ ಬದಲು ಜಾಸ್ಪರ್ ಮತ್ತು ಅಗೇಟ್ ಕಲ್ಲಿನ ನೀಳ ಚಕ್ಕೆಗಳನ್ನು ಉಪಕರಣಗಳಾಗಿ ಉಪಯೋಗಿಸುತ್ತಿದ್ದ ಬೇರೆ ಜನವರ್ಗದವರು ಇಲ್ಲಿ ಬಂದು ನೆಲೆಸಿದ ಹಾಗೆ ಕಾಣುತ್ತದೆ.ಈ ಹಂತದ ಮೃಣ್ ಪಾತ್ರೆಗಳು ಹಿಂದಿನವುಗಳಿಗಿಂತ ತೀರ ಭಿನ್ನವಾಗಿವೆ;ಮತ್ತು ಈ ಸಂಸ್ಕೃತಿಯ ಲಕ್ಷಣಗಳಲ್ಲಿ ದಖನ್ ಪ್ರಸ್ಥಭೂಮಿಯ ಶಿಲಾ ತಾಮ್ರಯುಗದ ಸಂಸ್ಕೃತಿಗೆ ಹೆಚ್ಚು ಹೋಲಿಕೆಯಿದೆ.ಈ ಸಾಧಾರಣ ಸಂಸ್ಕೃತಿಯ ಲಕ್ಷಣಗಳು ರಂಗಪುರದಲ್ಲಿಯೂ ಕಂಡಿವೆ.ಆದರೆ ಲೋಥಾಲನಲ್ಲಿ ಇದು ಸರಿಯಾಗಿ ಬೇರೂರುವುದರಲ್ಲಿಯೇ ಅಲ್ಲಿಯ ನದಿಪ್ರವಾಹದಿಂದ ಹಾಳಾಯಿತು.ರಂಗಪುರದಲ್ಲಿ ಸುಡದ ಮಣ್ಣಿನ ಇಟ್ಟಿಗೆ ಮನೆಗಳಿದ್ದುವು.ಬಿಳಿಬಣ್ಣದ ರೇಖಾಚಿತ್ರಗಳಿಂದ ಅಲಂಕರಿಸಲ್ಪಟ್ಟ್ ಕಪ್ಪು ಕೆಂಪು ಬಣ್ಣಗಳ ಮಣ್ಣಿನ ಪಾತ್ರೆಗಳು ಉಪಯೋಗದಲ್ಲಿದ್ದುವು.ಕ್ರಮೇಣ ವಿಶೇಷ ಹೊಳಪುಳ್ಳ ಬಣ್ಣದ ಮೃಣಪಾತ್ರೆಗಳು ಬಳಕೆಯಲ್ಲಿದ್ದುವು. ಸೋಮನಾಥದಲ್ಲಿ ಹರಪ್ಪ್ ನಾಗರಿಕತೆಯ ಕೊನೆಯ ಹಂತದ ಗುರುತುಗಳುಂಟು.ಈ ಹಂತದಲ್ಲಿ ಕಂದುಬಣ್ಣದ ರೇಖಾಚಿತ್ರಗಳಿಂದ ಅಲಂಕರಿಸಿದ ಬಿಳಿ ಅಥವಾ ಸ್ವಲ್ಪ್ ಬಿಳಿಹಳದಿ ಬಣ್ಣದ ಮೃಣಪಾತ್ರೆಗಳೂ ಬಳಕೆಯಲ್ಲಿದ್ದುದು ಒಂದು ವೈಶಿಷ್ಟ್ಯ.ಜೊತೆಗೆ ಹೊಸ ಮಾದರಿಯ ಮೃಣ್ ಪಾತ್ರೆಯ ಬಟ್ಟಲುಗಳು (ಪ್ರಭಾಸ್ ಅಥವಾ ಸೋಮನಾಥ್ ಬೋಲ್) ಇದ್ದವು.ಇದಕ್ಕೂ ಪೂರ್ವದಲ್ಲಿ,ಕೊರೆದ ಗೆರೆಚಿತ್ರೆಗಳಂದ ಅಲಂಕರಿಸಿದ,ಒರಟಾದ,ಬೂದು ಮತ್ತು ಕೆಂಪುಬಣ್ಣಗಳ ಮೃಣ್ ಪಾತ್ರೆಗಳನ್ನು ಉಪಯೋಗಿಸುತ್ತಿದ್ದ ಜನರಿದ್ದರು.ಹರಪ್ಪ್ ನಾಗರಿಕತೆಯ ತರುವಾಯ ಅನುಕ್ರಮವಾಗಿ ವಿಶೇಷ ಹೊಳಪುಳ್ಳ್ ಕೆಂಪು ಮೃಣ್ ಪಾತ್ರೆಗಳನ್ನು,ಬಿಳಿ ಬಣ್ಣದ ರೇಖಾಚಿತ್ರಗಳುಳ್ಳ ಕಪ್ಪು-ಕೆಂಪುವರ್ಣದ ಪಾತ್ರೆಗಳನ್ನು ಹಾಗೂ ಕಬ್ಬಿಣವನ್ನು,ಅನಂತರ ವಿಶೇಷ ಹೊಳಪುಳ್ಳ ಕಪ್ಪುವರ್ಣದ ಪಾತ್ರೆಗಳನ್ನು(ನಾರ್ದರನ್ ಬ್ಲಾಕ್ ಪಾಲಿಷ್ಡ್ ವೇರ್)ಉಪಯೋಗಿಸುತ್ತಿದ್ದ್ ಜನ ಇಲ್ಲಿ ನೆಲೆಸಿದ್ದರು. ಸೂಕ್ಷ್ಮಶಿಲಾಯುಗದ ಅನಂತರದ ಈ ವಿವಿಧ ಸಂಸ್ಕೃತಿಗಳು ಅನುಕ್ರಮವಾಗಿ ಪ್ರ.ಶ.ಪೂ.೨೦೦೦-೧೦೦ರವರೆಗೆ ಬೆಳೆದು ನಶಿಸಿಹೋದುವು.ಇವುಗಳಲ್ಲಿ ಮುಖ್ಯವಾಗಿ ಹರಪ್ಪ್ ನಾಗರಿಕತೆ ಪ್ರ್.ಶ.ಪೂ.೨೦೦೦-೧೭೦೦ರವರೆಗೆ ಊರ್ಜಿತವಾಗಿತ್ತು.ಗಿರ್ನಾರದಲ್ಲಿರುವ ಅಶೋಕನ ಕಲ್ಲುಬಂಡೆ ಶಾಸನವೇ ಮುಂತಾದ ಐತಿಹಾಸಿಕ ಆಧಾರಗಳಿಂದ ಪ್ರ್.ಶ.ಪೂ ೩ನೆಯ ಶತಮಾನದಲ್ಲಿ ಗುಜರಾತು ಮೌರ್ಯ ಸಾಮ್ರಾಜ್ಯಕ್ಕೆ ಸೇರಿತ್ತೆಂದು ಹೇಳಬಹುದು.ಇಲ್ಲಿ ಇತಿಹಾಸಯುಗ ಪ್ರಾರಂಭವಾಯಿತು.(ಎ.ಎಸ್) ೨.ಇತಿಹಾಸ:ಅಥರ್ವವೇದ ಹಾಗೂ ಐತರೇಯ ಬ್ರಾಹ್ಮಣಗಳಲ್ಲಿ ಭಾರತವನ್ನು ಐದು ಭಾಗಗಳಾಗಿ-ಪ್ರಾಚ್ಯ,ದಕ್ಷಣ,ಪ್ರಾತೀಚಿ,ಉದೀಚಿ,ಮತ್ತು ಧ್ರುವಾಮಧ್ಯಮಾ ಎಂದು-ವಿಂಗಡಿಸಲಾಗಿದೆ.ಇದರಲ್ಲಿ ಪ್ರತೀಚಿ ಅಥವಾ ಪಶ್ಚಿಮ ಭಾಗಕ್ಕೆ ಅಪರಾಂತ