ಪುಟ:Mysore-University-Encyclopaedia-Vol-6-Part-7.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಜರಾತಿನ ಶಾಸನಗಳು, ನಾಣ್ಯಗಳು ಗುಡಿಗಳಿವೆ, ಮಾದಲು ೫೨೦ ಗುಡಿಗಳಿದ್ದವೂ, ಮಾದೇರದಲ್ಲಿಯ ಸೂರ್ಯ ದೇವಾಲಯದ ಪಕ್ಕದ ರಾಮಕುಂಡದ (ಸು,೧೧ ನೆಯ ಶತಮಾನ) ನೀರಿನ ಮಟ್ಟದ ತನಕ ಅಲ್ಲಲ್ಲಿ ಸುತ್ತಲೂ ಅಗಲವಾದ ಸ್ದಳ ಬಿಟ್ಟಿದೆ, ಪ್ರತಿಯೊಂದು ಮೂಲೆಯಲ್ಲೂ ಹಂತಹಂತದ ಮದ್ಯೆ ಒಂದೊಂದು ಸಣ್ಣ ಗುಡಿಯುಂಟು,ಅನ್ಹಿಲ್ ವಾಡದ ರಾಣಿ ಬಾವಿ, ಬಾರೋತ್ ಬಾವಿಗಳು,ವಾಯಡದಲ್ಲಿಯ ಬಾವಿ, ವಧ್ವಾನ್ದ ಮಾಧವ ಮತ್ತು ಗಂಗಾ ಬಾವಿಗಳು,ವಾಯಡದಲ್ಲಿಯ ಬಾವಿ,ವಧ್ವಾನ್ದ ಮಾಧವ ಮತ್ತು ಗಂಗಾ ಬಾವಿಗಳು ಹಾಗೂ ಧಾಂಡಲ್ ಪುರದ ಬಾವಿಗಳು ವಾಸ್ತುಶೈಲಿಯ ದೈಷ್ಟಿಯಿಂದ ಪ್ರೇಕ್ಷಣೇಯ. ಚಾಳುಕ್ಯರ ಕಾಲದ ದೇವಾಲಯಗಳನ್ನು ಎರಡು ಗುಂಪುಗಳಾಗಿ ವಿಂಗಡಿಸ ಬಹುದು.ಮೊದಲಿನ ಗುಂಪಿನ ದೇವಾಲಯಗಳನ್ನು ಅಳತೆ ಪ್ರಮಾಣಗಳು ದೈಷ್ಷಿಯಿಂದ ಮತ್ತೆ ಕಾಠಿಯಾವಾಡದ ಪರಬಾದಿ,ಚೌಬಾರಿಗಳಲ್ಲಿಯ ದೇವಾಲಯಗಳು ಸಾಮಾನ್ಯವಾಗಿ ಸಣ್ಣವಾಗಿವೆ.ಮೊಧೇರ,ರುದ್ರಮಾಲ್(ಉತ್ತರ ಗುಜರಾತ್),ಧಾನ್,ಸೋಮನಾಧ್ ಬಳಿಯ ಭೀಮನಾಧ್ ಮತ್ತು ಹಿರಣ್ಯ ನದಿಯ ಹತ್ತಿರದ ಸುರ್ಯ ದೇವಾಲಯ-ಇವು ದೊಡ್ಡವಾಗಿವೆ. ಮೊಧೇರ ಸುರ್ಯ ದೇವಾಲಯವನ್ನು ೧೦೨೬ರಲ್ಲಿ ನಿರ್ಮಿಸಲಾಗಿದೆ ಎಂದು ಶಾಸನಗಳಿಂದ ತಿಳಿಯುತ್ತದೆ.ಈ ದೇವಾಲಯದಲ್ಲಿ ಸೂರ್ಯಕುಂಡ ಅಧವಾ ರಮಕುಂಡ,ಸಭಾ ಮಂಟಪ ಮತ್ತು ಗೂಢ ಮಂಟಪವಿದೆ. ಸಭಾ ಮಂಟಪದಲ್ಲಿ ಸುಂದರ ಕೆತ್ತನೆ ಕೆಲಸ ಮತ್ತು ಕೆಳಭಾಗದಲ್ಲಿ ಅನೇಕ ಉಬ್ಬು ಶಿಲ್ಪಿಗಳನ್ನೋಳಗೊಂಡ ೫೨ ಕಂಬಗಳಿವೆ .ಈ ಕಂಬಗಳಲ್ಲಿ ಅನೇಕ ಶಿಲ್ಪಗಳಿದ್ದು ಕೆಲವು ಅಪರೊಪದ ಜೀವನ ಚಕ್ರದ ಶಿಲ್ಪಗಳಿವೆ.ಇವುಗಳಲ್ಲಿ ಯುವಕಯುವತಿಯರಲ್ಲಿಯ ಸಹಜ ಕಾಮೋನ್ಮಾದದಿಂದ ಹಿಡಿದು,ಗರ್ಭದಾರಣೆ,ಹುಟ್ಟು ಮೊದಲಾದ ಹಂತಗಳ ಮೂಲಕ ಕಡೆಯಲ್ಲಿ ಸಾವಿನವರೆಗೆ ಜೀವನ ಚಕ್ರದ ಪ್ರಮುಖ ಹಂತಗಳನ್ನು ನಿರೂಪಿಸಲಾಗಿದೆ.ಪ್ರಪಂಚದಲ್ಲಿ ನಿರಂತರವಾಗಿ ನಡೆಯುತ್ತಿರುವ ಸೃಷ್ಷಿ, ಸ್ಧಿತಿ ಮತ್ತು ಲಯದ ವಾಸ್ತವಾಂಶವನ್ನು ಮುಕ್ತವಾಗಿ ಚಿತ್ರಿಸಿರುವುದು ಈ ದೇವಾಲಯದ ಒಂದು ವಿಶೇಷವಾಗಿದೆ.ಸೋಮನಧದ ಶಿವದೇವಾಲಯ ಮತ್ತು ಗುಮ್ಲಿ ಸೆಜಕ್ ಪುರದ ದೇವಾಲಯಗಳು ಎರಡನೆಯ ಗುಂಪಿಗೆ ಸೇರಿವೆ.ಇವಲ್ಲದೆ ತಾರಿಂಗ,ಸರೋತ್ರ,ಆಖು,ಗಿರ್ನಾರ್ ಮತ್ತು ಶತ್ರುಂಜಯದಲ್ಲಿಯ ಜೈನದೇವಾಲಯಗಳದು ಆವುಗಳ ವಾಸ್ತು ವೈಶಿಷ್ಷ್ಯದಿಂದ ಒಂದು ಪ್ರತ್ಯೇಕವಾದ ಗುಂಪು. ಸಾಮಾನ್ಯವಾಗಿ ಈ ದೇವಾಲಯಗಳ ಗೋಡೆಗಳ ಹೊರಬದಿಯಲ್ಲಿ, ಗರ್ಭಗುಡಿಯ ಮುಂದಿನ ಮಂಟಪದ ಮಧ್ಯದ ಗುಮ್ಮಟಾಕಾರದ ಚಾವಣಿಯಲ್ಲಿ ಮತ್ತು ಕಂಬಗಳ ಮೇಲೆ ವಿಶೇಷವಾಗಿ ದೇವಮಾನವ ಮೂರ್ತಿಗಳೂ ರೇಖಾ ಹೂಬಳ್ಳಿ ಚಿತ್ರಗಳೂ ಇರುತ್ತವೆ.ಗೋಡೆಗಳು ಅಲ್ಲಲ್ಲಿ ಕ್ರಮವಾಗಿ ಹಿಂದಕ್ಕೆ ಸರಿದು ಮುಂದಕ್ಕೆ ಚಾಚಿರುವುದರಿಂದ ತಳವಿನ್ಯಾಸ ಚತುಷ್ಕೋಣವಾಗಿರದೆ ಸಮಸಂಖ್ಯೆಯ ಅನೇಕ ಕೋಣಗಳುಳ್ಳ ಹಲವು ಭುಜುಗಳನ್ನುಳ್ಳದ್ದಾಗಿದೆ.ಈ ಎರಡು ಲಕ್ಷಣಗಳು ೫೦೦-೧೦೦೦ದ ಕಾಲದ ಗುಡಿಗಳಲ್ಲಿ ಇಲ್ಲ.ಮಂಟಪದ ಮೇಲೆ ಗುಮ್ಮಟವೂ ಗರ್ಭಗುಡಿಯ ಮೇಲೆ ರೇಖಾನಾಗರ ಶೈಲಿಯ ಶಿಖರವೂ ಇವೆ. ಸರ್ನೆಲ್ ದಲ್ಲಿಯ ಗಲ್ತೆಶ್ವರ ದೇವಾಲಯ ೩೮ ಕಂಬಗಳ ಸಭಾ ಮಂಟಪದಿಂದ ಮತ್ತು ವರ್ತುಳಾಕಾರದ ನಕ್ಷತ್ರಾಕೃತಿಯ ತಳವಿನ್ಯಾಸದ ಗರ್ಭಗುಡಿಯಿಂದ ಕೂಡಿದೆ.ಗಿರ್ನಾರದ ನೇಮಿನಾಧ ದೇವಾಲಯಕ್ಕೆ ಸುತ್ತಲೂ ಸರಾಯಿಯ ಪ್ರಾಕಾರವಿದೆ.ಹಾಗೆಯ ಗುಮ್ಲಿಯ ನವಲಾಖ ದೇವಾಲಯಕ್ಕೆ ಸರಾಯಿಯಿಲ್ಲದ ಪ್ರಾಕಾರವುಂಟು.ಕಸರ್ ಮತ್ತು ಗಿರ್ನಾರ್ ಗಳಲ್ಲಿ ತ್ರಿಕೂಟಾಚಲ ದೇವಾಲಯಗಳಿವೆ. ಪ್ರಸಿದ್ಧವಾದ ಸೋಮನಾಧ ದೇವಾಲಯ ಪದೇಪದೇ ಶತ್ರುಗಳ ಹಾವಳಿಗಳಿಂದ ಹಾಳಾಗಿ ಜೀರ್ಣೋದ್ಧಾರಗೊಂಡು,ಅದರ ವೊದಲಿನ ಸ್ವರೂಪ ಬದಲಾಗಿದೆ. ವಡನಗರ,ಕಪಧ್ವಂಜ್,ಐಲುದ್ರ ರೇವ-ಈಸ್ಧಳಗಳಲ್ಲಿಯ ಕೀರ್ತಿ ತೋರಣಗಳು ಗುಜರಾತಿನ ವಾಸ್ತುಶಿಲ್ಪದ ಗುರುತುಗಳು.ಇವುಗಳಲ್ಲಿ ವಡನಗರದಲ್ಲಿರುವುದು ಪ್ರರೂಪಿ ಸ್ವರೂಪದ್ದು.ಇದು ಸಂಪೂರ್ಣ ಸೂಕ್ಷ್ಮ ಕುಸುರಿ ಕೆತ್ತನೆಯಿಂದ ಅಲಂಕೃತವಾಗಿದೆ. ಗುಜರಾತಿನ ಶಾಸನಗಳು,ನಾಣ್ಯಗಳು:೧.ಶಾಸನಗಳು : ಗುಜರಾತು ಪ್ರ.ಶ.ಪೂ.ಸು.೩ನೆಯ ಶತಮಾನದಿಂದ ಪ್ರ.ಶ.೧೪ನೆಯ ಶತಮಾನದವರೆಗೆ ಕ್ರಮವಾಗಿ ಮೌರ್ಯ,ಕ್ಷತ್ರಪ,ಗುಪ್ತ,ತ್ರೈಕೂಟಕ,ಗೂರ್ಜರ,ಚಾಳುಕ್ಯ,ರಾಷ್ಟ್ರಕೂಟ,ವಲ್ಲಭಿ, ಮೃತ್ರಕ,ಸೋಲಂಕಿ ಮತ್ತು ವಾಘೇಲದ ಚಾಳುಕ್ಯ ಮುಂತಾದ ರಾಜವಂಶದವರ ಆಳ್ವಿಕೆಗೆ ಒಳಪಟ್ಟಿತ್ತೆಂಬುದೂ ಅವರಲ್ಲಿ ಕೆಲವರ ವಂಶಾವಳಿಯೂ ಧಾರ್ಮಿಕ ರಾಜಕೀಯ ಲೋಕೋಪಯೋಗಿ ವಿಷಯಗಳೂ ಚಟುವಟಿಕೆಗಳೂ ಇದುವರೆಗೆ ದೊರೆತ ಸುಮಾರು ೩೦೦ ಶಾಸನಗಳಿಂದ ತಿಳಿದಿವೆ. ಅಶೋಕ ಪ್ರಾಣಿಹತ್ಯೆಯನ್ನು ನಿಷೇಧಿಸಿದ್ದು,ಮಾರ್ಗಬದಿಗಳಲ್ಲಿ ಗಿಡ ಮರಗಳನ್ನು ನೆಡಿಸಿದ್ದು,ಬಾವಿಗಳನ್ನು ತೋಡಿಸಿದ್ದು,ಧರ್ಮಪ್ರಚಾರಕ್ಕೂ ನ್ಯಾಯ ಪರಿಪಾಲನೆಗೂ ಅಧಿಕಾರಿಗಳನ್ನು ನೇಮಿಸಿ ಅವರ ಕರ್ತವ್ಯಗಳನ್ನು ನಿರೂಪಿಸಿದ್ದು,ಜನಸಾಮಾನ್ಯರಲ್ಲಿ ನೀತಿಯ ಮಟ್ಟವನ್ನು ಹೆಚ್ಚಿಸಿ ಧರ್ಮಾಂಧತೆಯನ್ನು ಹೋಗಲಾಡಿಸಿ ಧರ್ಮ್ಸಮನ್ವಯಕ್ಕೆ ಪ್ರಯತ್ನ ಮಾಡಿದ್ದು-ಮುಂತಾದ ವಿಷಯಗಳು ಗಿರ್ನಾರ್ ನಲ್ಲಿ ದೊರೆತ,ಆಶೋಕ ಚಕ್ರವರ್ತಿಯ ೧೪ ಕಲ್ಲುಬಂಡೆ ಶಾಸನಗಳಲ್ಲಿವೆ.ತರುವಾಯದ ಕ್ಷತ್ರಪರ ಶಾಸನಗಳಲ್ಲಿ