ಪುಟ:Mysore-University-Encyclopaedia-Vol-6-Part-7.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಪ್ತರ ನಾಣ್ಯಗಳು ತೂಕ ,ಸುತ್ತಳತೆಗಳನ್ನು ಅನುಸರಿಸಿದವರಲ್ಲ.ಅವರ ಬಂಗಾರದ ನಾಣ್ಯಗಳಲ್ಲಿ ೧೧೨-೧೪೬,ಬೆಳ್ಳಿ ನಾಣ್ಯಗಳಲ್ಲಿ ೨೭-೩೪ ,ತಾಮ್ರ ನಾಣ್ಯಗಳಲ್ಲಿ ೧೮-೮೭ ಗುಂಜಿ ತೂಕಗಳ ಅಂತರ ಕಂಡುಬರುತ್ತದೆ.ಇದರಲ್ಲಿ ಒಂದು ಗಮನೀಯ ಅಂಶವೆಂದರೆ,ಪ್ರತಿಯೊಬ್ಬ ಹೊಸ ಅರಸ ಪಟ್ಟಕ್ಕೆ ಬಂದಂತೆ ಗುಪ್ತರ ನಾಣ್ಯಗಳ ತೂಕ ಹೆಚ್ಚುತ್ತ ಬಂದಿರುವುದು. ಗುಪ್ತ ಸಾಮ್ರಾಟರ ಶಾಸನಗಳಲ್ಲಿ ನೀಡಲಾಗಿರುವ ವಂಶಾವಳಿಗಳಿಂದ ತಿಳಿದು ಬರುವಂತೆ ಶ್ರೀಗುಪ್ತನೂ(ಸು.೨೬೦-೮೦)ಅವನ ಮಗನಾದ ಘಟೋತ್ಕಚನೂ(ಸು.೨೮೦-೩೦೦)ಆ ಮನೆತನದ ಮೊದಲ ಇಬ್ಬರು ಅರಸರಾದರೂ,ಘಟೋತ್ಕಚನ ಮಗನೂ ೩೧೯-೨೦ರಲ್ಲಿ ಗುಪ್ತಶಕವನ್ನು ಪ್ರಾರಂಭಿಸಿದವನೂ ಆದ ಮಹಾರಾಜಾಧಿರಾಜ ೧ನೆಯ ಚಂದ್ರಗುಪ್ತನೇ(ಸು.೩೨೦-೩೫)ಗುಪ್ತರ ಪೈಕಿ ನಾಣ್ಯಗಳನ್ನು ಹೊರಡಿಸಿದ ಮೊದಲ ಅರಸ.ಅವನ ಆಳ್ವಿಕೆಯಲ್ಲಿ ಹೊರಡಿಸಲಾದ ಬಂಗಾರ ನಾಣ್ಯಗಳು ಆರಂಭದಲ್ಲಿ ಕುಷಾಣರ ನಾಣ್ಯಗಳ ಅನುಕರಣೆಗಳಂತೆಯೇ ಕಂಡುಬರುತ್ತದೆಯಾದರೂ,ಅಲ್ಪ ಕಾಲದಲ್ಲಿ ಅವು ಗುಪ್ತರಿಂದ ಆಗತಾನೆ ಪುನರುದ್ದಾರಗೊಂಡಿದ್ದ ವೈದಿಕ ಧರ್ಮಕ್ಕನುಗುಣವಾಗಿ ರಾಮಾಯಣ ,ಮಹಾಭಾರತ ಮಹಾಕಾವ್ಯಗಳಿಂದ ಪರಿಚಿತವಾಗಿರುವ ಪ್ರಾಚೀನ ಹಿಂದೂ ಸಂಸ್ಕೃತಿಯನ್ನು ಪ್ರತಿಬಿಂಬಿಸಲಾರಂಭಿಸಿದುವು.ಹೀಗಾಗಿ ಗುಪ್ತರ ನಾಣ್ಯಗಳು ಅಂದಿನ ಭಾರತೀಯರ ಕಲಾಕೌಶದ,ವಿನ್ಯಾಸದ,ಪ್ರಯೋಗತಂತ್ರದ ಉತ್ತಮ ನಿದರ್ಶನಗಳಾಗಿವೆ. ೧.ಒಂದನೆಯ ಚಂದ್ರಗುಪ್ತ(ಸು.೩೨೦-೩೫)ತನ್ನ ಆಳ್ವಿಕೆಯ ಕಾಲದಲ್ಲಿ ಹೊರಡಿಸಿದ ಒಂದೇ ವಿಧದ ಬಂಗಾರ ನಾಣ್ಯಗಳ ಮುಂಬದಿಯಲ್ಲಿ ವಸ್ತ್ರಾಭರಣಗಳಿಂದ ಅಲಂಕೃತರಾದ ಚಂದ್ರಗುಪ್ತ ಮತ್ತು ಅವನ ರಾಣಿ ಲಿಚ್ಛವಿವಂಶದ ಕುಮಾರದೇವಿಯವರು ನಿಂತಿರುವ ಚಿತ್ರಣವೂ ಚಂದ್ರಗುಪ್ತ,ಶ್ರೀ ಕುಮಾರದೇವಿ ಅಥವಾ ಶ್ರೀ ಕುಮಾರ ದೇವಿಶ್ರೀ ಎಂಬ ಆಲೇಖ್ಯಗಳೂ ಹಿಂಬದಿಯಲ್ಲಿ ವಸ್ತ್ರಾಭರಣಗಳಿಂದ ಅಲಂಕೃತಳಾದ ದೇವತೆಯೊಬ್ಬಳ ಚಿತ್ರಣವೂ ಲಿಚ್ಛವಯಃ ಎಂಬ ಆಲೇಖ್ಯವೂ ಕಂಡುಬರುತ್ತದೆ. ೨.ಸಮುದ್ರಗುಪ್ತನ(ಸು.೩೩೫-೭೫)ಬಂಗಾರದ ನಾಣ್ಯಗಳ ಮುಂಬದಿಯಲ್ಲಿ ಚಿತ್ರಿಸಿರುವ ದೃಶ್ಯಗಳ ಆಧಾರದ ಮೇಲೆ ಇವನ ಬೇರೆ ಬೇರೆ ರೀತಿಯ ನಾಣ್ಯಗಳನ್ನು ಧ್ವಜ,ಬಿಲ್ಲುಗರ,ಗಂಡುಗೊಡಲಿ,ಅಶ್ವಮೇಧ,ವ್ಯಾಘ್ರಾಂತಕ,ವೀಣಾಪಾಠಕ ಪ್ರರೂಪಗಳೆಂದು ಗುರತಿಸಲಾಗಿದೆ.ಸಾಮಾನ್ಯವಾಗಿ ಇವನ ಬಂಗಾರ ನಾಣ್ಯಗಳ ಮುಂಬದಿಯಲ್ಲಿ ಸಮರ ಶತ ವಿತತ ವಿಜಯೋ ಜಿತರಿಪುರಜಿತೋ ದಿವಂ ಜಯತಿ,ರಾಜಾಧಿರಾಜಃ ಪೃಥ್ವಿವೀ ಮವಿತ್ವಾ ದಿವಂ ಜಯತ್ಯಾಹೃತ ವಾಜಿ ಮೇಧಃ ರಾಜಾಧಿರಾಜಃ ಪೃಥ್ವಿವೀಂ ವಿಜಿತ್ಯ ದಿವಂ ಜಯತ್ಯಾಹೃತ ವಾಜಿಮೇಧಃ ಮಾಹಾರಾಜಾಧಿರಾಜ ಶ್ರೀ ಸಮುದ್ರಗುಪ್ತ್ ,ಕೃತಾಂತ ಪರಶುರ್ಜಯ ತ್ಯಜಿತರಾಜ ಚೇತಾಜಿತಃ, ವ್ಯಾಘ್ರಪರಾಕ್ರಮಃ,ಅಪ್ರತಿರಥೋಜಿ ವಿಜಿತ್ಯ ಕ್ಷಿತಿಂ ಸುಚರಿತೈತ್ದಿವಂ ಜಯತಿ,ಅಪ್ರತಿರಥೋ ವಿಜಿತ್ಯಕ್ಷಿತಿಮವನೀಶೋ ದಿವಂ ಜಯತಿ ಎಂಬ ಅಲೇಖ್ಯಗಳಲ್ಲೊದನ್ನೂ ಹಿಂಬದಿಯಲ್ಲಿ ಲಕ್ಷ್ಮೀ,ಗಂಗಾಮಾತೆ ಅಥವಾ ಪಟ್ಟದ ರಾಣಿ ದತ್ತದೇವಿಯ ಚಿತ್ರದ ಜೊತೆಗೆ ಪರಾಕ್ರಮಃ ಶ್ರೀವಿಕ್ರಮಃ ಅಪ್ರತಿರಥಃ,ಕೃತಾಂತಪರಶುಃ,ಅಶ್ವಮೇಧಪರಾಕ್ರಮಃ,ವ್ಯಾಘ್ರಪರಾಕ್ರಮಃ,ರಾಜಾ ಸಮುದ್ರಗುಪ್ತಃ,ಸಮುದ್ರಗುಪ್ತಃ ಎಂಬೀ ಅಲೇಖ್ಯಗಳಲ್ಲೊಂದನ್ನೂ ಕಾಣಬಹುದು. ೩.ಎರಡನೆಯ ಚಂದ್ರಗುಪ್ತನ(ಸು.೩೭೫-೪೧೫)ಬಂಗಾರ ನಾಣ್ಯಗಳ ಪೈಕಿ ಕೆಲವು ನಾಣ್ಯಗಳ ಮುಂಬದಿಯಲ್ಲಿ ಇನ್ನು ಕೆಲವು ನಾಣ್ಯಗಳ ಹಿಂಬದಿಯಲ್ಲೂ ಇರುವ ಚಿತ್ರಗಳ ಆಧಾರದ ಮೇಲೆ ಈ ನಾಣ್ಯಗಳನ್ನು ಹಲವು ಬಗೆಗಳಾಗಿ ವಿಂಗಡಿಸಬಹುದು.ಬಿಲ್ಲುಗಾರ ,ಸಿಂಹಾಂತಕ,ಆಶ್ವಾರೋಹಿ,ಛತ್ರ ಮಂಚ ಮಂಚದ ಮೇಲೆ ಆಸೀನರಾಗಿರುವ ರಾಜದಂಪತಿ,ಧ್ವಜ,ಚಕ್ರವಿಕ್ರಮ ಇವು ಈ ಬಗೆಗಳು ಅಂತೆಯೇ ಇವನ ತಾಮ್ರನಾಣ್ಯಗಳಲ್ಲೂ ಛತ್ರ,ನಿಂತ ರಾಜ ,ಬಿಲ್ಲುಗಾರ,ರಾಜನ ಎದೆ ವಿಗ್ರಹ,ಚಕ್ರ ಮತ್ತು ಕಲಶ ಪ್ರರೂಪಗಳಿವೆ.ಇವನ ಬಂಗಾರ ನಾಣ್ಯಗಳ ಮುಂಬದಿಯಲ್ಲಿ ದೇವಶ್ರೀ ಮಹಾರಾಜಾಧಿರಾಜ ಶ್ರೀ ಚಂದ್ರಗುಪ್ತಃ,ಕ್ಷಿಮವಜಿತ್ಯ ಸುಚರಿತೈರ್ದಿವಂಜಯತಿ ವಿಕ್ರಮಾದಿತ್ಯಃ,ಪರಮ ಭಾಗವತೋ ಮಹಾರಾಜಾಧಿರಾಜ ಶ್ರೀ ಚಂದ್ರಗುಪ್ತಃ,ದೇವಶ್ರೀ ನರೇಂದ್ರ ಚಂದ್ರಃ ಪ್ರಥಿತರಣೋರಣೇ ಜಯತ್ಯಜಯ್ಯೋ ಭುವಿ ಸಿಂಹವಿಕ್ರಮಃ,ವಸುಧಾಂ ವಿಜಿತ್ಯ ಜಯತಿ ತ್ರಿದಿವಂ ಪೃಥ್ವಿವೀಶ್ವರ ಪುಣ್ಯೈಃ ಎಂಬೀ ಅಲೇಖ್ಯಗಳಲ್ಲೊಂದು ಹಿಂಬದಿಯಲ್ಲಿ ಲಕ್ಷ್ಮೀಯ ಚಿತ್ರದೊಂದಿಗೆ ಸಾಮಾನ್ಯವಾಗಿ ಶ್ರೀವಿಕ್ರಮಃ,ಸಿಂಹ ವಿಕ್ರಮಃ,ಅಥವಾ ಶ್ರೀ ಸಿಂಹವಿಕ್ರಮಃ,ಅಜಿತವಿಕ್ರಮಃ,ವಿಕ್ರಮಾದಿತ್ಯಃ,ಪರಮ ಭಾಗವತಃ,ಚಕ್ರ ವಿಕ್ರಮಃ ಎಂಬ ಅಲೇಖ್ಯಗಳಲ್ಲೊಂದೂ ಕಂಡುಬರುತ್ತವೆ. ಎರಡನೆಯ ಚಂದ್ರಗುಪ್ತ ಬೆಳ್ಳಿ ನಾಣ್ಯಗಳು ಪಶ್ಚಿಮ ಭಾರತದಲ್ಲಿ ಮಾತ್ರ ದೊರೆತಿವೆ.ಅವುಗಳ ಮುಂಬದಿಯಲ್ಲಿ ರಾಜನ ಎದೆ ಚಿತ್ರವೂ ಗುಪ್ತಶಕದ ವರ್ಷವೂ ಕೆಲವು ನಾಣ್ಯಗಳ ಹಿಂಬದಿಯಲ್ಲಿ ಗರುಡನ ಚಿತ್ರವೂ ಪರಮ ಭಾಗವತ ಮಹಾರಾಜಾಧಿರಾಜ ಶ್ರೀಚಂದ್ರಗುಪ್ತ ವಿಕ್ರಮಾದಿತ್ಯ (ಅಥವಾ ವಿಕ್ರಮಾಂಕಸ್ಯ)ಎಂಬ ಅಲೇಖ್ಯವೂ ಕಂಡುಬರುತ್ತವೆ.ಅದರಂತೆಯೇ ಅವನ ತಾಮ್ರನಾಣ್ಯಗಳ ಹಿಂಬದಿಯಲ್ಲಿ ದೇವತೆ ಅಥವಾ ಗರುಡನ ಚಿತ್ರವೂ ಮಹಾರಾಜ ಶ್ರೀಚಂದ್ರಗುಪ್ತಃ.ಶ್ರೀ ಚಂದ್ರಗುಪ್ತಃ ಅಥವಾ ಚಂದ್ರಗುಪ್ತಃ ಎಂಬ ಅಲೇಖ್ಯಗಳಲ್ಲಿ ಒಂದೂ ಇರುತ್ತವೆ. ೪.ಒಂದನೆಯ ಕುಮಾರ ಗುಪ್ತನ(ಸು.೪೧೫-೫೫)ಆಳ್ವಿಕೆಯಲ್ಲಿ ಹೊರಡಿಸಲಾದ ಬಿಲ್ಲುಗಾರ,ಅಶ್ವಾರೋಹಿ,ಸಿಂಹಾಂತಕ,ವ್ಯಾಘ್ರಾಂತಕ,ಹಸ್ತ್ಯಾರೋಹಿ,ಹಸ್ತ್ಯಾರೋಹಿ-