ಪುಟ:Mysore-University-Encyclopaedia-Vol-6-Part-8.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುರು1-ಗುರು2 ಅಯೊಡೀನ್ ಸಾಗರದ ಉತ್ವನ್ನಗಳಲ್ಲಿ ಹೇರಳವಾಗಿದೆ.ಸಮುದ್ರದ ಮೀನು,ಮೀನಿನ ಎಣ್ಣೆ,ಸೊಪ್ಪು ಹಾಲು ತರಕಾರಿಗಳಲ್ಲಿ ಹೇರಳವಗಿದೆ. ಗುರಾಣಿಕ ಗ್ರಂಧಿಗೆ ಅರ್ಬುದ ರೋಗ(ಕ್ಯಾನ್ಸರ್):ಗುರಾಣಿಕ ಗ್ರಂಧಿಗೆ ಅರ್ಬುದ ರೋಗ ತಗಲಬಹುದು.ಅಗ ಇತರೆ ಯಾವುದೇ ಭಾಗದ ಅರ್ಬುದ ರೋಗದಂತೆಯೇ,ವ್ಯಕ್ತಿ ಅತಿ ಹಸಿವಿನಿಂದ ಬಳಲುತ್ತಾನೆ.ದೇಹದ ಚಯಾಪಚಯ ಹೆಚ್ಚುವುದು,ವ್ಯಕ್ತಿಯ ದೇಹದ ತೂಕ ಕಡಿಮೆಯಾಗುವುದು,ವ್ಯಕ್ತಿಯ ಧ್ವನಿ ಬದಲಾಗುತ್ತದೆ.ಅರ್ಬುದ ರೋಗವು ಪ್ರಾರಂಭಾವಸ್ಧೆಯಲ್ಲಿದ್ದರೆ,ಗುರಾಣಿಕ ಗ್ರಂಧಿಯನ್ನು ಶಸ್ತ್ರ ಚಿಕಿತ್ಸೆಯಿಂದ ತೆಗದು ಹಾಕಿ ಗುರಾಣಿಕ ಗ್ರಂಧಿಯ ಸ್ರಾವ (ತೈರಾಯ್ಡ್ ಹಾರ್ಮೋನ್) ವನ್ನು ಕೃತಕವಾಗಿ ಜೀವನ ಪರ್ಯಂತ ವ್ಯಕ್ತಿಗೆ ನೀಡಬೇಕಾಗುತ್ತದೆ.ಕ್ಷ-ಕಿರಣ ಹಾಗೂ ಜೌಷಧಿಗಳನ್ನು (ಅರ್ಬುದ ರೋಗಕ್ಕೆ ಕೀಮೋಧೆರಪಿ)ಬಳಸಲಾಗುತ್ತದೆ. ಗುರು1:ವಿದ್ಯಾದಾನಮಾಡುವವನು,ಉಪಾಧ್ಯಾಯ. ಗುರು ಎಂಬ ಪದದಲ್ಲಿನ ಗು ಎಂಬುದಕ್ಕೆ ಅಂಧಕಾರವೆಂದೂ ರು ಎಂಬುದಕ್ಕೆ ಅದನ್ನು ನಿರೋಧಿಸುವವನೆಂದೂ ಅರ್ಧೈಸುತ್ತಾರೆ.ಗುರುಪೂಜೆಯಿಲ್ಲದೆ ಯಾವ ಕಾರ್ಯವನ್ನೂ ಆರಂಭಿಸುವಂತಿಲ್ಲ ತಂದೆ,ಉಪನಯನ ಮಾಡಿದವ, ವಿದ್ಯಾದಾನ ಮಾಡಿದವ,ಅನ್ನದಾತ,ಭಯದಲ್ಲಿ ರಕ್ಷಿಸಿದವ-ಈ ‌‍‌ವರನ್ನೂ ಗುರುಗಳೆಂದು ಪರಿಗಣಿಸುತ್ತಾರೆ.ಅಧ್ಯಾತ್ಮಿಕ ಅಧವಾ ಧಾರ್ಮಿಕ ಪಂಧವೋಂದರ ನಾಯಕ ಅಧವಾ ಬೋಧಕ.ಪ್ರಾಚೀನ ಭಾರತದ ಶಿಕ್ಷಣಪದ್ಧತಿಯಲ್ಲಿ ಶಿಷ್ಯರನ್ನು ಗುರು ತನ್ನ ಆಶ್ರಮಕ್ಕೆ ಬರಮಾಡಿಕೊಂಡು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಗಳೆರಡನ್ನೂ ನೀಡುತ್ತಿದ್ದ.ಶಿಷ್ಯರು ತಮ್ಮ ಗುರುವಿನ ಬಗ್ಗೆ ಆನನ್ಯಭಕ್ತಿಯಿಂದಿದ್ದು ವಿದ್ಯಾರ್ಜನೆ ಮಾಡುತ್ತಿದ್ದರು;ಅವರ ಮನೆಯಲ್ಲೆ ವಾಸಿಸುತ್ತಿದ್ದು ಮನೆಗೆಲಸವನ್ನು ಮಾಡಿಕೊಡುತ್ತ ಭಕ್ತಿ ಗೌರವಗಳಿಂದ ನಡೆದುಕೊಳ್ಳುತ್ತಿದ್ದರು. ಒಂದು ಧಾರ್ಮಿಕ ಪಂಧಕ್ಕೆ ಆದು ಆರಾಧಿಸುವ ದೇವತೆಯೇ ಆದಿಗುರು.ಆನಂತರ ಆ ಪಂಧಕ್ಕೆ ನಾಯಕರಾಗತಕ್ಕ ಮಾನವರೂಪಿನ ಗುರು ಆಂದಿಗೆ ಆ ಪರಂಪರೆಯಲ್ಲಿ ಕೊನೆಯ ಗುರು.ಆತ ತನ್ನ ಕೊನೆಗಾಲದಲ್ಲಿ ಯೋಗ್ಯ ಶಿಷ್ಯನೊಬ್ಬನನ್ನು ಅರಿಸಿ ಗುರುಪೀಠಕ್ಕೆ ತರುವ ವಾಡಿಕೆ ಇದೆ. ಪರಂಪರೆಯಲ್ಲಿ ಬರುವ ಆದಿಗುರುವಿನ ಆನಂತರದ ಗುರುಗಳೆಲ್ಲ ಧರ್ಮದ ದೇವತೆಯ ಅವತಾರವೆಂಬ ನಂಬಿಕೆಯುಂಟು. ಎಲ್ಲ ಧಾರ್ಮಿಕ ಪಂಧಗಳಿಗೂ ಒಬ್ಬ ಗುರು ಆಗತ್ಯವೆಂದು ಭಾವಿಸಲಾಗಿದೆ.ಸತ್ಯಸ್ವರೂಪದ ಮೂಲತತ್ತ್ವಗಳು ಧ್ಯನ ಅಧವಾ ಗ್ರಂಧಾವಲೋಕನದಿಂದಲೇ ಲಭಿಸಲಾರವೆಂಬುದೂ ದೈವಪ್ರೇರಣೆಯ ಪರಂಪರೆಯ ಗುರುವೊಬ್ಬ ಅಗತ್ಯವೆಂಬ ಭಾವನೆಯೂ ಇದಕ್ಕೆ ಮುಖ್ಯಕಾರಣ.ಆದಿಗುರುವೆನಿಂದ ಪಡೆದುಕೊಂಡು ಪರಂಪರಾನುಗತವಾಗಿ ಮುಂದಿನ ಗುರುಗಳಿಗೆ ಹಸ್ತಗತವಾಗುತ್ತ ಬಂದಿರುವ ಆ ಸತ್ಯದರ್ಶನ ಕೇವಲ ಮಂತ್ರಪಠನದಿಂದ ಲಭ್ಯವಾಗುವಂತಿಲ್ಲ;ಆದು ಗುರು ಮುಖದಿಂದಲೇ ಲಭಿಸಬೇಕು.ಎಂದರೆ ಸತ್ಯದ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಗುರು ಅನುಗ್ರಹಿಸುವ ದೀಕ್ಷೆಯಿಂದ ಮಾತ್ರ ಸಾಧ್ಯ.ಧ್ಯನಮಾರ್ಗ ಕಠಿಣವೂ ದುರ್ಗಮವೂ ಆದುದು.ಅದಕ್ಕೆ ಪೂರ್ವಭಾವಿಯಾಗಿ ಸಾಧಿಸಬೇಕಾದ ಶಾಂತಿ ಸಂಯಮಗಳೂ ಆಷ್ಷೆ.ಅವನ್ನು ಅನುಷ್ಠಾನಕ್ಕೆ ತರಲೂ ತಕ್ಕ ಗುರುವಿನ ನಿರ್ದೇಶನ ಬೇಕು.ಅದ್ದರಿಂದ ಯಾವ ಧರ್ಮದ ಅನುಷ್ಠಾನಕ್ಕೇ ಆಗಲಿ ತಕ್ಕ ಗುರುವೊಬ್ಬನ ಅಯ್ಕೆ ಅನಿವಾರ್ಯವಾಗುತ್ತದೆ. ಕೆಲವು ವೇಳೆ ಖ್ಯಾತ ಗುರುಗಳನೇಕರು ಅ ಧಾರ್ಮಿಕ ಪಂಧದ ದೇವತೆಗಿಂತ (ಆದಿಗುರು)ಹೆಚ್ಚು ಪೂಜ್ಯತೆಗಳಿಂದ ಭಕ್ತರು ಆ ಪಂಧದ ಗುರುವಾಗಿದ್ದ ಚೈತನ್ಯನನ್ನು ಕಾಣುವರು. ದೇವತೆಯ ಪ್ರತಿಮೆಗೆ ಅವಕಾಶವಿಲ್ಲದೆಡೆಗಳಲ್ಲೂ ಗುರುವಿನ ಪ್ರತಿಮೆಯ ಪೂಜೆಹೆ ಅವಕಾಶವುಂಟು.ಕೆಲವು ಸಂದರ್ಭಗಳಲ್ಲಿ ಮಾನವರೂಪದ ಸಜೀವ ಗುರುವನ್ನೇ ಪೂಜಿಸುವುದೂ ಉಂಟು.ಅವನಿಗೆ ಆರತಿ ಎತ್ತುವುದು,ಧೂಪ ಹಾಕುವುದು.ಮಂತ್ರ ಹೇಳುವುದು,ಅಡ್ಡಬೀಳುವುದು,ಪಾದಪೂಜೆ ಮಾಡುವುದು,ಭಿಕ್ಷೆಯಿಕ್ಕುವುದು, ಇವೆಲ್ಲ ಸೇವಾಕಾರ್ಯಗಳೂ ನಡೆಯುತ್ತವೆ.ಕೆಲವು ಗುಡ್ಡಗಾಡು ಬಣಗಳಲ್ಲಿ ಗುರು ಅಗಿದ ತಾಂಬೂಲವನ್ನು ಶಿಷ್ಯಾದಿಗಳು ಸೇವಿಸುವುದೂ ಉಂಟು.ಭಾರತದಲ್ಲಿ ಇಂದಿಗೂ ಗುರುವೇ ದೇವರೆಂದು ಪೂಜಿಸುತ್ತಿರುವ ಅನೇಕ ಧಾರ್ಮಿಕ ಪಂಧಗಳಿವೆ. ಗುರು ಊರಿಗೆ ಬಂದಾಗ ಅವನ ಭಕ್ತರು ನಾನು ಮುಂದೆ ತಾನು ಮುಂದೆ ಎಂದು ತಮ್ಮ ಮನೆಗೆ ಬಿಜಯಮಾಡಲು ಬಿನ್ನವಿಸಿಕೊಳ್ಳುವರು;ತಮ್ಮ ಕಾಣಿಕೆ ಕೈಂಕರ್ಯಗಳನ್ನು ಸಲ್ಲಿಸಿ ಕೃತಕೃತ್ಯರಾದೆವೆಂದು ಭಾವಿಸುವರು. ಸಿಕ್ಖರಲ್ಲಿ ಗುರುವಿಗೆ ವಿಶಿಷ್ಟ ಅರ್ಧವಿದೆ.ಆ ಪಂಧದ ಪರಂಪರೆಯಲ್ಲಿ ಬಂದ ಹತ್ತುಮಂದಿ ಗುರುಗಳಿಗೆ ಮಾತ್ರ ಅದು ಅನ್ವಯಿಸುತ್ತದೆ.ಅವರಲ್ಲಿ ಕೊನೆಯ ಗುರು ಅದನ್ನು ಮುಂದೆ ಮತ್ತಾರಿಗೂ ಬಳಸದಿರಬೇಕೆಂದೂ ಅದನ್ನು ಮುಂದೆ ಅವರ ಪವಿತ್ರ ಗ್ರಂಧಕ್ಕೆ (ಗ್ರಂಧ್ ಸಾಹೆಬ್)ಮಾತ್ರ ಬಳಸಬೇಕೆಂದೂ ವಿಧಿಸಿದನು.ಈಗ ಅ ಪಂಧದವರು ತಮ್ಮ ಪವಿತ್ರ ಗ್ರಂಧವನ್ನು ಭಕ್ತಿಯಿಂದ ದೇವರೆಂದು ಭಾವಿಸಿ ಪೂಜಿಸುವರು. ವೀರಶೈವಧರ್ಮದಲ್ಲಿ ಗುರುತತ್ತ್ವವನ್ನು ಮೋಕ್ಷೋಪಾಯಗಳಾದ ಆಷ್ಟಾವರಣದಲ್ಲಿ ಸೇರಿಸಲಾಗಿದೆ.ಗುರು,ಲಿಂಗ,ಜಂಗಮ,ಪಾದೋದಕ,ಪ್ರಸಾದ,ಭಸ್ಮ,ರುದ್ರಾಕ್ಷಿ,ಮಂತ್ರ-ಇವು ಬಹಿರಂಗ ಆಷ್ಟಾವರಣಗಳು.ಇವುಗಳಲ್ಲಿ ಮೊದಲ ಮೂರು ಪೂಜ್ಯವಾದುವು(ನೋಡಿ-ಗುರುಕುಲ;ಗುರುಕುಲಕಾಂಗ್ರಿವಿಶ್ವವಿದ್ಯಾಲಯ;ಗುರುಶಿಷ್ಯಬಾಂಧವ್ಯ)(ಎನ್.ಎಸ್.ಏ) ಗುರು2:ಸೌರವ್ಯೂಹದಲ್ಲಿ ಅತ್ಯಂತ ದೊಡ್ಡ ಗಾತ್ರದ ಗ್ರಹ; ಸೂರ್ಯನ ಸುತ್ತಲೂ ಕಕ್ಷಿಸುತ್ತಿರುವ ಎಂಟುಗ್ರಹಗಳನ್ನು ಸೂರ್ಯನಿಂದ ಅವುಗಳ ದೂರಾನುಸಾರ ಪಂಕ್ತಿಸಿದರೆ ಇದರ ಸ್ಧಾನ ದನೆಯದು.ಬಾಹ್ಯ ಗ್ರಹಗಳಲ್ಲಿ ಗುರು(ಜ್ಯೂಪಿಟರ್)ಮೊದಲನೆಯದು.ಇದರ ಸೂರ್ಯಪಾರ್ಶ್ವದಲ್ಲಿ ಮಂಗಳದ ಕಕ್ಷೆಯೂ ಎದುರು ಪಾರ್ಶ್ವದಲ್ಲಿ ಶನಿಯ ಕಕ್ಷೆಯೂ ಇವೆ.ಮಂಗಳ ಹಾಗೂ ಗುರು ಕಕ್ಷೆಗಳ ನಡುವೆ ಕ್ಷುದ್ರಗ್ರಹಗಳ ಹೊನಲು ಸಹ ಉಂಟು. ಗಾತ್ರ ಮತ್ತು ದ್ರವ್ಯರಾಶಿ:ಗುರುವಿನ ಸರಾಸರಿ ವ್ಯಾಸ 141.968 ಕಿ.ಮೀಗಳು (ಭೂಮಿ 7,927).ಮೇರುವ್ಯಾಸ(p)ಸುಮಾರು 1,33,308 ಕಿ.ಮೇ ಮತ್ತು ಸಮಭಾಜಕೀಯವ್ಯಾಸ(e)ಸುಮಾರು1,42,807 ಕಿ.ಮೀ.ಈ ವ್ಯತ್ಯಾಸ ಗಮನಾರ್ಹ.ಇದಕ್ಕೆ ಮೇರುಚಪ್ಪಟೆತನದ ಪ್ರಮಾಣ ಎಂದು ಹೆಸರು.ಇದರ ಬೆಲೆ (e-p)/e ಎಂದರೆ ಸುಮಾರು 1/15.ಭೂಮಿಯ ಚಪ್ಪಟೆತನದ ಬೆಲೆ ಸುಮಾರು 1/297.ಸೌರವ್ಯೂಹದ ಗ್ರಹಗಳ ಪೈಕಿ ಅತ್ಯಧಿಕ ಚಪ್ಪಟೆತನವಿರುವುದು ಶಿನಿಗ್ರಹಕ್ಕೆ (1/9.5);ಎರಡನೆಯ ಸ್ಧಾನ ಗುರುವಿಗೆ ಸಲ್ಲುತ್ತದೆ.ಗುರುವಿನ ಘನಗಾತ್ರದಲ್ಲಿ 1,200ಕ್ಕಿಂತಲೂ ಹೆಚ್ಚು ಭೂಮಿಗಳನ್ನು ತುಂಬಬಹುದು.ಆದರೆ ಗುರುವಿನ ದ್ರವ್ಯರಾಶಿ ಈ ಗಾತ್ರಾನುಸಾರ ಬೃಹತ್ತಾಗಿಲ್ಲ.ಗುರುವಿನ ಸರಾಸರಿ ಸಾಂದ್ರತೆ 1.35 (ಭೂಮಿಯದು 5.52).ಸೌರವ್ಯಾಸದ ಕ್ಕಿಂತ ಸ್ವಲ್ಪ ಹೆಚ್ಚು ಉದ್ದದ ವ್ಯಸವಿರುವ ಗುರುವಿನ ದ್ರವ್ಯರಾಶಿ ಸೌರವ್ಯೂಹದ ಇತರ ಎಲ್ಲ ಗ್ರಹಗಳ ದ್ರವ್ಯರಾಶಿಗಿಂತ 21/2 ಪಟ್ಟು ಜಾಸ್ತಿ ಉಂಟು.ಸೂರ್ಯ ಮತ್ತು ಗುರು ದ್ರವ್ಯರಾಶಿಗಳು 1000:1 ನಿಷ್ಪತ್ತಿಯಲ್ಲಿವೆ.ಭೂಮಿ ಮತ್ತು ಗುರು ದ್ರವ್ಯರಾಶಿಗಳ ನಿಷ್ಪತ್ತಿ 1:318.ಗುರುತಲದಲ್ಲಿ ಗುರುತ್ವ ಭೂತಲದ 2.64 ಪಟ್ಟು ಹೆಚ್ಜಿಗೆ ಉಂಟು.ಆದ್ದರಿಂದ ಭೂತಲದಲ್ಲಿ 150 ಪೌಂಡ್ ತೂಗುವ ಒಬ್ಬ ವ್ಯಕ್ತಿ ಗುರುತಲದಲ್ಲಿ 396 ಪೌಂಡ್ ತೂಗುತ್ತಾನೆ.ಹೀಗಾಗಿ ಗುರುವಿನ ಮೇಲೆ ಇಳಿಯಬಹುದಾದ ಮನುಷ್ಯನ ಕಾಲುಗಳು ದೇಹದ ಏರಿದ ತೂಕವನ್ನು ಹೊರಲಾಗದೆ ಕುಸಿದರೆ ಆಶ್ಚರ್ಯಏಲ್ಲ.ಗುರುತಲದಲ್ಲಿ ವಿಮೋಚನವೇಗ (ಎಂದರೆ,ಗ್ರಹದ ಗುರುತ್ವಾಕರ್ಷಣ ಬಲದ ಆಪ್ಪುಗೆಯಿಂದ ಬಿಡುಗಡೆಗೋಡು ಆಕಾಶಯಾನ ಮಾಡಲು ಬೇಕಾಗುವ ಪ್ರಾರಂಭಿಕ ಕನಿಷ್ಠ ವೇಗ; ಎಸ್ಕೇಪ್ ವೆಲಾಸಿಟಿ)ಸೆಕೆಂಡಿಗೆ 60ಕಿ.ಮೀ (ಭೂಮಿ 9.6).ಸೌರವ್ಯೂಹದ