ಪುಟ:Mysore-University-Encyclopaedia-Vol-6-Part-8.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುರು ಬೇರೆ ಎಲ್ಲ ಗ್ರಹಗಳ ವಿಮೋಚನ ವೇಗಗಳೂ ಇದಕ್ಕಿಂತ ಕಡಿಮೆ.ಇಷ್ ವೇಗವಿರುವುದರಿಂದ,ಎಂದರೆ ಗುರು ತನ್ನ ಪರಿಸರದಲ್ಲಿ ಅಷ್ಟೊಂದು ಬಲಯುತವಾಗಿ ವಸ್ತುಗಳನ್ನು ತಲದೆಡೆಗೆ ಸೆಳೆಯುವುದರಿಂದ,ಗುರು ತನ್ನನ್ನು ಆವರಿಸಿರುವ ಎಲ್ಲ ಬಗೆಯ ಆನಿಲಗಳನ್ನೂ ಉಳಿಸಿಕೊಳ್ಳ ಬಲ್ಲುದು. ಕಕ್ಷೆ:ಸೂರ್ಯನ ಸುತ್ತ ಗುರುವಿನ ಕಕ್ಷೆ ಒಂದು ದೀರ್ಘ ವೃತ್ತ.ಇದರ ಒಂದು ನಾಭಿಯಲ್ಲಿ ಸೂರ್ಯ ಉಂಟು.ಸೂರ್ಯ ನಿಂದ ಗುರುವಿನ ಸರಾಸರಿ ದೂರ 7,78,113 ಮಿಲಿಯನ್ ಕಿ.ಮೀ.(ಭೂಮಿ 92.9 ಮಿ.) ಎಂದರೆ 5.2028 ಖಗೋಲಮಾನಗಳು (ಭೂಮಿ 1). ಸೂರ್ಯ-ಗುರು ಆತಿಸಮೀಪವಾಗಿರುವಾಗ (ಸೂರ್ಯ ನೀಚಬಿಂದು)ಆವುಗಳ ನಡುವಿನ ದೂರ (d 1)459.8ಮಿ.ಮೈ,ಆವು ಆತಿ ದೂರವಾಗಿರುವಾಗ (ಸೂರ್ಯೇಚ್ಜಬಿಂದು) ಈ ದೂರ (d 2).815.95 ಮಿ.ಕಿ.ಮೀ. ಆದ್ದರಿಂದ ಗುರುಕಕ್ಷೆಯ (ದೀರ್ಘವೃತ್ತದ)ಉತ್ಕೇಂದ್ರತೆ e=(d 2-d 1)/(d 2+d 1) ಎಂದರೆ 0.048 (ಭೂಮಿ 0.017).ಕಕ್ಷೆಯ ಆಂಡಾಕೃತಿ ಹೆಚ್ಜಾದಂತೆ,ಎಂದರೆ ದೀರ್ಘವೃತ್ತಾಕಾರದಲ್ಲಿ ದೀರ್ಘಕ್ಷ ಹಾಗೂ ಹ್ರಸ್ವಾಕ್ಷಗಳ ನಡುವಿನ ವ್ಯತ್ಯಾಸ ಏರಿದಂತೆ,ಉತ್ಕೇಂದ್ರತೆ ಹೆಚ್ಜಾಗುತ್ತದೆ.ಆದ್ದರಿಂದ ಭೂಮಿಕಕ್ಷೆಗೆ ಹೋಲಿಸುವಾಗ ಗುರುಕಕ್ಷೆ ಹೆಚ್ಜಿನ ದೀರ್ಘವೃತ್ತತ್ವವನ್ನು ಪ್ರದರ್ಶಿಸುತ್ತದೆ.ಉತ್ಕೇಂದ್ರತೆಯ ದೃಷ್ಷಿಯಿಂದ ಸೌರವ್ಯೂಹದ ಗ್ರಹಗಳ ಪೈಕಿ ಗುರುವಿಗೆ ನಾಲ್ಕನೆಯ ಸ್ಧಾನ (ಮೊದಲಿನ ಮೂರು ಅನುಕ್ರಮವಾಗಿ ಪ್ಲೂಟೋ,ಬುಧ,ಶನಿ).ಗುರುವಿನ ಕಕ್ಷಾತಲ ಕ್ರಾಂತಿ ವೃತ್ತತಲಕ್ಕೆ 1 18ಗಳಷ್ಟು ಬಾಗಿದೆ (ಅಬ್ಲೀಕ್ವಿಟಿ).(ಕ್ರಾಂತಿವೃತ್ತತಲವೇ ಭೂಮಿಯ ಕಕ್ಷಾತಲ ವೆಂಬುದನ್ನು ಗಮನಿಸಬೀಕು). ಯುರೇನಸ್ ಕಕ್ಷೆಯ (ಬಾಗು ೦ 46) ಬಳಿಕ ಕನಿಷ್ಠ ಬಾಗುಯಿರುವುದು ಗುರುಕಕ್ಷಗೆ. ಭೂಮಿ ಮತ್ತು ಗುರು ಪರಸ್ಪರ ಅತಿ ಸಮೀಪ ಬಂದಾಗ ಅವುಗಳ ನಡುವಿನ ದೂರ ಸುಮಾರು 588 ಕಿ.ಮೀ ಸೆಕೆಂಡಿಗೆ 2,99,460ಕಿ. ಮೀ.ದೂರವನ್ನು ಕ್ರಮಿಸುವ ಬೆಳಕಿನ ಕಿರಣಕ್ಕೆ ಈ ಕನಿಷ್ಠ ದೂರವನ್ನು ಕ್ರಮಿಸಲು ಸುಮಾರು 33 ಮಿನಿಟುಗಳೇ ಬೇಕು ಎನ್ನುವಾಗ ಈ ದೂರದ ಆಗಾಧತೆಯ ಆರಿವಾದೀತು.ಗುರುವಿನ ಸರಾಸರಿ ಕಕ್ಷಾವೇಗ ಸೆಕೆಂಡಿಗೆ 13 ಕಿ.ಮೀ.(ಭೂಮಿ 18.5).ಗುರುವಿನ ವರ್ಷ (ಎಂದರೆ ಸೂರ್ಯನನ್ನು ಒಂದು ಸಲ ಪರಿಭ್ರಮಿಸಲು ಬೇಕಾಗುವ ಅವಧಿ) 11,862 ಭೂವರ್ಷಗಳು; ಆವರ್ತನಾವಧಿ (ಎಂದರೆ ತನ್ನ ಅಕ್ಷದ ಸುತ್ತ ಒಂದು ಸಲ ತಿರುಗಲು ಬೇಕಾಗುವ ಕಾಲ; ಭೂಮಿಯನ್ನು ಕುರಿತು ಹೇಳುವಾಗ ಇದನ್ನು ದಿವಸವೆನ್ನುತ್ತೇವೆ).9 ಗಂ.56 ಮಿ.ಭೂಮಿಯ ಆವರ್ತನಾವಧಿ,ಎಂದರೆ ದಿವಸ,23 ಗಂ.56ಮಿ)ಆದ್ದರಿಂದ ಗುರುಮಿನ ಆವರ್ತನ ವೇಗ ಬಲು ತೀವ್ರ ಈ ದೃಷ್ಟಿಯಿಂದ ಗುರುವಿಗೆ ಸೌರವ್ಯೂಹದಲ್ಲಿ ಪ್ರಧಮ ಸ್ಧಾನ. ಹಿಂಗಾತ್ರ ಕ್ಷಿಪ್ರತಮ ಆವರ್ತನ ವೇಗ ಇವುಗಳ ಪರಿಣಾಮವಾಗಿ ಗುರುವಿನ ಚಪ್ಪಟೆತನ ಅಧಿಕವಾಗಿರುವುದು ಸಹಜ. ಭೌತಸ್ಧಿತಿ:ಉಷ್ಣದ ಪ್ರಮುಖ ಆಕರವಾದ ಸೂರ್ಯ ಬಲು ದೂರದಲ್ಲಿರುವುದ ರಿಂದ ಗುರುವಿನಲ್ಲಿ ಅತಿ ಶೈತ್ಯ ಪರಿಸರವನ್ನು ನಿರೀಕ್ಷಿಸುವುದು ಸಹಜ. ಸ್ವತಃ ಬೆಳಕು ಇಲ್ಲದ ಈ ಗ್ರಹವನ್ನು ಕುರಿತ ಹೆಚ್ಚಿನ ಮಾಹಿತಿ ನಮಗೆ ದೊರೆಯುವುದು ಗುರು ಪ್ರತಿಫಲಿಸುವ ಸೌರ ಬೆಳಕಿನ ವೀಕ್ಷಣೆಯಿಂದ. ಪ್ರಕಾಶದ ದೃಷ್ಟಿಯಿಂದ ಸೌರವ್ಯೂಹದ ಗ್ರಹಗಳಲ್ಲಿ ಶುಕ್ರನಿಗೆ ಪ್ರಧಮ ಸ್ಧಾನ. ಮಂಗಳದ ಕೆಲವು ವಿಶೇಷ ಸನ್ನಿವೇಶಗಳಲ್ಲದಿದ್ದರೆ ಗುರುವಿಗೇ ದ್ವಿತೀಯ ಸ್ಧಾನ. ದೂರದರ್ಶಕ ವೀಕ್ಷಣೆಗೆ ಅರ್ಧಕ್ಕಿಂತ ಹೆಚ್ಚಿನ ಬಿಂಬವನ್ನು (ಉದಾ-ಶುದ್ಧ ಅಷ್ಟಮಿ ಚಂದ್ರ) ಸದಾ ಪ್ರದರ್ಶಿಸುವ ಗ್ರಹವಿದು.ಇದರ ಪ್ರತಿಫಲನ ಸಾಮರ್ಧ್ಯ (ಆಲ್ಬೆಡೊ)