ಪುಟ:Mysore-University-Encyclopaedia-Vol-6-Part-8.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೦ ಗುಪ್ತರು

ದೇಗುಲದ ರಚನೆ ಹಾಗೂ ಪ್ರತಿಮಾ ಪ್ರತಿಷ್ಪನೆಗ ಸ೦ಬ೦ಧಿಸಿದ್ದಾಗಿದೆ.ದುರವಸ್ಥೆಗಿಳೀದಿದ್ದ ಗುಪ್ತರ ವ೦ಶಸಿರಿಯನ್ನು ಪುನಃ ನೆಲೆಗೂಳಿಸುವಲ್ಲ ಅರಸ ಪಟ್ಟ ಪಾಡಿನ, ಒಂದು ಇಡೀ ರಾತ್ರಿ ಅತ ನೆಲದ ಮೆಲೆ ಮಲಗಿರಬೇಕಾಯಿತೆಂಬ ಕುತೂಹಲಕಾರಿಯಾದ ಘ್ ಟನೆಯ ನಿರೂಪಣೆ ಈ ಶಾಸನಲ್ಲಿವೆ.

     ಬಿಹಾರದ ಶಿಲಾಸ್ತಂಭ ಶಾಸನವೊಂದು ಪೂರುಗುಪ್ತನ ಆಳ್ವಿಕೆಯದು.ಹೆಚಿನ ಭಾಗ ನಷ್ಟವಾಗಿರುವ ಈ ಶಾಸನ ಸ್ಕಂದಗುಪ್ತನದೆಂಬುದು ಪ್ಲೀಟನ ಅಭಿಪ್ರಾಯವಾದರೂ ಇದು ಪೂರುಗುಪ್ತನ ಆಳ್ವಿಕೆಯದೆಂದು ಇತರ ವಿದ್ವಾಂಸ ಈಚೆಗೆ ನಿರ್ಣಯಿಸಿದ್ದಾರೆ.ಮಹಾರಾಜಾಧಿರಾಜನೆಂದು ಬಿರುದಾಂಕಿತನಾದ ಈತ ಸ್ವಲ್ಪಕಾಲ ಆಳೀದ ಬಳಕ ಸ್ಕಿಂದಗುಪ್ತ ಈತನನ್ನು ಪದಚ್ಯುತಗೊಳಿಸಿರಬಹುದೆಂದು ಊಹಿಸಲಾಗಿದೆ.
    ಇಮ್ಮಡಿ ಕುಮಾರಗುಪ್ತನ ಶಾಸನವೊಂದು ಮುದ್ರೆಯ ಮೆಲೆ ದೊರೆತಿದೆ.ಇದರಲ್ಲಿ ಶ್ರೀಗುಪ್ತನಿಂದ ಆರಂಭಿಸಿ ಗುಪ್ತರ ವಂಶಾವಳಿಯನ್ನು ಅರಸರ ಹಾಗೂ ಮಹಾರಾಣಿಯರ ಹೆಸರುಗಳನ್ನು ಉಲ್ಲೇಖಿಸಿದೆ.೧ನೆಯ ಕುಮಾರಗುಪ್ತನ ಅನಂತರ ಕ್ರಮವಾಗಿ ಪೂರುಗುಪ್ತ,ಆತನ ಮಗ ನರಸಿಂಹಗುಪ್ತ ಆತನ ಮಗ ೨ನೆಯ ಕುಮಾರಗುಪ್ತ ಇವರು ಆಳಿದರೆಂದು ಇದರಿಂದ ತಿಳಿದುಬರುತದೆ.ಸ್ಕಂದಗುಪ್ತನ ಉಲ್ಲೇಖವಿಲ್ಲವಾದ ಕಾರಣ ಆತ ಪಾಟ್ಟದರಿಸಿಯ ಮಗನಾಗಿರಲಾರನೆಂಬ ಊಹೆಗೂ ಇದು ಎಡೆಮಾಡಿದೆ.
    ಇವು ಗುಪ್ತವಂಶದ ಅರಸರ ಪ್ರಮುಖ ಶಾಸನಹಳು.ರಾಜಕೀಯ ದ್ರುಷ್ಟಿಯಿಂದ ಮಾತ್ರವಲ್ಲದೆ ಆಂದಿನ ಸಾಮಾಜಿಕ, ಧಾರ್ಮಿಕ ಪರಿಸ್ಥಿತಿಗಳ ಮೆಲೂ ವಿಶಿಷ್ಟ ಬೆಲಕನ್ನು ಚೆಲ್ಲುವ ಇವುಗಳಲ್ಲಿ ಹಲವು ಶಾಸನಗಳು ಉತ್ಕ್ರುಶ್ತ

ಶೈಲಿಯನ್ನೊಳಗೊಂಡು ಕಾವ್ಯಮಯವಾಗಿವೆ.ಅಂದಿನ ಸಾಹಿತ್ಯದ ಮೆಲ್ಮೆಯನ್ನರಿಯಲು ಇವು ಬಹಳ ಸಹಾಯಕವಾಗಿದೆ.

    ಗುಪ್ತರು:೪-೬ನೆಯ ಶತಮಾನಗಳಲ್ಲಿ ಉತ್ತರ ಭಾರತದಲ್ಲಿ ಆಳುತಿದ್ದ ಒಂದು ಪ್ರಮುಖ ರಾಜವಂಶ.ಗುಪ್ತರ ಕಾಲಕ್ಕೆ ಸಂಬಂಧಿಸಿದ ಅನೇಕ ಶಾಸನಹಗಳೊ ನಾಣ್ಯಗಳೊ ಸಾಹಿತ್ಯಕ ಆಧಾರಗಳೊ ವಿವರಗಳು ತಿಳಿದುಬಂದಿದೆ.ಗುಪ್ತರ ಸುಮಾರು ೨೦೦ ವರ್ಷಗಳಿಗೊ ಹೆಚ್ಚು ಕಾಲ ಆಳಿದರು.ಗುಪ್ತರು ಕಾಲವನ್ನು ಭಾರತ ಇತಿಹಾಸದ ಸುವರ್ಣಾಯುಗವೆಂದು ವರ್ಣಿಸಲಾಗಿದೆ.
    ಗುಪ್ತವಂಶಕ್ಕೆ ಸೇರಿದ ೧ನೆಯ ಚಂದ್ರಗುಪ್ತನಿಗೂ(೩೨೦-೩೫) ಹಿಂದಿನ ಅರಸರ ವಿಷಯ ಹೆಚ್ಚಿಗೆ ತಿಲಿದಿಲ್ಲ.ಶುಂಗ ಮತ್ತು ಶಾತವಾಹನರ ಕಾಲಕ್ಕೆ ಸಂಬಂಧಿಸಿದಂತೆ ಗುಪ್ತ ಎಂದು ಕೊನೆಗೊಳ್ಳುತಿದ್ದ ಹಲವು ಅಧಿಕಾರಿಗಲ ಹೆಸರೌಗಳು ಲಬ್ಡವಾಗಿದೆ.ಆದರೆ ಇವು ಗುಪ್ತ ಎಂಬ ವಂಶವನ್ನು ಸೂಚಿಸುವಂತೆ ಎಂದು ಹೆಳಲಾಗದು.ಒಂದನೆಯ ಚನ್ದ್ರಾಗುಪ್ತನ ತಾತಾ ಮಹಾರಾಜ ಶ್ರೀಗುಪ್ತ, ತಂದೆ ಮಹಾರಾಜ ಘಟೂತ್ಕಚ,ಇವರಿಗೆ ಕೇವಲ 'ಮಹಾರಾಜ' ಎಂಬ ಬಿರುದಿತ್ತು.ಆದರೆ ಶಾಸನಗಳಲ್ಲಿ ಘಟೊತ್ಕಚನ ಮಗನನ್ನು ಮಹಾರಾಜಾಧಿರಾಜ ಚಂದ್ರಗುಪ್ತನೆಂದು ವರ್ಣಿಸಲಾಗಿದೆ.ಚಂದ್ರಗುಪ್ತ ತನ್ನ ಪೂರ್ವಿಕರಿಗಿಂತ ಹೆಚ್ಚಿನ ಪ್ರಾಬಲ್ಯವನ್ನು ಹೊಂದಿದ್ದನೆಮ್ಬುದನ್ನು ಬಹುಶಃ ಇದು ಸೂಚಿಸುತ್ತದೆ.ಮಗಧದೇಶದ ಮ್ರುಗಶಿಖಾವನದಲ್ಲಿ ಮಹಾರಾಜ ಚೆಲಿಕಿ ತೋ ಎಂಬುದನು ಚೀನ ದೇಶದ ಯಾತ್ರಿಕರಿಗಾಗಿ ಒಂದು ಧಾರ್ಮಿಕ ಕಟ್ಟಡವನ್ನು ತನಗಿಂತ ೫೦೦ ವರ್ಷಗಳ ಹಿಂದೆ ಕಟ್ಟಿಸಿದ್ದನೆಂದು ಚೀನ ದೇಶದ ಯಾತ್ರಿಕನಾದ ಇತ್ಸಿಂಗ ಹೆಳಿದ್ದನೆ.ಇವನು ಗುಪ್ತ್ತವಂಶದ ಮಹಾರಾಜ ಶ್ರೀಗುಪ್ತ ಎಂದು ಊಹಿಸಲಾಗಿದೆ.ಶ್ರೀಗುಪ್ತನೂ ಆತನ ಮಗನಾದ ಘಟೋತ್ಕಚನೊ ಬಂಗಾಲದ ಕೆಲವು ಬಾಗಗಳಲ್ಲಿ ಆಳುತ್ತಿದ್ದಿರಬೆಕು.
     ಗುಪ್ತವಂಶ ಪ್ರಾಮುಕ್ಯತೆ ಬಂದದ್ದು ಘಟೋತ್ಕಚನ ಮಗನಾದ ೧ನೆಯ ಚಂದ್ರಗುಪ್ತನ ಕಾಲದಲ್ಲಿಯೇ.ಶಾಸನಗಳಲ್ಲಿ ಇವನಿಗೆ ಮಹಾರಾಜಾಧಿರಾಜನೆಂಬ ಬಿರುದಿರುವುದು ಕಂದುಬರುತ್ತದೆ.ಅಲ್ಲದೆ ಇವನು ಅಚ್ಚುಹಾಕಿಸಿದ ಚ್ಚಿನ್ನದ ನಾಣ್ಯಗಳೋ ದೊರತಿವೆ.ಇವನು ಲಿಚ್ಛವಿ ವಂಶಕ್ಕೆ ಸೇರಿದ ಕುಮಾರದೇವಿಯನ್ನು ಮದುವೆಯಾಗಿದ್ದ.ಆ ವೇಳೆಗೆ ಬಿಹಾರ ಪ್ರಾಂತ್ಯದ ಉತ್ತರ ಭಾಗದಲ್ಲಿ ವೈಶಾಲಿ ಮತ್ತು ನೇಪಾಲಗಳ ನದುವನಣ ಪ್ರದೇಶ ಲಿಚ್ಚವಿಯರ ಆಳ್ವ್ವೀಕ್ಕೆಗೆ ಒಲಳಪಟ್ಟಿತ್ತು. ಈ ಪ್ರದೇಶ ಗುಪ್ತರ ಆಳುತ್ತಿದ್ದರಬಹುದಾದ ಪ್ರದೆಶಕ್ಕೆ ಹೊಂದಿದಂತಿತ್ತು.ಆ ವಂಶಕ್ಕೆ ಉತ್ತರಾಧಿಕಾರಿಗಳಿಲ್ಲದ ಕಾರಣ ಲಚ್ಚವಿ ರಾಜ್ಯವೂ ಸ್ವಾದೀನಕ್ಕೆ ಬಂದಿತು.ಕುಮಾರದೇವಿಯನ್ನು ಮದುವೆಯಾದದ್ದು ಚಂದ್ರಗುಪ್ತನ ಜೀವನದ ಗತಿಯನ್ನೇ ಬದಲಾಯಿಸಿತೆನ್ನ್ಬಹುದು.ಇದರ ಪರಿಣಾಮವಾಗಿ ಇವನ ರಾಜ್ಯ ವಿಸ್ತಾರಗೊಂಡಿತು;ಪ್ರಾಬಲ್ಯ ಹೆಚ್ಚಿತು.ಇವನ ತಂದೆ ಮಹಾರಾಜನೆನಿದಸಿಕೊಮ್ದಿದ್ದ.ಈಗ ಇವನು 'ಮಹಾರಾಜಾಧಿರಾಜ'ನೆಂದು ಬಿರುದಂಕಿತನಾದ.ಕವಯಿತ್ರಿ ಚಾಳುಕ್ಯ ಚಂದ್ರಾದಿತ್ಯನ ಪತ್ನಿ ವಿಜ್ಝೇಕ ಅಥವಾ ಕಿಸೇರಿಕ್ ಬರದಳೆನ್ನಲಾದ ಕೌಮುದೀಮಹೊತ್ಸವವೆಂಬ ನಾಟಕ ಮಗಧರಾಜ್ಯದ ಅರಸನಾದ ಸುಂದರವರ್ಮನ ದತ್ತುಪುತ್ರನಾದ ಚಂದಸೆನನನ್ನು ಕುರಿತದ್ದು.ಈತ ಲಿಚ್ಚಿವಿಯರೊಡಾಗೊಡಿ ಸುಂದರವರ್ಮನನ್ನು ಕೊಂದು ಮಗಧರಾಜ್ಯವನ್ನು ಆಕ್ರಮಿಸಿದನೆಂಬುದು ನಾಟಕದ ಕಥಾವಸ್ತು.ಇದರಲ್ಲಿಯ ಚಂದಸೇನನೇ ೧ನೆಯ ಚಂದ್ರಗುಪ್ತನೆಂದು ಜಯಸ್ವಾಲ್ ಮುಂತಾದ ಕೆಲವು ವಿದ್ವಂಸರು ಊಹಿಸಿದ್ದರೆ.ಆದರೆ ಇದರಲ್ಲಿ ಸತ್ಯವಿಲ್ಲ.ಚಂದ್ರಗುಪ್ತ ಲಿಚ್ಚಿವಿಯರೊಡನೆ ಮಾದಿದ ಸಂಬಂಧ ಅವನಿಗೆ ಲಾಭದಾಯಕವಾಯಿತೆಂಬುದು ನಿಜ.ಲಿಚ್ಚಿವಿ ವಂಶದೊಡನೆ ತನ್ನ ಸಮ್ಬಂದಧ ಪ್ರಾಮುಖ್ಯವನ್ನು ಸೂಚಿಸಲೆಂಬಂತೆ ಇವನು ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿಸಿದ.ಸಮುದ್ರಗುಪ್ತ ತನ್ನ ಶಾಸನದಲ್ಲಿ ತಾನು ಲಿಚ್ಚಿವಿ ದೌಹಿತ್ರನೆಂದು ಹೆಮ್ಮೆಯಿಂದ ಕರೆದುಕೊಂಡಿದ್ದನೆ.ಇದನ್ನು ಗಮನಿಸದಾಗ ಚಂದ್ರಗುಪ್ತ ಲಿಚ್ಚಿವಿಯರಿಂದಲೆ ಪ್ರಾಮುಖ್ಯಕ್ಕೆ ಬಂದನೆಂಬ ಅಂಶ ಸ್ಪಷ್ಟವಾಗುತ್ತದೆ.
      ಒಂದನೆಯ ಚಂದ್ರಗುಪ್ತ (೩೨೦-೩೫)ಆಳ್ವಿಕೆಗೆ ಬಂದ ವರ್ಶವಾದ ೩೨೦ರಿಂದ ಗುಪ್ತರ ಹೆಸರಿನಲ್ಲಿ ಒಂದು ಶಕೆಯನ್ನು ಗಣನೆಗೆ ತರಲಾಯಿತು.ಗುಪ್ತ ಶಕೆಯನ್ನು ಸಮುದ್ರಗುಪ್ರತನ ಆಳ್ವಿಕೆಯ ಮೊದಲ ವರ್ಶದಿಂದ ಗಣಿಸಲಾಯಿತೆಂದು ಹಲವರು ಅಭಿಪ್ರಾಯಪಟ್ಟಿದ್ದರೆ.ಆದರೆ ಇದು ಚಂದ್ರಗುಪ್ತನ ಆಳ್ವಿಕೆಯ ಮೊದಲ ವರ್ಷದಿಂದಲೇ ಆರಂಭವಾಯಿತೆಂದು ಒಪ್ಪಲಾಗಿದೆ.ಸಮುದ್ರಗುಪ್ತನ ಅಲಾಹಾಬಾದ್ ಸ್ತಂಭಶಾಸನದಲ್ಲಿ ಚಂದ್ರಗುಪ್ತನ ಆಸ್ಥಾನದ ವರ್ಣನೆ ಇದೆ.ತನ್ನ ಆಳ್ವಿಕೆಯ ಕೊನೆಯ ಕಾಲದಲ್ಲಿ ಸಮುದ್ರಗಿಪ್ತನೇ ಸಮರ್ಥನಾದ ತನ್ನ ಉತ್ತರಾಧಿಕಾರಿಯೆಂದು ಯೋಚಿಸಿ ,ಆಸ್ಥಾನಿಕರ ಸಮ್ಮುಖದಲ್ಲಿ ಚಂದ್ರಗುಪ್ತ ಸಮುದ್ರಗುಪ್ತನನ್ನು ತನ್ನ ಅನಂತರ ರಾಜನಾಗಿ ಆಳಿಲು ಆರಿಸಿದನೆಂದು ಹೇಳಿದೆ.ಇದರಿಂದ ಬಹುಶಃ ಸಮುದ್ರಗುಪ್ತ ಆತನ ಹಿರಿಯ ಮಗನಾಗಿರದೆ ಅವನ ಹಿರಿಯ ಸೋದರನೊಬ್ಬನಾಗಿದ್ದರೊ ಇರಬಹುದೆಂದು ಊಹೆ ಮಾಡಲಾಗಿದೆ.ಸಮುದ್ರಗುಪ್ತನ ನಾಣ್ಯಹಳನ್ನು ಹೋಲುವ,ಕಚಗುಪ್ತನೆಂಬನ,ಚಿನ್ನದ ನಾಣ್ಯಗಳು ದೊರೆತಿವೆ.ಇವುಗಳ ಆಧಾರದ ಮೇಲೆ ಕಚಗುಪ್ತ ಸಮುದ್ರಗುಪ್ತನ ಹಿರಿಯ ಸೋದರನಾಗಿದ್ದಿರಬೆಕೆಂದು ಹಲವರು ಸೂಚಿಸಿದ್ದರೆ.ಈ ವಿಷಯದಲ್ಲಿ ನಿಶ್ಚಯವಾಗಿ ಎನನೂ ಹೇಳಲಿಕ್ಕಗುವುದಿಲ್ಲ.
      ಸಮುದ್ರಗುಪ್ತನ(೩೩೫-೭೫) ಆಯ್ಕೆ ಅನೇಕ ಸಾಮಂತರಿಗೆ  ಸಂತೃಅನ್ನುಂಟು ಮಾಡಿತಾದರೂ ಕೆಲವರು ಇದರಿಂದ ಅಸೂಯೆಗೊಂಡರು.ಇವರಲ್ಲಿ ಅಚ್ಯುತ ಮತ್ತು ನಾಹಸೇನರೊ ಕೋಟಾ ಕುಲದ ಒಬ್ಬ ಸಾಮಂತನೂ ಪ್ರಮುಖರು.ಅಚ್ಯುತನೆಂಬುವನು ಅಹಿಚ್ಛತ್ರದ (ರೋಹಿಲ ಖಂಡ)ಭಾಗವನ್ನು ಮತ್ತು ನಾಗಸೇನನು ಪತ್ಮಾವತಿಯನ್ನು (ಮಧ್ಯಭಾರತ)ಆಳುತ್ತಿದ್ದನು.ಕೋಟಾಕುಲದವರು ಆಳುತ್ತಿದ್ದ ರಾಜ್ಯವು ಪೂರ್ವ ಪಂಚಾಬ್ ಮತ್ತು ದೆಹಲೆಯ ಪ್ರದೇಶವನ್ನು ಒಳಗೊಂಡಿತ್ತು.ಆದರೆ ಆಧಿಕಾರಕ್ಕೆ ಬಂದ ಕೂಡಲೇ ಸಮುದ್ರಗುಪ್ತ ಇವರೆಲ್ಲರನ್ನು ಸೋಲಿಸಿದ.ಇವರು ಸಮುದ್ರಗುಪ್ತನ ವಿರುದ್ಧವಾಗಿ ಅವನ ಈ ವಿಷಯಗಳನ್ನು ತಿಳಿಸುವ ಶಾಸನದ ಭಾಗ ಹಾಳಾಗಿರುವುದರಿಂದ ಈ ಬಗ್ಗೆ ಯಾವ ನಿರ್ಣಯವನ್ನೂ ನುಡಿಯಂತಿಲ್ಲ.
     ತದನಂತರ ಸಮುದ್ರಗುಪ್ತ ಉತ್ತರದ ದಿಗ್ವಿಜಯಯಾತ್ರೆ ಕೈಗೊಂಡ. ಈ ಸಂದರ್ಭದಲ್ಲಿ ಇವನು ವಿಶಿಷ್ಟವಾದ ನೀತಿಯನ್ನು ಅವಲಂಬಿಸಿದ.ವಿಶಾಲ ಭಾರತದ ಎಲ್ಲ ಭಾಗಗಳನ್ನೂ ತನ್ನ ನೇರವಾದ ಆಡಳಿತಕ್ಕೊಳಪಡಿಸುವುದು ಕಷ್ಟಸಾದ್ಯವೆಂಬುದನ್ನು ಅವನು ಅರಿತಿದ್ದಂತೆ ತೋರುತ್ತದೆ.ಆದ್ದರಿಮ್ದಲೇ ಆತ ಉತ್ತರದಲ್ಲಿ ಆಳುತಿದ್ದ ಅರಸರನ್ನು ಸೋಲಿಸಿ ಅವರ ರಾಜ್ಯಗಳನ್ನು ಮಾತ್ರ ತನ್ನದಕ್ಕೆ ಸೇರಿಸಿಕೊಂಡ. ದಕ್ಶಿಣಾಪಥದ ಅರಸರನ್ನು ಸೋಲಿಸಿದರೊ ಅವರನ್ನು ಬಂಧನದಿಂದ ಮುಕ್ತಗೊಳಿಸಿ ಅವರ ರಾಜ್ಯವನ್ನು ಅವರಿಗೆ ಹಿಮ್ದಿರುಗಿಸಿ,ತನ್ಮೂಲಕ ಅವರು ತನ್ನ ಸಾವರ್ಭೌಮತ್ವವನ್ನು ಒಪ್ಪಿಕೊಂಡು ವಿಧೇಯರಾಗಿರುವಂತೆ ಮಾಡಿದ.ಇವನ ಶಕ್ತಿಸಾಮರ್ಥ್ಯಗಳನ್ನು ಕಂಡ ನೆರೆಹೊರೆಯ ಅರಸರು ಇವನಿಗೆ ಕಪ್ಪಕಾಣಿಕೆಗಳನ್ನು ಸಲ್ಲಿಸಿ ಇವನ ಸ್ನೆಹಕ್ಕಗಿ ತಮ್ಮ ಕೈಚಾಚಿದರು.
      ಕವಿ ಹರಿಷೇಣ ಅಲಾಹಾಬಾದ್ ಶಾಸನದಲ್ಲಿ ಸಮುದ್ರಗುಪ್ತನ ದಿಗ್ವಿಜಯಕ್ಕೆ ಸಂಬಂಧಿಸಿದ ಅನೇಕ ವಿವರಣೆಗಳನ್ನು ನೀಡಿದ್ದಾನೆ.ಅದರಂತೆ ಇವನು ಆರ್ಯಾವರ್ತದ ರುದ್ರದೆವ,ಮತಿಲ,ನಾಗದತ್ತ,ಚಂದ್ರವರ್ಮ,ಗಣಪತಿನಾಗ,ನಾಗಸೇನ,ಅಚ್ಯುತ,ನಂದಿ ಮತ್ತು ಬಲವರ್ಮ ಎಂಬ ಅರಸರನ್ನು ಸೋಲಿಸಿ ಅವರ ರಾಜ್ಯವನ್ನು ಸ್ವಾಧೀನಪಡಿಸಿಕೊಂಡ. ಈ ಅರಸರು ಯಾರು? ಇವರ ಆಳುತಿದ್ದ ರಾಜ್ಯಗಲಾವುವು ಎಂಬುದು ತಿಳಿಯದು.ಇವರ ವಂಶ ಮತ್ತು ಇವರ ಆಳುತ್ತಿದ್ದ ರಾಜ್ಯಗಳನ್ನು ಕುರಿತು ಇತಿಹಾಸಕಾರರು ಹಲವು ಊಹೆಗಳನ್ನು ಮಾಡಿದ್ದರೆ.ರುದ್ರದೇವ (೧ನೆಯ ರುದ್ರಸೇನವಾಕಾಟಕ),ಮತಿಲ (ಉತ್ತರ ಪ್ರದೇಶದ ಬುಲಂದ್ ಶಹರ್),ನಾಗದತ್ತ(ನಾಗದೊರೆ)