ಪುಟ:Mysore-University-Encyclopaedia-Vol-6-Part-9.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಹೆ

ಜ್ವಾಲಾಮುಖಿಗಳಿಂದ ಹೊರಬಂದ ಶಿಲಾರಸದಿಂದ ನಿರ್ಮಿತವಾದ ಗುಹೆಗಳೂ ಉಂಟು. ಇವು ಹವಾಯ್ ದ್ವೀಪದಲ್ಲಿದೆ. ಶಿಲಾರಸ ಹೊರಹರಿದು ಪದರಗಳಾಗುವುದು ಸರಿಯಷ್ಟೆ. ಪದರದ ತಳ, ಪಕ್ಕಗಳು ಮತ್ತು ಮೇಲ್ಭಾಗಗಳು ಬೇಗ ಆರಿ ಘನೀಭವಿಸುತ್ತವೆ. ಆದರೆ ಒಳಭಾಗದ ಶಿಲಾರಸ ದ್ರವರೂಪದಲ್ಲೇ ಇದ್ದು, ಹರಿದು ಹೋಗಿ ಸುರಂಗ ಪ್ರರೂಪದ ಗುಹೆಗಳಾಗುತ್ತವೆ.

       ಕೊನೆಯದಾಗಿ ಮಾನವನಿರ್ಮಿತ ಗುಹೆಗಳೂ ಇವೆ. ಭಾರತದ ಎಲ್ಲೋರ, ಅಜಂತ, ಭಾಜ, ಬೇಡ್ಸ್, ಕಾರ್ಲ್ ಮೊದಲಾದ ಕಡೆ ಪ್ರಸಕ್ತಶಕಪೂರ್ವದಲ್ಲಿ ನಿರ್ಮಿತವಾದ ಅನೇಕ ಏಕಶಿಲಾ ಗುಹಾಂತರ್ದೇವಾಲಯಗಳಿವೆ.
       ಗುಹೆಗಳು ಆದಿಮಾನವನಿಗೆ ವಸತಿಗಳಾಗಿದ್ದುವೆಂಬುದು ಈಗ ತಿಳಿದಿರುವ ವಿಚಾರ. ಅನೇಕ ಗುಹೆಗಳಲ್ಲಿ ಮಾನವನ ಅಸ್ಥಿ ಮತ್ತು ಅವನ ಶಿಲೋಪಕರಣಗಳು. ಅವನು ಸಾಕಿದ ಮತ್ತು ಬೇಟೆಯಾಡಿದ ಪ್ರಾಣಿಗಳ ಆಸ್ಥಿಗಳೊಡನೆ ದೊರೆತಿವೆ. ಕರಡಿ, ಸಿಂಹ, ಕುಡುಗೋಲಾಕಾರದ ಹಲ್ಲುಳ್ಳ ಹುಲಿ, ಕತ್ತೆಕಿರುಬು, ಬೃಹದ್ಗಜ ಮುಂತಾದ ಪ್ರಾಣಿಗಳನ್ನು ಮಾನವ ಬೇಟೆಯಾಡಿದ್ದನೆ. ಇವುಗಳ ಆಸ್ಥಿಗಳು ದೊರೆತಿವೆ. ಅಲ್ಲದೆ ಇವುಗಳ ಚಿತ್ರ ವರ್ಣಚಿತ್ರ ಮತ್ತು ಕೆತ್ತನೆಗಳನ್ನು ಗುಹೆಗಳ ಗೋಡೆಗಳ ಮೇಲೆ ಕಾಣಲಾಗಿದೆ. ಇವೆಲ್ಲ ಹಳೆ ಶಿಲಾಯುಗ, ನವಶಿಲಾಯುಗ, ಹೀತ್ತಳೆ ಮತ್ತು ಕಬ್ಬಣದ ಯುಗಗಳಿಗೆ ಸ್ದೇರಿದವು. ಸ್ಪೇನ್ ದೇಶದ ಆಲ್ಟಮೀರ ಗುಹೆಗಳಲ್ಲಿ ಡಾನ್ ಮಾರ್ಸಿಲಿನೋ ಡಿ. ಸೌಟೊಲೊ ಎಂಬಾತ ವರದಿಮಾಡಿದ (೧೮೯೫). ಆನಂತರ ಲೆ ಕಂಬರೆಲ್ಲೆಸ್ ಮತ್ತು ಪಾಂಟ್ ಡಿ. ಗಾಮೆಗಳಲ್ಲಿಯೂ ಇವಿರುವುದು ವರದಿಯಾಯಿತು. ಭೂವಿಜ್ಞಾನ, ಪ್ರಾಚೀನ ಇತಿಹಾಸ ಮತ್ತು ಮಾನವಶಾಸ್ತ್ರಗಳ ವಿಧಾನಗಳನ್ನು ಅನುಸರಿಸಿ ಸಂಶೋಧನೆ ನದೆಸಿದುದರ ಫಲವಾಗಿ ಈ ವರ್ಣಚಿತ್ರಗಳು ಆದಿಮಾನವನಿಂದ ರಚಿತವಾದವುಗಳೆಂದು ನಿರ್ವಿವಾದವಾಗಿ ಸ್ಥಾಪನೆಯಾಯಿತು ಇದರ ಕೀರ್ತಿ ಇ. ಪಿ. ಬ್ರೆಯಲ್ ಎಂಬಾತನಿಗೆ ಸಲ್ಲುತ್ತದೆ. ಸಂಶೊಧನೆ ಸತತವಾಗಿ ಮುಂದುವರೆಯಿತು. ಫ್ರಾನ್ಸಿನ ಲಾಸೆಕ್ಸ್ ಗುಹೆಗಳಲ್ಲಿ ವರ್ಣಚಿತ್ರ ಭಂಢಾರವನ್ನೇ ಶೋಧಿಸಿದ್ದು ಇತ್ತೀಚಿನ ಸಂಶೋಧನೆಗಳಲ್ಲಿ ಪ್ರಮುಖವಾದುದು. ಈ ವರ್ಣರಂಜಿತ ಚಿತ್ರಗಳು ಒಂದು ಬುಡಕಟ್ಟಿನ ಜನ ಅಥವಾ ಒಂದು ಕಾಲದ ಜನಗಳ ರಚನೆಯಲ್ಲ. ಇವು ಆರಿಗ್ನೇಸಿಯನ್ ಸಲ್ಯೂಟ್ರಿಯನ್ ಮತ್ತು ಮ್ಯಾಗ್ಡಲೇನಿಯನ್ ಕಾಲದವು. ಹಳೆ ಶಿಲಾಯುಗದ ಆದಿಮಾನವ ರಚಿತ ಚಿತ್ರ ಮತ್ತು ವರ್ಣಚಿತ್ರಗಳು ರಷ್ಯದ ಉಜ್ಜೆಕಿಸ್ತಾನ ಮತ್ತು ಲೇನಾ ಕಣಿವೆ ಪ್ರದೇಶಗಳನ್ನು ಬಿಟ್ಟರೆ ಬೇರೆ ಕಡೆಗಳಲ್ಲಿ ಇದ್ದಂತೆ ಕಾಣೂವುದಿಲ್ಲ. ಗುಹೆಗಳು ಸಮರ ನಿರಾಶ್ರಿತರ ಬೀಡುಗಳೂ ಆಗಿದ್ದುದುಂಟು. ಭಾರತದಲ್ಲಿ ಗುಹೆಗಳು ಸನ್ಯಾಸಿಮಠಗಳಾಗಿದ್ದವು.
        ಮಧ್ಯ ಮತ್ತು ದಕ್ಷಿಣ ಯೂರೋಪಿನ ಆಲ್ಪ್ಸ್ ಪರ್ವತಗಳಲ್ಲಿ ಪ್ರಸಿದ್ಧ ಗುಹೆಗಳಿವೆ. ಫ್ರಾನ್ಸಿನ  ಗ್ರೆನೊಬಲ್ ಹತ್ತಿರದ ಜಿ. ಬರ್ಜರ್ ಗುಹೆ ನಮಗೆ ತಿಳಿದಿರುವ ಗುಹೆಗಳಲ್ಲೆಲ್ಲ ಅತ್ಯಂತ ಆಳವಾದದ್ದು (೩೬೮೦). ಸ್ವಿಟ್ಜರ್ಲೆಂಡಿನ ಹಾಲೋಜ್ ಗುಹೆ ಅತಿ ಉದ್ದವಾದದ್ದು (ಸು. ೫೧ ಕಿಮೀ). ಇದೇ ಪ್ರದೇಶದಲ್ಲಿರುವ ಎಲಿಜ಼ಬೆತ್ ಗುಹೆಯ ಉದ್ದ ೧೩೦೦'. ಅಗಲ ೫೦೦೦' ಮತ್ತು ಎತ್ತರ ೧೫೦'. ಹಿಮಾಲಯದಲ್ಲೂ ಗುಹೆಗಳಿವೆ. ಭಾರತದಲ್ಲಿ ಮಧ್ಯಪ್ರದೇಶದ ಬಸ್ತಾರ್ ಜಿಲ್ಲೆಯ ಗುಹೆಗಳು ಪ್ರಸಿದ್ಧವಾದವು. ಇವುಗಳಲ್ಲಿ ಕೆಲವು ೩೦೦' ಉದ್ದ ೪೦' ಎತ್ತರ ಇವೆ.
  
         ಗುಹೆಶಾಸ್ತ್ರ: ಗುಹೆಗಳ ವೈಜ್ಞಾನಿಕ ಅದ್ಯಯನ  ಈ ಶಾಸ್ತ್ರದ ವಸ್ತು (ಸ್ವೀಲಿಯಾಲಜಿ). ಗುಹೆಗಳನ್ನು ಆಳೆಯುವ ವಿಧಾನ, ಅವುಗಳಲ್ಲಿ ವಾಸಿಸುವ ಸಸ್ಯ ಮತ್ತು ಪ್ರಾಣಿವರ್ಗಗಳ ಪರಿಶೋಧನೆ, ನೀರಿನ ಗುಣ, ವಾತಾವರಣದ ವರ್ತನೆ  ಮುಂತಾದವನ್ನು ಇದರಲ್ಲಿ ಅಭ್ತಸಿಸಲಾಗುವುದು. ಗುಹೆಗಳಲ್ಲಿನ ವಾತಾವರಣ ವಿಶಿಷ್ಟವಾದದ್ದು. ಅಲ್ಲಿಗೆ ಸೂರ್ಯನ ರಶ್ಮಿ ತಲಪುವುದಿಲ್ಲವಾದ್ದರಿಂದ ಅಲ್ಲಿ ಸದಾ ಕತ್ತಲೆ. ಗವಿಗಳ ಮಾಳಿಗೆಗಳು ಸಾಧಾರಣವಾಗಿ ಸದಾ ತೇವಭರಿತವಾಗಿರುತ್ತವೆ ಮತ್ತು ಅಲ್ಲಿ ನೀರು ತೊಟ್ಟಿಕ್ಕುತ್ತಿರುತ್ತದೆ. ಆದ್ದರಿಂದ ಅಲ್ಲಿನ ವಾಯು ಹೆಚ್ಚು ತೇವಾಂಶದಿಂದ ಕೂಡಿರುವುದು. ಅಲ್ಲಿ ಹಸಿರುಗಿಡಗಳು ಬೆಳೆಯಲಾರವು. ಅಣಬೆ ಜಾತಿಯ ಸಸ್ಯಗಳಿರುವುದುಂಟು.
        ಗುಹೆಗಳಲ್ಲಿಯೆ ಕಾಯಂ ವಾಸಿಸುವ ಪ್ರಾಣಿಗಳು, ಗುಹೆಗಳ ಒಳಗೆ ಮತ್ತು ಹೊರಗೆ ಎರಡು ಕಡೆಗಳಲ್ಲಿಯೂ ವಾಸಮಾಡುವಂಥವು ಮತ್ತು ಅಕಸ್ಮಾತ್ ಗುಹೆ ಪ್ರವೇಶಮಾಡಿದಂಥವು ಅಥವಾ ಆತ್ಯಲ್ಪಕಾಲ ಗುಹೆಗಳಲ್ಲಿ ಕಾಲ ಕಳೆಯುವ ಪ್ರಾಣೀಗಳು ಎಂದು ಗುಹಾಪ್ರಾಣಿಗಳನ್ನು ವರ್ಗೀಕರಿಸಬಹುದು. ಗುಹೆಗಳಲ್ಲಿ ಕಾಯಂ ವಾಸಮಾಡುವ ಪ್ರಾಣಿಗಳು ನಿರ್ವರ್ಣ ಹಾಗೂ ಸಂಪೂರ್ಣ ದೃಷ್ಟಿಹೀನವಾಗಿರುತ್ತವೆ. ಸಂಪೂರ್ಣ ದೃಷ್ಟಿಹೀನ ಮತ್ತು ಸಂಪೂರ್ಣ ದೃಷ್ಟಿ ಸಾಮರ್ಥ್ಯವಿರುವವುಗಳಾ ನಡುವಣ ಅನೇಕ ಮಧ್ಯಾಂತರ ಅವಸ್ಥೆಗಳನ್ನು ಪ್ರತಿನಿಧಿಸುವ ಪ್ರಾಣಿಗಳಾನ್ನು ಕಾಣಬಹುದು. ಎಲ್ಲರ ಗಮನವನ್ನು ಸೆಳೆಯುವ ಗುಹಾಪ್ರಾಣಿ ಎಂದರೆ ಬಿಳಿಮೀನು. ಇದು ಅಮೇರಿಕ ಸಂಯುಕ್ತ ಸಂಸ್ಥಾನದ ಕೆಂಟುಕಿ ಗುಹೆಗಳಲ್ಲಿ ವಾಸಿಸುತ್ತದೆ ನ್ಯೂಮೆಕ್ಸಿಕೊ ಗುಹೆಗಳಲ್ಲಿ ವಾಸಿಸುವ ಚಾರಾಸಿನಿಡ್ ಮೀನುಗಳಲ್ಲಿ ದೃಷ್ಟಿಹೀನತೆಯ ವಿವಿಧ ಮಟ್ಟಗಳಾನ್ನು ಕಾಣಬಹುದು. ಗುಹಾ ವಾಸಿಗಳಾಲ್ಲಿ ಸಂಧಿಪದಿಗಳು, ಅದರಲ್ಲು ಕಠಿಣಚರ್ಮಗಳು ಪ್ರಮುಖವಾದವು. ಉತ್ತರ ಅಮೇರಿಕದಲ್ಲಿ ಸ್ಯಾಲಮ್ಯಾಂಡರ್ ಎಂಬ ದ್ವಿಚರಪ್ರಾಣಿ ಮತ್ತು ಇತರ ಪ್ರಾಣಿಗಳು ಗುಹಾವಾಸಿಗಳಾಗಿವೆ. ಬಾವಲಿಗಳು ಮತ್ತು ಗೂಬೆಗಳು ಹಗಲನ್ನು ಗುಹೆಗಳಲ್ಲಿ ಕಳೆಯುತ್ತವೆ. ಟ್ರಿನಿಡಾಡಿನಲ್ಲಿ ತೈಲಪಕ್ಷಿ (ಆಯಿಲ್ ಬರ್ಡ್) ಗುಹೆಗಳಲ್ಲಿ ಗೂಡು ಕಟ್ಟುತ್ತದೆ. ವೆನಿಜೂಲದ ಗುಹೆಗಳಲ್ಲಿ ವಾಸಿಸುವ ಒಂದು ಜಾತಿಯ ಪಕ್ಷಿಯ ರೆಕ್ಕೆಗಳು ೧.೨ ಮೀ ಉದ್ದ ಇವೆಯಂತೆ. ಅನೇಕ ಪ್ರಾಣಿಗಳಿಗೆ ಗುಹೆಗಳು ಚಳಿಗಾಲದ ಆಶ್ರಯಸ್ಥಾನಗಳು.
         ಗುಹೆಯಲ್ಲಿ ವಾಸಿಸುವ ಪ್ರಾಣಿಗಳು ನೀರಿನ ಮೂಲಕ ಹೊರಗಿನಿಂದ ಬರುವ ಆಹಾರವನ್ನು ಅವಲಂಬಿಸಿವೆ. ಆದ್ದರಿಂದ ಇವುಗಳ ಸಂಖ್ಯೆ ಅತ್ಯಲ್ಪ. ಕೆಲವು ವೇಳೆ ಒಂದು ಇನ್ನೊಂದನ್ನು ಕೊಂದು ತಿನ್ನುವುದುಂಟು. ಸಸ್ಯಾಹಾರಿಗಳು ಅಣಬೆ ಮುಂತಾದವನ್ನು ತಿಂದು ಜೀವಿಸುತ್ತವೆ. ಆಹಾರಭಾವದಿಂದ ಗುಹಾವಾಸಿಗಳ ದೇಹಗಾತ್ರವೂ ಕಡಿಮೆ. ಒಂದು ಅಡಿ ಉದ್ದವಿರುವ ಓಮ್ ಪ್ರಾಣಿಯೇ ಅತ್ಯಂತ ದೊಡ್ಡದು. ಗುಹಾವಾಸಿಗಳಾಲ್ಲಿ ದೃಷ್ತಿಹೀನತೆಯ ಪರಿಹಾರವಾಗಿ ಸ್ಪರ್ಶೆಂದ್ರಿಯಗಳು ವಿಶೇಷ ಬೆಳವಣಿಗೆ ಹೊಂದಿರುವುವು. ಸಂಧಿಪದಿಗಳ ಕುಡಿಮೀಸೆ ಮತ್ತು ಕಾಲುಗಳು ಬಹು ಉದ್ದವಾಗಿರುತ್ತವೆ. ಶರೀರಾದ್ಯಂತ ಸ್ಪರ್ಶ ಗ್ರಾಹಕ ಕೂದಲುಗಳೂ ಇರುವುದುಂಟು. ಋತು ವೈಪರೀತ್ಯವಿಲ್ಲದಿರುವುದರಿಂದ ಈ ಪ್ರಾಣಿಗಳಿಗೆ ಬೆದೆಕಾಲವಿರುವುದಿಲ್ಲ.