ಪುಟ:Mysore-University-Encyclopaedia-Vol-6-Part-9.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಲ್ಬರ್ಗ

ದೊರೆತಿವೆ.ಈ ಘಟ್ಟದ ಉಪಕರಣ್ಣಗಳು ನದಿದಡದಲ್ಲಿರುವ ಪ್ರಾಕ್ಕಾಲೀನ ಹರಹುಗಳಲ್ಲಿ ಮಧ್ಯಶಿಲಾ ಮತ್ತು ಅಂತ್ಯ ಹಳೆಶಿಲಾಯುಗದ ಉಪಕರಣಗಳು ದೊರಕುವ ಸ್ತರಗಳ ನಡುವಣ ಸ್ತರಗಳಲ್ಲಿ ದೊರಕಿವೆ.ಸೂಕ್ಷ್ಮಶಿಲಾಯುಗದ ಅನೇಕ ನೆಲೆಗಳು ಈ ಜಿಲ್ಲೆಯ ಅಳಂದ ತಾಲ್ಲೂಕಿನ ಜವಳಿ,ಶಾಖಾಪುರ,ಇಕ್ಕಳ್ಕಿ ಮುಂತಾದ ಗ್ರಾಮಗಳ ಬಳಿ ದೊರಕಿವೆ.ನವಶಿಲಾಯುಗದ ಸಂಸ್ಕ್ರತಿ ಕೂಡ ಗುಲ್ಬರ್ಗ ಜಿಲ್ಲೆಯಲ್ಲಿ ಹರಡಿತ್ತು.ಇಲ್ಲಿಯ ನವಶಿಲಾಯಗದ ಸಂಸ್ಕ್ರತಿ ಪ್ರ.ಶ.ಪೂ. ೨೫೦೦ರ ಸುಮಾರಿನಲ್ಲೇ ಪ್ರಚಲಿತವಾಗಿತ್ತೆಂದು ತಿಳಿದುಬಂದಿದೆ.ಈ ಘಟ್ಟದ ಜನ ವ್ಯವಸಾಯ ಮತ್ತು ಪಶುಪಾಲನೆಗಳನ್ನು ಸಾಧಿಸಿದ್ದರೂ ಸಾರಂಗ,ಜಿಂಕೆ ಮುಂತಾದ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರೆಂದು ಆಗ ಮೀನುಗಾರಿಕೆ ಸಾಮಾನ್ಯವಾಗಿತ್ತೆಂದು ಗೊತ್ತಾಗಿದೆ.ಕೋಡೆಕಲ್ಲು ಅಲ್ಲದೆ ಮುಳ್ಳೂರು,ತೀರ್ಥ,ಕಕ್ಕೇರಿ,ಬೆನಕನಹಳ್ಳಿ ಮುಂತಾದೆಡೆಗಳಲ್ಲೂ ಸಮಕಾಲೀನ ಬೂದಿಯ ರಾಶಿಗಳಿವೆ.ಇವಲ್ಲದೆ ಆ ಕಾಲದ ಜನ ನೆಲೆಸಿದ್ದ ಕೆಲವು ನೆಲೆಗಳು ಕೂಡ ಬೀರನೂರು,ಕನ್ನೆಕೋಳೂರು,ಬೂದನಾಳು ಮುಂತಾದೆಡೆ ಬೆಳಕಿಗೆ ಬಂದಿವೆ.ಹಾವಿನಮೆಟ್ಟಿ,ಕಿರದಹಳ್ಳಿ,ಮಂಗಳೂರು,ಮಾಕನಗವಿ ಮುಂತಾದೆಡೆಗಳಲ್ಲಿ ಪ್ರಾಚೀನ ಕಾಲದಲ್ಲಿ ಚಿನ್ನದ ಗಣಿಗಳಿದ್ದ ಕುರುಹುಗಳಿವೆ.ಆದರೆ ಇವು ಯಾವ ಕಾಲವೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ಗುಲ್ಬರ್ಗ ಜಿಲ್ಲೆ ಅಲ್ಲಿಯ ಕಬ್ಬಿಣಯುಗದ ಬೃಹತ್ ಶಿಲಾಸಮಾದಧಿಗಳ ಸಂಸ್ಕೃತಿಯ ಅವಶೇಷಗಳಿಗೆ ಹಿಂದಿನಿಂದಲೂ ಪ್ರಸಿದ್ಧವಾಗಿದೆ.ಜೇವರಿಗಿ ತಾಲ್ಲೂಕಿನಲ್ಲಿ ಹಗರಟಗಿ,ರಾಜನಕೋಳೂರು,ಚಿಕ್ಕನಹಳ್ಳಿ,ವಿಭೂತಿಹಳ್ಳಿ,ಇಜೇರಿ.ಕೊಲ್ಲೂರು,ಜೇವರಿಗಿ ಮುಂತಾದೆಡೆಗಳಲ್ಲಿ ಈ ಸಂಪ್ರದಾಯದ ಅನೇಕ ಸಮಾಧಿಗಳನ್ನು ಗುರುತಿಸಲಾಗಿದೆ.ಅವಶೇಷಗಳನ್ನು ಹೊತಿರುವ ಅಥವಾ ಅವಶೇಷಗಳನ್ನು ಜಾಡಿಗಳಲ್ಲಿ ಶೇಖರಿಸಿ ಹೊತಿರುವ ಗುಣಿಗಳ ಸುತ್ತ ರಚಿಸಿದ ಶಿಲಾ ವರ್ತುಲಗಳು ಅಥವಾ ತೊಟ್ಟಿಗಳು ಕಂಡು ಬಂದಿವೆ.ಜೇವರಗಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಹಲವೆಡೆ ದೊಡ್ಡ ಕಲ್ಲುಗಳನ್ನು ಅನೇಕ ಸಮಾನಾಂತರ ಸಾಲುಗಳಲ್ಲಿ ನೆಟ್ಟಿರುವುದು ಕಂಡುಬಂದಿದೆ.ಪ್ರಾಚೀನ ಕಾಲದ ಈ ಶಿಲಾ ಸಾಲುಗಳ ಶವಸಂಸ್ಕಾರ ವಿಧಿಗೆ ಸಂಬಂಧಿಸಿದ್ದೋ ಅಲ್ಲವೋ ಹೇಳುವುದು ಕಷ್ಟ.

ಉತ್ತರ ಭಾರತದಲ್ಲಿ ಪ್ರಚಲಿತ ಶಕ ಪೂರ್ವದ ಕೊನೆಯ ಸಹಸ್ರಮಾನದ ಉತ್ತರಾರ್ಧದಲ್ಲಿ ಪ್ರಚಲಿತವಿದ್ದ ಔತ್ತರೇಯ ಕಪ್ಪು ಹೊಳಪಿನ ಮಡಕೆ ಚೂರು ಅಳಂದ ತಾಲ್ಲೂಕಿನಲ್ಲಿ ಕಂಡುಬಂದಿವೆ.ಅಲ್ಲದೆ ೧೯೪೦ರ ಸುಮಾರಿನಲ್ಲಿ ಗುಲ್ಬರ್ಗ ತಾಲ್ಲೂಕಿನ ಹೆಬ್ಬಾಳ ಗ್ರಾಮದಿಂದ ೨೨೫ ಬೆಳ್ಳಿಯ ಒತ್ತು ಮುದ್ರೆಯ ನಾಣ್ಯಗಳು ದೊರಕಿದುವು.ನಾಣ್ಯಗಳು ಮತ್ತು ಔತ್ತರೇಯ ಹೊಳಪಿನ ಮಡಕೆ ಚೂರುಗಳು ಗುಲ್ಬರ್ಗ ಜಿಲ್ಲೆ ಮೌರ್ಯ ಸಾಮ್ರಾಜ್ಯದ ಭಾಗವಾಗಿದ್ದ ಕಾಲದಲ್ಲಿ ಬಂದವುಗಳಾಗಿರಬೇಕು.

ಮೌರ್ಯ ಮತ್ತು ಸಾತವಾಹನ ಕಾಲಕ್ಕೆ ಸಂಬಂಧಿಸಿದ ಕೆಲವು ನೆಲೆಗಳು ಅಳಂದ ಮತ್ತು ಚಿತ್ತಾಪುರ ತಾಲ್ಲೂಕುಗಳಿವೆ.ಚಿತ್ತಾಪುರ ತಾಲ್ಲೂಕಿನ ಭೀಮಾನದಿಯ ಎಡದಂಡೆಯಲ್ಲಿರುವ ಸನ್ನತಿ ಇವುಗಳ ಪೈಕಿ ಪ್ರಸಿದ್ಧವಾದ್ದು.ಸನ್ನತಿ ಒಂದು ಬೌದ್ಧ ಕೇಂದ್ರವೂ ಪ್ರಾಯಶಃ ಸ್ಥಳೀಯ ಮಾಂಡಲಿಕನೊಬ್ಬನ ರಾಜಧಾನಿಯೂ ಆಗಿದ್ದಂತೆ ತೋರುತ್ತದೆ.ಸನ್ನತಿಯ ಕನಗನ ಹಳ್ಳಿಯ ಬೌದ್ಧ ಸ್ತೂಪದ ಅವಶೇಷಗಳಲ್ಲಿ ಅಶೋಕನ ಶಾಸನಗಳು ಈ ಜಿಲ್ಲೆಯಲ್ಲಿ ಇದುವರೆಗೆ ದೊರಕಿರುವ ಶಾಸನಗಳಲ್ಲಿ ಅತ್ಯಂತ ಪ್ರಾಚೀನವಾದುವು.ಸಾತವಾಹನರ ಕಾಲದ ಶಾಸನಗಳೂ ದೊರೆತಿವೆ.

ಚಿತ್ತಾಪುರ ತಾಲ್ಲೂಕಿನ ನಾಗಾಯಿ ಹಿಂದು,ಜೈನ ಮತ್ತು ಇಸ್ಲಾಂ ಸಂಸ್ಕೃತಿಗಳಿಗೆ ಸಂಬಂಧಿಸಿದ ವಸ್ತು ಅವಶೇಷಗಳಿಗೆ ಪ್ರಸಿದ್ಧವಾಗಿದೆ(ನೋಡಿ-ನಾಗಾಯಿ)

ಚಿತ್ತಾಪುರ ತಾಲ್ಲೂಕಿನ ಸನ್ನತಿಯಲ್ಲಿ ಬಾದಮಿ ಚಳುಕ್ಯರ ಕಾಲದ ಒಂದು ಶಾಸನ ದೊರಕಿದ.ಇದರಲ್ಲಿ ಚಳುಕ್ಯ ರಾಜವಂಶದ ಕೊನೆಗಾಲ ಅಥವಾ ಅನಂತರದ ಸಂಧಿಕಾಲದಲ್ಲಿದ್ದ ಕೆಲವು ತದ್ವಂಶೀಯರ ಹೆಸರುಗಳಿವೆ.ಕಲ್ಯಾಣದ ಚಾಳುಕ್ಯರ,ಕಳಚುರಿಗಳ ಮತ್ತು ದೇವಗಿರಿ ಯಾದವರ ಕಾಲದ ಸುಮಾರು ಇನ್ನೂರಕ್ಕೂ ಹೆಚ್ಚಿನ ಶಾಸನಗಳು ಬೆಳಕಿಗೆ ಬಂದಿವೆ.ಈ ಕಾಲದ ಅನೇಕ ದೇವಾಲಯಗಳು ನಾಗಾಯಿ,ಮಳಖೇಡ,ಕಾಳಗಿ,ನಿಂಬರ್ಗಿ,ಚಿಂಚಹನಸೂರು,ಪಡಸಾವಳಿ ಮುಂತಾದೆಡೆಗಳಲ್ಲಿವೆ.ಇವೆಲ್ಲ ಸಮಕಾಲೀನ ಚಾಳುಕ್ಯ ಶೈಲಿಯಲ್ಲಿ ಉತ್ತಮ ರಚನಾವಿನ್ಯಾಸದೊಡನೆ ಕಡೆದ ಹೊಳಪಿನ ದುಂಡುಕಂಬಗಳಿಂದ ಕೂಡಿದ್ದು ಸುಂದರ ಶಿಲ್ಪಗಳಿಂದ ಅಲಂಕೃತವಾಗಿರುವ ಕಟ್ಟಡಗಳು.

ಬಹಮನೀಯರ ರಾಜಧಾನಿಯಾಗಿದ್ದ ಗುಲ್ಬರ್ಗ ನಗರವಲ್ಲದೆ ಈ ಜಿಲ್ಲೆಯ ಇತರ ಭಾಗಗಳಲ್ಲೂ ಇಸ್ಲಾಮೀ ವಾಸ್ತುಶೈಲಿಯ ಅನೇಕ ಕಟ್ಟಡಗಳಿವೆ.ಇವುಗಳಲ್ಲಿ ಫಿರೋಜಾಬಾದ್,ಚಿಂಚೋಳಿ ಮತ್ತು ಚಿತಾಪುರ ಕೋಟೆಗಳನ್ನು ಹೆಸರಿಸಬಹುದು.

ಫಿರೋಜಾಬಾದಿನಲ್ಲಿ ೧೪೦೬ರಲ್ಲಿ ಕಟ್ಟಿದ ಒಂದು ಮಸೀದಿಯಿದೆ.ಸುಲ್ತಾನಾ ಫಾತಿಮಾ ಎಂಬವಳು ಗೋಗಿ ಗ್ರಾಮದ ಕಾಲಿ ಮಸೀದಿಯನ್ನು ಕಟ್ಟಿದಳು(ಸು.೧೫೦೦).ಇದು ಒಂದು ಸುಂದರ ಕಟ್ಟಡ.ಈ ಮಸೀದಿಯ ಬಳಿಯಲ್ಲಿ ಕೆಲವು ಆದಿಲ್ ಶಾಹೀ ಅರಸರ ಸಮಾಧಿಗಳುಂಟು.ಚಂಚೋಳಿಯಲ್ಲಿ ಪೋರ್ಚ್ ಗೀಸರು ಒಂದು ಚರ್ಚ್ ಕಟ್ಟಿಸಿದರೆಂದು ಹೇಳಲಾಗಿದೆ.ಆದರೆ ಈಗ ಇರುವ ಚರ್ಚ್ ನವೀಕೃತವಾಗಿದೆ.

ಮುಸ್ಲಿಂ ಅರಸರ ಕಾಲದ ಅನೇಕ ಪಾರಸೀ ಮತ್ತು ಅರಬ್ಬೀ ಶಾಸನಗಳು ಗುಲ್ಬರ್ಗ ಕೋಟೆಯಲ್ಲಿ ದೊಡ್ದ ಮಸೀದಿಯಲ್ಲಿರುವ ರಫಿಯ ಶಾಸನ,ಚಿಂಚೋಳಿಯಲ್ಲಿ ನಸ್ತಾಲಿಕ್ ಲಿಪಿಯಲ್ಲಿರುವ ಶಾಸನ,ಅಳಂದಿನಲ್ಲಿರುವ ಫರ್ಹಾದ್ ಖಾನನ ಶಾಸನ(೧೬೫೬-೫೭),ಮಳಖೇಡದ ಅರಬ್ಬಿ ಶಾಸನ (೧೪೬೯-೭೦) ಉಲ್ಲೇಖಾರ್ಹವಾದವು.ಈ ಕಾಲದ ಬಹಮನೀ,ಆದಿಲ್ ಶಾಹೀ,ಕುತುಬ್ ಶಾಹೀ,ಮೊಗಲ್ ಮತ್ತು ನಿಜಾಮ್ ಶಾಹಿ ಅರಸರ ನಾಣ್ಯಗಳು ಗುಲ್ಬರ್ಗ ಜಿಲ್ಲೆಯಲ್ಲಿ ದೊರಕಿವೆ.

ತಾಲ್ಲೂಕು:ಜಿಲ್ಲೆಯ ಮಧ್ಯ ಮತ್ತು ಉತ್ತರ ಭಾಗದಲ್ಲಿರುವ ಈ ತಾಲ್ಲೂಕನ್ನು ಪೂರ್ವದಲ್ಲಿ ಚಿಂಚೋಳಿ,ಚಿತ್ತಾಪುರ ತಾಲ್ಲೂಕುಗಳೂ ದಕ್ಷಿಣದಲ್ಲಿ ಜೇವರಗಿ,ಪಶ್ಚಿಮದಲ್ಲಿ ಆಳಂದ ಮತ್ತು ಅಫಜಲಪುರ ತಾಲ್ಲೂಕುಗಳೂ ಉತ್ತರದಲ್ಲಿ ಬೀದರ್ ಜಿಲ್ಲೆಯೂ ಸುತ್ತುವರೆದಿವೆ.ಈ ತಾಲ್ಲೂಕಿನ ದಕ್ಷಿಣದಲ್ಲಿ ಹರಿಯುವ ಭೀಮಾ ನದಿ ಈ ತಾಲ್ಲೂಕನ್ನು ಜೇವರಗಿ ತಾಲ್ಲೂಕಿನಿಂದ ಬೇರ್ಪಡಿಸಿದೆ.ಔರಾದ,ಗುಲ್ಬರ್ಗ,ಕಮಲಾಪುರ,ಮಹಗಾಂವ್,