ಪುಟ:Mysore-University-Encyclopaedia-Vol-6-Part-9.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೃಹ ಮತ್ತು ಗೃಹಾಲಂಕರಣ ದೊರಕದೆ ಥಳುಹಿನ ಇಂಗ್ಲಿಷ್ ವಸ್ತುಗಳೊಡನೆ ಸ್ಪರ್ಧಿಸಲಾರದೆ ಹಿಂದೆ ಬೀಳಬೇಕಾಯಿತು. ಸ್ವಾತಂತ್ರ್ಯಾನಂತರ ಗೃಹಕೈಗಾರಿಕೆಗಳು ಚೇತರಿಸಿಕೊಂಡವು. ಗ್ರಾಮಾಂತರ ಪ್ರದೇಶಗಳಲ್ಲಿ ನಿರುದ್ಯೋಗಿಗಳಾಗಿರುವ ಮತ್ತು ಸಾಕಷ್ಟು ಉದ್ಯೋಗ ಇಲ್ಲದಿರುವ ಜನರಿಗೆ ನೆರವಾಗುವ ಉದ್ದೇಶದ ಉಓಜನೆತಯಂತೆ ೧೯೫೦ರಲ್ಲಿ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಯೋಜನೆಯನ್ನು ಜಾರಿಗೊಳಿಸಿ ಅದರ ಉತ್ತಮ ಫಲಿತಾಂಶಗಳಿಂದ ಮುಂದೆ ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಲಾಯಿತು. ಈ ಯೋಜನೆಯನ್ವಯ ಅಸ್ತಿತ್ವದಲ್ಲಿದ್ದ ಕೈಗಾರಿಕೆಗಳನ್ನು ವಿಸ್ತರಿಸಲು ಹಾಗು ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಸಾಮೂಹಿಕ ಗ್ರಾಮ ಅಭಿವೃದ್ಧಿ ಸಮಿತಿಗಳನ್ನು ೧೯೫೨ರಲ್ಲಿ ರಚಿಸಲಾಯಿತು. ಗ್ರಾಮಾಂತರ ಕೈಗಾರಿಕಾ ಸಹಕಾರ ಸಂಸ್ಥೆಗಳಾನ್ನು ಪ್ರಾರಂಭಿಸಲಾಯಿತು. ಇವು ಗ್ರಾಮಾಂತರ ಪ್ರದೇಶಗಳ ಕಸಬುದಾರರಿಗೆ ಮತ್ತು ಉದ್ಯಮಗಳಿಗೆ ಬಲು ಪ್ರಯೋಜನಕಾರಿಯಾದವು. ಅನಂತರ ಈ ಕಾರ್ಯಕ್ರಮಗಳನ್ನು ಪಂಚವಾರ್ಷಿಕ ಯೋಜನೆಗಳಲ್ಲಿ ವಿಲೀನಗೊಳಿಸಲಾಯಿತು. ಎರಡನೆಯ ಯೋಜನೆಯಲ್ಲಿ ಕೈಗಾರಿಕಾ ಕ್ಷೇತ್ರಗಳನ್ನು ನಿರ್ಮಿಸಲಾಯಿತು. ಏಕೆಂದರೆ ಗ್ರಾಮಾಂತರ ಗೃಹಕೈಗಾರಿಕೆಗಳು ಬೆಳೆದು ಸಣ್ಣ ಕೈಗಾರಿಕೆಗಳ ಮಟ್ಟಕ್ಕೆ ಬರುವುದರಿಂದ ಅವುಗಳ ಅಭಿವೃದ್ಧಿಗೆ ಮೈಸೂರು, ಬೆಂಗಳೂರು, ಹುಬ್ಬಳ್ಳಿ, ರಾಮನಗರ, ಹರಿಹರ, ಬೆಳಗಾಂವಿ, ಮಂಗಳೂರು, ಗುಲ್ಬರ್ಗಗಳಲ್ಲಿ ಕೈಗಾರಿಕಾ ಕ್ಷೇತ್ರಗಳನ್ನು ನಿರ್ಮಾಣ ಮಾಡಲಾಯಿತು. ೧೯೫೯ರಲ್ಲಿ ಮೈಸೂರು ಸಣ್ಣ ಕೈಗಾರಿಕಾ ಮತ್ತು ಕರಕುಶಲ ಕಸಬುಗಳಾ ಮಂಡಳಿಯನ್ನು ರಚಿಸಲಾಯಿತು. ಬಲೆನೇಯ್ಗೆ, ಗಂಧದ ಕೆತ್ತನೆ, ದಂತದ ಕೆತ್ತನೆ, ಲೋಹಸಾಮಗ್ರಿ, ಮರದ ಆಟದ ಬೊಂಬೆ ತಯಾರಿಕೆ ಮುಂತಾದ ನಾನಾ ಕಸಬುಗಳು ಉಳಿದು ಕೈಗಾರಿಕೆಗಳು ಅಭಿವೃದ್ಧಿ ಹೊಂದಲು ಸರ್ಕಾರ ಹಲವಾರು ಉತ್ತೇಜನಗಳನ್ನು ಕೈಗೊಂಡಿತು. ಅವುಗಳೆಂದರೆ ಸಾಧ್ಯಾಸಾಧ್ಯತೆತ್ಯ ವರದಿ ಸಿದ್ಧಪಡಿಸಲು ಸಹಾಯ, ತೆರಿಗೆ ವಿನಾಯಿತಿ, ವ್ಯಾಪಾರ ತೆರಿಗೆ ರಿಯಾಯಿತಿ, ಆಕ್ಟ್ರಾಯ್ ರಿಯಾಯಿತಿ ಮತ್ತು ಉತ್ಪನ್ನಗಳನ್ನು ಸರ್ಕಾರ ಖರೀದಿ ಮಾಡುವುದು, ಕೈಗಾರಿಕಾ ಶಿಕ್ಷಣ ಕೇಂದ್ರಗಳನ್ನು ತೆರೆದು ಉಚಿತ ಶಿಕ್ಷಣ ಕೊಟ್ಟು ಗೃಹಕೈಗಾರಿಕೆಗಳಿಗೆ ತರಬೇತಿ ಪಡೆದ ಕುಶಲಕರ್ಮಿಗಳನ್ನು ಒದಗಿಸುವುದು ಇದರಲ್ಲಿ ಸೇರಿದೆ. ಖಾದಿ ಗ್ರಾಮೋದ್ಯೋಗ ಮಂಡಳಿ ಗೃಹಕೈಗಾರಿಕೆಗಳ ತರಬೇತಿ ಶಿಬಿರಗಳಾನ್ನು ನಡೆಸುವುದಲ್ಲದೆ ಕೆಲವು ಕಡೆ ತರಬೇತಿ ಕೇಂದ್ರಗಳನ್ನೂ ತೆರೆದಿದೆ. ಬಣ್ಣದ ಬಿಟ್ಟಿಗಳು : ಕರ್ನಾಟಕದಲ್ಲಿ ಕೈಗಾರಿಕೀಕರಣ ನಡೆದಂತೆ ಗೃಹಕೈಗಾರಿಕೆಗಳ ಸ್ವರೂಪ ಬದಲಾಯಿತು ಮತ್ತು ವಿಸ್ತರಿಸಿತು. ಈ ಬೆಳೆವಣಿಗೆಯಿಂದ ಕೆಲವು ಗೃಹಕೈಗಾರಿಕೆಗಳು ಅಭಿವೃದ್ಧಿ ಹೊಂದಿದವು. ಅವುಗಳೆಂದರೆ ಊಟದ ಎಲೆ ಹಾಗೂ ದೊನ್ನೆ ತಯಾರಿಕೆ, ಬಳಪಕಲ್ಲಿನಿಂದ ಸಾಮಾನುಗಳನ್ನು ತಯಾರಿಸುವುದು, ಹುಲ್ಲಿನಿಂದ ಹಲಗೆ, ಹಾಸುಗಳು ಹಾಗೂ ಪ್ಯಾಕಿಂಗ್ ಪದಾರ್ಥಗಳನ್ನು ತಯಾರಿಸುವುದು, ಹಿತ್ತಾಳೆ ತಾಮ್ರ ಮುಂತಾದವುಗಳಿಂದ ಗೃಹೋಪಯೋಗಿ ಪದಾರ್ಥಗಳ ತಯಾರಿಕೆ, ಜಾನುವಾರು ಮತ್ತು ಕೋಳಿ ಆಹಾರ ತಯಾರಿಕೆ, ಬ್ರೆಡ್ ತಯಾರಿಕೆ, ರುಬ್ಬಿದ ಕಾಗದದಿಂದ ಸಾಮಾನುಗಳ ತಯಾರಿಕೆ, ಮಸಾಲೆಪುಡಿ, ಉಪ್ಪಿನಕಾಯಿ, ಹಪ್ಪಳ, ಖಾರದಪುಡಿ ವಿವಿಧ ತಿನಿಸುಗಳು ಮುಂತಾದವುಗಳ ತಯಾರಿಕೆ, ಹಲ್ಲಿನ ಪುಡಿ, ತಿಲಕ, ನಕ್ಕಿ, ಸುಗಂಧ ದ್ರವ್ಯಗಳ ತಯಾರಿಕೆ, ಮೇಣದ ಮತ್ತು ಗೋಂದಿನ ಉದ್ಯಮ, ಸೀಸದಕಡ್ಡಿ, ಸ್ಲೇಟುಗಳ ತಯಾರಿಕೆ ಸೀರೆಗಳಿಗೆ ಫಾಲ್ಸ್ ಹಾಕುವುದು, ಎಂಬ್ರಾಯಿಡರಿ ಮಾಡುವುದು ಸಿದ್ಧ ಉಡುಪುಗಳ ತಯಾರಿಕೆ, ಸ್ಕ್ರೀನ್ ಪ್ರಿಂಟಿಂಗ್ ಮುಂತಾದವುಗಳೆಲ್ಲ ಗೃಹಕೈಗಾರಿಕೆಗಳಾಗಿ ಬೆಳೆದಿವೆ. ಇಷ್ಟಾದರೂ ರಾಜ್ಯದ ಗೃಹಕೈಗಾರಿಕೆಗಳು ಅಪೇಕ್ಷಿತ ರೀತಿಯಲ್ಲಿ ಪ್ರಗತಿ ಸಾಧಿಸುತ್ತಿಲ್ಲವೆಂಬ ಮಾತಿದೆ. ಅದಕ್ಕೆ ಮುಖ್ಯ ಕಾರಣಗಳೆಂದರೆ ಬಂಡವಾಳದ ಆಭಾವ, ಕಚ್ಚಾಸಾಮಗ್ರಿಯ ಕೊರತೆ, ಉತ್ಪಾದಿಸಿದ ವಸ್ತುಗಳನ್ನು ಲಾಭದಾಯಕವಾಗಿ ಮಾರಾಟಮಾಡಲು ಆಗದಿರುವುದು, ಇತರ ಆಧುನಿಕ ತಯಾರಿಕಾ ಉದ್ಯಮಗಳೊಡನೆ ಸ್ಪರ್ಧಿಸಲು ಸಾಧ್ಯವಾಗದಿರುವುದು ಮುಂತಾದವು. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಲ್ಲಿನ ವೈಫಲವೂ ಹಿನ್ನೆಡೆಗೆ ಕಾರಣವಾಗಿದೆ. ಉದಾಹರಣೆಗೆ ಕರ್ನಾಟಕದಲ್ಲಿ ಎಣ್ಣೆಬೀಜಗಳ ಸಂಗ್ರಹ ತೃಪ್ತಿದಾಯಕವಾಗಿಲ್ಲ. ಜೊತೆಗೆ ತಯಾರಿಕಾಘಟ್ಟದಲ್ಲಿ ಉತ್ಪತ್ತಿಯಾಗುವ ಇತರ ವಸ್ತುಗಳನ್ನು ದುರುಪ್ಯೋಗಪಡಿಸಿಕೊಳ್ಳುವುದು, ಬೆಲ್ಲ ತಯಾರಿಕೆಯ ಸಮಯದಲ್ಲಿ ಕಬ್ಬಿನ ರಸ ತೆಗೆದ ಅನಂತರ ಅದರ ಸಿಪ್ಪೆಯನ್ನು ಒಲೆಗೆ ಉರುವಲಾಗಿ ಉಪಯೋಗಿಸಿ ಕಾಗದ ತಯಾರಿಕೆಗೆ ಬೇಕಾದ ಉತ್ಕೃಷ್ಟ ವಸ್ತುವನ್ನು ಹಾಳು ಮಾಡುವುದು, ಕೆಲವೊಂದು ದಂಟುಗಳನ್ನು ವ್ಯರ್ಥವಾಗಿ ಹೊರಗೆ ಹಾಕುವುದು (ಹೊಗೆಸೊಪ್ಪಿನ ದಂಟು) ಇತ್ಯಾದಿ. ಕೈಯಿಂದ ಹೊಲಿದ ಪಾದರಕ್ಷೆಗಳು : ಆದಾಗ್ಯೂ ಕರ್ನಾಟಕ ರಾಜ್ಯ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಅಗ್ರಪಂಕ್ತಿಯಲ್ಲಿದೆ. ಹಿತ್ತಾಳೆ ಕುಸರಿಕೆಲಸ, ಬೇಟೆ ಮತ್ತು ಗಂಧದ ಮರ ಕುಸರಿ ಕೆಲಸ, ಕೊಬುಗಳ ಕೆತ್ತನೆ, ದಂತ ಕೆತ್ತನೆಗಳಲಿ ಮಂಚೂಣಿಯಲ್ಲಿದೆ. ಕರಕುಶಲ ವಸ್ತಿಗಳ ಅಭಿವೃದ್ಧಿನಿಗಮ ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುತ್ತಿದೆ. ರಾಜ್ಯದಲ್ಲಿ ಈಗ 2,45,826 ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳಿವೆ. ಖಾದಿ ಮತ್ತು ಗ್ರಾವೋದ್ಯೋಗ ನಿಗಮ ಖಾದಿ ಮತ್ತು ಗ್ರಾಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು 1.4 ಲಕ್ಷ ಕುಶಲಕರ್ಮಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಪಾರಂಪರಿಕ ಕುಶಲ ಕಲೆಗಳನ್ನು ಪುನಶ್ವೇತನಗೊಳಿಸಲು 1991 ಅಕ್ಟೋಬರ್ 2ರಂದು ಸರ್.ಎಂ. ವಿಶ್ವೇಶ್ವರಯ್ಯನವರ ಹೆಸರಿನಲ್ಲಿ 'ವಿಶ್ವ' ಯೋಜನೆ ಪ್ರಾರಂಭಿಸಲಾಯಿತು. ಕಚ್ಚಾವಸ್ತುಗಳ ಅಭಾವ ನೀಗುವುದು, ಸೂಕ್ತ ಮಾರುಕಟ್ಟೆ ಒದಗಿಸುವುದು, ಯುವಕರಿಗೆ ಕರಕುಶಲ ಉದ್ಯಮದಲ್ಲಿ ತರಬೇತಿ ನೀಡುವುದು ಈ ಯೋಜನೆಯ ಗುರಿ. ಬೃಹತ್ ಉದ್ಯಮಗಳು ಮತ್ತು ತಂತ್ರಜ್ಞಾನದ ಬೆಳೆವಣಿಗೆಯಿಂದಾಗಿ ಈ ಕ್ಷೇತ್ರ ಈಗ ದೊಡ್ಡ ಸ್ವಾಲುಗಳನ್ನು ಎದುರಿಸುತ್ತಿದೆ. ಗೃಹ ಮತ್ತು ಗೃಹಾಲಂಕರಣ : ಕರ್ನಾಟಕದಲ್ಲಿ ಗೃಹಗಳನ್ನು ರಚಿಸುವ ಪದ್ಧತಿ ಆರಂಭವಾದುದು ಸು. 4500 ವರ್ಷಗಳ ಪೂರ್ವದಲ್ಲಿ, ನವಸಿಲಾಯುಗ ಕಾಲದಲ್ಲಿ. ಆ ಹಿಂದಿನ ಕಾಲಘಟ್ಟದಲ್ಲಿ ಬೇಟೆಗಾರ ಜನಾಂಗಗಳು ಮಾತ್ರ ಈ ನಾಡಿನಲ್ಲಿ ಇದ್ದ್ರಾಗಿ, ವಲಸೆಗಾರರಾದ ಅವರು ಮನೆಗಳನ್ನು ಕಟ್ಟಿ ನೆಲೆಸುವುದು ಆವಶ್ಯಕವಾಯಿತು. ಆದರೆ ಆ ಕಾಲದಲ್ಲಿದ್ದ ಮನೆಗಳು ಯಾವ ರೀತಿಯವು ಎಂಬ ಬಗ್ಗೆ ಸಾಕಷ್ಟು ಮಾಹಿತಿಗಳು ದೊರಕುವುದಿಲ್ಲ. ಧಾರವಾಡ ಜಿಲ್ಲೆಯ ಹಳ್ಳೂರು, ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಮತ್ತು ಸಂಗನಕಲ್ಲು, ರಾಯಚೂರು ಜಿಲ್ಲೆಯ ಮಸ್ಕಿ ಮತ್ತು ಪಿಕ್ಲಿಹಾಳು, ಮೈಸೂರು ಜಿಲ್ಲೆಯ ಹೆಮ್ಮಿಗೆ ಮೊದಲಾದೆಡೆಗಳಲ್ಲಿ ನಡೆದಿರುವ ಉತ್ಖನನಗಳಿಂದ ಕೆಲವು ಸೂಚನೆಗಳು ದೊರಕುತ್ತವೆ. ಈ ಎಲ್ಲ ಸ್ಥಳಗಳಲ್ಲೂ ಕಂಬಗಳಿಗಾಗಿ ಮಾಡಿದ ಗುಳಿಗಳು ಕಂಡುಬಂದಿರುವುದರಿಂದ ಆ ಕಾಲದಲ್ಲಿ ಮರದ ಕಂಬಗಳನ್ನು ನೆಟ್ಟು ಎತ್ತಿದ ಗುಡಿಸಲುಗಳ ರಚನೆ ಸಾಮಾನ್ಯವಾಗಿತ್ತು ಎಂದು ಹೇಳಬಹುದು. ಸಂಗನಕಲ್ಲಿನ ಉತ್ಖನನದಲ್ಲಿ ಬಿದಿರಿನ ಪಡಿಯಚ್ಚನ್ನೊಳಗೊಂಡ ಮಣ್ಣಿನ ಭಾಗಗ್ಳು ದೊರೆತಿವೆ. ಸೀಳಿದ ಬೊಂಬಿನ ಜಾಳಿಗೆಗಳನ್ನು ನಾಲ್ಕರಿಂದ ಆರು ಅಡಿಗಳಷ್ಟು ಎತ್ತರದ ಗೋಡೆಗಳ ಮೇಲೆ ನಿಲ್ಲಿಸಿ ಆ ಜಾಳಿಗೆಗಳಿಗೆ ಮಣ್ಣನ್ನು ಮೆತ್ತಲಾಗಿತ್ತು. ಅಲ್ಲಿ ದೊರೆತಿರುವ ಅತಿದೊಡ್ಡ