ಪುಟ:Putina Samagra Prabandhagalu.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨

ಪು.ತಿ.ನ ಸಮಗ್ರ


ಹಾಡಿ, ಅಪ್ಸರೆಯು ಅದೇ ರಾಗದಲ್ಲಿ ಒಂದು ಸಣ್ಣಗೀತಿಕೆಯನ್ನು ಗಾನಮಾಡಲು ಪ್ರಾರಂಭಿಸಿದಳು:


ತರುಣ ಬಾಳ ಮೀಸಲಿಟ್ಟು

ಒಲಿದನಬಲೆಯೊರ್ವಳಂ

ಒಲಿದುದ ತಾನರಿಯನವಂ

ಇರೆ ಬಿಂಕದ ಕಾವಳಂ


ಮರ್ಮಸ್ಪರ್ಶಿಯಾದ ಮಾತುಗಳವು. ಅದೊಂದು ಹಳೆಯ ಕತೆ. ತರುಣನೊಬ್ಬನು ತನಗೆ ತಿಳಿಯದಂತೆ ಬಾಳಿನಾಳದಿಂದ ಒಬ್ಬಳನ್ನು ಪ್ರೀತಿಸುವುದು, ಆ ಮೇಲೆ ಆ ಪ್ರೇಮವನ್ನು ತನ್ನ ನಿರಾಶೆಯಿಂದ ಅಳೆಯಲೆತ್ನಿಸುವುದು.


ಒಲಿದುದ ತಾನರಿಯನವಂ

ಇರೆ ಬಿಂಕದ ಕಾವಳಂ


ಈ ಚರಣವನ್ನು ಪಲ್ಲವಿಯ ಹಾಗೆ ಎತ್ತಿಕೊಂಡು ವಿಚಿತ್ರ ತಾಳಗತಿಗಳಲ್ಲೂ ಮಧುರರಾಗ ಭಾವಗಳಲ್ಲೂ ಅಪ್ಸರೆಯು ಹಾಡಿದಳು. ಈ ಮಾತುಗಳಲ್ಲಿ ನಿರೂಪಿತವಾಗಿರುವ ನಿರಾಶೆಯನ್ನು ಅವಳ ಗಾನವು ಎಷ್ಟು ದೈನ್ಯದಿಂದ ಹೇಳುತ್ತಿತ್ತು.


ಇಂತೊಲಿದುದ ತಾನರಿಯನವಂ

ಇರೆ ಬಿಂಕದ ಕಾವಳಂ


ಇದನ್ನೂ ಹೀಗೆಯೇ ಲಂಬಿಸಿ, ಹಾಡುತ್ತಿದ್ದರೆ ನನ್ನ ಹೃದಯ ವಿದೀರ್ಣವಾಗುತ್ತದೆ ಎಂದುಕೊಂಡೆ. ಆದರೆ ನಿಲ್ಲಿಸೆಂದು ಬೇಡಿಕೊಳ್ಳಲು ಮನಸ್ಸು ಬರಲಿಲ್ಲ. ಮರ್ಮಸ್ಪರ್ಶಿಯಾದರೂ ಕಡುಸವಿಯಾದ ಗಾನವದು!


ಕೊನೆಗೆ ಪಲ್ಲವಿಯನ್ನು ಮುಗಿಸಿ ಎರಡನೆಯ ಚರಣವನ್ನು ಹಾಡುವುದಕ್ಕೆ ಆ ಅಪ್ಸರೆ ತೊಡಗಿದಳು.


ಒಂದು ದಿನದೊಳಾತ ತನ್ನ

ಎದೆಯ ಪಿರಿದು ನೋಡುವಂ

ಏನು ಕಾಂಬನಲ್ಲಿ ? ಅಮಮ!

ಬರಿಯ ಬರಿಯ ಶೂನ್ಯವಂ-


ಕೇಳಿದೆ. ಪ್ರೇರಣೆ ಇಲ್ಲದೆ ನನ್ನೆದೆಯ ಕಡೆ ನನ್ನ ದೃಷ್ಟಿ ಹೊರಳಿತು. ಅಲ್ಲಿ