ಪುಟ:Putina Samagra Prabandhagalu.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩

ಕೊಳದ ತಡಿಯಲ್ಲಿ


ನಾನು ಕಂಡುದೇನು? ಅಬ್ಬ! ಅಗಾಧವಾದ, ಸೀಮಾಶೀತವಾದ ಶೂನ್ಯ! ಈ ಶೂನ್ಯದಲ್ಲಿ ಹುಚ್ಚಾಶೆಗಳೂ, ಅಸಾಧ್ಯ ಸುಖಗಳೂ, ಬಯಲು ಬಯಕೆಗಳೂ ಭ್ರಮಿಸುತ್ತಿದ್ದವು. ನೋಡಲಾರದೆ ಕಣ್ಣು ಮುಚ್ಚಿಕೊಂಡೆ. ತಿರುಗಿ ಕಣ್ಣು ಬಿಡುವ ಹೊತ್ತಿಗೆ ಹಾಡು ಮುಗಿದಿತ್ತು. ಅಪ್ಸರಕನ್ಯೆಯು ಮಾಯವಾಗಿದ್ದಳು. ನಾನು ಸ್ತಬ್ಧನಾಗಿ ಪುಷ್ಕರಿಣಿಯ ತೀರದಲ್ಲೇ ಕುಳಿತುಬಿಟ್ಟೆ-ಪಡುವಣ ಸೋಪಾನದ ನೆರಳು ನಿಡಿದಾಗಿ ನೀರನ್ನು ಸೋಕುವವರೆಗೂ; ಮಾರ್ಮಿಕವಾಗಿ ಆ ಗೀತದ ಹೊಳಲು ನನ್ನ ಸ್ಮೃತಿಯಲ್ಲಿ ನಶಿಸಿ ಹೋಗುವವರೆಗೂ.

_____