ಪುಟ:Sankeerana vachanasamputa 14.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0265 ದ್ವಾಪರ ತಾಮ್ರ, ಕಲಿಯುಗಕೆ ಕಲ್ಲಾಯಿತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ. ೧೬೦ ಗುರು ತೀರ್ಥಪ್ರಸಾದ ಆರುಹಿನಘಟ್ಟಿ ದೊರಕೊಂಬುದೆ ನರಕೀಲಕರಿಗೆ ಸಂಕೀರ್ಣ ವಚನಸಂಪುಟ : ಒಂಬತ್ತು ಬರಿಯ ಮಾತಿನಮಾಲೆ ಕೊಳುಕೊಡೆಯಲ್ಲವು. ಕರವೆತ್ತಿ ಕೊಟ್ಟಾತ ಗುರುವಲ್ಲ; ಕೊಂಡಾತ ಶಿಷ್ಯನಲ್ಲ ನಿರುತ ನಿಜಗೊಹೇಶ್ವರನಲ್ಲಿ ಬೆರದು ಕೊಂಬುದು ತೀರ್ಥ; ಅರಿತು ಕೊಂಬುದು ಪ್ರಸಾದ. ಮರೆಯಿದು ಮಾಟ, ಮರ್ತ್ಯದ ಕೂಟ, ಮತಿಗೆ ಬೇಟ ಕಾಣಾ ಎಲೆ ನಮ್ಮ ಕೂಡಲಚನ್ನಸಂಗಮದೇವಯ್ಯ, ೧೬೧ ಹೇಡಿಯ ಕೈಯಲ್ಲಿ ಚಂದ್ರಾಯುಧವಿದ್ದರೇನಯ್ಯಾ ? ಪಾಡಿಗೆ ಪಂಥ ಪರಾಕ್ರಮಿ ಪರದಳವಿಭಾತನಾಪನೆ ? ಕೋಡಗನ ಕೈಯಲ್ಲಿ ರತ್ನವಿದ್ದರೆ ರಾಜ್ಯ ರಾಷ್ಟ್ರದೊಳು ಬೆಲೆಗಾಬುದೆ ? ಮೋಡಕ್ಕೆ ಬಾಯಿದೆರದರೇನು ಕಾಲಕಾಲಕ್ಕೆ ಮಳೆಬಹುದೆ ? ಹೂಡುವರೆ ಕುದುರೆ ಕೋಣದ ರಥ ಶೃಂಗಾರಕ್ಕೆ ? ಕಾಡಿನೊಳು ಕರದ ಮಳೆ, ಓಡಿನೊಳು ಎರದ ನೀರು ಮೂಡುವೀ ಕ್ರಿಯೆಯ ಪೂಜೆಯು ಬೇಡನ ಬೇಟೆಯ ನಾಯಿ ಮೊಲನಕ೦ಡು ಆಚರಿಸಿದಂತಾಯಿತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ. ೧೬೨ ಬಲ್ಲೆ ಬಲ್ಲಿದರೆಂಬ ಅಹಂಕಾರಿಗೆ ಸಲ್ಲದು ಭಕ್ತಿ, ಹುಲ್ಲ ಬೆಂಕಿಯೊಳು ಕೆಂಡ ನಿಲ್ಲುವುದೆ ಹುದುಗಿ ಮುಚ್ಚಿದರೆ ಹಲ್ಲಣವ ಕತ್ತೆಗೆ ಹಾಕಿದರೆ ಉತ್ತಮ ತೇಜಿಯಾದಪುದೇ ? ಎಲ್ಲಿಯ ಭಕ್ತಿ? ಎಲ್ಲಿ ಮುಕ್ತಿ? ಸಲ್ಲದು ನಿಮ್ಮಾಣೆ ನಿಮ್ಮ ಪ್ರಮಥರಾಣೆ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ. || ೨೮ || 1| 25 || 11 2011