ಪುಟ:Shabdamanidarpana.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

96 1 , 1 Ch, ಸಂಧಿಪ್ರಕರಣಂ, ಪದಚ್ಛೇದ - ವಿದಿತಸ್ವರದಿ ಅನಾದೇಶದ ಸಹಜವ್ಯಂಜನಂಗಳಿಂ ವರದ ಪವರ್ಗದ ನೆಲೆಗೆ ಅಕ್ಕುಂ ವತ್ವಂ ಪದವಿಧಿಯೊಳಕೆ ಬಹುಳವೃತ್ತಿಯಿಂ ವಾಕ್ಯದೊಳು, ಅನ್ವಯಂ. ಪದವಿಧಿಯೊಳ್ ಬಹುಳವೃತ್ತಿಯಿಂ, ವಾಕ್ಯದೊಳಂ, ಎದಿತಸ್ವರದಿಂ ಅನಾದೇಶದ ಸಹಜವ್ಯಂಜನಂಗಳಿಂ ಪರದೆ ಸವರ್ಗದ ನೆಲೆಗೆ ವತ್ವಂ ಅಕ್ಕುಂ. ಟೇಕು. ಪದವಿಧಿಯೊಳ್ = ಸಮಾಸದ ವಿಧಿಯಲ್ಲಿ ; ಬಹುಳ ವೃತ್ತಿಯಿ: = ಬಹುಳದ ವರ್ತನೆಯಿಂದೆ; ವಾಕ್ಯದೊಳಂ = ವಾಕ್ಯದಲ್ಲಿ ಯು; ವಿತಸ್ವರದಿಂ = ಪ್ರಸಿದ್ಧವಾದ ಸ್ವರಾಕ್ಷ ರಂಗಳಿ೦ದೆ; ಅನಾದೇಶದ = ಆದೇಶವಲ್ಲದ; ಸಹಜವ್ಯಂಜನಂಗಳಿಂ = ಸಹಜವಾದ ವ್ಯಂಜನಾಕ್ಷ ರಂಗಳಿಂದ; ಪರದ = ಮುಂದಣ; ಪವರ್ಗದ = 4ವ ಬ ಮ” ಎಂಬ ಪವರ್ಗದ; ನೆಲೆಗೆ = ಸ್ಥಾನಕ್ಕೆ; ವತ್ವಂ = ವಕಾರ೦; ಅಕ್ಕು = ಅಪ್ಪುದು. ವೃತ್ತಿ, ಸರಂಗಳಿಂದನಾದೇಶದ ಸಹಜವಾದ ವ್ಯಂಜನಂಗಳಿಂ ಪರ ದೊಳಿರ್ದ ಪವರ್ಗಕ್ಕೆ ಸಮಾಸವಿಷಯದೊಳ್ ವತ್ತಮಕ್ಕುಂ; ಬಹುಳವೆಂಬು ದಜಿಂ ಕೆಲವಳಿಲ್ಲ; ವಾಕ್ಯದೊಳಂ ನತ್ತ ಮುಂಟು. ಪ್ರಯೋಗಂ-ಸ್ವರಂಗಳೆ - ಪಕಾರಕ್ಕೆ “ಎಳವೆ ದಾಡೆ ಕೆಂದಳಿರೆ ನಾಲಗೆ ಮಾಮರದಗೊಂಬಿನೊಳ್ | ಮಿಳಿರ್ವೆಳವಳ್ಳಿ ಬಾಲಮಲರ್ದೊಂಗಲೆ ಕೇಸರಮೆಂಬಿನಂ ಮನಂ || ಗೊಳೆ ಮಧುಮಾಸಕೇಸರಿ ಯೋಗಿಗಳೆಂಬ ಮೃಗಂಗಳಂ ಭಯಂಗೊಳಿಸಿದುದುದ್ದಕೀರಮದಕೋಕಿಲಗರ್ಜಿತತರ್ಜಿತಂಗಳಿಂ119 || ಬೆಳೆವೊಲನೆಲ್ ಕಿಕ್ಕಿದ ಪರ್ಬದ ಪರ್ಬಾಳೆ...” || 120 || ಬಕಾರಕ್ಕೆ “ನಡುವಣ ಕರ್ಪುo ಕಡೆಯಣ | ಕಡುವೆಳ್ಳುಂ ತುದಿಯ ಕೂರ್ಪುಮೆಸೆದಿರೆ ಜನರಂ || ಬಿಡದಿಸಲೆ ತೆಗೆದ ಮದನನ | ನಿಡಿಯಲರ್ಗಣೆಗಳನೆ ಪೋಲುವಾಕೆಯ ಕಣ್ಣಳ್ " || 121 || ಮಕಾರಕ್ಕೆ “ಮರವಣೆಗಂ ಬೀಣೆಗಮಂ- { ತರಮಾವುದು ದೋಷರಹಿತಮೃದುಲಲಿತಪದ ||