ಪುಟ:Siitaa-Raama.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

63

ಬಲನಾದ ಹನುಮಂತನು ಬಹಳ ಕೌಶಲದಿಂದ ೪೦ಕಗೆ ಹೊರಟನು : ಬಲುಬೇಗನೆ ಅಲ್ಲಿಗೆ ತಲಪಿದನು.

ಲಂಕೆಯು ಅದೆಂತಹ ಸುಂದರಸ್ಥಾನವು ! ಚಿನ್ನ ರತ್ನ ಸ್ಪಟಿಕಗಳಿಗೆ ಮಿತಿಯಿಲ್ಲ. ಗುಡಿಸಲೊಣಂದೂ ಇಲ್ಲ, ಎಲ್ಲವೂ ಮಂದಿರಗಳೇ, ಅದೊಂದು ಅರಮನೆಗಳ ಊರೆನ್ನಬಹುದು. ಎಷ್ಟು ಉದ್ಯಾನಗಳು, ವಿಹಾರಸ್ಥಾನಗಳು, ಹೂದೋಟಗಳು ! ಎತ್ತ ನೋಡಿದರೂ ರಮಣೀಯ. ಆದರೆ ಅದನ್ನು ನೋಡಿಯೆ ಕುಳಿತುಕೊಳ್ಳುವುದೆ ! ಸೀತೆಯೆಲ್ಲಿ? ಎಲ್ಲಿ, ಅರಮನೆಯಲ್ಲಿ ಇರಬಹುದೆ? ಹನುಮಂತನು ಅರಮನೆಗೆ ತೆರಳಿದನು. ರಾವಣನನ್ನು ಅವನು ಕಂಡುದು ಇದೇ ಮೊದಲು. ಅವನನ್ನು ನೋಡಿ ಹನುಮಂತನು ಮಗನಾದನು. ಅವನು ನಿದ್ದೆ ಹೋಗಿರುವನು, ಆಗಲೂ ಅವನ ತಲೆಗೆ ಮುಕುಟವಿದೆ! ರಾಜವೇಷವನ್ನು ಧರಿಸಿಕೊಂಡೇ ಇರುವನು, ಆ ಮನೆ ಯಲ್ಲಿ ಕಸ್ತೂರಿಯ ಸುವಾಸನೆ ತುಂಬಿದೆ. ಹನುಮಂತನು ಎತ್ತೆತ್ತಲೂ ಹುಡುಕಿದನು. ಅಲ್ಲಿ ಸೀತಾದೇವಿಯಂತಹ ಯಾವ ಸ್ತ್ರೀಯನ್ನೂ ಕಾಣಲಿಲ್ಲ. ಸುತ್ತಲಿನ ಎಲ್ಲ ಮಂದಿರಗಳನ್ನೂ ನುಗ್ಗಿ ನೋಡಿದನು. ಇಲ್ಲ, ಸೀತೆಯಿಲ್ಲ.

ಆದರೆ ಹನುಮಂತನು ಸುಲಭವಾಗಿ ಸುಮ್ಮನಾಗುವನೆ? ವನ. ಉಪವನಗಳನ್ನು ನುಗ್ಗಿ ದನು. ಅಲ್ಲೆಲ್ಲಿಯೂ ಸೀತೆಯಿಲ್ಲ. ಕೊನೆಗೆ ಅಶೋಕವನಕ್ಕೆ ತೆರಳಿದನು. ಅದರಷ್ಟು ಸುಂದರವಾದ ವನವು ಮೂರು ಲೋಕಗಳಲ್ಲಿಲ್ಲ. ಪ್ರತಿಯೊಂದು ಗಿಡ, ಪುತಿಯೊಂದು ಪೊದರನ್ನೂ ಹುಡುಕಿದನು. ದೂರದಲ್ಲಿ ಕೆಲವು ದಾಸಿಯರು ಅತ್ತಿತ್ತ ತಿರುಗುತ್ತಿರು ವುದನ್ನು ಕಂಡನು, ಅವರ ಮೂಗು ಬಾಯಿಗಳು ಚಪ್ಪಟೆ! ಕೈ ಕಾಲುಗಳು ಉದ್ದುದ್ದ ! ದಪ್ಪವಾದ ಮೈ, ಪ್ರತಿಯೊಬ್ಬಳ ಕೈಯಲ್ಲಿ ಕಬ್ಬಿಣದೊಂದು ದೊಣ್ಣೆ. ಯಾರನ್ನಾದರೂ ಹೊಡೆಯಲು ಅಪ್ಪಣೆ ಪಡೆದಿರುವಂತೆ ತೋರು ತ್ತಿದೆ. ಸುಂದರಿಯೊಬ್ಬಳು ಗಲ್ಲಕ್ಕೆ ಕೈಯೊತ್ತಿ ಕುಳಿತಿರುವಳು. ಕೇವಲ ವಾಗಿ ಅಳುವಳು. ಅವಳ ಮುಖ ಬಾಡಿರುವುದು, ಅವಳ ಮೈ ಬಿಳು ಸೇರಿದೆ. ತಲೆಯ ಕೂದಲರಾಶಿಯನ್ನು ಬಾಚಿಕೊಂಡುದಿಲ್ಲ; ಅದಕ್ಕೆ ಎಣ್ಣೆ ಸವರಿದುದೂ ಇಲ್ಲ. ಬಟ್ಟೆಗಳೆಲ್ಲ ಚಿಂದಿಯಾಗಿವೆ. ದುಃಖಿಯಾದ ಅವಳು ನಿಟ್ಟುಸಿರಿಡುವಳು