ಪುಟ:Siitaa-Raama.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೨

ವೆನೆಂದಳು, ಆಗ ವಿಭೀಷಣ ಪತ್ನಿಯಾದ ಸರಮೆಯು 'ರಾಮಚಂದ್ರನು ಇಲ್ಲೇ ಯುದ್ದಕ್ಕಾಗಿ ಬಂದಿರುವನು; ಇನ್ನು ಮೂರು ನಾಲ್ಕು ದಿನಗಳೊಳಗೆ ನಿನ್ನನ್ನು ಸೆರೆಯಿಂದ ಬಿಡಿಸುವನು' ಎಂದು ಅವಳಿಗೆ ಧೈರ್ಯಕೊಟ್ಟು, ಅವಳ ಕಣ್ಣೀರನೊರಸಿದಳು, ಇತ್ತ, ರಾವಣನು ಸಭೆಯಲ್ಲಿರುವನು, ದೊಡ್ಡ ಸಭೆ ! ಸಭಿಕರೂ ಗರ್ವಿಷ್ಟರು ! ಒಂದು ಮಾತಿಗೆ ಒಂದು ಸಲ ರಾಮಲಕ್ಷ್ಮಣರನ್ನು ಕೊಂದು ವಾನರರನ್ನು ಜಯಿಸುವವರು, ಅವರ ಉದ್ದು ರುಟುತನಕ್ಕೆ ಮಿತಿಯೇ ಇಲ್ಲ, ಗದ್ದೆವೆಂದೆಣಿಸಿಯೆ ನಗುವರು. ರಾವಣನು ಇಂತಹರೆಲ್ಲರಿಗೆ ಎಷ್ಟು ಬಹುಮಾನಗಳನ್ನು ಕೊಟ್ಟನು ! ಹೇಗೆ ಸಂಭಾವಿಸಿದನು ! ಆಗಲೆ ಅಲ್ಲಿಗೆ ಅಂಗದನು ಬಂದು ಕಾಣಿಸಿಕೊಂಡನು. ಅವನನ್ನು ಕಂಡು ಎಲ್ಲರಿಗೂ ದಿಗೂ ಮೆಯುಂಟಾಯಿತು, ಅಂಗದನು ರಾವಣನ ಸಿಂಹಾಸನವನ್ನೇರಿಯೇ ಕುಳಿತನು. ಅಷ್ಟರಲ್ಲಿ, ತಾನೆ ಯುದ್ಧಕ್ಕೆ ಮೊದಲಾಗಿ ನಡೆವೆನೆಂದು ರಾವಣಪುತ್ರನಾದ ಇಂದ್ರಜಿತುವು ಹೇಳುತಿದ್ದನಲ್ಲವೆ? ಅಂಗದನು ಅವ ನನ್ನು ಜರೆದನು. ರಾವಣನು ಅಂಗದನನ್ನು ದೂತನೆಂದು ಬಗೆಯದೆ ಹೊಡೆದನು. ಅವನು ರಾವಣನ ಮುಕುಟವನ್ನೆ ಕಿತ್ತುಕೊಂಡು ನಡೆದನು. ನಡೆದವನು ನಡೆದೇ ಹೋದನು. ರಾವಣನು ಇನ್ನಾದರೂ ಯುದ್ಧಕ್ಕೆ ಬಾರದಿರುವನೆ? ಬಳಿಕ ರಾಕ್ಷಸ ಸೇನೆಗಳು ಹೂಂಕಾರದಿಂದ ಹೊರಟು ಇಂದ್ರಜಿತು ವಿನ ಅಪ್ಪಣೆಯಂತೆ ಯುದ್ಧಕ್ಕೆ ಬಂದುವು. ಯುದ್ದದಲ್ಲಿ ಇದಿರಾದ ಸೇನಾ ಬಲವೆಷ್ಟು ?

ಭಗಣದ ಲೆಕ್ಕಮಂ, ಮಳೆಯನೀರ್ವನಿಯಂ, ಪರಮಾಣು

ಸಂಖ್ಯೆಯಂ,

ಗಗನದ ಸೀಮೆಯಂ, ಜಳಧಿವೀಚಿಗಳಂ, ದೆಸೆಯಂತನಂ, ಪನ

ಗಿಫನೆರಳ್ಳಲಂಗಳ ಮದಗ್ನಿ ಪವಾಹವರಥಕಿಂಕರಾ

ಳಿಗಳ ಪವಣ್ಣ ೪೦ ಪವಣಿಸಲ್ಬಗದಪ್ಪನೆ ಗಾಂಪನಾಗನೇ?