ಪುಟ:Siitaa-Raama.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

73

ಇಂದ್ರಜಿತುವು ಇದಿರಾಗಿ ನಿಂದು ಯುದ್ಧ ಮಾಡದೆ ಮರೆಯಲ್ಲಿಂದಲೆ ನಾಗ ಪಾಶಗಳಿಂದ ರಾಮಲಕ್ಷ್ಮಣರನ್ನು ಬಿಗಿದನು. ಬಾಣಗಳ ಮಳೆಯನ್ನೆ ಸುರಿಸಿ ವಾನರರನ್ನು ಹಿಂಸೆಮಾಡಿದನು. ರಾಮಲಕ್ಷ್ಮಣರಿಬ್ಬರೂ ಮೂರ್ಛ" ಹೋದರು.

ಅತ್ತ ಗರುಡನು ಬಂದು ನಾಗಪಾಶದಿಂದ ಮೂರ್ಛಿತರಾದ ರಾಮ ಲಕ್ಷ್ಮಣರನ್ನು ಎಬ್ಬಿಸಲು, ವಾನರರು ಕೋಲಾಹಲವನ್ನು ಮಾಡಿದರು, ಪುನಃ ಅವರು ಧನುರ್ಬಾಣಗಳನ್ನು ಹಿಡಿದುಕೊಂಡು ಯುದ್ಧವನ್ನು ಪ್ರಾರಂಭಿಸಿದರು. ಎಷ್ಟೋ ಮಂದಿ ಮಹಾಬಲರಾದ ರಾಕ್ಷಸರು ಮಡಿದರು. ರಾವಣನ ಸೇನಾಪತಿಗಳಾದ ಧೂಮ್ರಾಕ್ಷ, ವಜ್ರದಂಷ್ಟ, ಅಕಂಪನ, ಪ್ರಹಸ್ತ ಮೊದಲಾದವರು ಯುದ್ಧಕ್ಕೆ ಬಂದು ಒಬ್ಬೊಬ್ಬರಾಗಿ ಹನುಮಂತ, ಅಂಗದ, ನೀಲರಿಂದ ಮೃತರಾದರು. ಸೇನಾಪತಿಗಳೇ ಮಡಿದ ಬಳಿಕ, ಇನ್ನು ರಾವಣನಲ್ಲದೆ ಇನ್ನಾರು ತಾನೆ ಯುದ್ಧ ನಡೆಸುವರು? ಅವನ ಬಾಣಗಳನ್ನು ತಡೆಯಲಾರದೆ ವಾನರರು ದಿಕ್ಕುಪಾಲಾದರು. ಆಗ ಲಕ್ಷ್ಮಣನು ರಾವಣನಿಗೆ ಇದಿರಾಗಲು, ರಾವಣನು ಅವನನ್ನು ಕೆಡೆಬಡೆದನಾದರೂ, ಹನುಮಂತನ ಹೊಡೆತಕ್ಕೆ ಬಿದ್ದು, ಅವನನ್ನು ತನ್ನ ರಥದಲ್ಲಿ ಎತ್ತಿಕೊಂಡು ನಡೆಯಲಾರದಾದನು. ಆಗಲೆ ರಾಮನು ಬಾಣಗಳನ್ನು ಬಿಡಲು, ಅವುಗಳ ಬೇನೆ ತಡೆಯಲಾರದೆ ರಾವಣನು ರಥವನ್ನು ಮರಳಿಸಿದನು. ಅವನು ಯುದ್ಧರಂಗಕ್ಕೆ ಬೆಂಗೊಟ್ಟ ಬಳಿಕವೂ ರಾಮನು ಬಾಣಗಳನ್ನು ತಡೆಯಲಿಲ್ಲ, ಅಷ್ಟರೊಳಗೆ ಲಕ್ಷ್ಮಣನು ಚೇತನಹೊಂದಿ ಯುದ್ದಕ್ಕೆ ನಿಂತನು. ವಾನರರ ಕಿಲಕಿಲ ಧ್ವನಿಯಿಂದ ರಾವಣನು ಅಪಹಾಸ್ಯವನ್ನು ಸಹಿಸಲಾರದಾದನು, ಅವನನ್ನು ಅಪ್ಪ ಹಾಸ್ಯವೂ ಬಾಣಗಳ ಬೇನೆಯ ಹೆಚ್ಚಾಗಿ ನೋಯಿಸಿದುವು. ಇನ್ನು ಅವನಿಂದಾಗದು, ಅವನು ತಡಮಾಡದೆ ಸೋದರನಾದ ಕುಂಭಕರ್ಣನನ್ನು ಎಬ್ಬಿಸಲು ಅಪ್ಪಣೆಯಿತ್ತನು,

ಈ ಮಹಾಶಯನು ನಿದ್ದೆ ಹೋದನೆಂದರೆ, ಆರು ತಿಂಗಳು ನಿದ್ದೆಯೆ ? ನಿದ್ದೆ ಹೋಗುವುದಕ್ಕಾಗಿಯೆ ಇವನು ಬದುಕಿರುವನು ! ಇವನ ಹದಿನಾಲ್ಕ ನೆಯ ನಿದ್ದೆ ಮುಗಿದಿದೆ, ಅಷ್ಟೆ. ಅವನನ್ನು ಹೇಗೂ ಎಬ್ಬಿಸಿದರು. ಏಳು