ಪುಟ:Siitaa-Raama.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

82

ಬಲಿಯ ಹೊತ್ತು ಬಂದಿತು, ರಾಮಲಕ್ಷ್ಮಣರನ್ನು ದೇವೀಮಂದಿರಕ್ಕೆ ಒಯ್ದು, ದೇವಿಗೆ ನಮಸ್ಕಾರವನ್ನು ಹಾಕಲು ಮಹಿರಾವಣನ ಆಪ್ಪಣೆ ಯಾಯಿತು. ನಾವು ಅರಸು ಮಕ್ಕಳು, ನಮಗೆ ನಮಸ್ಕಾರ ಹಾಕಲು ತಿಳಿಯದು. ನೀನೆ ಒಮ್ಮೆ ನಮಸ್ಕಾರ ಮಾಡಿ ತೋರಿಸೆಂದು ಅವರು ಅವನಿಗೆ ಎ೦ದರು, ಮಹಿರಾವಣನು ಸಾಷ್ಟಾಂಗ ನಮಸ್ಕಾರವನ್ನು ಮಾಡಿ ತೋರಿಸುವೆನೆಂದು ಉದ್ದ೦ಡವಾಗಿ ಬೀಳಲು, ಆಗ ಹನುಮಂತನು ಪುತಿಮೆಯ ಹಿಂದಣಿಂದ, ವಿಗ್ರಹದ ಕೈಯ ಖಡ್ಗವನ್ನು ಹಿಡಿದು ಬಂದು, ಅವನ ತಲೆಯನ್ನ ಛೇದಿಸಿದನು. ಇದನ್ನು ನೋಡಿಯೇ ರಾಕ್ಷಸರು ಯಾವ ಕಡೆಗೆ ಹೇಗೆ ಪಲಾಯನ ಮಾಡಿದರೆ, ಅವರ ಪತ್ತೆಯೇ ಸಿಗದಾಯಿತು, ಮಹಿರಾವಣನ ಹೆಂಡತಿಯು ಇದಕ್ಕಾಗಿ ಧನುರ್ಬಾಣಗಳನ್ನು ಹಿಡಿದು ರಾಮಲಕ್ಷ್ಮಣರೊಡನೆ ಯುದ್ಧಕ್ಕೆ ನಿಂತಳು, ಹನುಮಂತನು ಅವಳನ್ನೂ ಕೊಂದನು; ಅವಳ ಸೈನ್ಯವನ್ನೂ ಮುರಿದನು. ಅನಂತರ ಹನುಮಂತನು ರಾಮಲಕ್ಷ್ಮಣರನ್ನು ತನ್ನ ಹೆಗಲ ಮೇಲೇರಿಸಿಕೊಂಡು, ಲಂಕೆಗೆ ಮರಳಿ ಬಂದನು. ವಾನರರು ಆಗ ಜಯಧ್ವನಿ ಮಾಡಿದರು.

ರಾವಣನು ಈ ಧ್ವನಿಯಿಂದ ವಿಚಲಿತನಾದನು, ಅಂಕೆಯಲ್ಲಿ ಇನ್ನು ಅವನೊಬ್ಬನೆ ಅಲ್ಲದೆ ವೀರರೆಲ್ಲಿ? ಅವನು ತನ್ನ ಚಿನ್ನದ ರಥಕ್ಕೆ ಎಂಟು ಕುದುರೆಗಳನ್ನು ಹೂಡಿ, ಅದನ್ನು ನಾನಾ ಪತಾಕೆಗಳಿಂದ ರಂಜಿಸಿ, ಲಂಕೆಯಲ್ಲುಳಿದ ಯಾವತ್ತು ಸೇನೆಗಳೊಡನೆ, ಭಯಂಕರವಾಗಿ ಕೊಲಾ ಹಲವಾಡುತ್ತ, ಪಶ್ಚಿಮದ್ದಾರಲ್ಲಿದ್ದ ರಾಮಲಕ್ಷ್ಮಣರೊಡನೆ ಯುದ್ದ ಮಾಡಲು ಮುಂದೆ ಬಂದನು.

ಅವನ ಯುದ್ಧವು ಸಾಮಾನ್ಯವಾದುದೇ ? ಮೂರು ಲೋಕಗಳೂ ನಡುಗಿದುವು. ಲಕ್ಷಾವಧಿಯಾಗಿ ಬಾಣಗಳು ಹಾರಾಡಿದುವು. ಅದೇ ಮಹಾಮಾರಿಯಂತಲ್ಲವೆ ? ಬಾಣದ ಕೊನೆಯಲ್ಲಿ ಮೃತ್ಯುವಿದೆ; ಲಕ್ಷ ಗಟ್ಟಲೆಯಾಗಿ ಯೋಧರು ಮಡಿದರು, ಬಹಳ ಹೊತ್ತು ಯುದ್ಧ ನಡೆದರೂ ಜಯವು ಯಾರಿಗೆಂದು ನಿಶ್ಚಯವಾಗಲಿಲ್ಲ,

ಆಗಲೆ ರಾಮನು ದುರ್ಗಾ ಪೂಜೆಯನ್ನು ಪ್ರಾರಂಭಿಸಿದನು, [ಅದೇ ಶರತ್ಕಾಲವಾದುದರಿಂದ, ಇಂದಿನ ವರೆಗೂ ಶರದೃತುವಿನಲ್ಲಿ ದುರ್ಗಾ