ಪುಟ:Siitaa-Raama.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

86

ರಥಗಳು ಓಡಿದುವು. ತಮ್ಮ ಆಗಮನವನ್ನು ಭರತನಿಗೆ ತಿಳುಹಲು, ಹನು ಮಂತನನ್ನು ಮುಂದಕ್ಕೆ ಕಳುಹಿಕೊಡಲಾಯಿತು. ಹನುಮಂತನು ಅಯೋಧ್ಯೆಗೆ ಹೋದನು, ಭರತನು ಅಲ್ಲಿಲ್ಲ, ಅವನು ನಂದಿಗ್ರಾಮದಲ್ಲಿ; ಅವನು ಸಭೆಮಾಡಿ ಕುಳ್ಳಿರುವನು. ಹನು ಮಂತನು ಆ ಸಭೆಗೇ ಬಂದನು, ಭರತನನ್ನು ಯಾರು ರಾಜನನ್ನ ಬಹುದು ? ಅವನು ಸನ್ಯಾಸಿ! ವಸಿಷ್ಠನ ನಾರದನೂ ಅವನಿಗೆ ಮಂತ್ರಿ ಗಳು, ಅವನೇ ಮಂತ್ರಿಯ ಆಸನದಲ್ಲಿ ಕುಳ್ಳಿರುವನು. ಸಿಂಹಾಸನದಲ್ಲಿ ಯಾರೂ ಇಲ್ಲ, ಕುಶದ ಆಸನ, ಬಳೆಯಲ್ಲಿ ರಾಜದಂಡ, ಮೇಲೆ ಬೆಳೆದೆ. ರಾಮಚಂದ್ರನು ಬರುವುದನ್ನು ಹನುಮಂತನು ತಿಳುಹಿದನು,

ರಾಮ ಚಂದನ್ನು ಸಕಲಜಗದಭಿ.

ರಾಮ ಬಂದನು, ರಿಪುಗಣೋತ್ಸವ

ಭೀಮ ಬಂದನು, ಜಾನಕಿಯ ನಯನೋತ್ಸಲಾನಂದ ||

ಸೋಮ ಬ೦ದನು, ಬಂಧುಜನ ಸು.

ಪ್ರೇಮಿ ಬಂದನು, ಶರಣಜನ ವಿ

ಶ್ರನು ಬಂದನು, ಭರತ! ಚಿತ್ರ್ಯಸಂದನಾ ಹನುಮ.

ಸಭಿಕರ ಆನಂದಕ್ಕೆ ಪಾರವೇ ಇಲ್ಲ, ಭರತನು ಸಂತೋಷಪೂಾರಿ ಹನು ಮಂತನನ್ನು ಅಪ್ಪಿಕೊಂಡನು, ಧಾರಾಳವಾಗಿ ಬಹುಮಾನಗಳನ್ನು ಕೊಟ್ಟನು. ಹನುಮಂತನಿಗೆ ಒಂದೂ ಬೇಡ, ಹನುಮಂತನು ವಾನರನು, ಅನಾರ್ಯನು ಎಂದು ಭರತನು ನೋಡುವನೇ ?

ರಾಜ್ಯದಲ್ಲೆಲ್ಲ ಇದೇ ಮಹಾನಂದವು! ಸುಖದ ತುಫಾನು ಎದ್ದಿದೆ! ಪ್ರತಿಯೊಬ್ಬರು ರಾಮಚಂದ್ರನನ್ನು ಕಾಣಲು ಹೊರಟರು. ಅವರಿಗೆ ತವಕ ಬಹಳ ರಾಮನೂ ಅತ್ತ ಬರುತಲಿದ್ದನು. ಅವನ ಸಂಗಡವೂ ಸೈನ್ಯಕ್ಕೆ ಮಿತಿಯಿಲ್ಲ. ವಿಭೀಷಣನ ರಾಕ್ಷಸಸೇನೆ, ಸುಗ್ರೀವನ ವಾನರಸೇನೆ! ಎರಡೂ ದಳಗಳು ! ಸೀತಾರಾಮಜನ್ನು, ಜಯಸೀತಾರಾಮು' ಎಂದು ಘೋಷಿಸುತ್ತಿವೆ! ಭರತನು ಭಾವನ ರಥದ ಬಳಿ ಸೇರಿದನು, ಅಹ! ಭರತನ! ಇಂದಿನ ಭರತನು ಅಂದಿನ ಭರತನೇ ಅಲ್ಲ. ಅವನು ಎಲುವು,