ವಿಷಯಕ್ಕೆ ಹೋಗು

ಪುಟ:Valmeeki Ramayana Shaapa Mattu Vara.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬

ವಾಲ್ಮೀಕಿ ರಾಮಯಣ : ಶಾಪ ಮತ್ತು ವರಗಳು


``ಎಲೈ ನಿಷಾನನೇ! ಕಾಮಪರವಶವಾಗಿದ್ದ ಕ್ರೌಂಚ-ಜೊತೆಯಲ್ಲಿಯ ಒಂದನ್ನು ನೀನು ಕೊಂದಿರುವೆ; ಕಾರಣ ನೀನು ಬಹಳ ವರ್ಷಗಳವರೆಗೆ ಬದುಕಬಾರದು.

ಈ ಶ್ಲೋಕವನ್ನು ಉಚ್ಚರಿಸಿದೊಡನೆಯೇ ವಾಲ್ಮೀಕಿಯು ಚಿಂತಾಗ್ರಸ್ತನಾದನು. ತಪಸ್ಸನ್ನು ನಾಶಗೊಳಿಸುವ ಶಾಪವಾಣಿಯು ತನ್ನ ಮುಖದಿಂದ ಹೊರಬಂದದಕ್ಕೆ ನೊಂದುಕೊಂಡನು. ``ಚರಣಬದ್ಧವಾದ, ಸಮ ಅಕ್ಷರಗಳುಳ್ಳ ಛಂದೋಬದ್ಧವಾದ, ಅಕ್ಷರರಚನಾದೋಷರಹಿತವಾದ ವೀಣೆಯ ಶ್ರುತಿಯೊಡನೆ ಹಾಡಲು ಯೋಗ್ಯವಾದ ಈ ಶ್ಲೋಕವು ನಾನು ಶೋಕಾಕುಲನಿದ್ದಾಗ ನನ್ನ ಮುಖದಿಂದ ತಾನಾಗಿಯೇ ಬಂದಿದೆ; ಅದು ಅಕೀರ್ತಿಕಾರಕವಾಗದೇ ಕೀರ್ತಿರೂಪವಾಗಲಿ ಎಂದು ತನ್ನ ಶಿಷ್ಯನಿಗೆ ಹೇಳಿದನು. ಶಿಷ್ಯನು ಸಮ್ಮತಿಸಿ ಅಹುದೆಂದು ತಲೆಬಾಗಿಸಿದಾಗ ಋಷಿಯು ಸಂತೋಷಗೊಂಡರು; ನಂತರವೂ ಈ ಶ್ಲೋಕವು ಆತನ ಮನಸ್ಸಿನಲ್ಲಿ ತಾಳ ಹಾಕುತ್ತಲೇ ಇತ್ತು. ಈ ರೀತಿ ಅಸ್ವಸ್ಥ ಮನಃಸ್ಥಿತಿಯಲ್ಲಿದ್ದಾಗ ವಾಲ್ಮೀಕಿಗೆ ಬ್ರಹ್ಮದೇವನು ಪ್ರತ್ಯಕ್ಷನಾಗಿ ಇಂತೆಂದನು: ``ನೀನು ರಚಿಸಿದ ಈ ಶ್ಲೋಕವು ಯಶೋರೂಪ ವಾಗುವದು; ಅದರಲ್ಲಿ ಸಂದೇಹವಿಲ್ಲ. ಎಲೈ ಬ್ರಹ್ಮಜ್ಞನೇ, ನನ್ನ ಇಷ್ಟಾನುಸಾರ ವಾಗಿಯೇ ನಿನ್ನಲ್ಲಿ ಸರಸ್ವತಿಯು ಒಲಿದಿದ್ದಾಳೆ; ಆದ್ದರಿಂದ ಋಷಿವರ್ಯನೇ, ನೀನು ರಾಮನ ಸಂಪೂರ್ಣ ಚರಿತ್ರೆಯನ್ನು ಬಣ್ಣಿಸು! ಜಗತ್ತಿನಲ್ಲೆಲ್ಲ ಮನೋಹರನು, ________________________

(೩) ಹೇ ನಿಷಾದನೆ!ಕೌಂಚ-ಜೊತೆಯಲ್ಲಿಯ ಕಾಮಮೋಹಿತವಾದ ಒಂದನ್ನು ನೀನು ಕೋಂದೆ; ಅದಕ್ಕಾಗಿ ಇನ್ನು ಮುಂದೆ ಎಂದೆಂದಿಗೂ ನಿನಗೆ ಪ್ರತಿಷ್ಠೆಯು ದೊರೆಯಲಾರದು. _ವಾಲ್ಮೀಕಿ ರಾಮಯಣ, ಸಮಗ್ರ ಮರಾಠೀ ಅನುವಾದ,ಖಂಡ ೧,ಪು.೫ ಶ್ರೀರಾಮಕೋಶ ಮಂಡಳ,ಪುಣೆ.

(೪)'ನಿಷಾದನೇ! ನಿನಗೆ ಎಂದೆಂದಿಗೂ ಶಾಂತಿ ದೊರೆಯಲಾರದು! ಏಕೆಂದರೆ ನೀನು ಕ್ರೌಂಚ ಪಕ್ಷಿಯ ಜೋಡಿಯಲ್ಲಿಯ ಕಾಮಮೋಹಿತವಾದ ಗಂಡುಹಕ್ಕಿಯನ್ನು, ಅದರ ಯಾವ ಅರಾಪಧವೂ ಇರದಾಗ, ಕೊಂದೆ'. -ಡಾ. ಪ್ರ. ನ. ಜೋಶಿ, ಸಾರ್ಥ ವಾಲ್ಮೀಕಿರಾಮಾಯಣ, ಖಂಡ ೧;ಗೀತಾ ಪ್ರೆಸ್, ಗೋರಖಪುರದ ಹಿಂದೀ ಅನುವಾದವೂ ಇದೆ ಅರ್ಥದ್ದಿದೆ.

(೫) No flame be thin for endless time, Because,be outcast, of the crime, Whowe cruel hand was fain to slay, One of this gentle pair at play! _Ralph T.H.Griffith;Ramayan of Valmiki,p.7.