ವಿಷಯಕ್ಕೆ ಹೋಗು

ಪುಟ:Valmeeki Ramayana Shaapa Mattu Vara.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೭

ಶಾಪಾವಾಣಿ

ವಿಚಾರವಂತನು, ಧರ್ಮಾತ್ಮನು ಮತ್ತು ಭಗವಂತ ನೆನಿಸುವವನು ಆತನೊಬ್ಬನೇ ಇದ್ದಾನೆ. ಕಾರಣ, ನೀನು ನಾರದನಿಂದ ಕೇಳಿಕೊಂಡ ಬುದ್ಧಿಪ್ರೇರಕವಾದ ರಾಮವೃತ್ತಾಂತವನ್ನು ಹೇಳು! ಲಕ್ಷ್ಮಣನನ್ನೊಳಗೊಂಡ ಪ್ರಜ್ಞಾವಂತ ರಾಮನೆ, ಎಲ್ಲ ರಾಕ್ಷಸರ, ವಿದೇಹ ದೇಶದ ಅಧಿಪತಿಯ ಕನ್ಯೆಯಾದ ಸೀತೆಯ, ಇವರೆಲ್ಲರ ಪ್ರಸಿದ್ಧ ಇಲ್ಲವೇ ಅಪ್ರಸಿದ್ಧವಾದ ಏನೆಲ್ಲ ಚರಿತ್ರೆಯಾಗಬಹುದೋ ಅದು, ಅನ್ಯರಿಗೆ ಗೊತ್ತಿರದಿದ್ದರೂ ನಿನಗೆ ಗೊತ್ತಾಗುತ್ತಾ ಹೋಗುವದು. ಈ ಸಂಬಂಧದಲ್ಲಿ ನಿನ್ನ ವಾಣಿಯು ಎಳ್ಳಷ್ಟೂ ಅಸತ್ಯವಾಗಲಾರದು; ಕಾರಣ ಮನೋಹರವಾದಂಥ, ಪುಣ್ಯದಾಯಕವಾದಂಥ ಶ್ಲೋಕಬದ್ಧವಾದ ರಾಮಕಥೆಯನ್ನು ನೀನು ಬಣ್ಣಿಸು, ಪೃಥ್ವಿಯಲ್ಲಿ ಎಲ್ಲಿಯವರೆಗೆ ಗಿರಿ-ನದಿಗಳು ಇರುತ್ತವೆಯೋ ಆವರೆಗೆ ಲೋಕದಲ್ಲಿ ರಾಮಾಯಣ ಕಥೆಯು ಪ್ರಚಾರದಲ್ಲಿ ಉಳಿಯುವುದು. ಇದಲ್ಲದೇ ನೀನು* ರಚಿಸಿದ ರಾಮಕಥೆಯು ಜನಮಾನಸದಲ್ಲಿರುವವರೆಗೆ, ಶಾಪವನ್ನು ಕೊಡುವಾಗ ನೀನು ಕ್ರೋಧವನ್ನು ತಳೆದುದರಿಂದ ನಿನ್ನ ಸ್ಥಾನವು ಕೆಳಮಟ್ಟಕ್ಕೆ ತಲುಪಿದ್ದರೂ ನೀನು ಸರ್ವೋಚ್ಚಸ್ಥಾನವಾದ ನನ್ನ ಲೋಕದಲ್ಲಿ ವಾಸಿಸುವೆ. ವಾಲ್ಮೀಕಿಯ ಮುಖದಿಂದ ಹೊರಬಿದ್ದ ಈ ಶಾಪೋದ್ಗಾರವು ರಾಮಾಯಣ ದಂಥ ಮಹಾಕಾವ್ಯದ ನಿರ್ಮಿತಿಯ ಮೂಲಕಾರಣವಾದ್ದರಿಂದ ಈ ಶಾಪದ ಮಹತ್ವವು ಅನನ್ಯಸಾಧಾರಣವಾಗಿದೆ.

2-3. ವಿಶ್ವಾಮಿತ್ರ > ಮಾರೀಚ, ಸುಬಾಹು

ಬಾಲಕಾಂಡ/೧೯

ಒಮ್ಮೆ ಮಂತ್ರಿಮಂಡಲದವರೊಡನೆ ದಶರಥರಾಜನು ತನ್ನ ಪುತ್ರರ ಮದುವೆಗಳ ಬಗ್ಗೆ ವಿಚಾರವಿನಿಮಯ ಮಾಡುತ್ತಿದ್ದಾಗ, ವಿಶ್ವಮಿತ್ರನು ರಾಜನ ಭೇಟಿಗಾಗಿ ಬಂದನು. ರಾಜನು ಆತನನ್ನು ವಿಧಿಯುಕ್ತವಾಗಿ ಸತ್ಕರಿಸಿ ಯಥೋಚಿತವಾಗಿ ಸ್ವಾಗತಿಸಿದನು. ಋಷಿಯು ರಾಜನ ಕ್ಷಮೆ, ಕುಶಲಾಭ್ಯುದಯ ಗಳನ್ನು ವಿಚಾರಿಸಿದನು. ವಸಿಷ್ಠ ಮೊದಲಾದ ಅನ್ಯಋಷಿಗಳನ್ನು ಭೇಟಿಯಾದನು. ವಿಶ್ವಾಮಿತ್ರನ ಆಗಮನ ದಿಂದ ದಶರಥನಿಗೆ ಅತಿಶಯ ಆನಂದವಾಯಿತು. ಕೈಮುಗಿದು ಅತಿವಿನಯದಿಂದ ದಶರಥನು, ಋಷಿಯ ಆಗಮನದ ಉದ್ದೇಶವನ್ನು ಕೇಳಿದನು. ಋಷಿಯು ಹೇಳುವ ಕಾರ್ಯವು ಎಷ್ಟೇ ಕಠಿಣವಿದ್ದರೂ ಅದನ್ನು ಪೂರೈಸುವ ಆಶ್ವಾಸನೆಯನ್ನು ರಾಜನಿತ್ತನು. ಸಂತೋಷಗೊಂಡ ವಿಶ್ವಾಮಿತ್ರನು ``ರಾಜೇಂದ್ರನೇ! ನಾನು ಹೇಳಬಂiÀÄಸುವುದನ್ನು ಪೂರೈಸಲು ನೀನು ದೃಢಸಂಕಲ್ಪನಾಗು! ನಾನು ಯಜ್ಞದೀಕ್ಷೆಯನ್ನು ಅಂಗೀಕರಿಸಿದಾಗ