ವಿಷಯಕ್ಕೆ ಹೋಗು

ಪುಟ:Valmeeki Ramayana Shaapa Mattu Vara.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೯

ಶಾಪವಾಣಿ

.....ಯಕ್ಷೀ ಪುತ್ರಂ ವ್ಯಜಾಯತ | ಮಾರೀಚಂ ನಾಮ ದುದರ್ಷಂ ಯಃ ಶಾಪಾದ್ರಾಕ್ಷಸೋsಭವತ್ ||೯||

ಯಕ್ಷಿಣಿಗೆ ಮಾರೀಚನೆಂಬ ಅಜಿಂಕ್ಯನಾದ ಮಗನು ಹುಟ್ಟಿದನು; ನಂತರ ಶಾಪದಿಂದ ಆತನು ರಾಕ್ಷಸನಾದನು.

೫. ಅಗಸ್ತ್ಯ < ಸುಂದ

ಬಾಲಕಾಂಡ/೨೫

ತಾಟಕಿಯ ವೃತ್ತಾಂತವನ್ನು ವಿಶ್ವಮಿತ್ರನು ರಾಮನಿಗೆ ಹೇಳವಾಗ ಈ ಶಾಪದ ಉಲ್ಲೇಖ ಬಂದಿದೆ. ಅಗಸ್ತ್ಯ < ತಾಟಕಾ ಶಾಪ ಕ್ರ. 6. ಸಂದನ ಅಪರಾಧಕ್ಕಾಗಿ ಅಗಸ್ತ್ಯನು ಆತನಿಗೆ ಶಾಪವನ್ನಿತ್ತನು.

ಸುಂದೇ ತು ನಿಹತೇ ರಮ ಅಗಸ್ತ್ಯಮೃಷಿಸತ್ತಮಮ್ ||೧೦||

ಅಗಸ್ತ್ಯನ ಶಾಪದಿಂದ ಸುಂದನ ವಧೆಯಾಯಿತು. ಸುಂದನಿಂದ ನಡೆದ ಅಪರಾಧವಾಗಲೀ, ಅಗಸ್ತ್ಯನು ಆತನಿಗೆ ಕೊಟ್ಟ ಶಾಪವಾಗಲೀ ವಿವರವಾಗಿಲ್ಲ; ಆದ್ದರಿಂದ ಸ್ಪಷ್ಟವಾಗಿಲ್ಲ.

೬. ಅಗಸ್ತ್ಯ < ತಾಟಕಾ

ಬಲಕಾಂಡ/೨೫

ತಾಟಕಾವನದಲ್ಲಿ ಪ್ರವೇಶಿಸುವಾಗ ವಿಶ್ವಾಮಿತ್ರ ಋಷಿಯು ತಾಟಕಾ ಇವಳ ವೃತ್ತಾಂತವನ್ನು ರಾಮನಿಗೆ ವಿವರಿಸಿದನು: ಹಿಂದೆ ಸುಕೇತು ಎಂಬ ದೊಡ್ಡ ಯಕ್ಷನಿದ್ದನು. ಆತನಿಗೆ ಮಕ್ಕಳಿರಲಿಲ್ಲ. ಸದಾಚಾರಿಯಾದ ಆ ಯಕ್ಷನು ಮಕ್ಕಳನ್ನು ಪಡೆಯಲು ಮಹಾತಪಸ್ಸನ್ನಾಚರಿಸಿದನು. ಆಗ ಬ್ರಹ್ಮನು ಅತಿಶಯ ಸಂತೋಷಗೊಂಡನು; ಆದರೆ ಪುತ್ರನನ್ನು ದಯ ಪಾಲಿಸದೆಯೇ ತಾಟಕಾ ಎಂಬ ಕನ್ಯಾರತ್ನವನ್ನು ಕೊಟ್ಟನು. ತಾಟಕಾ ಇವಳು ಸುಸ್ವರೂಪಿಯಾಗಿದ್ದಳು. ಅವಳು ಯೌವನಕ್ಕೆ ಬಂದನಂತರ ಅವಳ ವಿವಾಹವು ಜಂಭಪುತ್ರನಾದ ಸುಂದನೊಡನೆ ಆಯಿತು. ಅಗಸ್ತ್ಯನ ಶಾಪದಿಂದ ಸುಂದನ ವಧೆಯಾಯಿತು. ತಾಟಕಿಯು ಕೋಪಗೊಂಡಳು. ಮಾರೀಚನೆಂಬ ತನ್ನ