ಪುಟ:Valmeeki Ramayana Shaapa Mattu Vara Preliminary Pages.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

xix ಮಾಡಿದ್ದಾರೆ. ಶಾಪ ಇಲ್ಲವೇ ವರ ಕೊಡುವಾತನಿಗೆ ಅರ್ಹತೆ, ಸಾಮರ್ಥ್ಯ ಇರಬೇಕಾಗುತ್ತದೆ. ಶಾಪದ ಮೂಲಕಾರಣವು ಕ್ರೋಧವಿರುತ್ತದೆ; ವರ ಕೊಡುವಾತನು ಪ್ರಸನ್ನಚಿತ್ತನಿರುತ್ತಾನೆ. ಶಾಪದ ಪರಿಣಾಮಗಳು ದುಃಖಕಾರಕವಿರುತ್ತದೆ. ವರಗಳಿಂದ ಸಂತೋಷಕಾರಕ ಘಟನೆಗಳು ಆಗುತ್ತವೆ. ಈ ಎಲ್ಲ ಸಂಗತಿಗಳನ್ನು ವಾಲ್ಮೀಕಿ ರಾಮಾಯಣದಿಂದ ಆಯ್ದುಕೊಂಡು ವಿಶ್ಲೇಷಿಸಿ ವಿಸ್ತಾರವಾಗಿ ಬರೆದು ಈ ಕೃತಿಗೆ ಒಂದು ಹೊಸ ಆಯಾಮವನ್ನು ಶ್ರೀ ರ. ಭಿಡೆ ಅವರು ಸೃಷ್ಟಿಸಿದ್ದಾರೆ. ಓದುಗರ ಕೈಗೆ ಕೊಟ್ಟಿದ್ದಾರೆ. ಈ ಪಟ್ಟಿಯಿಂದ ವಾಚಕರು ಕೂಡಲೇ ಸಂದರ್ಭಗಳನ್ನು ಅರಿತುಕೊಳ್ಳಲು ಸುಲಭವಾಗಿದೆ. 'ವಾಲ್ಮೀಕಿ ರಾಮಾಯಣ: ಶಾಪ ಮತ್ತು ವರ- ಹೊಸ ಆಯಾಮದ ಈ ವಿದ್ವತ್ ಕೃತಿ ಓದುಗರ ಮೆಚ್ಚುಗೆಯನ್ನು ಪಡೆದು ವರಪ್ರದವಾಗಲಿ! ಬೆಂಗಳೂರು ಸರಸ್ವತಿ ಗಜಾನನ ರಿಸಬೂಡ