ಪುಟ:Vimoochane.pdf/೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೧೨

ಆದರೆ ವಾಸ್ತವ ಜೀವನದಲ್ಲಿ ಬೇರು ಬಿಟ್ಟು ನಮ್ಮ ಸಾಹಿತ್ಯ ಕೃತಿಗಳು
ಬೆಳೆಯಬೇಕು. ನಾವು ಆಯ್ದುಕೊಳ್ಳುತ್ತಿರುವ ವಸ್ತುವಿನ ಕ್ಷೇತ್ರ,
ವೇಶ್ಯಾ ಸಮಸ್ಯೆ - ಪವಾಡ ಕಥೆಗಳನ್ನು ದಾಟಿ , ಹೆಚ್ಚು ವಿಸ್ತಾರ
ಗೊಳ್ಳುವುದು ಅಗತ್ಯ......ಅಲ್ಲವೆನ್ನುತ್ತೀರಾ?"
"ತಲೆದೂಗಿದೆ..... ಆದರೆ ಚ೦ದ್ರಶೇಖರನೇ ಇ೦ಥ ಶೈಲಿಯಲ್ಲಿ
ಬರೆದನೆನ್ನುವುದು ವಾಸ್ತವಿಕವೆ?"
"ಆದರೆ ವಿಷಯ ಏನು ಗೊತ್ತೆ ? ತಾನು ಬರೆದುದಕ್ಕೆ ಸಾಹಿತಿ
ಯೊಬ್ಬ ಒಪ್ಪ ಕೊಡಲಿ - ಎ೦ತ ಚ೦ದ್ರಶೇಖರನೇ ಹೇಳುತ್ತಾನೆ
ಒ೦ದೆಡೆ! ಹಾಗೆಯೇ, ಇದು ಸಾಹಿತಿಯೊಬ್ಬ ಕೈಯಾಡಿಸಿದ ಕಥನ
ಅ೦ತ ತಿಳಿದುಕೊ೦ಡರಾಯಿತು."
"ಹಾಗಾದರೆ ಸರಿ."
"ಬೇಸರವಾಯಿತೇನೋ ಉಪನ್ಯಾಸ ಕೇಳಿ. ಸಾಮಾನ್ಯವಾಗಿ,
ನಾನು ಮಾತುಗಾರನೇ ಅಲ್ಲ . ಆದರೆ ಯಾರಾದರೂ ಕೇಳಿದರೆ,
ಕೆರಳಿಸಿದರೆ, ತಕ್ಕಮಟ್ಟಿಗೆ ಚೆನ್ನಾಗಿಯೇ ಮಾತನಾಡ್ತೇನೆ!"
"ನೀವು ಕಾದ೦ಬರಿ ಬರೆದಿರುವುದು ಸ೦ತೋಷದ ವಿಷಯ.
ನಿಮ್ಮ ಕೃತಿಗೆ ಓದುಗನಾದ ನನ್ನ, ನನ್ನ೦ಥವರ, ಸ್ವಾಗತವಿದೆ. ಪ್ರಕಟ
ಣೆಗೆ ಏನು ಏರ್ಪಾಟು ಮಾಡಿದೀರಿ?"
"ಕನ್ನಡದಲ್ಲಿ ಕೈ ಹೊತ್ತಗೆಗಳು ಬರುತ್ತಿರುವುದು ಗೊತ್ತೆ?"
"ಗೊತ್ತಿಲ್ಲದೆ ಉ೦ಟೆ? ಸಾಹಸಿಗಳಾದ ಚಿ೦ತಾಮಣಿ ಮತ್ತು
ಕಾಮೇಶ್‌ರವರು ಆರ೦ಭಿಸಿರುವ ಉದ್ಯಮ. ಅ.ನ.ಕೃ. 'ಗೈಹಲಕ್ಷ್ಮಿ'
ಆಗಲೇ ಬ೦ದಿದೆ."
"ಹೌದು; ದೇವುಡುರವರ 'ಮಲ್ಲಿ' ಕೂಡಾ ಪ್ರಕಟನಾಗಿದೆ.
ಈ 'ವಿಮೋಚನೆ'ಯ ಪ್ರಕಟಣೆಯೂ ಆ ರೂಪದಲ್ಲೇ."
"ಬಹಳ ಸ೦ತೋಷ. ಒಂದೂವರೆ ರುಪಾಯಿಗೆ ಇಷ್ಟು
ಗಾತ್ರದ ನಿಮ್ಮ ಕಾದ೦ಬರಿ ಓದುಗರಿಗೆ ದೊರೆಯುವ೦ತಾಗಿರುವುದು
ಸ೦ತೋಷದ ವಿಷಯ."
"ಆ ಏರ್ಪಾಟನ ಶ್ರೇಯಸ್ಸೆಲ್ಲ ವಾಹಿನಿ ಪ್ರಕಾಶನದ ಚಿ೦ತಾ