ಪುಟ:Vimoochane.pdf/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಾಹಿನಿ ಕೈಹೊತ್ತಿಗೆಗಳು

೧. ಗೃಹಲಕ್ಶ್ಮಿ ಆ.ನ.ಕೃ. ರವರ ಆಮೋಘ ಕಲಾಕೃತಿ

ಕಳೆದ ತಲೆಮಾರಿನ ಜನತೆ. ಅವರ ಸಂಪ್ರದಾಯಪ್ರಿಯತೆ, ವೈಜ್ಞಾನಿಕ ಮನೋಭಾವ-ಸಂಪ್ರದಾಯ ಪರಂಪರೆಗಳ ನಡುವಿನ ಘರ್ಷಣೆಯ ಯಶಸ್ವೀ ಚಿತ್ರಣ.

೨. ಮಲ್ಲಿ ದೇವುಡು ವಿರಚಿತ ಕಾದಂಬರಿ.ಸುಮಾರು

೧೯೦೦ರಿಂದ ೧೯೩೦ರ ವರೆಗಿನ ಅರ್ಧ ಶತಮಾನದ ಜನಜೀವನದ ಹಿನ್ನಲೆಯಲ್ಲಿ ಶೃಂಗಾರ ರಸಪೂರ್ಣ ಚಿತ್ರಣ.

೩. ವಿಮೋಚನೆ ನಿರಂಜನರ ಕಾದಂಬರಿ. ಅಡ್ಡದಾರಿ ಹಿಡಿದ

ಯುವಕನೋರ್ವನ ಆತ್ಮವೃತ್ತದ ಮೂಲಕ ಸುತ್ತುಮುತ್ತಲಿನ ವರ್ಣರಂಜಿತ ಬಾಳ್ವೆಯ ನೋವು-ನರಳಾತಟ ಆಸೆ- ಹೋರಾಟಗಳನ್ನು ಚಿತ್ರಿಸುವ ಕಲಾತ್ಮಕ ಕೃತಿ.

೪. ಪರದೇಶಿ ಕುಲಕರ್ಣಿ ಬಿಂದು ಮಾಧವರು ಬರೆದುದು.

ಹಿಂದೂಸ್ತಾನದ ಮೂಲನಿವಾಸಿ ಜನಾಂಗ ಒಂದರ ಜೀವನ ಕ್ರಮದ ಹಿನ್ನಲೆಯಲ್ಲಿ ಕರುಣಾ ಜನಕ ಕಥಾನಕ.

೫. ಸ್ವರ್ಣರೇಖೆ ವೀರಕೇಸರಿ ಸೀತಾರಾಮ ಶಾಸ್ತ್ರಿಗಳ ಐತಿ

ಹಾಸಿಕ ಕಾದಂಬರಿ. "ಬಂಗಾರ ದೊಡ್ಡಿ" ಎಂದು ಮೈಸೂರಿನ ಮನೆ ಮಾತಾಗಿರುವ ಪ್ರೇಯಸಿಯ ಪ್ರಣಯ ಕಥೆ.

೬. ರುಕ್ಮಿಣಿ ಕನ್ನಡ ನಾಡಿನ ಮೊತ್ತ ಮೊದಲ ಸುಲಭ ಬೆಲೆಯ

ಕೈಹೊತ್ತಿಗೆಗಾಗಿ ಹೊರಬಿದ್ದು ಕರ್ನಾಟಕದ ಮನೆಮನೆಯಲ್ಲೂ ಬೆಳಗಿದ "ಗೃಹಲಕ್ಷ್ಮಿ" ಕಾದಂಬರಿಯ ಎರಡನೆ ಮತ್ತು ಮುಕ್ತಾಯ ಭಾಗ... ಆ.ನ. ಕೃ. ಆವರ ಸಿದ್ದಹಸ್ತ ರುಕ್ಮಿಣೆಯ ತೇಜಃಪುಂಜ ವ್ಯಕ್ತಿತ್ವವನ್ನು ಅಪ್ರತಿಮವಾಗಿ ಚಿತ್ರಿಸಿದೆ.

ವಾಹಿನಿ ಪ್ರಕಾಶನ

ಜಯಚಾಮರಾಜ ರಸ್ತೆ, ಬೆಂಗಳೂರು-೨