ಪುಟ:YASHODARA CHARITE.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦

ಯಶೋಧರ ಚರಿತೆ


ಎಂದು ಸುದತ್ತಾಚಾರ್ಯರ

ಮುಂದಣಿನರಮನೆಗೆ ಪೋಗದುರ್ವೀಭರಮಂ

ನಂದನನೊಳಭಯರುಚಿಯೊಳ್

ಸಂದಿಸಿ ತಾನ್ ಜೈನದೀಕ್ಷೆಯಂ ಕೈಕೊಂಡಂ 64


ಶ್ರೀಜಿನದೀಕ್ಷೆಗೆ ತನುವಂ

ಯೋಜಿಸೆ ಕಲ್ಯಾಣಮಿತ್ರನೆಂಬರಸು ಯಥಾ


ರಾಜಾ ತಥಾ ಪ್ರಜಾ ಎಂ

ಬೋಜೆಯಿನಂದರಸುಗಳ್ ಪಲರ್ ತರೆಸಂದರ್ 65


ಆಗಳ್ ತಂದೆಯ ತಪದು-

ದ್ಯೋಗಂ ತಡವಾಗದಂತೊಡಂಬಟ್ಟು ಮಹೀ

ಭೋಗಕ್ಕನುಜ ಯಶೋಧರ

ನಾಗಿರೆ ಬಳಿಕಭಯರುಚಿಯುಮನುಜೆಯ ಸಹಿತಂ 66

_____

ಇನ್ನೆಂತಹ ನರಕವು ಕಾದಿದೆಯೋ? ವಿಧಿಯೆ!” 64. ಈ ಯೋಚನೆ ಬಂದಮೇಲೆ ಯಶೋಮತಿ ಅರಮನೆಗೂ ಹೋಗಲಿಲ್ಲ. ರಾಜ್ಯಭಾರವನ್ನೆಲ್ಲ ಮಗನಾದ ಅಭಯರುಚಿಗೆ ಒಪ್ಪಿಸಿ ತಾನು ಜೈನ ದೀಕ್ಷೆಯನ್ನು ವಹಿಸಿಕೊಂಡನು. 65. ಕಲ್ಯಾಣ ಮಿತ್ರನೂ ದೀಕ್ಷೆಯನ್ನು ಕೈಗೊಂಡನು. ಆಗ “ರಾಜನಂತೆ ಪ್ರಜೆ” ಎಂಬ ಮಾತನ್ನು ಸಾರ್ಥಕಪಡಿಸುವಂತೆ ಅನೇಕ ನರಪತಿಗಳೂ ದೀಕ್ಷಾಬದ್ಧರಾಗಲು ನಿರ್ಧರಿಸಿದರು 66. ತಂದೆಯ ತಪಸ್ಸಿನ ಉದ್ಯೋಗಕ್ಕೆ ತಡೆಯಾಗಬಾರದು ಎಂದು ಅಭಯರುಚಿ ರಾಜ್ಯಭಾರವನ್ನು ವಹಿಸಲು ಸಮ್ಮತಿಯಿತ್ತನು ಆಮೇಲೆ ಅವನು ತನ್ನ ತಮ್ಮ ಯಶೋಧರನಿಗೆ ರಾಜ್ಯ ಭೋಗವನ್ನೊಪ್ಪಿಸಿ ತಂಗಿಯೊಂದಿಗೆ