ಮುನಿಯನ ಮಾದರಿ - ಮಾತು ಒಂದು ಮಾತು

ವಿಕಿಸೋರ್ಸ್ ಇಂದ
Jump to navigation Jump to search

ಚಿತ್ರ: ಮುನಿಯನ ಮಾದರಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ಸುಲೋಚನ


ಗಂಡು
ಮಾತು ಒಂದು ಮಾತು - ೨
ಸ್ನೇಹದಿಂದ ಬಂದ ಮಾತು, ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು
ಹೆಣ್ಣು
ಮಾತು ಕಿವಿ ಮಾತು
ಮಾತು ಸವಿ ಮಾತು
ಸ್ನೇಹದಿಂದ ಬಂದ ಮಾತು, ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು
ಮಾತು ಕಿವಿ ಮಾತು
ಗಂಡು
ಮಾತು ಸವಿ ಮಾತು

ಗಂಡು
ಹೊನ್ನ ನುಡಿಗಳ ಈ ಮಾತು
ನಿನ್ನ ಕೆಣಕುವ ಬಿಸಿ ಮಾತು
ಹಗಲಿನಲ್ಲು ನೂರು ಕನಸು ಕಾಣುವ ಸುಖದ ಮಾತು
ಹೆಣ್ಣು
ನಿನ್ನ ತಣಿಸುವ ಇಣಿ ಮಾತು
ಕಣ್ಣ ಕುಣಿಸುವ ಗಿಣಿ ಮಾತು
ಮದನನನ್ನು ಕಂಡ ರತಿಯು ಮೋಹಿಸಿ ಎಂದ ಮಾತು
ಆಡುವ ಆಸೆ ಬಂತು

ಗಂಡು
ಮಾತು ಕಿವಿ ಮಾತು
ಮಾತು ಸವಿ ಮಾತು
ಹೆಣ್ಣು
ಸ್ನೇಹದಿಂದ ಬಂದ ಮಾತು, ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು
ಮಾತು ಕಿವಿ ಮಾತು
ಗಂಡು
ಮಾತು ಸವಿ ಮಾತು

ಹೆಣ್ಣು
ಪ್ರೇಮಿಯಾಡುವ ಮೃದು ಮಾತು
ಜೇನು ತುಂಬಿದ ಸಿಹಿ ಮಾತು
ಒಲವಿನಿಂದ ಸೇರಿದಾಗ ಆಡುವ ಕಣ್ಣ ಮಾತು
ಗಂಡು
ಎಂದು ಕೇಳದ ಹೊಸ ಮಾತು
ಎಲ್ಲ ರಸಿಕರ ಮನೆ ಮಾತು
ಪ್ರಣಯ ಕಾವ್ಯ ಹರುಷದಿಂದ ಹಾಡಿದ ಕವಿಯ ಮಾತು
ಆಡುವ ಆಸೆ ಬಂತು

ಹೆಣ್ಣು
ಮಾತು ಕಿವಿ ಮಾತು
ಗಂಡು
ಮಾತು ಸವಿ ಮಾತು
ಹೆಣ್ಣು
ಸ್ನೇಹದಿಂದ ಬಂದ ಮಾತು,
ಗಂಡು
ನಿನ್ನ ಪ್ರೀತಿ ತಂದ ಮಾತು
ಹೆಣ್ಣು
ಹೃದಯದಿಂದ ಮೂಡಿ ಬಂತು
ಗಂಡು
ಮುತ್ತಿನಂಥ ಮಾತು
ಇಬ್ಬರು
ಮಾತು ಕಿವಿ ಮಾತು
ಮಾತು ಸವಿ ಮಾತು