ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅನಸೂಯೆ

ವಿಕಿಸೋರ್ಸ್ದಿಂದ

ಅನಸೂಯೆ ಕರ್ದಮ ಮುನಿ ಹಾಗು ದೇವಹೂತಿಯರ ಮಗಳು. ಅತ್ರಿ ಮಹರ್ಷಿಯ ಹೆಂಡತಿ. ಪರಮ ಪತಿವ್ರತೆ. ಇವಳ ಪಾತಿವ್ರತ್ಯವನ್ನು ಪರೀಕ್ಷಿಸಲು ಬಂದ ತ್ರಿಮೂರ್ತಿಗಳನ್ನು ಮೆಚ್ಚಿಸಿ ವರ ಪಡೆದು, ದತ್ತಾತ್ರೇಯ, ದೂರ್ವಾಸ, ಚಂದ್ರರೆಂಬ ಮೂವರು ಮಕ್ಕಳನ್ನು ಹೆತ್ತಳು. ಶ್ರೀರಾಮನ ಅರಣ್ಯವಾಸದಲ್ಲಿ ಸೀತೆಗೆ ಈಕೆ ಮಾಂಗಲ್ಯವೃದ್ಧಿಯ ಧರ್ಮರಹಸ್ಯಗಳನ್ನು ತಿಳಿಸಿದಳು. (ನೋಡಿ- ಅತ್ರಿ) (ಜಿ.ಎಚ್.)