ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಮ್ರಿ

ವಿಕಿಸೋರ್ಸ್ದಿಂದ

ಅಮ್ರಿ ಪಶ್ಚಿಮ ಪಾಕಿಸ್ಥಾನದ ಸಿಂಧ್ ಬಳಿ, ಮೊಹೆಂಜೊದಾರೊವಿನಿಂದ ದಕ್ಷಿಣಕ್ಕಿರುವ ಈ ಗ್ರಾಮದ ಬಳಿ ಪುರಾತನ ದಿಬ್ಬಗಳಿವೆ. ಇವುಗಳನ್ನು ಅಗೆದಾಗ ದಿಬ್ಬದ ಮೇಲ್ಭಾಗದ ಪದರಗಳಲ್ಲಿ ಹರಪ್ಪ ಸಂಸ್ಕøತಿಯ ಅವಶೇಷಗಳೂ ಕೆಳಗಿನ ಪದರಗಳಲ್ಲಿ ಅದಕ್ಕೂ ಹಿಂದಿನ ಬೇರೊಂದು ಸಂಸ್ಕøತಿಯ ಕುರುಹುಗಳೂ ಕಂಡುಬಂದಿವೆ. ಇದನ್ನು ಅಮ್ರಿ ಸಂಸ್ಕøತಿ ಎಂದು ಪುರಾತತ್ತ್ವಜ್ಞರು ಹೆಸರಿಸಿದ್ದಾರೆ. ಕಾಲ ಕ್ರಿ. ಪೂ. ಸುಮಾರು 2,500ಕ್ಕೂ ಹಿಂದೆ. ಈ ಸಂಸ್ಕøತಿಗೆ ಸಂಬಂಧಪಟ್ಟಂತೆ ಕೇವಲ ಮಡಕೆಗಳ ವಿಷಯ ಮಾತ್ರ ಇದುವರೆಗೆ ದೊರಕಿದೆ. ಇವುಗಳಲ್ಲಿ ಹೆಚ್ಚಿನವು ಕಂದು ಬಣ್ಣದ ಪೀಠವುಳ್ಳ ಲೋಟಗಳು. ಇವುಗಳ ಮೇಲೆ ಕಪ್ಪು ಮತ್ತು ಕೆಂಪುಬಣ್ಣದಿಂದ ಸಾಲು ಸಾಲಾಗಿ ತಿದ್ದಿದ ಆಯಾಕೃತಿ, ವಜ್ರಾಕೃತಿ, ಚೌಕಳಿ ಮುಂತಾದ ಜ್ಯಾಮಿತಿಕ ನಮೂನೆಗಳ ಚಿತ್ರಣವಿದೆ. ಅಮ್ರಿ ಸಂಸ್ಕøತಿ ವಿಶೇಷವಾಗಿ ಸಿಂಧೂನದಿಯ ಪಶ್ಚಿಮಕ್ಕೆ ಸಿಂಧ್‍ನ ಬಯಲುಪ್ರದೇಶದಲ್ಲಿ ಹರಡಿತ್ತು. (ಎಸ್.ಎನ್.)