ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಸ್ಟ್ರೊಫೈಟಮ್

ವಿಕಿಸೋರ್ಸ್ದಿಂದ

ಆಸ್ಟ್ರೊಫೈಟಮ್ ಈ ಜಾತಿಯ ಸಸ್ಯಗಳು ಸುಂದರವಾದ ಕಳ್ಳಿಗಳೆಂದು (ಕ್ಯಾಕ್ಟಸ್) ಪ್ರಖ್ಯಾತಿ ಗಳಿಸಿವೆ. ಸಾಮಾನ್ಯವಾಗಿ ಆಕಾರದಲ್ಲಿ ಗುಂಡಾಗಿದ್ದು ಮೇಲು ಭಾಗದಲ್ಲಿ ಭುಜದಂತಿರುವ ಕೋಣಗಳಿವೆ. ಹೂ ಕೊಡೆಯಂತೆ ಸಸ್ಯದ ಮೇಲೆ ನಿಂತಿರುವ ದೃಶ್ಯ ಬಹಳ ಆಕರ್ಷಕ. ಹಲವು ಸಸ್ಯಗಳಲ್ಲಿ ಮುಳ್ಳುಗಳಿವೆ.