ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಐಸೋಎಲೆಕ್ಟ್ರಿಕ್ ಬಿಂದು

ವಿಕಿಸೋರ್ಸ್ದಿಂದ
          ಮೂಲದೊಡನೆ ಪರಿಶೀಲಿಸಿ


ಐಸೋಎಲೆಕ್ಟ್ರಿಕ್ ಬಿಂದು: ಅಣುವು ಋಣ ಅಥವಾ ಧನ ಅಯಾನ್ ಆಗದೆ ಝ್ವಿಟ್ಟರ್ ಅಥವಾ ತಟಸ್ಥ ಅಣುವಾಗಿ ಉಳಿಯುವ ಠಿಊ ಮೌಲ್ಯದ ಅಂಕ (ಐಸೊಎಲೆಕ್ಟ್ರಿಕ್ ಪಾಯಿಂಟ್). ಓಊ2 ಮತ್ತು ಅಔಔಊ ಪುಂಜಗಳೆರಡನ್ನೂ ಉಳ್ಳ ಅಮೈನೋ ಆಮ್ಲಗಳು ಪ್ರೋಟಾನಾ ನೀಡಿಕೆ-ಸ್ವೀಕಾರಗಳಿಂದ ದೊರೆಯುವ ಝ್ವಿಟ್ಟರ್ ಅಯಾನುವಿನ ರೂಪದಲ್ಲರುತ್ತವೆ. ಪುರ್ಣ ಅಣುವನ್ನು ಗಮನಿಸಿದಾಗ ಅದು ಹೆಚ್ಚಿನ ಋಣ ಅಥವಾ ಧನ ವಿದ್ಯುತ್ತನ್ನು ಪಡೆದಿರದೆ ವಿದ್ಯುತ್ತಾಟಸ್ಥ್ಯವನ್ನು (ಎಲೆಕ್ಟ್ರಿಕಲ್ ನ್ಯೂಟ್ರಾಲಿಟಿ) ಪಡೆದಿರುವುದು ಕಂಡುಬರುತ್ತದೆ. ಆದರೆ ಅಮೈನೋ ಆಮ್ಲವನ್ನುಳ್ಳ ದ್ರಾವಣದ ಠಿಊ ಮೌಲ್ಯ ಹೆಚ್ಚಾದಾಗ ಋಣ ಅಯಾನ್ ಆಗಿ ಪರಿವರ್ತಿತವಾಗುತ್ತದೆ. ಈ ಬಗೆಯ ಋಣ, ಧನ ಮತ್ತು ಝ್ವಿಟ್ಟರ್ ಅಯಾನುಗಳ ಪರಸ್ಪರ ಪರಿವರ್ತನೆ ಮತ್ತು ಸಮತೋಲನಗಳನ್ನು ಮುಂದೆ ತೋರಿಸಿದೆ- ಖ - ಅಊ - ಅಔಔಊ ಖ - ಅಊ - ಅಔಔ-ಖ - ಅಊ - ಅಔಔ-

     +ಓಊ3	                           +ಓಊ3                         ಓಊ2

ಪ್ರೋಟೀನುಗಳಲ್ಲಿ ಝ್ವಿಟ್ಟರ್ ಅಯಾನುಗಳಿಗೆ ಬದಲಾಗಿ ತಟಸ್ಥ ಅಣುವಿದ್ದು ಠಿಊ ಮೌಲ್ಯ ವ್ಯತ್ಯಾಸಗೊಂಡಂತೆ ಋಣ, ಧನ ಅಯಾನುಗಳು ಮತ್ತು ತಟಸ್ಥ ಅಣುಗಳ ಪರಿವರ್ತನೆ ನಡೆಯುತ್ತದೆ. ಪ್ರತಿ ಅಮೈನೋ ಆಮ್ಲ ಅಥವಾ ಪ್ರೋಟೀನು ಪ್ರತ್ಯೇಕ ಐಸೊಎಲೆಕ್ಟ್ರಿಕ್ ಬಿಂದುವನ್ನು ಪಡೆದಿರುವುದು ಅದರ ಮುಖ್ಯ ಗುಣಗಳಲ್ಲೊಂದು. ಪ್ರೋಟೀನುಗಳು ತಮ್ಮ ಐಸೋಎಲೆಕ್ಟ್ರಿಕ್ ಬಿಂದುವಿನಲ್ಲಿ ತಮ್ಮ ವಿದ್ಯುತಾಟಸ್ಥ್ಯವನ್ನು ಕಳೆದುಕೊಂಡು ಕಲಾಯ್ಡ್‌ ಬಗೆಯ ನೀರಿನ ದ್ರಾವಣಗಳಿಂದ ಗರಣೆಯಾಗಿ ಹೊರಬೀಳುತ್ತವೆ. ಪ್ರೋಟೀನುಗಳು ಭಿನ್ನ ಐಸೋಎಲೆಕ್ಟ್ರಿಕ್ ಬಿಂದುಗಳನ್ನು ಪಡೆದಿರುವುದರಿಂದಲೇ ವಿದ್ಯುತ್ ಕ್ಷೇತ್ರೀಯ ಚಲನೆಯಿಂದ (ಎಲೆಕ್ಟ್ರೋಫಾರಿಸ್) ಅವನ್ನು ಬೇರ್ಪಡಿಸಲು ಸಾಧ್ಯ. ಐಸೊಎಲೆಕ್ಟ್ರಿಕ್ ಬಿಂದುಗಳು ________________________________________________________________

          ವಸ್ತು                         ಐಸೊಎಲೆಕ್ಟ್ರಿಕ್ ಬಿಂದು (ಠಿಊ) 

____________________________________________________________ ಅಮೈನೋ ಆಮ್ಲಗಳು ಅಲನೀನ್ . . . 6.00 ಆರ್ಗೆನೈನ್ . . . 10.76 ಅಸ್ಪಾರ್ಟಿಕ್ ಆಮ್ಲ . . . 2.77 ಸಿಸ್ಟೈನ್ . . . 5.07 ಸಿಸ್ಟೀನ್ . . . 4.60 ಗ್ಲೂಟಮಿಕ್ ಆಮ್ಲ . . . 3.22 ಗ್ಲೈಸೀನ್ . . . 5.65 ಹಿಸ್ಟಿಡೀನ್ . . . 7.59 ಹೈಡ್ರಾಕ್ಸಿಪೈರೊಲೀನ್ . . . 5.83 ಐಸೊಲ್ಯೂಸಿನ್ . . . 6.02 ಲ್ಯೂಸಿನ್ . . . 5.98 ಲೈಸಿನ್ . . . 9.74 ಫೆನಿಲಲನೀನ್ . . . 5.48 ಪ್ರೊಲಿನ್ . . . 6.30 ಸೆರೀನ್ . . . 5.68 ಟ್ರಿಪ್ಟೋಫಾನ್ . . . 5.89 ಟೈರೊಸಿನ್ . . . 5.66 ವಾಲಿನ್ . . . 5.96 ಡೈಪೆಪ್ಟೈಡುಗಳು ಗ್ಲೈಸಿಲ್ಲ್ಗೈಸಿನ್ . . . 5.50 ಅಲಾನಿಲ್ಗ್ಲೈಸಿನ್ . . . 5.50 ಲ್ಯೂಸಿಲ್ಗ್ಲೈಸಿನ್ . . . 5.70 ಪ್ರೋಟೀನುಗಳು ಗ್ಲೂಟೆನಿನ್ . . . 4.50 ಜೆಲಾಟಿನ್ . . . 4.70 ಮೊಟ್ಟೆಯ ಆಲ್ಬುಮಿನ್ . . . 4.80 ಸೀರಂ ಆಲ್ಬುಮಿನ್ . . . 5.40 ಎಡೆಸ್ಟಿನ್ . . . 5.70 ಆಕ್ಸಿಹೆಮೊಗ್ಲೋಬಿನ್ . . . 6.80 ಗ್ಲಿಯಾಡಿನ್ . . . 9.20 ಕ್ಲೂಪೈನ್ . . . 12.10 ____________________________________________________________ (ಕೆ.ಟಿ.ಎಸ್.)