ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಂಟೆ

ವಿಕಿಸೋರ್ಸ್ದಿಂದ

 ಕುಂಟೆ 

ಮಳೆಯ ನೀರು ಭೂಮಟ್ಟದ ತಗ್ಗಾದ ಜಾಗದಲ್ಲಿ ತಂಗಿರುವ ಸಣ್ಣಪುಟ್ಟ ಜಲಸ್ಥಾಯಿ (ಪಾಂಡ್), ಒಳಭೂಮಿಯ ಜಲಫಲಕದ (ವಾಟರ್‍ಟೇಬಲ್) ಮಟ್ಟ ಹೆಚ್ಚು ಆಳದಲ್ಲಿದ್ದಲ್ಲಿ ಕುಂಟೆಯ ನೀರು ಮಳೆಗಾಲದಲ್ಲಿ ಮಾತ್ರವಿದ್ದು ಬೇಸುಗೆಯಲ್ಲಿ ಬತ್ತಿ ಹೋಗುತ್ತದೆ. ಜಲಫಲಕದ ಮಟ್ಟ ಭೂಮಿಯ ಮೇಲ್ಮೈಗೆ ಸಮೀಪವಾಗಿದ್ದ ಕಡೆ ಮಣ್ಣನ್ನು ತೋಡಿ ಕುಂಟೆಗಳನ್ನು ನಿರ್ಮಿಸಬಹುದು. ಅನೇಕ ಕಡೆಗಳಲ್ಲಿ ಇಂಥ ಕುಂಟೆಗಳಿಗೆ ನಾಲ್ಕು ಕಡೆಗಳಲ್ಲಿಯೂ ಸೋಪಾನಗಳನ್ನು ನಿರ್ಮಿಸಿ ಸ್ನಾನ, ಬಟ್ಟೆ ಒಗೆಯುವುದು ಮುಂತಾದ ಕೆಲಸಗಳಿಗೆ ಉಪಯೋಗವಾಗುವಂತೆ ಮಾಡಿರುತ್ತಾರೆ.  

(ಕೆ.ಎಸ್.ಕೆ.)