ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೇರಳ ಸಂದೇಶಂ

ವಿಕಿಸೋರ್ಸ್ದಿಂದ

ಕೇರಳ ಸಂದೇಶಂ

ಕೇರಳ ಸರ್ಕಾರದ ಸಾರ್ವಜನಿಕ ಸಂಪರ್ಕ ಇಲಾಖೆಯ ಆಶ್ರಯದಲ್ಲಿ ತಿರುವನಂತಪುರದಿಂದ ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳೆರಡರಲ್ಲೂ ಪ್ರಕಟವಾಗುತ್ತಿದ್ದ ಪತ್ರಿಕೆ. 1954ರಲ್ಲಿ ತಿರುವಾಂಕೂರು-ಕೊಚ್ಚಿ ಸರ್ಕಾರದಿಂದ ಪ್ರಾರಂಭವಾಯಿತು. ಇದು ಸರ್ಕಾರದ ವೃತ್ತಾಂತಪತ್ರವಾಗಿದ್ದರೂ ಪಿ.ಕೆ.ಗೋಪಾಲಕೃಷ್ಣನ್ ಸಂಪಾದಕತ್ವದಲ್ಲಿ ಸಾಹಿತ್ಯ ಪತ್ರಿಕೆಯಂತೆ ಸೇವೆ ಸಲ್ಲಿಸುತ್ತಿತ್ತು. ಹನ್ನೊಂದು ವರ್ಷಗಳ ಕಾಲ ಪತ್ರಿಕೆ ನಡೆದ ಮೇಲೆ ಕೇರಳ ಸರ್ಕಾರ ಅದನ್ನು ನಿಲ್ಲಿಸಿತು(1967). ಪತ್ರಿಕೆಯ ಸಂಪಾದಕ ಹುದ್ದೆಯನ್ನು ರದ್ದುಗೊಳಿಸಿ ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕ ನಿರ್ದೇಶಕ (ಅಡಿಷನಲ್ ಡೈರೆಕ್ಟರ್) ಎಂಬ ಹೊಸ ಹುದ್ದೆಯನ್ನು ರಚಿಸಲಾಯಿತು. ಕೇರಳ ಸಂದೇಶಂ ಪತ್ರಿಕೆಯ ಸ್ಥಾನದಲ್ಲಿ ಜನಪಥಂ ಪತ್ರಿಕೆ ಆರಂಭವಾಯಿತು.

    (ಕೆ.ಟಿ.)