ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾರ್ಗ್ಯ 2

ವಿಕಿಸೋರ್ಸ್ದಿಂದ

ಗಾರ್ಗ್ಯ 2-

ಈತನು ಒಬ್ಬ ಋಷಿ. ರಾಮಾಯಣದ ಪ್ರಕಾರ ಅಂಗಿರಸನ ವಂಶದವನು. ಈತನು ಕೇಕಯ ದೇಶದ ಅಧಿಪತಿಯಾಗಿದ್ದ ಯುಧಾಜಿತನ ಪುರೋಹಿತನು. ಗಂಧರ್ವ ದೇಶವನ್ನು ಗೆಲ್ಲುವ ಉದ್ದೇಶದಿಂದ ಯುಧಾಜಿತನು ಹತ್ತು ಸಾವಿರ ಕುದುರೆಗಳನ್ನೂ ಅನೇಕ ರತ್ನಾಭರಣಗಳನ್ನೂ ಈತನ ಮೂಲಕ ಶ್ರೀರಾಮನಿಗೆ ಕಾಣಿಕೆಯಾಗಿ ಕೊಟ್ಟಿದ್ದನು.

ಹರಿವಂಶದ ಪ್ರಕಾರ ಗಾರ್ಗ್ಯನು ವೇಣುಹೋತ್ರನ ಮಗ. ಪಾಂಡವರ ಮೂಲ ಪುರುಷನಾದ ಜನಮೇಜಯರಾಯ ಗಾರ್ಗ್ಯನ ಮಗನನ್ನು ಹಿಂಸೆಮಾಡಿ ಬ್ರಹ್ಮಹತ್ಯೆಗೆ ಗುರಿಯಾಗಿ ಶೌನಕ ಮುನಿಯ ಮೂಲಕ ಯಜ್ಞ ಮಾಡಿಸಿ ಆ ಪಾತಕವನ್ನು ಕಳೆದುಕೊಂಡ.