ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚ

ವಿಕಿಸೋರ್ಸ್ದಿಂದ

ಕನ್ನಡ ವರ್ಣಮಾಲೆಯಲ್ಲಿ ಚ ವರ್ಗದಲ್ಲಿನ ಮೊದಲ ಅಕ್ಷರ ಚಿತ್ರದಲ್ಲಿ ಕಾಣಿಸಿರುವಂತೆ ಇದಕ್ಕೆ ಈಗಿನ ರೂಪದ ಅಲ್ಪಸ್ವಲ್ಪ ಹೋಲಿಕೆ ಕಂಡುಬರುವುದು ಗಂಗರ ಕಾಲದಲ್ಲಿ. ರೂಪ ಇನ್ನೂ ಸ್ಫುಟವಾಗುವುದು ಕಲ್ಯಾಣಿ ಚಾಳುಕ್ಯರ ಕಾಲಕ್ಕೆ. ಮುಂದಿನ ಶತಮಾನಗಳಲ್ಲಿ ಅಕ್ಷರದ ಪ್ರಾರಂಭದ ಎಡತುದಿಯಲ್ಲಿ ಸಣ್ಣ ಕೊಂಡಿ ಸೇರಿಕೊಳ್ಳುತ್ತದೆ. ಅಲ್ಲದೆ ಬ ಮತ್ತು ಭ ಕಾರಗಳಿಂದ ಇದನ್ನು ಪ್ರತ್ಯೇಕಿಸಲು ಇದರ ಬಲಭಾಗದಲ್ಲಿ ಹೆಚ್ಚಿನ ಒಂದು ಕೊಂಡಿ ಸೇರಿರುವುದು ಗಮನಾರ್ಹವಾದುದು.

ಅಶೋಕ ಕ್ರಿ.ಪೂ. 3ನೆಯ ಶತಮಾನ ಶಾತವಾಹನ ಕ್ರಿ.ಶ. 2ನೆಯ ಶತಮಾನ ಕದಂಬ ಕ್ರಿ..ಶ. 5ನೆಯ ಶತಮಾನ ಗಂಗ ಕ್ರಿ.ಶ. 6ನೆಯ ಶತಮಾನ ಬಾದಾಮಿ ಚಾಳುಕ್ಯ ಕ್ರಿ.ಶ. 6ನೆಯ ಶತಮಾನ ರಾಷ್ಟ್ರಕೂಟ ಕ್ರಿ.ಶ. 9ನೆಯ ಶತಮಾನ ಕಲ್ಯಾಣಿ ಚಾಳುಕ್ಯ ಕ್ರಿ.ಶ. 11ನೆಯ ಶತಮಾನ ಕಳಚೂರಿ, ಹೊಯ್ಸಳ ಮತ್ತು ಸೇವುಣ ಕ್ರಿ.ಶ. 13ನೆಯ ಶತಮಾನ ವಿಜಯನಗರ ಕ್ರಿ. ಶ. 15ನೆಯ ಶತಮಾನ ಮೈಸೂರು ಅರಸರು ಕ್ರಿ. ಶ. 18ನೆಯ ಶತಮಾನ

ಇದೇ ರೂಪವೇ ವಿಶೇಷ ಬದಲಾವಣೆಯಿಲ್ಲದೆ ಮುಂದುವರಿದು ಈಗಿನ ರೂಪವನ್ನು ತಾಳುತ್ತದೆ ಈ ಅಕ್ಷರ ತಾಲವ್ಯ ಅಘೋಷ ಸ್ಪರ್ಶಧ್ವನಿಯನ್ನು ಸೂಚಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಸ್ಪರ್ಶಕ್ಕೆ ಬದಲಾಗಿ ಅನುಘರ್ಷವೂ ಆಗಿರುತ್ತದೆ. (ಎ.ವಿ.ಎನ್.)