ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೀರ್ಕೊಳವೆ

ವಿಕಿಸೋರ್ಸ್ ಇಂದ
Jump to navigation Jump to search

ಜೀರ್ಕೊಳವೆ - ಮದ್ದನ್ನು ದೇಹದೊಳಗೆ ಹೋಗಿಸಲು ಕಿವಿ, ಜಠರ, ಮೂತ್ರಕೋಶ, ಯೋನಿ, ಗರ್ಭಕೋಶ ಮುಂತಾದ ಅಂಗಗಳನ್ನು ತೊಳೆಯಲೂ ಉಪಯೋಗಿಸುವ ಉಪಕರಣ (ಸಿರಿಂಜ್). ಪಿಚಕಾರಿ ಪರ್ಯಾಯನಾಮ. ವುಡ್ ಎಂಬಾತ 1852ರಲ್ಲಿ ಚರ್ಮದಡಿ ಚುಚ್ಚುಮದ್ದು ಕೊಡಲು ಜೀರ್ಕೊಳವೆಯನ್ನು ಪ್ರಥಮಬಾರಿಗೆ ಉಪಯೋಗಿಸಿದನು. ಈ ಕೊಳವೆಯಲ್ಲಿ ಮೂರು ವಿಧದವು ಇವೆ. ಪೂರ್ಣವಾಗಿ ಗಾಜಿನಿಂದ ಮಾಡಿದವು. ಲೊಹ ಗಾಜು ಇವೆರಡನ್ನೂ ಉಪಯೋಗಿಸಿ ಮಾಡಿದವು ಮತ್ತು ಲ್ಯೂಯರ್ ಲಾಕ್ ಎಂಬ ಹೆಸರಿನವು. ಈ ಮೂರನೆಯದರಲ್ಲಿ ಸೂಜಿ ಕಳಚಿಕೊಳ್ಳದಂತೆ ತಿರುಚಿನಲ್ಲಿ ಭದ್ರವಾಗಿ ಸೇರಿಸಲು ಅನುಕೂಲತೆ ಉಂಟು. ಕಿವಿಯನ್ನು ತೊಳೆಯುವ ಜೀರ್ಕೊಳವೆಯನ್ನು ಪೂರ್ಣವಾಗಿ ಲೋಹದಿಂದ ಮಾಡಿರುತ್ತಾರೆ. ಜೀರ್ಕೊಳವೆಗಳನ್ನು ಕುದಿಸಿ ಅಥವಾ ಆಟೋಕ್ಲೇವಿನಲ್ಲಿ ಶುದ್ಧೀಕರಿಸಿ ಮತ್ತೆ ಉಪಯೋಗಿಸಬಹುದು. ಈಚೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಒಮ್ಮೆ ಮಾತ್ರ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಜೀರ್ಕೊಳವೆ ಬಳಕೆಗೆ ಬಂದಿದೆ. (ಎಚ್.ವಿ.ಎಸ್.ಇ.)