ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡೆ ಮಾರ್ಚಿ, ಎಮಿಲಿಯೊ

ವಿಕಿಸೋರ್ಸ್ದಿಂದ

ಡೆ ಮಾರ್ಚಿ, ಎಮಿಲಿಯೊ 1851-1901. ಇಟಲಿಯ ಕಾದಂಬರಿಕಾರ. ಈತನ ಡೆಮಿಟ್ರಿಯೋ ಪಿಯಾನೆಲ್ಲಿ ಎಂಬ ಕಾದಂಬರಿ ಇಟಲಿಯ ಶ್ರೇಷ್ಠ ಕೃತಿಗಳಲ್ಲೊಂದೆಂದು ಹೇಳಲಾಗಿದೆ. ಇದರಲ್ಲಿ ಸರಳಜೀವಿಯಾದ ಸರ್ಕಾರಿ ಗುಮಾಸ್ತನೊಬ್ಬನ ತ್ಯಾಗಮಯ, ಸಾಹಸಮಯ ಜೀವನದ ಕರುಣಾವ್ಯಂಜಕ ಚಿತ್ರವಿದೆ. ಈತನ ಕಾದಂಬರಿಗಳಲ್ಲಿ ಹಾಸ್ಯಕ್ಕಿಂತ ಹೆಚ್ಚಾಗಿ ಗಂಭೀರ ಸನ್ನಿವೇಶಗಳೇ ಹೆಚ್ಚು. ಇಟಲಿಯ ಪ್ರಸಿದ್ಧ ಕಾದಂಬರಿಕಾರ ಹಾಗೂ ನಾಟಕಕಾರ ಮಾನ್‍ಡ್ಸೋನಿ ತನ್ನ ಗುರುವೆಂದು ಡೆ ಮಾರ್ಚಿಯೇ ಹೇಳಿಕೊಂಡಿದ್ದಾನೆ. ಅವನ ಪ್ರಭಾವವನ್ನು ಈತನ ಕೃತಿಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. (ಎಚ್.ಕೆ.ಆರ್.) ಪರಿಷ್ಕರಣೆ ಎಲ್.ಎಸ್.ಶೇಷಗಿರಿರಾವ್