ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ರಾವಿಡ ಭಾಷೆಗಳು

ವಿಕಿಸೋರ್ಸ್ದಿಂದ

ದ್ರಾವಿಡ ಭಾಷೆಗಳು

ದ್ರಾವಿಡ ಜನಾಂಗದ ಭಾಷೆ ದ್ರಾವಿಡ ಭಾಷೆ. ಭಾರತಕ್ಕೆ ಹೊರಗಿನಿಂದ ಬಂದ ಈ ದ್ರಾವಿಡ ಜನಾಂಗ ಭಾರತವನ್ನು ಹೊಕ್ಕ ಮೇಲೆ ಅನುಕೂಲ ಸಿಕ್ಕ ಕಡೆಗಳಲ್ಲಿ ನೆಲಸಿದರು. ಅವರಲ್ಲೇ ಗುಂಪುಗಳುಂಟಾದವು. ಭೌಗೋಳಿಕ ಸಾಮಾಜಿಕ ಭಾಷಿಕ ಕಾರಣಗಳಿಂದಾಗಿ ಅವರು ಆಡುತ್ತಿದ್ದ ಭಾಷೆಯಲ್ಲಿ ಪ್ರಭೇದಗಳುಂಟಾದುವು. ಮೊದಲು ಬಂದ ದ್ರಾವಿಡ ಜನಾಂಗದವರು ಆಡುತ್ತಿದ್ದ ದ್ರಾವಿಡ ಭಾಷೆಯನ್ನು ಮೂಲ ದ್ರಾವಿಡ ಭಾಷೆಯೆಂದು ನಿರ್ದೇಶಿಸುವುದು ವಾಡಿಕೆ. ಮೂಲಜನಾಂಗ ಪಂಗಡ ಪಂಗಡಗಳಾಗಿ ವಿಂಗಡವಾದಂತೆ ಮೂಲಭಾಷೆಯೂ ಭಿನ್ನಭಿನ್ನ ಭಾಷೆ-ಉಪಭಾಷೆಗಳಾಗಿ ಒಡೆದುಕೊಂಡವು. ಮೂಲಬೇರಿನಿಂದ ಹೀಗೆ ಬೇರೆಯಾಗಿ ಕವಲಾದ ಭಾಷೆಗಳೇ ದ್ರಾವಿಡ ಭಾಷೆಗಳು. ದ್ರಾವಿಡ ಗುಂಪುಗಳಲ್ಲಿ ಸಂಪರ್ಕ ತಗ್ಗಿದಂತೆ, ತಪ್ಪಿದಂತೆ ವ್ಯತ್ಯಾಸಗಳೂ ಹೆಚ್ಚತೊಡಗಿದುವು.

ಈಗಿನ ಭಾಷಾ ಸಮೀಕ್ಷೆಯ ಲೆಕ್ಕದಂತೆ ಇಂಥ ಇಪ್ಪತ್ತೈದು ದ್ರಾವಿಡ ಭಾಷೆಗಳು ಇಂದು ಪ್ರಚಾರದಲ್ಲಿವೆ. ಇವಿಷ್ಟೇ ದ್ರಾವಿಡಭಾಷೆಗಳೆಂದು ಕಡೆಯ ಮಾತಾಗಿ ಹೇಳುವುದು ಸಾಧ್ಯವಿಲ್ಲ. ಕನ್ನಡ ನಾಡಿನ ಆಗುಂಬೆ, ಬಾಳೆಬರೆ ಬೆಟ್ಟಗಳಲ್ಲಿ ಬಾಳುತ್ತಿರುವ ಬಾಳೇರರ ಸ್ವರೂಪ ಮತ್ತು ಮಧ್ಯಭಾರತದ ಬಸ್ತಾರ ಪ್ರದೇಶದ ದೊರ್ಲಿ ಮತ್ತು ಕೊರಾಪುತ್ ಪ್ರದೇಶದ ಸವರ್ ಭಾಷೆಗಳ ಸ್ವರೂಪ ಇನ್ನೂ ನಿರ್ಧಾರವಾಗಿಲ್ಲ. ದ್ರಾವಿಡ ಭಾಷಾ ಪರಿವಾರದಲ್ಲಿ ಅವುಗಳ ಸ್ಥಾನವೇನೆಂಬುದನ್ನು ಈಗ ಹೇಳಲು ಸಾಧ್ಯವಾಗಿಲ್ಲವಾದರೂ ಅವು ದ್ರಾವಿಡ ಪಂಗಡಕ್ಕೆ ಅಳವಡುತ್ತವೆಂದು ಸ್ಥೂಲವಾಗಿ ಅವಕಾಶವಿದೆ.

ಈಗ ಖಚಿತವಾಗಿ ತಿಳಿದುಬಂದಿರುವ 25 ದ್ರಾವಿಡ ಭಾಷೆಗಳಲ್ಲಿ ಒಂದೊಂದು ಭಾಷೆಗೆ ಸೇರಿದ ಉಪಭಾಷೆಗಳೂ ಇವೆ. ಸುಮಾರು ಹದಿಮೂರುವರೆ ಕೋಟಿ ಜನ ದ್ರಾವಿಡ ಭಾಷೆಗಳನ್ನಾಡುತ್ತಾರೆ. ಪ್ರಪಂಚದಲ್ಲಿನ ಹಿರಿಯ ಭಾಷಾ ಪರಿವಾರಗಳ ಶ್ರೇಣಿಯಲ್ಲಿ ಇದಕ್ಕೆ 5ನೆಯ ಸ್ಥಾನವಿದೆ. ಈ ದ್ರಾವಿಡ ಭಾಷೆಗಳು ಒಂದು ಸ್ವತಂತ್ರ ಭಾಷಾ ಪರಿವಾರದವೆಂದು ಪರಿಗಣಿತವಾಗಿದೆ. ಭಾರತದ ಅಥವಾ ಪ್ರಪಂಚದ ಬೇರೆ ಯಾವುದೇ ಭಾಷಾ ಪರಿವಾರದೊಡನೆ ಈ ದ್ರಾವಿಡ ಭಾಷಾಪರಿವಾರವನ್ನು ಸಮೀಕರಿಸುವ ಪ್ರಯತ್ನಗಳನ್ನು ಭಾಷಾವಿಜ್ಞಾನಿಗಳು ಸಂಪೂರ್ಣವಾಗಿ ಮಾನ್ಯಮಾಡಿಲ್ಲ. ದ್ರಾವಿಡ ಭಾಷೆಗಳು ಪ್ರಮುಖವಾಗಿ ಒಟ್ಟಿಗೆ ಒತ್ತಾಗಿ ಕಾಣಿಸುವುದು ದಕ್ಷಿಣ ಭಾರತದಲ್ಲಿ. ಮಧ್ಯ ಮತ್ತು ಉತ್ತರ ಭಾರತದ ವಿವಿಧ ಪ್ರದೇಶಗಳಲ್ಲೂ ಕೆಲವು ದ್ರಾವಿಡ ಭಾಷೆಗಳು ವ್ಯವಹಾರದಲ್ಲಿವೆ.

ಈಗ ಗೊತ್ತಾಗಿರುವ 25 ದ್ರಾವಿಡ ಭಾಷೆಗಳು ಕನ್ನಡ, ತೆಲಗು, ತಮಿಳು, ಮಲೆಯಾಳಮ್, ತುಳು, ಕೊಡಗು, ಮಾಲ್ತೊ, ಬ್ರಾಹುಇ, ಕುರುಖ್, ಒಲ್ಲಾರಿ, ಗದಬ, ಪೆಂಗೂ, ಕೊಯ, ಬಡಗ, ಗೋಂಡಿ, ಕೊಂಡ, ಕುಯಿ, ಕುವಿ, ಪಾರ್ಜಿ, ಕೋಲಾಮಿ, ಕೊರಗ, ನಾಯ್ಕಿ, ತೊದ, ಕೋತ, ಮಂಡ, ಇವುಗಳಲ್ಲಿ ಮೊದಲ ನಾಲ್ಕು ಭಾಷೆಗಳು ಸಾಹಿತ್ಯಿಕ ಭಾಷೆಗಳು. ಈ ಭಾಷೆಗಳಿಗೆ ಸಾಕಷ್ಟು ಪ್ರಾಚೀನವಾದ ಲಿಖಿತ ಸಾಹಿತ್ಯವಿದೆ. ಇವುಗಳಿಗೆ ಮೊದಲಿಂದಲೂ ತಮ್ಮದೇ ಆದ ಲಿಪಿ ಕೂಡ ಇದೆ. ಕೊಡವ ಭಾಷೆ ಅಲಿಪಿ ಭಾಷೆಯಾದರು ಶ್ರುರೂಪಿಯಾದ ಶ್ರವ್ಯ ಸಾಹಿತ್ಯ ಉಳಿದುಬಂದಿರುವುದರಿಂದ ಇದನ್ನು ಸಾಹಿತ್ಯಿಕ ದ್ರಾವಿಡ ಭಾಷೆಗಳ ಜೊತೆಗೆ ಸೇರಿಸುವುದು ರೂಢಿ.

ಇನ್ನುಳಿದ ಹತ್ತೊಂಬತ್ತು ಭಾಷೆಗಳನ್ನು ಶ್ರಾವಣ ಭಾಷೆಗಳೆಂದು ನಿರ್ದೇಶಿಸಿದ್ದಾರೆ. ಇವನ್ನು ಅಸಂಸ್ಕøತ ಅಥವಾ ಅಲಿಪಿ ಭಾಷೆಗಳೆಂದೂ ಕರೆಯುತ್ತಾರೆ.

ಮೂಲದ್ರಾವಿಡದಿಂದ ಈ 25 ದ್ರಾವಿಡ ಭಾಷೆಗಳು ಯಾವಾಗ ಬೇರೆಯಾದುವೆಂಬುದು ಖಚಿತವಾಗಿ ತಿಳಿಯದು. ಸ್ಥೂಲವಾಗಿ ಅದನ್ನು ಗುರುತಿಸುವ ಪ್ರಯತ್ನಗಳು ನಡೆದಿವೆ, ಭಾಷಾಕಾಲಕ್ರಮವಿಜ್ಞಾನ ಪದ್ಧತಿ ಆಧಾರದಿಂದ ಬಹುಮಟ್ಟಿಗೆ ದ್ರಾವಿಡ ಭಾಷೆಗಳು ಮೂಲದ್ರಾವಿಡದಿಂದ ಕ್ರಿಸ್ತಶಕದ ಅರಂಭದ ವೇಳೆಗೆ ಬೇರ್ಪಟ್ಟಿದ್ದವು.

ಮೂಲದ್ರಾವಿಡದಿಂದ ಮೊದಲು ತೆಲಗು ಬೇರೆಯಾಯಿತೆಂದು ಕೆಲವರೂ ತುಳು ಬೇರೆಯಾಯಿತೆಂದು ಕೆಲವರು ಕುಯಿ ಬೇರೆಯಾಯಿತೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದ್ರಾವಿಡ ಭಾಷೆಗಳನ್ನು ಅವು ಭಾರತದ ಯಾವ ಯಾವ ಭಾಗದಲ್ಲಿ ಬಳಕೆಯಲ್ಲಿವೆ ಎಂಬ ಭೌಗೋಳಿಕ ಆಧಾರದಿಂದ ಉತ್ತರ, ಮಧ್ಯ ಮತ್ತು ದಕ್ಷಿಣದವೆಂದು ವರ್ಗೀಕರಿಸಿದ್ದಾರೆ. ಭಾಷಿಕ ಆಧಾರದಿಂದ ಮಾಡಿದ ದ್ರಾವಿಡ ಭಾಷೆಗಳ ವರ್ಗೀಕರಣವನ್ನು ಭಾಷಾವಿಜ್ಞಾನಿಗಳು ಮಾನ್ಯ ಮಾಡಿದ್ದಾರೆ. ಅದರ ಪ್ರಕಾರ ಕೂಡ ಉತ್ತರ, ಮಧ್ಯ ಮತ್ತು ದಕ್ಷಿಣ ಎಂಬ ತ್ರಿಭಜನೆಯಿದೆಯಾದರೂ ಇಲ್ಲಿ ಭೌಗೋಳಿಕ ಆಧಾರ ಗೌಣ. ಭೌಗೋಳಿಕವಾಗಿ ದಕ್ಷಿಣದಲ್ಲಿರುವ ಭಾಷೆಗಳು ಭಾಷಾಸಾಮ್ಯ ಅಥವಾ ವೈಷಮ್ಯದಿಂದಾಗಿ ಮಧ್ಯ ಅಥವಾ ಉತ್ತರದ ಶಾಖೆಗೆ ಸೇರಬಹುದು. ಉದಾಹರಣೆಗೆ ತೆಲಗು ಭೌಗೋಳಿಕವಾಗಿ ದಕ್ಷಿಣದಲ್ಲಿದ್ದರೂ ಭಾಷಿಕವಾಗಿ ಮಧ್ಯ ದ್ರಾವಿಡ ಶಾಖೆಗೆ ಅಳವಡುತ್ತದೆ. ಕೊರಗ ಭಾಷೆಯೂ ಇದೇ ರೀತಿ ದಕ್ಷಿಣದಲ್ಲಿ ಪ್ರಚಾರದಲ್ಲಿದ್ದರೂ ಉತ್ತರ ದ್ರಾವಿಡ ಶಾಖೆಗೆ ಹೊಂದಿಕೊಳ್ಳುತ್ತದೆ.

ಈ ವರ್ಗೀಕರಣ, ಬಹುಶಃ ಭಾರತವನ್ನು ಪ್ರವೇಶಿಸಿದ ಮೇಲೆ ದ್ರಾವಿಡ ಜನಾಂಗ ಪಂಗಡಗಳಾಗಿ ವಿಂಗಡವಾದ ಮೂರು ಮುಖ್ಯ ಶಾಖೆಗಳನ್ನು ತೋರಿಸುತ್ತದೆ. ಈ ಬಗೆಯಾದ ವರ್ಗೀಕರಣದ ಹಿಂದಿರುವ ಉದ್ದೇಶ ಭಾಷಿಕ ವ್ಯಾಸಂಗಕ್ಕೆ ಸಿಗುವ ಸೌಕರ್ಯ. ಭಾಷೆಗಳು ಅವುಗಳಲ್ಲಿನ ಧ್ವನಿ ಹಾಗೂ ಆಕೃತಿಕ ರಚನೆಯ ದೃಷ್ಟಿಯಿಂದ ಕೆಲವು ಸಮಾನ ಲಕ್ಷಣಗಳನ್ನು ಹಂಚಿಕೊಂಡಿರುತ್ತವೆ. ಒಂದೊಂದು ದ್ರಾವಿಡ ಭಾಷೆಗಳಲ್ಲೂ ಧ್ವನಿಗಳಲ್ಲಿ, ಶಬ್ದಗಳಲ್ಲಿ ವ್ಯತ್ಯಾಸಗಳು ಸ್ವತಂತ್ರವಾಗಿ ಪ್ರತ್ಯೇಕವಾಗಿ ನಡೆದಿವೆಯಾದರೂ 25 ದ್ರಾವಿಡ ಭಾಷೆಗಳಲ್ಲೂ ಸ್ಥೂಲವಾಗಿ ರಾಚನಿಕ ಸಮಾನತೆಯಿದೆ. ಹಾಗೆ ಇರುವುದರಿಂದಲೇ ಅವೆಲ್ಲಾ ಒಂದು ಮೂಲಕ್ಕೆ ಸೇರಿದ ಭಾಪೆಗಳೆಂದು ಹೇಳುತ್ತಿರುವುದು. ದ್ರಾವಿಡ ಭಾಷಾ ಪರಿವಾರದ ಉತ್ತರ, ಮಧ್ಯ ಮತ್ತು ದಕ್ಷಿಣ ಎಂಬ ಮೂರು ಶಾಖೆಗಳಲ್ಲಿ ಮತ್ತೆ ಕೆಲಕೆಲವು ಭಾಷೆಗಳು ತಮ್ಮ ತಮ್ಮಲ್ಲೇ ತೋರುವ ಹೆಚ್ಚಿನ ಇಲ್ಲವೆ ಕಡಿಮೆ ಹೊಂದಾಣಿಕೆ ಇಲ್ಲವೇ ವ್ಯತ್ಯಾಸದ ದೃಷ್ಟಿಯಿಂದ ಉಪಶಾಖೆಗಳಾಗಿ ವಿಂಗಡವಾಗುತ್ತವೆ.

ದ್ರಾವಿಡ ಭಾಷಾ ಶಾಸ್ತ್ರಜ್ಞರು ಮಾನ್ಯ ಮಾಡಿರುವ ದ್ರಾವಿಡ ಭಾಷೆಗಳ ವರ್ಗೀಕರಣ ಈ ರೀತಿ ಇದೆ : ಮೊದಲು ಒಂದೇ ಆಗಿದ್ದ ಮೂಲ ದ್ರಾವಿಡ ಭಾಷೆಯಿಂದ ಮೂಲ ಕುಯಿ ಭಾಷೆ ಬೇರ್ಪಟ್ಟಿತು. ಅನಂತರ ಕಾಲಾನುಕಾಲಕ್ಕೆ ಈತರ ದ್ರಾವಿಡ ಭಾಷೆಗಳು ಬೇರ್ಪಟ್ಟವು.

ಮೂಲ ಕುಯಿ ಇಂದ ಒಂದು ಕಡೆ ಕುಯಿ ಮತ್ತೊಂದು ಕಡೆ ಕುವಿ ಕವಲೊಡೆದವು. ಉಳಿದ ದ್ರಾವಿಡ ಭಾಷೆಗಳನ್ನು ಹೀಗೆ ವರ್ಗೀಕರಿಸಲಾಗಿದೆ. ಉಳಿದ ದ್ರಾವಿಡ ಭಾಷೆಗಳು (

( ( ಉತ್ತರ ದ್ರಾವಿಡ ಮಧ್ಯ ದ್ರಾವಿಡ ದಕ್ಷಿಣ ದ್ರಾವಿಡ

ಬ್ರಾಹುಇ ತೆಲಗು ( ( ಕುರುಖ್ ಕೊಲಾಮಿ ಕನ್ನಡ ತುಳು ಮಲ್ತೊ ನಾಯ್ಕಿ ಬಡಗ

           ಪಾರ್ಜಿ    ಕೊಡಗು
           ಗದಬ

ಕೊರಗ ತಮಿಳು

           ಗೋಂಡಿ    ಮಲೆಯಾಳಂ
           ಕೊಂಡ
           ಪೆಂಗೊ
           ಕೊಯ     ತೋದ
           ಒಲ್ಲಾರಿ     ಕೋತ
           ಮಂಡ

ಇಂದಿನ ದ್ರಾವಿಡ ಭಾಷೆಗಳ ಧ್ವನಿವ್ಯವಸ್ಥೆಯಲ್ಲಿ ವ್ಯತ್ಯಾಸಗಳು ಸಾಕಷ್ಟಿವೆ. ಅವನ್ನು ಮೂಲ ದ್ರಾವಿಡ ಧ್ವನಿವ್ಯವಸ್ಥೆಯೊಡನೆ ಹೋಲಿಸಿ ನೋಡಿದಾಗಲೂ ಈ ಅಂಶ ಸ್ಪಷ್ಟವಾಗುತ್ತದೆ. ಮೂಲ ದ್ರಾವಿಡ ಧ್ವನಿ ವ್ಯವಸ್ಥೆಯಲ್ಲಿ, ಅದರಲ್ಲೂ ಸ್ವರ ವ್ಯವಸ್ಥೆಯಲ್ಲಿ ಹೆಚ್ಚು ಭಿನ್ನಾಭಿಪ್ರಾಯಗಳಿಲ್ಲ. ಮೂಲ ದ್ರಾವಿಡ ಸ್ವರ ವ್ಯವಸ್ಥೆ ಹೀಗಿದೆ :

          ಇ           ಉ
             ಎ      ಒ
                 ಅ
      ದೀರ್ಘತ್ವ :-

ಈ ಸ್ವರವ್ಯವಸ್ಥೆ ಸರಳವಾಗಿತ್ತು. ಇದರಲ್ಲಿ ಸಂಧ್ಯಕ್ಷರಗಳು ಇರಲಿಲ್ಲ. ಮೂಲ ದ್ರಾವಿಡದಲ್ಲಿ ಇದ್ದ ಸ್ವರಗಳು ಹತ್ತು. ಐದು ಹ್ರಸ್ವ, ಐದು ದೀರ್ಘ, ಈ ಹತ್ತು ಸ್ವರಗಳು ಮೂಲದ್ರಾವಿಡಕ್ಕೆ ಆರೋಪಿಸಿ ವಿವರಿಸುವಾಗ 5 ಸ್ವರಗಳು ಮತ್ತು ದೀರ್ಘತ್ವವೆಂಬ ಒಂದು ಯೋಗವಾಹ-ಹೀಗೆ ಆರು ಸ್ವರಗಳೆಂದು ಹೇಳಬಹುದು. ಈ ಸ್ವರವ್ಯವಸ್ಥೆಗೆ ಅಯ್ ಅವ್ ಎಂಬ ಸ್ವರವ್ಯಂಜನ ವರ್ಣಗುಚ್ಛವನ್ನು ಪುನರ್‍ರಚಿಸಿಕೊಳ್ಳುವ ಸಾಧ್ಯತೆಯನ್ನೂ ಸೂಚಿಸಿದ್ದಾರೆ. ದ್ರಾವಿಡ ಭಾಷೆಗಳ ಸ್ವರಗಳಲ್ಲಿ ಅ-ಆ ನಿಮ್ನ ಸ್ವರಗಳು, ಇ-ಈ ಪೂವೋಚ್ಚ ಸ್ವರಗಳು, ಎ-ಏ ಪೂರ್ವ ಮಧ್ಯಸ್ವರಗಳು, ಉ-ಊ ಪಶ್ಚೋಚ್ಚ ಸ್ವರಗಳು, ಒ-ಓ ಪಶ್ಚ ಮಧ್ಯ ಸ್ವರಗಳು. ಹೀಗೆ ಒಟ್ಟು ಸ್ವರಗಳು ಹತ್ತು. ಧ್ವನಿಗಳು ಬರಬಹುದಾದ ಪರಿಸರದ ದೃಷ್ಟಿಯಿಂದ ಈ ಹತ್ತೂ ಸ್ವರಗಳು ಶಬ್ದದ ಆದಿಯಲ್ಲಿ ಬರಬಹುದು. ಈ ಹತ್ತು ಸ್ವರಗಳು ಸ್ವರ ಸ್ಥಾನದಲ್ಲಿ ಬಂದಾಗಲೂ ಅವಕ್ಕೆ ಆದಿ ಇಲ್ಲವೇ ಅಂತ್ಯದ ಸ್ಥಾನದಲ್ಲಿ ಅಥವಾ ಪರವಾಗಿ ಬರುವ ವ್ಯಂಜನ ವರ್ಣಗಳನ್ನು ಆಧರಿಸಿ ಕೆಲವು ನಿರ್ಬಂಧಗಳು ಏರ್ಪಡುತ್ತವೆ. (ವ1) ಸ1 ವ2 ಸ2 .... ಈ ಮಾದರಿಯಲ್ಲಿ ಸ2 ಮೂಲದ್ರಾವಿಡ ಶಬ್ದರಚನೆಯಲ್ಲಿ ಅ ಇ ಉ ಸ್ವರಗಳು ಮಾತ್ರ ಬರಬಹುದೆಂಬ ಒಂದು ಅಭಿಪ್ರಾಯವಿದೆ. ಇದಕ್ಕೆ ಅಪವಾದಗಳನ್ನು ಗುರುತಿಸಿರುವುದರಿಂದ ಈ ಅಭಿಪ್ರಾಯದಲ್ಲಿ ಚರ್ಚೆಗೆ ಅವಕಾಶವಿದೆ. ದ್ರಾವಿಡ ಭಾಷೆಗಳ ಶಬ್ದಗಳಲ್ಲಿ ಎರಡು ಸ್ವರಗಳು ಅಕ್ಕಪಕ್ಕದಲ್ಲಿ ಬರುವುದಿಲ್ಲವೆಂಬುದನ್ನು ಗಮನಿಸಬಹುದು.

ಇಂದಿನ ದ್ರಾವಿಡ ಭಾಷೆಗಳಲ್ಲಿ ಪರಿಸರಬದ್ಧವಾಗಿ ಈ ಸ್ವರಗಳು ವ್ಯತ್ಯಾಸಗಳನ್ನು ಪಡೆದಿವೆ. ಕನ್ನಡ ಪಾರ್ಜಿ ತೊದ ಬ್ರಾಹುಇ ಮೊದಲಾದ ಭಾಷೆಗಳಲ್ಲಿ ಇಂಥ ವ್ಯತ್ಯಾಸಗಳನ್ನು ಕಾಣಬಹುದು. ಆದ್ಯಕ್ಷರದಲ್ಲಿ ದೀರ್ಘಸ್ವರವಿದ್ದು ಪರವಾಗಿ ಸ್ವರಾದಿಯಾದ ಪ್ರಕೃತಿಸಾಧಕ ಪ್ರತ್ಯಯ ಬಂದರೆ ಆದಿಸ್ವರ (ವ) ಸ ಹ್ರಸ್ವವಾಗುತ್ತದೆ. ಪರಿಣಾಮವಾಗಿ ದೀರ್ಘಸ್ವರಯುಕ್ತಧಾತುಗಳಿಗೆ ಎರಡೆರಡು ರೂಪಗಳು ಸಿದ್ಧಿಸುವುದುಂಟು. ಈ ದೀರ್ಘಸ್ವರಗಳು ಕನ್ನಡ ಮೊದಲಾದ ಕೆಲವು ಭಾಷೆಗಳಲ್ಲಿ ವ್ಯಂಜನಗುಚ್ಚಗಳೆದುರೂ ಹ್ರಸ್ವವಾಗುವುದುಂಟು, ಇಲ್ಲವೆ ಪರವಾದ ವ್ಯಂಜನಗಳಲ್ಲೊಂದು ಲೋಪವಾಗುವುದೂ ಉಂಟು. ದ್ರಾವಿಡ ಭಾಷೆಗಳಲ್ಲಿ ಶಬ್ದದ ನಡುವಣ ಸ್ವರ ದುರ್ಬಲವಾದುದು. ಅದರಿಂದ ಸ್ವರವ್ಯತ್ಯಾಸಗಳು ಸಹಜ. ಮೂಲ ದ್ರಾವಿಡ ವ್ಯಂಜನ ವ್ಯವಸ್ಥೆ :

        ಪ್  ತ್  ತ್  ಟ್  ಚ್  ಕ್ 
                   ¾õï
        ಮ್  ನ್     ಣ್  ಞï
             ಲ್     ಳ್
             ರ್
        ವ್              ಯ್

ಈ ಧ್ವನಿಮಾಗಳ ಜೊತೆಗೆ ಆಯ್ದಂ ಎಂಬುದು ಮೂಲದ್ರಾವಿಡ ಭಾಷೆಯಲ್ಲಿದ್ದಿರಬಹುದೆಂಬ ಅಭಿಪ್ರಾಯವೂ ಇದೆ. ಇದನ್ನು ಒಪ್ಪಿಕೊಂಡರೆ ಕೆಲವು ಶಬ್ದಯುಗ್ಮಗಳಲ್ಲಿ ವ್ಯಕ್ತವಾಗುವ ಹ್ರಸ್ವದೀರ್ಘ ಸ್ವರಪಲ್ಲಟದ ವಿವರಣೆ ಸುಲಭವಾಗುತ್ತದೆ. ಮುಖ್ಯವಾಗಿ ಭಾಷಾಸ್ವೀಕರಣ ಕಾರಣದಿಂದ ಮೂಲದ್ರಾವಿಡ ಈ ವ್ಯಂಜನ ವ್ಯವಸ್ಥೆ ಸ್ವರವ್ಯವಸ್ಥೆಗಿಂತ ಅಧಿಕವಾಗಿ ಆಧುನಿಕ ದ್ರಾವಿಡ ಭಾಷೆಗಳಲ್ಲಿ ವ್ಯತ್ಯಾಸಗಳನ್ನು ಪಡೆದಿದೆ. ಇವುಗಳಲ್ಲಿ ಬಹು ಮುಖ್ಯವಾದ ಕೆಲವು ಮಾರ್ಪಾಟುಗಳನ್ನು ಮಾತ್ರ ಇಲ್ಲಿ ನಿರೂಪಿಸಿದೆ. ಕನ್ನಡ ತೆಲಗು ಮೊದಲಾದ ಕೆಲವು ದ್ರಾವಿಡ ಭಾಷೆಗಳು ಮೂಲ ದ್ರಾವಿಡದಲ್ಲಿ ಇದ್ದುದಕ್ಕಿಂತ ಹೆಚ್ಚು ವ್ಯಂಜನಗಳನ್ನು ಅಳವಡಿಸಿಕೊಂಡಿವೆ-ಮಹಾಪ್ರಾಣ ವರ್ಣಗಳು, ಊಷ್ಮ ವರ್ಣಗಳು ಇತ್ಯಾದಿ. ಈ ಹೆಚ್ಚಿನ ವರ್ಣಗಳನ್ನು ಸಂಸ್ಕøತ, ಪ್ರಾಕೃತ ಮೊದಲಾದ ಆರ್ಯ ಭಾಷೆಗಳಿಂದ ಸ್ವೀಕರಿಸಿರುವ ಸಾಧ್ಯತೆಯಿದೆ. ಮೂಲದ್ರಾವಿಡದಲ್ಲಿ ಸ್ವರ್ಶ ವ್ಯಂಜನ ವರ್ಣಗಳು ಘೋಷಾಘೋಷ ಭೇದವನ್ನು ಪಡೆದಿದ್ದುವಾದರೂ ಆ ಭೇದ ಸನ್ನಿವೇಶ ಬದ್ಧವಾಗಿತ್ತು. ಘೋಷ-ಅಘೋಷಗಳು ಪ್ರತ್ಯೇಕ ಸ್ವತಂತ್ರ ಧ್ವನಿಮಾಗಳಾಗಿರಲಿಲ್ಲ. ಒಂದೇ ಧ್ವನಿಯ ಉಪಧ್ವನಿಗಳಾಗಿದ್ದವು. ಶಬ್ದಾದಿಯಲ್ಲಿ ಅಘೋಷ ಧ್ವನಿಗಳು ಮಾತ್ರ ಬರುತ್ತಿದ್ದುವು. ಶಬ್ದದ ನಡುವೆ ಬಿಡಿಯಾದ ಘೋಷಧ್ವನಿಗಳು ದ್ವಿತ್ವ ಸ್ಪರ್ಶಗಳೂ ಬರುತ್ತಿದ್ದುವು. ಇದನ್ನು ಕ್-, ಗ್-, -ಕ್- ಎಂಬಂತೆ ತೋರಿಸಬಹುದು. ಇವನ್ನು ಬರೆಯಲು ಒಂದೊಂದೇ ಲಿಪಿಸಂಕೇತ ಸಾಕಿತ್ತು. ಸ್ವರ್ಶ ವರ್ಣಗಳ ಸಂಖ್ಯೆ ಕ್ ಚ್ ಟ್ ತ್ ಪ್ ಎಂದು ಐದು ಮಾತ್ರ. ಇಂದಿಗೂ ತಮಿಳು ಮುಂತಾದ ಕೆಲವು ದ್ರಾವಿಡ ಭಾಷೆಗಳಲ್ಲಿ ಈ ವ್ಯತ್ಯಾಸಯಿದೆ. ಇದರ ಜೊತೆಗೆ ಮೂಲ ದ್ರಾವಿಡದಲ್ಲಿ ವತ್ಸ್ರ್ಯ ಸ್ಪರ್ಶಧ್ವನಿಯೊಂದು | ¿õï| ಇತ್ತು. ಮತ್ತು ಉಳಿದ ಸ್ವರ್ಶ ಧ್ವನಿಗಳಿರುವಂತೆ ಇದಕ್ಕೂ ಘೋಷ-ಅಘೋಷ ಪ್ರಭೇದಗಳನ್ನು ಕಲ್ಪಿಸಬಹುದು. ಕನ್ನಡವೇ ಮೊದಲಾದ ಹಲವು ಆಧುನಿಕ ದ್ರಾವಿಡ ಭಾಷೆಗಳಲ್ಲಿ ಈ ಆರು ಸ್ವರ್ಶ ವರ್ಣಗಳು ಕೆಲವು ವ್ಯತ್ಯಾಸಗಳನ್ನು ಪಡೆದಿವೆ. ಕನ್ನಡ, ತೆಲಗು, ತುಳು ಮೊದಲಾದ ಕೆಲವು ದ್ರಾವಿಡ ಭಾಷೆಗಳಲ್ಲಿ ಘೋಷ-ಅಘೋಷ ವ್ಯತ್ಯಾಸ ಅರ್ಥಾಭಿವ್ಯಕ್ತಿಯಲ್ಲಿ ಉಪಯುಕ್ತ ವ್ಯತ್ಯಾಸವಾಗಿ ಪರಿಣಮಿಸಿದುದರಿಂದ ಕ್, ಗ್, ಚ್, ಜ್, ತ್, ದ್, ಪ್, ಬ್, ಎಂಬ ಸ್ವತಂತ್ರ ಧ್ವನಿಮಾಗಳು ಏರ್ಪಟ್ಟಿವೆ. ಇವುಗಳಿಗೆ ಕನ್ನಡ ಮತ್ತು ತೆಲಗು ಭಾಷೆಯಲ್ಲಿ ಪ್ರತ್ಯೇಕ ಲಿಪಿಗಳಿವೆ. ಇಂಥದೊಂದು ಧ್ವನಿ ಮಾರ್ಪಾಟಿಗೂ ದ್ರಾವಿಡೇತರ ಆರ್ಯ ಭಾಷೆಗಳ ಪ್ರಭಾವ ಕಾರಣವಿರಬಹುದು.

ಕೆಲವು ದ್ರಾವಿಡ ಭಾಷೆಗಳಲ್ಲಿ ಚ್-ಸ್ಪರ್ಶವರ್ಣ ಸ್-ಧ್ವನಿಯಾಗಿ ಪರಿವರ್ತಿತವಾಗಿದೆ. ಚ್ ( ಸ್- ಧ್ವನಿವ್ಯತ್ಯಾಸ ಯಾವ ಪರಿಸರದಲ್ಲಿ ನಡೆದಿದೆಯೆಂಬುದರ ನಿಯಮ ಇನ್ನೂ ಸ್ಪಷ್ಟವಾಗಿಲ್ಲ. ಕನ್ನಡ ಮೊದಲಾದ ಕೆಲವು ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಶಬ್ದಾದಿಯ ಸ್ಪರ್ಶವರ್ಣ ಚ್-ಹಲವು ಶಬ್ದಗಳಲ್ಲಿ ಲೋಪವಾಗಿದೆ ; ಇಲ್ಲಿಯೂ ಯಾವ ಪರಿಸರದಲ್ಲಿ ಚ್-ಧ್ವನಿಲೋಪ ಘಟಿಸಿದೆಯೆಂಬ ನಿಯಮವೂ ಸರಿಯಾಗಿ ತಿಳಿಯದು.

ಕನ್ನಡ ತೆಲಗು ಮೊದಲಾದ ಕೆಲವು ದ್ರಾವಿಡ ಭಾಷೆಗಳಲ್ಲಿ ಮಾತ್ರ ಶಬ್ದಾದಿಯ ವ್-ಧ್ವನಿ ಹಲವು ಶಬ್ದಗಳಲ್ಲಿ ಉಭಯೋಷ್ಠ್ಯ ಘೋಷ ಸ್ವರ್ಶ ವರ್ಣ ಬ್-ಆಗಿ ಪರಿವರ್ತಿತವಾಗಿದೆ. ಮೂಲ ದ್ರಾವಿಡದಲ್ಲಿ ಮ್ ನ್ ಣ್ ಞï ಎಂಬ ನಾಲ್ಕು ಅನುನಾಸಿಕ ವರ್ಣಗಳಿದ್ದುವು. ಕೆಲವು ಪ್ರಕೃತಿ ಸಾಧಕ ಪ್ರತ್ಯಯಗಳು ಪರವಾಗಿ ಬಂದಾಗ ಅನುನಾಸಿಕ ಹಾಗೂ ಸಮಾನ ಸ್ಥಾನೀಯ ಸ್ಪರ್ಶವರ್ಣಗಳಿರುವ ವ್ಯಂಜನ ಗುಚ್ಛಗಳು ಸ್ಪರ್ಶಗಳಿಗೆ ಸಮವಾದ ದ್ವಿವ್ಯಂಜನಗಳನ್ನು ಪಡೆಯುತ್ತದೆ. ಮೂಲ ದ್ರಾವಿಡಕ್ಕೆ ಕಲ್ಪಿತವಾಗಿರುವ ಅಘೋಷ ಓಷ್ಕ್ಯ ಸ್ವರ್ಶ ಪ್-ಶಿಷ್ಯ ಕನ್ನಡದಲ್ಲಿ ಹ್-ಆಗಿದೆ. ಮತ್ತು ಶಿಷ್ಟೇತರ ಕನ್ನಡದಲ್ಲಿ ಅದೂ ಲೋಪವಾಗಿದೆ : ಪ್( ಹ್--(. ಮೂಲ ದ್ರಾವಿಡದಲ್ಲಿದ್ದ ಧ್ವನಿ ಕನ್ನಡದಲ್ಲಿ ಪರಿಸರಬದ್ಧವಾಗಿ ಳ್ ಇಲ್ಲವೇ ರ್ ಆಗೂ ¿õï ಧ್ವನಿ ರ್ ಆಗೂ ಪರಿವರ್ತನೆ ಪಡೆದಿದೆ. ಕನ್ನಡೇತರ ಉಳಿದ ದ್ರಾವಿಡ ಭಾಷೆಗಳಲ್ಲೂ ಹಲವು ಬಗೆಯ ಧ್ವನಿವ್ಯತ್ಯಾಸಗಳು ಮೂಲ ದ್ರಾವಿಡದಿಂದ ಪ್ರತ್ಯೇಕವಾದ ಮೇಲೆ ಸಂಭವಿಸಿವೆ. ಪ್ರತಿವೇಷ್ಟಿತ ಧ್ವನಿಗಳು ದ್ರಾವಿಡ ಭಾಷೆಗಳಲ್ಲಿ ಶಬ್ದದ ಪ್ರಾರಂಭದಲ್ಲಿ ಬರುವುದಿಲ್ಲವೆಂಬುದು ಮತ್ತೊಂದು ದ್ರಾವಿಡ ಧ್ವನಿನಿಯಮ.

ಆಧುನಿಕ ದ್ರಾವಿಡ ಭಾಷೆಗಳಲ್ಲಿ ಏಕಾಕ್ಷರಿಗಳೂ ಬಹ್ವಕ್ಷರಿಗಳೂ ಆದ ಕ್ರಿಯಾ ಧಾತುಗಳಿವೆ. ಆದರೆ ಮೂಲ ದ್ರಾವಿಡ ಭಾಷೆಯ ಧಾತುಗಳು ಏಕಾಕ್ಷರಿಗಳಾಗಿದ್ದುವು. ಇಂದಿನ ದ್ವ್ಯಕ್ಷರಿ ಹಾಗೂ ತ್ರ್ಯಕ್ಷರಿ ಕ್ರಿಯಾಧಾತುಗಳಲ್ಲಿ ಕೆಲವು ಪ್ರಕೃತಿ ಸಾಧಕ ಪ್ರತ್ಯಯಗಳಿಂದ ಘಟಕವಾಗಿರುವುದನ್ನು ಚಾರಿತ್ರಿಕ ಹಾಗೂ ವರ್ಣನಾತ್ಮಕ ಅಧ್ಯಯನದಿಂದ ಶ್ರುತಪಡಿಸಬಹುದು. ವ್ಯಂಜನಾಂತ ಶಬ್ದಗಳು ಸ್ವರಾಂತಗಳಾಗಿ ಮಾರ್ಪಾಟು ಪಡೆದಾಗ ಕೆಲವು ಏಕಾಕ್ಷರಿ ಕ್ರಿಯಾಧಾತುಗಳು ದ್ವ್ಯಕ್ಷರಿಗಳಾಗಿವೆ.


ದ್ರಾವಿಡ ಭಾಷೆಗಳು ಅಂಟು ಭಾಷೆಗಳು. ಇಲ್ಲಿ ಪ್ರಕೃತಿ ಪ್ರತ್ಯಯಗಳು ಅಂಟಿಕೊಂಡಿದ್ದರೂ ಸುಲಭವಾಗಿ ಗುರುತಿಸಿ ಬಿಡಿಸಿ ತೋರಿಸಬಹುದು. ಮೂಲ ದ್ರಾವಿಡದಲ್ಲಿ ಸಕರ್ಮಕ ಅಕರ್ಮಕ ಪ್ರಕೃತಿಗಳಿದ್ದವು. ಆಧುನಿಕ ದ್ರಾವಿಡ ಭಾಷೆಗಳಲ್ಲೂ ಇದು ಬಹುಮಟ್ಟಿಗೆ ಉಳಿದುಬಂದಿದೆ. ಮೂಲದ್ರಾವಿಡ ಕ್ರಿಯಾ ಪದಗಳಿಗೆ ಎರಡಕ್ಕಿಂತ ಹೆಚ್ಚು ಕಾಲವಾಚಕ ಪ್ರತ್ಯಯಗಳಿವೆ. ಉತ್ತಮ, ಮಧ್ಯಮ, ಮತ್ತು ಪ್ರಥಮ ಎಂಬ ಮೂರು ಪುರುಷಗಳಿವೆ. ಏಕವಚನ ಮತ್ತು ಬಹುವಚನ ಎಂಬ ಎರಡು ವಚನಗಳಿವೆ. ಉತ್ತಮ ಪುರುಷ ಬಹುವಚನದಲ್ಲಿ ವ್ಯಾವರ್ತಕ ಮತ್ತು ಅಭಿವ್ಯಾಪಕ ರೂಪಗಳು ಹೆಚ್ಚಿನ ದ್ರಾವಿಡ ಭಾಷೆಗಳಲ್ಲಿವೆ. ಪ್ರಥಮ ಪುರುಷದಲ್ಲಿ ಮಾನವರು ಹಾಗೂ ಇತರರು ಎಂಬಂತೆಯೂ ಲಿಂಗಭೇದ ಮೂಲ ದ್ರಾವಿಡದಲ್ಲಿದ್ದಿರಬೇಕೆಂಬ ಅಭಿಪ್ರಾಯವಿದೆ. ಕನ್ನಡದಂಥ ಕೆಲವು ದ್ರಾವಿಡ ಭಾಷೆಗಳಲ್ಲಿ ಈ ವ್ಯವಸ್ಥೆ ಕಂಡುಬರುತ್ತದೆ. ಆದರೆ ಈ ಹೇಳಿಕೆಗೆ ಪ್ರತಿಕೂಲವಾದ ಆಧಾರಗಳು ಕುಯಿ, ಗೋಂಡಿ ಮುಂತಾದ ಭಾಷೆಗಳಲ್ಲಿವೆ. ಕುರುಖ್ ನಂಥ ಕೆಲವು ಭಾಷೆಗಳಲ್ಲಿ ಮಾತ್ರ ಮಧ್ಯಮ ಮತ್ತು ಉತ್ತಮ ಪುರುಷಗಳಲ್ಲೂ ಕರ್ತೃವಿನ ಲಿಂಗವಿಕ್ಷೆಯಿದೆ. ಮೂಲದ್ರಾವಿಡದಲ್ಲಿ ಎರಡೇ ಲಿಂಗಗಳಿದ್ದಿರಬಹುದು. ತೊದ, ಬ್ರಾಹೂಇ ಭಾಷೆಗಳಲ್ಲಿ ಲಿಂಗವಿಕ್ಷೆಯೇ ಇಲ್ಲ. ದ್ರಾವಿಡ ಭಾಷೆಗಳಲ್ಲಿ ಶಬ್ದರೂಪವನ್ನು ಅನುಸರಿಸಿ ಲಿಂಗಭೇಧವಿಲ್ಲ. ಆದರೆ ಸಂಸ್ಕøತದಲ್ಲಿದೆ. ಇಲ್ಲಿ ಲಿಂಗ ಅರ್ಥಾನುಸಾರಿ.

ಮೂಲದ್ರಾವಿಡದಲ್ಲಿ ಬಾಂಧವ್ಯ ವಾಚಕ ಶಬ್ದಗಳು ಆ ಸಂಬಂಧ ಯಾರೊಂದಿಗೆ ಎಂಬುದನ್ನೂ ಸೂಚಿಸುತ್ತಿದ್ದವು. ಇಂದು ಕುರುಖ್, ಕೋಲಾಮಿಯಂಥ ಕೆಲವೇ ದ್ರಾವಿಡ ಭಾಷೆಗಳಲ್ಲಿ ಈ ವಿಧಾನವಿದೆ. ಸರ್ವನಾಮ ರೂಪಗಳಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ವಿಭಕ್ತಿಗಳ ಮತ್ತು ಇತರ ಪ್ರತ್ಯಯಗಳಲ್ಲಿ ಕೆಲವು ವ್ಯತ್ಯಾಸಗಳಾಗಿವೆ. ಕೆಲವು ಮುಕ್ತ ಆಕೃತಿಮಾಗಳು ಬದ್ಧ ಆಕೃತಿಮಾಗಳಾಗಿವೆ. ದ್ರಾವಿಡ ಭಾಷೆಗಳಲ್ಲಿ ಕರ್ಮಣಿ ಪ್ರಯೋಗಕ್ಕೆ ಅವಕಾಶ ಕಡಿಮೆ. ಒಂದರಿಂದ ಹತ್ತು ಮತ್ತು ನೂರು ಎಂಬ ಸಂಖ್ಯಾವಾಚಕಗಳಿವೆ. ಈ ರೂಪಗಳಿಂದ 999 ರ ವರೆಗೂ ಸಂಖ್ಯೆಯನ್ನು ಹೇಳಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾವಿರ, ಲಕ್ಷ, ಕೋಟಿ ಮೊದಲಾದ ಸಂಖ್ಯಾವಾಚಕಗಳು ಸಂಸ್ಕøತದಿಂದ ಬಂದ ಶಬ್ದಗಳು. ಕೆಲವು ದ್ರಾವಿಡ ಭಾಷೆಗಳಲ್ಲಿ ಹತ್ತಕ್ಕಿಂತ ಕಡಿಮೆ ಸಂಖ್ಯೆ ಹೇಳುವ ಶಬ್ದಗಳಲ್ಲಿ ಕೆಲವು ಲೋಪವಾಗಿದೆ. ಗೋಂಡಿ, ಕುಯಿ, ಪಾರ್ಜಿಯಂಥ ಕೆಲವು ಭಾಷೆಗಳಷ್ಟೇ ಐದು ಮತ್ತು ಆರು ಎಂಬ ಸಂಖ್ಯಾವಾಚಕಗಳಲ್ಲಿ ಅವುಗಳ ಮೂಲರೂಪಗಳಲ್ಲಿದ್ದ ಶಬ್ದಾದಿಯ ಚ್-ಧ್ವನಿಯನ್ನುಳಿಸಿಕೊಂಡಿದೆ.

ಮನೋಭಾವವಿರಲಿಲ್ಲವಲ್ಲದೆ ಅವು ಮಿಶ್ರಿತವಾದ ಗುಂಪುಗಳೇ ಆಗಿದ್ದವು. ಆದ್ದರಿಂದ ಭಾರತದ ಇತಿಹಾಸದ ಪ್ರಾರಂಭದಿಂದಲೂ ಇಂಥ ಜನಾಂಗದ ಮಿಶ್ರಣವನ್ನು ಕಾಣಬಹುದಾಗಿದೆ. ಭಾಷೆಯೇ, ಜನಾಂಗದ ಜೀವಾಳವಾದುದರಿಂದ, ಆದರಿಂದಲೇ ಒಂದು ಜನಾಂಗದ ಸಂಸ್ಕøತಿಯನ್ನು ಅಳೆಯಬೇಕೇ ಹೊರತು, ಬುಡಕಟ್ಟಿನ ಆಧಾರದ ಮೇಲಲ್ಲ.

ಮೇಲೆ ಪಟ್ಟಿ ಮಾಡಿದ ಆರು ಗುಂಪುಗಳು ಒಂದು ಜನಾಂಗವಾಯಿತಲ್ಲದೆ ಅದು ನಾಲ್ಕು ಭಾಷೆಗಳನ್ನು ಹೊಂದಿತ್ತು. ಅದರಲ್ಲಿ ದ್ರಾವಿಡ ಮತ್ತು ಇಂಡೊ -ಯೂರೋಪಿಯನ್ (ಆರ್ಯ) ಭಾಷೆಗಳು ಸೇರಿವೆ. ದ್ರಾವಿಡ ಭಾಷೆಗಳು ವಿಶೇಷವಾಗಿ ದಕ್ಷಿಣದಲ್ಲಿ ಕೇಂದ್ರೀಕೃತವಾದರೂ ಉತ್ತರ ಭಾರತದ ಛೋಟನಾಗಪುರದಲ್ಲಿ, ದ್ರಾವಿಡ ಭಾಷೆಯನ್ನು ಬಳಸುವ ಓರಾಯನರಲ್ಲಿ ಮತ್ತು ಕೋಲ್ ಭಾಷೆಯನ್ನು ಬಳಸುವ ಮುಂಡರಲ್ಲಿ ಬಲೂಚಿಸ್ಥಾನದ ಬ್ರಾಹುಇ ಭಾಷೆಯಲ್ಲಿ ದ್ರಾವಿಡ ಭಾಷೆಗಳ ಪ್ರಭಾವವನ್ನು ಕಾಣಬಹುದಾಗಿದೆ. ಮುಖ್ಯವಾಗಿ ಭಾರತಕ್ಕೆ ಬಂದು ನೆಲಸಿದ ವಿವಿಧ ಜನಾಂಗಗಳು ತಮ್ಮ ಸಂಸ್ಕøತಿಯನ್ನು ಬೆಳಸಿ, ಅವೆಲ್ಲವನ್ನೂ ಒಂದುಗೂಡಿಸಿ, ಭಾರತೀಯ ಸಂಸ್ಕøತಿಯನ್ನು ರೂಪಿಸಿಕೊಂಡಿದ್ದು ಇತಿಹಾಸದ ಮುಖ್ಯ ಘಟನೆಯಾಗಿದೆ. ಈ ಸಂಸ್ಕøತಿಯ ಸಾಗರದಲ್ಲಿ ಗುಂಪುಗಳ ಕೊಡುಗೆಯನ್ನು ಬೇರ್ಪಡಿಸುವುದು ಸುಲಭದ ಕೆಲಸವಾಗದಿದ್ದರೂ ಅವುಗಳ ಮುಖ್ಯ ಲಕ್ಷಣಗಳು ತೋರಿಸುವುದು ಕಷ್ಟದ ಕೆಲಸವಾಗದು.

ದ್ರಾವಿಡರು ನಾಗರಿಕರಾಗಿದ್ದು ಭಾರತದಲ್ಲಿ ಪಟ್ಟಣಗಳನ್ನು ಕಟ್ಟಿ ನಗರ ನಾಗರಿಕತೆಯನ್ನು ರೂಪಿಸಿದರು. ವ್ಯಾಪಾರ ಮತ್ತು ವಾಣಜ್ಯ ಸಂಬಂಧಗಳನ್ನು ಬೆಳೆಸಿದರು. ಭಾರತದ ಎಲ್ಲ ಕಡೆಗಳಲ್ಲೂ ನೆಲೆಸಿದರು. ಬಲೂಚಿಸ್ತಾನದಲ್ಲಿ ಬಳಕೆಯಲ್ಲಿರುವ ಬ್ರಾಹುಇ ಭಾಷೆ ದ್ರಾವಿಡ ಭಾಷೆಯ ಛಾಯೆಯನ್ನು ಹೊಂದಿರುವುದರಿಂದ, ದ್ರಾವಿಡರು ಸಿಂಧ್, ರಜಪುಟಾಣ ಮತ್ತು ಮಾಳವದ ಮೂಲಕ ಈಗಿನ ಮಹಾರಾಷ್ಟ್ರ ಪ್ರದೇಶ ಮತ್ತು ದಕ್ಷಿಣ ಭಾರತದ ಇತರ ಪ್ರದೇಶಗಳಿಗು ಪ್ರಸರಿಸಿದರೆಂದು ಹೇಳಬಹುದಾಗಿದೆ. ಅಲ್ಲದೆ ಸುಪ್ರಸಿದ್ಧವಾದ ಸಿಂಧೂಕಣಿವೆ ನಾಗರಿಕತೆ ಪಟ್ಟಣದಲ್ಲಿ ಕೇಂದ್ರೀಕೃತವಾಗಿದ್ದು, ಅಲ್ಲಿನ ಭಾಷೆ ದ್ರಾವಿಡ ಭಾಷೆಯನ್ನು ಹೋಲುವುದರಿಂದ ಸಿಂಧೂಕಣಿವೆಯ ಜನ ದ್ರಾವಿಡ ಗುಂಪಿಗೆ ಸೇರಿದವರೆಂದು ಹೇಳವುದು ತಪ್ಪಾಗಲಾರದು. ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ ಹೀರಾಸ್ ಮತ್ತು ಎಸ್.ಆರ್.ರಾವ್ ಅವರು ಇದೇ ತೀರ್ಮಾನಕ್ಕೆ ಬಂದಿದ್ದಾರೆ.

ಆರ್ಯರು ಭಾರತಕ್ಕೆ ಬಂದಾಗ ಇಲ್ಲಿ ಎರಡು ಗುಂಪುಗಳನ್ನು ಕಂಡರು. ಅವರನ್ನು ದಾಸ ಅಥವಾ ದಸ್ಯು ಮತ್ತು ನಿಷಾದರೆಂದು ಕರೆದರು. ಶತ್ರುಗಳಾದ ಅವರು ಆರ್ಯರಿಗೆ ದಾಸರೆನಿಸಿಕೊಂಡರು, ಕಳ್ಳರೆನಿಸಿಕೊಂಡರು. ಆದರೆ ದಾಸ ಅಥವಾ ದಸ್ಯು ಎಂಬ ಪದಗಳು ಪ್ರಾಚೀನ ಇರಾನಿನಲ್ಲೇ ಬಳಕೆಯಲ್ಲಿದ್ದುವು. ಅದು ಗುಂಪಿನ ನಾಮವಾಗಿತ್ತೇ ಹೊರತು ಸೇವಕನೆಂಬ ಅರ್ಥದಲ್ಲಿರಲಿಲ್ಲ. ಅಲ್ಲದೆ ಭಾರತದ ತತ್ತ್ವಶಾಸ್ತ್ರ, ಸಾಹಿತ್ಯ, ಧರ್ಮ ಮತ್ತು ಸಂಸ್ಕøತಿಯಲ್ಲಿಯ ಉದಾತ್ತ ಮತ್ತು ಒಳ್ಳೆಯ ಭಾವನೆಗಳೆಲ್ಲ ಆರ್ಯರಿಂದಲೇ ರೂಪಿತವಾಯಿತೆಂದೂ ಇಲ್ಲಿನ ಕಂದಾಚಾರ ಪದ್ಧತಿ ಮತ್ತು ಹಿಂದೂ ಧರ್ಮದಲ್ಲಿ ಕಂಡು ಬರುವ ಮೂಢನಂಬಿಕೆಗಳು, ಕೆಟ್ಟ ಲಕ್ಷಣಗಳು ದ್ರಾವಿಡರಿಂದ ಬಂತೆಂದೂ ಹೇಳುವುದು ವಾಡಿಕೆ. ಆದರೆ ಈ ಅಭಿಪ್ರಾಯ ಈಗ ತಿರಸ್ಕರಿಸಲ್ಪಟ್ಟಿದೆ.

ಆರ್ಯ ಮತ್ತು ದ್ರಾವಿಡ ಲಕ್ಷಣಗಳನ್ನು ಅಳವಾಗಿ ಪಾಂಡಿತ್ಯಪೂರ್ಣವಾಗಿ ವಿವೇಚಿಸಿರುವ ವಿದ್ವಾಂಸರ ಅಭಿಪ್ರಾಯದ ಪ್ರಕಾರ ಭಾರತದ ನಾಗರಿಕತೆ ಮತ್ತು ಸಂಸ್ಕøತಿಯ ಬೆಳವಣಿಗೆಯಲ್ಲಿ ದ್ರಾವಿಡರ ಪಾತ್ರ ಹಿರಿದಾದುದೆಂದೂ ಸಿಂಧೂ ಕಣಿವೆಯ ಸಂಸ್ಕøತಿ ಆರ್ಯರಿಗಿಂತ ಉತ್ತಮವಾದುದೆಂದೂ ತಿಳಿದು ಬಂದಿದೆ. ಹಿಂದೂಧರ್ಮದ ಅನೇಕ ದೇವತೆಗಳು ದ್ರಾವಿಡರ ಕೊಡುಗೆಯೇ ಶಿವಾರಾಧನೆ, ಮಾತೃದೇವತೆಯ ಪೂಜೆ, ನಂದಿ, ಶಿವ ಉಮೆಯರ ಪೂಜೆ, ಯೋಗ - ಇವು ದ್ರಾವಿಡ ಲಕ್ಷಣಗಳು. ದೇವರನ್ನು ಪೂಜಿಸುವ ಪದ್ಧತಿ ದ್ರಾವಿಡರದೇ ಆಗಿದೆ. ಹಿಂದೂಧರ್ಮದಲ್ಲಿ ಶ್ರೇಷ್ಠಸ್ಥಾನ ಪಡೆದ ಶಿವ, ಉಮೆ, ವಿಷ್ಣು, ಹನುಮಂತ ಮತ್ತು ಗಣೇಶ ದ್ರಾವಿಡ ದೇವರುಗಳು ಹಿಂದೂ ಧರ್ಮದಲ್ಲಿ ಸೇರಿಹೋಗಿವೆ.

ದ್ರಾವಿಡರ ಪ್ರಭಾವವನ್ನು ಭಾರತೀಯರ ಸಂಸ್ಕøತಿಯ ನಾನಾ ಪ್ರಕಾರಗಳಲ್ಲಿ ಕಾಣಬಹುದಾಗಿದೆ. ಉತ್ತರ ಭಾರತದ ಊರುಗಳ ಹೆಸರಿನಲ್ಲಿ, ವೇದ ಮತ್ತು ಭಾರತದ ಸಾಹಿತ್ಯದಲ್ಲಿ, ಆರ್ಯರ ಭಾಷೆಗಳಲ್ಲಿ. ಮತಪದ್ಧತಿಯಲ್ಲಿ ಸಂಪ್ರದಾಯದಲ್ಲಿ ಪುರಾಣ ಇತಿಹಾಸದಲ್ಲಿ, ದ್ರಾವಿಡ ಲಕ್ಷಣಗಳನ್ನು ಗುರುತಿಸಲಾಗಿದೆ. ಆರ್ಯ ಸಂಸ್ಕøತಿಯ ಬಹುಭಾಗ ದ್ರಾವಿಡರದೇ ಆಗಿದೆ. ಭಾರತೀಯ ಆರ್ಥಿಕ ವ್ಯವಸ್ಥೆ, ಭಾರತೀಯ ಭಾಷೆಗಳು, ಸಮಾಜಿಕ ಸಂಸ್ಥೆಗಳು ಮತ್ತು ಸಂಪ್ರದಾಯ ಮದುವೆ ಮುಂತಾದ ಪದ್ಧತಿಗಳು - ಇವುಗಳಲ್ಲಿ ದ್ರಾವಿಡರ ಪ್ರಭಾವವಿದೆ. ನಡೆ ನುಡಿಗಳಲ್ಲಿ ದ್ರಾವಿಡ ಛಾಯೆಯಿದೆ. (ಕೆ.ಟಿ.ಆರ್.)