ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೇವಾರಿ

ವಿಕಿಸೋರ್ಸ್ದಿಂದ

ನೇವಾರಿ - ಈ ಪದದ ವ್ಯುತ್ಪತ್ತಿಯ ಬಗ್ಗೆ ಇತಿಹಾಸಕಾರರಲ್ಲಿ ಅಭಿಪ್ರಾಯ ಭೇದವಿದ್ದರೂ ಇದು ಕೇವಲ ನೇಪಾಲದ ಇನ್ನೊಂದು ರೂಪವಾಗಿದ್ದು ಅಲ್ಲಿ ವಾಸಿಸುವ ಜನರನ್ನು ಸೂಚಿಸುತ್ತದೆಯೆಂಬುದನ್ನು ಮಾತ್ರ ಹೇಳಬಹುದಾಗಿದೆ. ಈ ಪದದ ಬಳಕೆಯನ್ನು ಸೂಚ್ಯವಾಗಿ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಕಾಣಬಹುದಾದ್ದರಿಂದ ಅದಕ್ಕೆ ಹಿಂದೆ ಬಹುಶಃ ಕ್ರಿಸ್ತಪೂರ್ವ 6ನೆಯ ಶತಮಾನದಿಂದ ನೇವಾರಿ ಸಮುದಾಯ ವೃಜ್ಜಿ ಒಕ್ಕಟ್ಟಿಗೆ ಸೇರಿ ಕಾಠಮಾಂಡೂ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪ್ತಿವಾಗಿ ಮೊದಲು ಆಸ್ಟ್ರೋ ಮೆಡಿಟರೇನಿಯನ್ನರನ್ನು ಅನುಕರಿಸುತ್ತ ಕ್ರಮೇಣ ಮಂಗೋಲಿಯನ್ನರೊಡನೆ ಮಿಶ್ರಿತವಾಯಿತೆಂದು ತಿಳಿಯಬಹುದಾಗಿದೆ. ಇವರು ಬಹುಶಃ ಬೌದ್ಧಮತಾವಲಂಬಿಗಳಾಗಿ ಭಾರತೀಯರ ನಡೆನುಡಿಗಳನ್ನು ಹೆಚ್ಚಾಗಿ ಅನುಸರಿಸಿದರೂ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ತಮ್ಮದೇ ಅದ ವಿಧಿ ವಿಧಾನಗಳನ್ನು ಹೊಂದಿದವರಾಗಿದ್ದಾರೆ. ಉದಾಹರಣೆಗೆ, ವಿವಾಹಿತೆಂiÀi ಪತಿ ಮೃತನಾದರೆ ಆಕೆ ಅವಿಧವೆಯಾಗಿಯೇ ಉಳಿಯುತ್ತಾಳೆ.

ಇಂಡೋ-ಟಿಬೆಟನ್ ಎಂಬುದು ಇವರ ಸುಸಂಕೃತಿಯ ದ್ಯೋತಕವಾಗಿದ್ದು ಇದು ಭಾರತೀಯ ಸಂಸ್ಕøತಿಗಿಂತ ಪೂರ್ವದ್ದೆಂದು ಹೇಳಲಾಗಿದೆ. ನೇವಾರಿಗಳು ವರ್ಷದಲ್ಲಿ ಅನೇಕ ಹಬ್ಬಗಳನ್ನಾಚರಿಸಿ, ಅಂಥ ಸಮಯದಲ್ಲಿ ಮಹಾಕಾಳಿ ತಾರ ಮತ್ತು ಸುಗ್ಗಿಯ ಕುಣಿತ ಮುಂತಾದ ನೃತ್ಯಗಳಲ್ಲಿ ಪಾಲ್ಗೊಳ್ಳುವರು. ಇವರ ಮುಖ್ಯ ಕಸಬು ವ್ಯಾಪಾರ. ಕರಕುಶಲ ಕೆಲಸಗಳನ್ನೂ ಇವರು ಬಲ್ಲರು.

ನೇವಾರಿ ಭಾಷೆ ಪ್ರಪಂಚದ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು ಇದು ಮಂಗೋಲ್ ಜನಕರಾದ ಟಿಬೆಟೊ-ಬರ್ಮಿಗೆ ಸೇರಿದ್ದಾಗಿದೆ. ಕಾಠಮಾಂಡೊ ಇವರ ಕಲೆಯ ತೌರಾಗಿದೆ. ಪಗೋಡ ಎಂಬುದು ಈ ಜನಕ್ಕೆ ವಿಶಿಷ್ಟವಾದ ಒಂದು ದೇವಾಲಯ ಮಾದರಿ.

ನೇವಾರಿ ಸಂವತ್ಸರ ಠಾಕುರೀ ವಂಶದ ದೊರೆ ಅಭಯ ಮಲ್ಲನ ಮಗನಾದ ಜಯದೇವನಿಂದ ಪ್ರಾರಂಭಿಸಲ್ಪಟ್ಟಿತೆಂಬುದು ನೇಪಾಲದ ವಂಶಾವಳಿಯಿಂದ ತಿಳಿದು ಬರುತ್ತದೆ. ಇದೇ ವಂಶಾವಳಿ ವಿಕ್ರಮ ಮತ್ತು ನೇವಾರಿ ಕಾಲಗಳಿಗೆ 937 ವರ್ಷಗಳ ಅಂತರವನ್ನು ವ್ಯಕ್ತಪಡಿಸುತ್ತದೆ. ಕೊಟ್ಟಿರುವ ನೇವಾರಿ ವರ್ಷಗಳಿಗೆ 878-79 ವರ್ಷಗಳನ್ನು ಸೇರಿಸಿದಾಗ ಗೊತ್ತಾದ ಕ್ರಿಸ್ತಶಕ ವರ್ಷವನ್ನು ಪಡೆಯಬಹುದು; ಈ ಗಣನೆ ಈಗಲೂ ಬಳಕೆಯಲ್ಲಿದೆ. (ವಿ.ಇ.ಎನ್.)