ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೋವುಶಾಮಕ

ವಿಕಿಸೋರ್ಸ್ದಿಂದ

ನೋವುಶಾಮಕ- ಶರೀರದ ಹೊರ ಭಾಗದಲ್ಲಿ ಉಂಟಾಗುವ ವೇದನೆಯನ್ನು ಕಡಿಮೆ ಮಾಡಲು ಉಪಯೋಗಿಸುವ ಔಷಧಿ (ಅನೋಡೈನ್). ಇದನ್ನು ಮೌಖಿಕವಾಗಿ ಸೇವಿಸುವುದರಿಂದಲೂ ಶರೀರದ ನೋವಿನ ಭಾಗಕ್ಕೆ ಲೇಪಿಸುವುದರಿಂದಲೂ ನೋವನ್ನು ಶಮನಗಳಿಸಬಹುದು, ಅಪೀಮು, ಮಾರ್ಫಿನ್, ಈಥರ್ ಪೊಟ್ಯಾಸಿಯಮ್ ಬ್ರೊಮೈಡ್ ಮೊದಲಾದವು ಉದಾಹರಣೆಗಳು. (ಎಂ.ಎಸ್.ಎಸ್.)