ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಮತಿ ಲಕ್ಷ್ಮೀನರಸಿಂಹ

ವಿಕಿಸೋರ್ಸ್ದಿಂದ

ನ್ಯಾಮತಿ ಲಕ್ಷ್ಮೀನರಸಿಂಹ - 19ನೆಯ ಶತಮಾನದ (ಸು. 1860) ಒಬ್ಬ ಕವಿ. ವೈಷ್ಣವ ಬ್ರಾಹ್ಮಣ. ಕೌಂಡಿಣ್ಯ ಗೋತ್ರದವ. ಸ್ಥಳ ನ್ಯಾಮತಿ. ತಲ್ಪಗಿರಿರಂಗ ವಿಠಲನ ಪರಮ ಭಕ್ತ. ತಂದೆ ತಾಯಿಯರ ಸುಬ್ಬಣ್ಣ. ಲಕ್ಷ್ಮೀವಾಂಬೆ. ರಾಮಕಥಾರಂಜವೆಂಬುದು ಈತನ ಏಕೈಕ ಕೃತಿ. ವೃತ್ತ, ಗೀತಿಕೆ, ಸೀಸಪದ್ಯ, ಕಂದ-ಹೀಗೆ ವಿವಿಧ ಛಂದಸ್ಸಿನಲ್ಲಿರುವ ಈ ಗ್ರಂಥದಲ್ಲಿ 68 ಸರ್ಗಗಳಿವೆ. ಹನುಮಂತನ ಸೀತಾನ್ವೇಷಣ ಕಾರ್ಯ ಕೃತಿಯನ್ನು ವಸ್ತು. ಹನುಮಂತನ ಶ್ರೀರಾಮ ಭಕ್ತಿಯನ್ನು ಹೆಚ್ಚು ರಸವತ್ತಾಗಿ ಚಿತ್ರಿಸಲಾಗಿದೆ. ಕನ್ನಡ ಕವಿತೆಯಾದರೂ ತೆಲುಗಿನ ವಾಸನೆ ವಿಶೇಷವಾಗಿ ಕಾಣುತ್ತದೆ ಎಂದು ಗ್ರಂಥದ ಬಗ್ಗೆ ಕರ್ನಾಟಕ ಕವಿಚರಿತಕಾರರು ಅಭಿಪ್ರಾಯಪಟ್ಟಿದ್ದಾರೆ. (ಕೆ.ಆರ್.ಎಸ್.ಜಿ.)