ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯಾಯಾಚರ ಮುತ್ತ ಪ್ರಕ್ರಿಯೆ

ವಿಕಿಸೋರ್ಸ್ದಿಂದ

ನ್ಯಾಯಾಚರ ಮುತ್ತ ಪ್ರಕ್ರಿಯೆ - ನ್ಯಾಯದಲ್ಲಿ ಸಾರಭೂತ (ಸಬ್ಸ್ವಾಂಟಿವ್) ಮತ್ತು ಪ್ರಕ್ರಿಯಾತ್ಮಕ (ಪ್ರೊಸೀಜರಲ್) ಎಂಬ ಎರಡು ವಿಭಾಗಗಳಿವೆಯೆಂದು ಹೇಳಲಾಗಿದೆ. ಪ್ರಕ್ರಿಯಾತ್ಮಕ ನ್ಯಾಯವನ್ನು ತತ್ತ್ವಾವಲಂಬಿ ಅಥವಾ ಗೌಣ (ಅಡ್ಜೆಕ್ಟಿವ್) ನ್ಯಾಯ ಎಂದೂ ಹೇಳಲಾಗುತ್ತದೆ. ಹಕ್ಕುಗಳನ್ನು ನಿರ್ದೇಶಿಸಿ, ನಿರ್ಣಯಿಸಿ ಅವನ್ನು ಸ್ಥಾಪಿಸುವುದು ಸಾರಭೂತ ನ್ಯಾಯ. ಪ್ರಕ್ರಿಯಾತ್ಮಕ ನ್ಯಾಯ ಅದಕ್ಕೆ ಸಹಾಯಕವಾಗಿ ಅದನ್ನು ರಕ್ಷಿಸುವುದರಲ್ಲಿ ನೆರವಾಗುತ್ತದೆ. ಈ ವಿವರಣೆಯಂತೆ ಸಾರಭೂತ ಕಾನೂನು ಹಕ್ಕುಗಳ ವಿಚಾರಗಳನ್ನೂ ಪ್ರಕ್ರಿಯಾತ್ಮಕ ಕಾನೂನು ಪರಿಹಾರ ಕ್ರಮಗಳನ್ನೂ ಹೇಳುತ್ತದೆ. ನ್ಯಾಯವನ್ನು ಈ ರೀತಿ ಖಚಿತವಾಗಿ ವಿಭಾಗಿಸುವುದು ಸರಿಯಲ್ಲವೆಂದು ಒಂದು ಅಭಿಪ್ರಾಯ. ಪರಿಹಾರಕ್ಕೆ ಸಂಬಂಧಪಟ್ಟ ಸಂಪೂರ್ಣ ಕಾನೂನು ಪ್ರಕ್ರಿಯಾತ್ಮಕ ಕಾನೂನಿನಲ್ಲಿ ಅಡಕವಾಗಿಲ್ಲ. ಪ್ರಕ್ರಿಯಾತ್ಮಕ ಕಾನನಿನಲ್ಲೂ ಹಕ್ಕುಗಳನ್ನು ಅಡಕವಾಗಿವೆ. ಪ್ರಕ್ರಿಯಾತ್ಮಕ ಕಾನೂನಿಗೆ ಹಕ್ಕುಗಳನ್ನು ಸ್ಥಾಪಿಸುವ ಸಾಮಥ್ರ್ಯ ಇದೆ. ನಷ್ಟ ಪಡೆಯುವ ಹಕ್ಕು ಪರಿಹಾರಕವಾದ್ದು. ಆದರೆ ಅದು ಯಾತ್ಮಕವಲ್ಲ. ಈ ಕಾರಣಗಳಿಂದ ಸಾರಭೂತ ಮತ್ತು ಪಕ್ರಿಯಾತ್ಮಕ ಎಂಬುದಾ ತೀಕ್ಷ್ಣ ವಿಭೇದ ಸರಿಯಾಗದು. ಇವುಗಳ ವ್ಯತ್ಯಾಸ ವಾಸ್ತವಿಕವಾದ್ದಲ್ಲ. ಅಂತವಾದ್ದಲ್ಲ. ಅದು ರೂಪಭೇದ ಮಾತ್ರ.

ಹೀಗಿದ್ದರೂ ಪ್ರಕ್ರಿಯಾತ್ಮಕ ಕಾನೂನು ಎಂಬ ವಿಭಾಗಕ್ಕೆ ಒಂದು ತೆರನಾದ ಅರ್ಥವನ್ನು ನೀಡಬಹುದಾಗಿದೆ. ಪ್ರಕ್ರಿಯಾತ್ಮಕ ಕಾನೂನು ವ್ಯಾಜ್ಯದ (ಲಿಟಿಗೇಷನ್) ಪ್ರಕ್ರಿಯೆಯನ್ನು ನಿರ್ದೇಶಿಸುವ ಕಾನೂನಿನ ಭಾಗ. ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿ ಅವನ್ನು ಮುಂದುವರಿಸುವ ವಿಧಾನವನ್ನು ಹೇಳುವ ನಿಯಮಗಳನ್ನು ಅದು ಒಳಗೊಂಡಿದೆ. ಅದು ಕ್ರಿಯಾತ್ಮಕ ಕಾನೂನು (ಲಾ ಅಫ್ ಅಕ್ಷಯನ್). ಕ್ರಿಯೆ ಎಂಬ ಶಬ್ಧದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ದಾವೆಗಳೂ ಸೇರಿದಂತೆ ಎಲ್ಲ ದಾವೆಗಳೂ ಬರುತ್ತವೆ. ಇವನ್ನು ಬಿಟ್ಟು ಉಳಿದುದೆಲ್ಲ ಸಾರಭೂತ ಕಾನೂನು ಎಂದೂ ಹೆಳಲಾಗಿದೆ. (ಕೆ.ಜಿ.ಬಿ.)

ಸಾರಭೂತ ಮತ್ತು ಪ್ರಕ್ರಿಯಾತ್ಮಕ ಕಾನೂನುಗಳಿಗೆ ಇರುವ ಭೇದಗಳು ಇವು: ಪ್ರಕ್ರಿಯಾತ್ಮಕ ಕಾನೂನಿನಲ್ಲಿ ಎರಡು ಭಾಗಗಳಿವೆ. ಒಂದು ನ್ಯಾಯಾಚಾರ, ಇನ್ನೊಂದು ಸಾಕ್ಷ್ಯವನ್ನು ಕುರಿತ ಕಾನೂನು. ಕಾನೂನುಬದ್ಧ ಹಕ್ಕುಗಳನ್ನು ಚಲಾಯಿಸುವ ವಿಧಾನವೇ ನ್ಯಾಯಾಚಾರ. ನ್ಯಾಯಾಲಯಗಳು ಹಕ್ಕುಭಾದ್ಯತೆಗಳ ವಿಚಾರಣೆ ತೆಗೆದುಕೊಳ್ಳುವ ವೇಳೆ ಅವನ್ನು ರೂಪಿಸಿದ ವಿಧಾನಾಂಗದ ಮೂಲೋದ್ದೇಶವನ್ನು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ನ್ಯಾಯಾಲಯ ಅಂತಿಮವಾಗಿ ಕೊಡುವ ತೀರ್ಪುಗಳು ವಿಧಾನಾಂಗದ ಉದ್ದೇಶವನ್ನು ಅಭಿಮತವನ್ನು ಪುರಸ್ಕರಿಸುವಂತಿರಬೇಕು. ಪುಷ್ಟೀಕರಿಸುವಂತಿರಬೇಕು. ನ್ಯಾಯಾಚಾರ ಎಷ್ಟೇ ಸಮಂಜಷವಾಗಿರಲಿ ಅಥವಾ ಹಳೆಯದಾಗಿರಲಿ ಅದು ವಿಧಾನಾಂಗದ ಗುರಿ. ಉದ್ದೇಶ ಮತ್ತು ಸಮರ್ಥನೆಗೆ ವ್ಯತಿರಿಕ್ತವಾಗಿರಕೂಡದು. ಕಾನೂನುಗಳಲ್ಲಿ ಹೇಳಿರುವ ಕಟ್ಟುಪಾಡುಗಳನ್ನು ಅರ್ಥೈಸುವ ವೇಳೆಯಲ್ಲಿ ಪ್ರತಿಕೂಲವೆನಿಸಿದ ನ್ಯಾಯಾಚಾರ-ಒಂದು ವೇಳೆ ಅಂಥ ನ್ಯಾಯಾಚಾರ ಅನೇಕ ವರ್ಷಗಳಿಂದ ಜಾರಿಯಲ್ಲಿದ್ದರೂ-ವ್ಯರ್ಥವೆನಿಸುತ್ತದೆ. ಏಕೆಂದರೆ ಸಮಾಜದ ಬೇಕು ಬೇಡಗಳನ್ನು ಗಮನಿಸಿ, ಸಮಾಜದ ಏಳಿಗೆಗಾಗಿ ಕಾಲಕಾಲದಲ್ಲಿ ರೂಪಿಸಿದ ಕಾನೂನಿನ ಸಂಕಲ್ಪವನ್ನು ಪ್ರತಿಕೂಲ ನ್ಯಾಯಾಚಾರ ವಿಫಲಗೊಳಿಸುತ್ತದೆ. ಪ್ರತಿಕೂಲ ನ್ಯಾಯಾಚಾರಕ್ಕೆ ಎಂದೆಂದಿಗೂ ಪುರಸ್ಕಾರ ದೊರೆಯದು. ಆದರೆ, ಯಾವುದಾದರೂ ಕಾನೂನಿನ ಅರ್ಥಕಲ್ಪನೆಯನ್ನು ಸರಿಯಾಗಿ ಮಾಡಲು ಸಾಧ್ಯವಾಗದಾಗ ಅಥವಾ ಅದನ್ನು ಅರ್ಥೈಸುವಲ್ಲಿ ಶಂಕೆ ಉದ್ಭವಿಸುವಂತಿದ್ದಾಗ ಬಹಳ ಕಾಲದಿಂದ ನ್ಯಾಯಾಲಯಗಳಲ್ಲಿ ನಡೆದು ಬಂದ ನ್ಯಾಯಾಚಾರದ ಅಧಾರದ ಮೇಲೆ ಅದರ ಅರ್ಥವನ್ನು ಗ್ರಹಿಸಲು ಬರುತ್ತದೆ. ಅಂಥ ಸಂದರ್ಭಗಳಲ್ಲಿ ಕಾನೂನಿನಲ್ಲಿ ಅಳವಡಿಸಿರುವ ಹಕ್ಕುಬಾಧ್ಯತೆಗಳನ್ನು ಸರಿಯಾಗಿ ತಿಳಿದುಕೊಳ್ಳಲು ದೀರ್ಘಕಾಲದಿಂದ ಅಮಲಿನಲ್ಲಿರುವ ನ್ಯಾಯಾಚಾರ ಬಹಳಷ್ಟು ಮಟ್ಟಿಗೆ ಸಹಾಯಕವಾಗುತ್ತದೆ. ಮತ್ತೊಂದು ತತ್ತ್ವಕ್ಕೆ ವಿರೋಧವಾಗಿದ್ದಂತೆ ಕಂಡುಬಂದರೆ ನ್ಯಾಯಾಚಾರ ಅಗ ಕಾನೂನಿಗೆ ಶರಣುಹೋಗಬೇಕಾಗುತ್ತದೆ. ಕಾನೂನುಗಳನ್ನು ರೂಪಿಸುವ ಅಧಿಕಾರವುಳ್ಳ ವಿಧಾನಾಂಗದ ಇಂಗಿತವನ್ನು ಕಡೆಗಣಿಸುವಂತೆ ನ್ಯಾಯಾಲಯ ನಿರ್ಣಯ ಮಾಡುವುದು ಸಾಧ್ಯವಿಲ್ಲ.

ಕಾನೂನಿನ ಕಟ್ಟುಪಾಡುಗಳನ್ನು ಅಮಲಿಗೆ ತರುವ ವೇಳೆಯಲ್ಲಿ ಅದರಿಂದ ಸಂಬಂಧಪಟ್ಟವರಿಗೆ ಕಷ್ಟನಷ್ಟಗಳು ಸಂಭವಿಸಬಹ್ಮದೆಂದು ತೋರಿಬಂದರೂ ಅರ್ಥ ಗೌರವಕ್ಕೆ ಚ್ಯುತಿ ತರುವ ನ್ಯಾಯಾಚಾರವನ್ನು ಎತ್ತಿಹಿಡಿಯಲು ಬರುವಂತಿಲ್ಲ. ಕಾನೂನನ್ನು ಜಾರಿಗೆ ತಂದಾಗ ಅದರಿಂದಾಗಿ ಸಮಾಜಕ್ಕೆ ಕಷ್ಟ ಒದಗಿಬರಬಹುದೆಂದು ತೋರಿಬಂದಾಗ ವಿಧಾನಾಂಗ ಆ ಕಾನೂನನ್ನು ಅಂತ್ಯಗೊಳಿಸಲೂ ಅದರ ಬದಲು ಉಚಿತ ಕಾನೂನು ರಚಿಸಲೂ ಕ್ರಮ ತೆಗೆದುಕೊಳ್ಳುತ್ತದೆ.

ಯಾವುದಾದರೂ ಒಂದು ಕಾನೂನು ಎರಡು ಅರ್ಥ ಕೊಡುವಂತಿದ್ದರೆ ನ್ಯಾಯಾಲಯ ತನ್ನ ವ್ಯವಹಾರಜ್ಞಾನವನ್ನು ಉಪಯೋಗಿಸಿ ಯಾವ ಅರ್ಥಸಾಧುವೆಂದು ತೋರುವುದೋ ಅ ಅರ್ಥವನ್ನು ಪರಿಗ್ರಹಿಸಿ ತನ್ನ ತೀರ್ಪನ್ನು ನೀಡಲು ಬರುತ್ತದೆ. ಆದರೆ, ಕಾನೂನಿನ ಅರ್ಥ ಯಾವ ಶಂಕೆಗೂ ಎಡೆಮಾಡಿಕೊಡದಿದ್ದರೆ, ಅಥವಾ ಅದು ಸುಲಭಸಾಧ್ಯವೆಂದಾದರೆ ನ್ಯಾಯಾಲಯ ಅದೇ ಅರ್ಥವನ್ನು ತನ್ನ ಮುಂದಿರುವ ಪ್ರಕರಣದಲ್ಲಿ ಬಳಸಿ ನ್ಯಾಯನಿರ್ಣಯ ಮಾಡಬೇಕಾಗುತ್ತದೆ. ಯಾಕೆಂದರೆ, ವಿಧಾನಾಂಗ ಕಾನೂನುಗಳನ್ನು ನಿರ್ಮಿಸುವುದಕ್ಕೆ ಮುಂಚೆ ಅದರ ಎಲ್ಲ ಸಾಧಕ ಬಾಧಕ ಅಂಶಗಳನ್ನು ಪರಿಶೀಲಿಸಿರುತ್ತದೆಂದು ಪೂರ್ವಭಾವಿಯಾಗಿ ತಿಳಿದಿರಬೇಕು. ಎಂಬ ನಿಯಮವಿದೆ. ಕಾನೂನಿನ ಅಂಶಗಳು ಜಾರಿಯಲ್ಲಿ ಉಳಿಯುವಂತೆ ನ್ಯಾಯಾಚಾರ ಅನುವು ಮಾಡುವಂತಿರಬೇಕೇ ಹೊರತು ಅವನ್ನು ರದ್ದುಪಡಿಸುವ ಪ್ರಯತ್ನ ಮಾಡುವಂತಿಲ್ಲ.

ಪ್ರಕ್ರಿಯೆ : ಕಾನೂನಿನಲ್ಲಿ ನ್ಯಾಯಬದ್ದ, ನಾಗರಿಕ ಹಕ್ಕುಗಳನ್ನು ನೀಡಿದಂತೆಯೇ ಅವನ್ನು ಅನುಷ್ಠಾನಕ್ಕೆ ತರಲು ಬೇಕಾಗುವ ಕಾರ್ಯವಿಧಿಗಳನ್ನು ರೂಪಿಸಲಾಗಿರುತ್ತದೆ. ಅ ಬಗ್ಗೆ ನ್ಯಾಯಾಲಯಗಳಲ್ಲಿ ಹಕ್ಕುಗಳನ್ನು ಕಾಪಾಡಲು ಅಥವಾ ಪರಿಹಾರ ಪಡೆಯಲು ವ್ಯಾಜ್ಯ ಹೂಡಬೇಕಾಗುತ್ತದೆ. ನ್ಯಾಯಾಲಯಗಳಲ್ಲಿ ಅಂಥ ವ್ಯಾಜ್ಯಗಳನ್ನು ಹೂಡಲು ಅಗತ್ಯವಾದ ವಿಧಿಗಳೇ ಪ್ರಕ್ರಿಯೆ. ನ್ಯಾಯಾಲಯಕ್ಕೆ ವ್ಯಾಜ್ಯ ಕೊಂಡೊಯ್ಯುವ ವಿಧಾನ. ಅದಕ್ಕೆ ಮುಂಚೆ ಕೈಗೊಳ್ಳಬೇಕಾದ ಕ್ರಮಗಳು, ವಾದದ ಮಂಡನೆ ಮುಂತಾದವನ್ನು ಪ್ರಕ್ರಿಯೆ ವಿಶದಪಡಿಸುತ್ತದೆ. ನ್ಯಾಯಾಲಯಗಳಲ್ಲಿ ದಾವೆ ಮಾಡುವ ಹಕ್ಕು, ನ್ಯಾಯಾಲಯಗಳ ತೀರ್ಪುಗಳ ಮೇಲೆ ಮೇಲ್ಮನವಿ, ಪುನರ್ವಿಲೋಕನದ ಹಕ್ಕು ಮತ್ತು ವಸೂಲಾತಿ ಬಗ್ಗೆ ಜಪ್ತಿವಗೈರೆ ಮಾಡುವ ಹಕ್ಕು-ಇವೇ ಮೊದಲಾದ ಶಾಸನಬದ್ಧ ಹಕ್ಕುಗಳನ್ನು ಚಲಾಯಿಸುವ ವಿಧಾನವೂ ಪ್ರಕ್ರಿಯೆಯಲ್ಲಿದೆ. ನೊಂದವನು ಮೇಲೆ ಹೇಳಿದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾದರೆ ಅದಕ್ಕಾಗಿ ವಿಧಿಸಿದ ಪ್ರಕ್ರಿಯೆಯಂತೆಯೇ ನಡೆಯಬೇಕು. ಪ್ರಕ್ರಿಯೆಯ ಅಂಶಗಳಿಗೆ ಪ್ರತಿಕೂಲವಾಗಿ ವರ್ತಿಸಿದರೆ ಇಚ್ಛಿಸಿದ ಪರಿಹಾರ ದೊರಕದೆ ಹೋಗಬಹುದು.

ಪ್ರಕ್ರಿಯೆ ಕಾನೂನಿನ ಸ್ವಾಮಿನಿಯಲ್ಲ, ದಾಸಿಯಂತೆ ಎಂದು ಹೇಳಲಾಗಿದೆ. ಪ್ರಕ್ರಿಯೆ ಕಾನೂನು ಹರಿಯುವಂತೆ ಮಾಡುವ ನೀರ್ಗೊಳವೆ; ಅದು ನ್ಯಾಯ ಸಮ್ಮತ ಬೇಡಿಕೆಗಳನ್ನು ತಡೆಯುವ ಅಥವಾ ಕುಂಠಿತಗೊಳಿಸುವ ಸಾಧನವಾಗಬಾರದು. ಅದು ವ್ಯವಹಾರಗಳನ್ನು ಕ್ಷಿಪ್ರಗೊಳಿಸುವಂತರಬೇಕಲ್ಲದೆ ವಿಫಲಗೊಳಿಸುವಂತಿರಬಾರದು. ನ್ಯಾಯವನ್ನೊದಗಿಸುವುದರಲ್ಲಿ ಅದರ ಪಾತ್ರ ಸುಸೂತ್ರವಾಗಿರಬೇಕು. ಪ್ರಕ್ರಿಯೆ ಮನುಷ್ಯನನ್ನು ಶಿಕ್ಷೆಗೆ ಒಳಪಡಿಸುವ ಒಂದು ದಂಡನೀತಿಯಲ್ಲ. ಅದು ನ್ಯಾಯವನ್ನು ದೊರಕಿಸಿಕೊಳ್ಳಲು ಉಪಯೋಗಿಸುವ ಕ್ಷಿಪ್ರಸಾಧನ.

ಪ್ರಕ್ರಿಯೆ ನಿಷ್ಪಕ್ಷಪಾತ ನ್ಯಾಯನಿರ್ಣಯಕ್ಕೆ ಒಂದು ಸುಭದ್ರ ತಳಹದಿ, ಒಬ್ಬನನ್ನು ಅವನ ಅರಿವಿಲ್ಲದಂತೆಯೇ ದಂಡಾರ್ಹನೆಂದು ಸಾರುವುದು. ಪರೋಕ್ಷದಲ್ಲಿ ತೀರ್ಪುಗಳನ್ನು ನೀಡುವುದು. ಒಬ್ಬನ ಪ್ರಾಣದ ಬಗ್ಗೆ ಅಸ್ತಿಯ ಬಗ್ಗೆ ಅವನ ಗೈರುಹಾಜರಿಯಲ್ಲಿ ವ್ಯಾಜ್ಯಗಳನ್ನು ವಿಚಾರಣೆಗೆ ತೆಗೆದುಕೊಳ್ಳುವುದು-ಇಂಥ ಕ್ರಮಗಳು ನಿರ್ದಿಷ್ಟಪಡಿಸಿದ ಪ್ರಕ್ರಿಯೆಗೆ ಪ್ರತಿಕೂಲವೆನಿಸುತ್ತವೆ.

ಜನತೆಗೆ ಸಿಗಬೇಕಾದ ಪಕ್ಷಪಾತ ರಹಿತ ನ್ಯಾಯ ನಿರ್ಣಯಕ್ಕೆ ಪ್ರಕ್ರಿಯೆ ಸರ್ವವಿಧದಿಂದಲೂ ಅನುವನ್ನು ದೊರಕಿಸಿಕೊಡುತ್ತದೆ. ಆದರೆ, ಪರಿಹಾರವನ್ನು ದೊರಕಿಸಿಕೊಳ್ಳಲು ನ್ಯಾಯಾಲಯವನ್ನು ಪ್ರವೇಶಿಸಿದ ವ್ಯಕ್ತಿಗಳು ಪ್ರಕ್ರಿಯೆಯನ್ನು ತಮ್ಮದೇ ಆದ ಪಟ್ಟಭದ್ರ ಹಕ್ಕೆಂದು ಪರಿಗಣಿಸಲು ಬರುವುದಿಲ್ಲ. ಆದ್ದರಿಂದ, ತಮ್ಮ ಪ್ರಕರಣ ಇಂಥದೇ ನ್ಯಾಯಾಲಯದ ಸಮ್ಮುಖದಲ್ಲಿ ನಡೆಯಬೇಕೆಂದು ಯಾರೊಬ್ಬನೂ ಹಠಮಾಡುವಂತಿಲ್ಲ. ಕಾನೂನಿನಲ್ಲಿ ಉದ್ಭೂತವಾಗುವ ಹಿತಗಳನ್ನು ನ್ಯಾಯಾಲಯಗಳಲ್ಲಿ ಊರ್ಜಿತಗೊಳಿಸಲು ಪ್ರಕ್ರಿಯೆ ಒಂದು ಸಾಧನ. (ಎಸ್.ಎನ್.ಎಂ.ಯು.)

ಭಾರತದಲ್ಲಿ ಪ್ರಕ್ರಿಯಾ ಕಾನೂನು : ಭಾರತದಲ್ಲಿ ದಂಡಪ್ರಕ್ರಿಯಾಸಂಹಿತೆ (ಕೋಡ್ ಅಫ್ ಕ್ರಿಮಿನಲ್ ಪ್ರೊಸೀಜರ್) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ (ಇಂಡಿಯನ್ ಎವಿಡೆನ್ಸ್ ಆಕ್ಟ್) ಇವು ಪ್ರಮುಖವಾಗಿ ಪ್ರಕ್ರಿಯಾ ಕಾನೂನನ್ನು ನಿರ್ದೇಶಿಸುತ್ತವೆ. ಸಿವಿಲ್ ಪ್ರಕ್ರಿಯಾ ಸಂಹಿತೆಯಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಹೆಚ್ಚಿನ ಮಟ್ಟಿಗೆ ಸಾರಭೂತ ಕಾನೂನನ್ನು ನೀಡಲಾಗಿದೆ. ಇದನ್ನು ಹೇಗೆ ಅನುಷ್ಟಾನಕ್ಕೆ ತರಬೇಕೆಂಬುದನ್ನು ಎರಡನೆಯ ಭಾಗದಲ್ಲಿ ಹೇಳಿದೆ. ಎರಡನೆಯ ಭಾಗ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕ್ರಿಯಾಭಾಗ. ಕ್ರಿಮಿನಲ್ (ಅಪರಾಧಿಕ) ಮೊಕದ್ದಮೆಗಳು ಯಾವ ರೀತಿ ನಡೆಯಬೇಕು ಎಂಬ ವಿಚಾರಗಳನ್ನು ದಂಡ ಪ್ರಕ್ರಿಯಾ ಸಂಹಿತೆ ಹೇಳುತ್ತದೆ. ಸಾಕ್ಷ್ಯ ಅಧಿನಿಯಮ ಎಂಬ ವಿಚಾರಗಳನ್ನು ದಂಡ ಪ್ರಕ್ರಿಯಾ ಸಂಹಿತೆ ಹೇಳುತ್ತದೆ. ಸಾಕ್ಷ್ಯ ಅಧಿನಿಯಮ ಎಲ್ಲ ರೀತಿಯ ವ್ಯಾಜ್ಯಗಳಿಗೆ ಅನ್ವಯಿಸುತ್ತದೆ. ಭಾರತೀಯ ದಂಡ ಸಂಹಿತೆ (ಇಂಡಿಯನ್ ಪೀನಲ್ ಕೋಡ್), ಸ್ವತ್ತು ವರ್ಗಾವಣೆ ಅಧಿನಿಯಮ, ಭಾರತೀಯ ಕರಾರು ಅಧಿನಿಯಮ ಇವು ಸಾರಭೂತ ಕಾನೂನಿನ ಪ್ರಮುಖ ಅಧಿನಿಯಮಗಳು. ನ್ಯಾಯ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಐದು ಅಂಶಗಳಿವೆ:

1 ಸಮನು (ಸಮನ್ಸ್): ಇದು ನ್ಯಾಯಾಲಯದ ಮುಂದೆ ಹಾಜರಾಗಲು ಕರೆ. ನ್ಯಾಯಾಲಯದ ತೀರ್ಪಿಗಾಗಿ ಯಾವುದದರೂ ಒಂದು ಮೊಕದ್ದಮೆಯನ್ನು ಒಬ್ಬ ಹೂಡಿದರೆ ಅದನ್ನು ಎದುರಿಸಬೇಕಾದವನು ಅ ಮೊಕದ್ದಮೆಯನ್ನು ಇತ್ಯರ್ಥಿಸುವ ನ್ಯಾಯಾಧೀಶನ ಮುಂದೆ ಹಾಜರಾಗಲು ಒಂದು ದಿನವನ್ನು ನಿಶ್ಚಯಿಸಿ ಅವನಿಗೆ ಕರೆಕೊಡುತ್ತದೆ. ಕರೆ ಬಂದ ಪ್ರತಿವಾದಿ ಹಾಜರಾಗದಿದ್ದಲ್ಲಿ ಅವನ ಗೈರುಹಾಜರಿಯಲ್ಲಿ ನ್ಯಾಯ ತೀರ್ಮಾನ ಮಾಡಬಹುದಾಗಿದೆ.

2 ವಾದ ಪ್ರತಿವಾದ ಪತ್ರಗಳು: (ಪ್ಲೀಡಿಂಗ್ಸ್): ವ್ಯಾಜ್ಯಕ್ಕೆ ಸಂಬಂಧಿಸಿದಂತೆ ವಾದಿಯೂ ಅವನಿಗೆ ಉತ್ತರವಾಗಿ ಪ್ರತಿವಾದಿಯೂ ನೀಡಿದ ಹೇಳಿಕೆಗಳು. ಇವುಗಳಿಂದ ವಾದಿ-ಪ್ರತಿವಾದಿಗಳ ನಡುವೆ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಇರುವ ಅಭಿಪ್ರಾಯ ಅಭ್ಯಂತರಗಳು ಸರಿಯಾಗಿ ವ್ಯಕ್ತಪಡುತ್ತವೆ. ನ್ಯಾಯಾಲಯ ಯಾವ ವಿಚಾರದ ತೀರ್ಮಾನ ಕೈಗೊಳ್ಳಬೇಕೆಂಬುದು ಇವುಗಳಿಂದ ನಿರ್ಣಯವಾಗುತ್ತದೆ.

3 ರುಜುವಾತು: (ಪ್ರೂಫ್): ತೀರ್ಮಾನ ಕೈಗೊಳ್ಳಬೇಕಾದ ವಿಚಾರದಲ್ಲಿ ನ್ಯಾಯಾಲಯ ನ್ಯಾಯವಾದ ತೀರ್ಮಾನಕ್ಕೆ ಬರಲು ಅನುಕೂಲವಾಗುವಂತೆ ವಾದಿ-ಪ್ರತಿವಾದಿಗಳು ಮುಂದಿಡುವ ಪತ್ರ, ದಾಖಲೆ, ಸಾಕ್ಷಿ, ಸಾಮಗ್ರಿಗಳು, ಇವನ್ನಿತ್ತು ರುಜುವಾತು ಮಾಡಲಾಗುತ್ತದೆ.

4 ತೀರ್ಪು (ಜಡ್ಜ್‍ಮೆಂಟ್): ತನ್ನ ಮುಂದೆ ತಂದ ರುಜುವಾತುಗಳ ಮೇಲೆ ನ್ಯಾಯಾಧೀಶ ಮೊಕದ್ದಮೆಯನ್ನು ಇತ್ಯರ್ಥಗೊಳಿಸುತ್ತಾನೆ. ಯಾವ ಸಾಕ್ಷ್ಯಗಳ, ಕಾನೂನುಗಳ ಮೇಲೆ ಇತ್ಯರ್ಥಕ್ಕೆ ಬಂದಿರುವುದಾಗಿ ಹೇಳಿ ಆತ ಬರೆದದ್ದು ತೀರ್ಪೆನಿಸುತ್ತದೆ (ತೀರ್ಪಿಗೂ ಡಿಕ್ರಿಗೂ ಇರುವ ವ್ಯತ್ಯಾಸವನ್ನು ಇಲ್ಲಿ ಪರಿಗಣೆಸಿಲ್ಲ. ನೋಡಿ-ಡಿಕ್ರಿ).

5 ಜಾರಿ (ಎಕ್ಸಿಕ್ಸೂಷನ್) : ನ್ಯಾಯಾಧೀಶ ಕೊಟ್ಟ ತೀರ್ಪನ್ನು ಕಾರ್ಯಗತಗೊಳಿಸುವ ಕ್ರಮ. ತೀರ್ಪಿನಲ್ಲಿ ನ್ಯಾಯಾಲಯ ಹೇಳಿದಂತೆ ತನ್ನ ವಿರೋಧಿಯಾದವನು ನಡೆದು ಕೊಳ್ಳುವಂತೆ ಮಾಡಲು ಮೊಕದ್ದಮೆಯಲ್ಲಿ ಜಯ ಗಳಿಸಿದವನು ನ್ಯಾಯಾಲಯದ ಅಥವಾ ಅಧಿಕಾರಿಗಳ ಸಹಾಯದೊಂದಿಗೆ ಕ್ರಮ ತೆಗೆದುಕೊಳ್ಳುತ್ತಾನೆ. ಇದು ಮೊಕದ್ದಮೆಯ ಕೊನೆ.

ಮೇಲೆ ಹೇಳಿದ ಅಂಶಗಳಲ್ಲಿ ಮುಖ್ಯವಾದ್ದು ರುಜುವಾತು. ಅದಕ್ಕೆ ಸಂಬಂಧಿಸಿದ್ದು ಸಾಕ್ಷ್ಯ. ಒಂದು ವಾಸ್ತವ ಸಂಗತಿಯ ಅಸ್ತಿತ್ವದ ಸಮಭಾವ್ಯತೆಯನ್ನು ಎಷ್ಟುಮಟ್ಟಿಗಾದರೂ ಸೂಚಿಸುವಂಥ ಇನ್ನೊಂದು ವಾಸ್ತವ ಸಂಗತಿಯೇ ಮೊದಲನೆಯ ಸಂಗತಿಯ ಸಾಕ್ಷ್ಯವೆನಿಸುತ್ತದೆ.

ಈ ರೀತಿಯ ಪ್ರಮಾಣಕಶಕ್ತಿ (ಪ್ರೊಬೇಟಿವ್ ಫೋರ್ಸ್) ಇರುವುದನ್ನೆಲ್ಲ ಸಾಕ್ಷ್ಯವೆನ್ನಬಹುದು. ಈ ಶಕ್ತಿ ವಿವಿಧ ಮಟ್ಟದ್ದಿರಬಹುದು. ಇದರಿಂದ ಒಂದು ವಿಚಾರದ ಅಸ್ತಿತ್ವದ ಬಗೆಗೆ ವಿವೇಕಯುಕ್ತ ಊಹೆಗೆ ನಾವು ಬರಬಹುದಾದರೆ, ಈ ಪ್ರಮಾಣಕಸಕ್ತಿ ಇರುವ ಸಾಕ್ಷ್ಯ ರುಜುವಾತು ಎನಿಸುತ್ತದೆ. ಸತ್ಯಾಸತ್ಯತೆಯನ್ನು ನಿರ್ಣಯಿಸಲು ನ್ಯಾಯಿಕ ಪರಿಶೀಲನೆಗೆ ಒಪ್ಪಿಸಲಾದ ಯಾವುದೇ ಸಂಗತಿಯನ್ನು ಸಾಬೀತು ಅಥವ ನಸಾಬೀತು ಮಾಡುವಂಥ, ಕೇವಲ ವಾದಗಳಲ್ಲದ, ಎಲ್ಲ ವೈಧಿಕ ಸಾಧನಗಳೂ ಸಾಕ್ಷ್ಯ-ಎಂದು ಹೇಳುತ್ತಾರೆ.

ರುಜುವಾತು ಮಾಡಬೇಕಾದ ಸಂಗತಿಗಳು ಪ್ರದಾನ ಸಂಗತಿಗಳು. ಪ್ರಧಾನ ಸಂಗತಿಗಳನ್ನು ರುಜುವಾತು ಮಾಡಲು ಸಹಾಯಕವಾಗುವ ಸಂಗತಿಗಳು ಸಾಕ್ಷ್ಯದ ಸಂಗತಿಗಳು. ಪ್ರಧಾನ ಸಂಗತಿ ಇದೆಯೋ ಇಲ್ಲವೊ ಎಂಬುದನ್ನು ನಿಷ್ಕರ್ಷಿಸಲು ಸಹಾಯ ಮಾಡುವಂಥದೇ ಸಾಕ್ಷ್ಯದ ಸಂಗತಿ.

ಸಾಕ್ಷ್ಯವನ್ನು ಮೂಲ (ಪ್ರೈ ಮರಿ) ಮತ್ತು ಗೌಣ (ಸೆಕಂಡರಿ) ಎಂದು ವಿಂಗಡಿಸಬಹುದು. ಪ್ರಧಾನ ಸಂಗತಿಗೆ ಅತ್ಯಂತ ಸಮೀಪದ್ದು ಮೂಲ ಸಾಕ್ಷ್ಯ. ಮೂಲ ಸಾಕ್ಷ್ಯವೇ ಅತ್ಯುತ್ತಮ ಸಾಕ್ಷ್ಯವೆಂಬುದನ್ನು ಮೂಲ ಸಾಕ್ಷ್ಯ ತನ್ನ ನಿಲಿಕಿನಲ್ಲಿದ್ದೂ ಅದನ್ನು ಹಾಜರು ಪಡಿಸದವನು ವ್ಯಾಜ್ಯದಲ್ಲಿ ಜಯಗಳಿಸಲಾರ. ಸಾಧ್ಯವಿರುವಲ್ಲೆಲ್ಲ ಅತ್ಯುತ್ತಮ ಸಾಕ್ಷ್ಯವನ್ನು ಹಾಜರುಪಡಿಸಲೇಬೆಕು. ಉದಾಹರಣೆಗಾಗಿ ಸಾಕ್ಷ್ಯಕ್ಕೆ ಮೂಲ ದಸ್ತಾವೇಜು ಸಮಬಂಧಿಸಿದ್ದಾರೆ ಅದನ್ನು ಹಾಜರುಪಡಿಸಬೇಕು. ಅದು ನಷ್ಟ ಹೊಂದಿದರೆ ಅಥವಾ ಸಿಕ್ಕುವ ಸಂಭವವಿಲ್ಲದಿದ್ದರೆ ಗೌಣ ಸಾಕ್ಷ್ಯಕೊಡಬಹುದು. ಇದು ಮೂಲ ಸಾಕ್ಷ್ಯದ ಬದಲಾಗಿ ಕೊಡುವಂಥದು. ಮೂಲ ಸಾಕ್ಷ್ಯದ ಶಕ್ತಿ ಇದಕ್ಕಿಲ್ಲ. ಮೂಲಸಾಕ್ಷ್ಯ ಈ ರೀತಿ ಇತ್ತು ಎಂಬುದನ್ನು ತೋರಿಸಿಕೊಡುವ ಬಗ್ಗೆ ಇದನ್ನು ಉಪಯೋಗಿಸಲಾಗುತ್ತದೆ. ಮೂಲ ಸಾಕ್ಷ್ಯವಿದ್ದಲ್ಲಿ ಗೌಣ ಸಾಕ್ಷ್ಯವನ್ನು ತರಲು ಎಡೆಯಿಲ್ಲ.

ಸಾಕ್ಷ್ಯ ನೈಜವಿರಬಹುದು ಅಥವಾ ವ್ಯಕ್ತಿಗತವಾದ್ದಾಗಿರಬಹುದು. ಇರಿತದ ಮೊಕದ್ದಮೆಯಲ್ಲಿ ಇರಿತಕ್ಕೆ ಸಂಬಂಧಿಸಿದ ಚೂರು, ಪೆಟ್ಟಾದವನು ಧರಿಸಿದ್ದ ರಕ್ತ ಸಿಂಚಿತ ವಸ್ತ್ರ ಇತ್ಯಾದಿ-ಇವು ನೈಜ ಸಾಕ್ಷ್ಯದ ಉದಾಹರಣೆಗಳು. ಸಾಕ್ಷಿ ನೀಡುವಂಥದು ವ್ಯಕ್ತಿಗತ ಸಾಕ್ಷ್ಯ

ಸಾಕ್ಷ್ಯ ಪ್ರತ್ಯಕ್ಷ (ಡೈರೆಕ್ಟ್) ಅಥವಾ ಪಾರಿಸ್ಥಿತಿಕ (ಸರ್ಕಮ್‍ಸ್ಟಾನ್ಷಿಯಲ್) ಅಗಿರಬಹುದು. ತೀರ್ಮಾನಿಸಬೆಕಾದ ಪ್ರಧಾನ ವಿಷಯಕ್ಕೆ ಅತ್ಯಂತ ಸಮೀಪವಾದ್ದು ಪ್ರತ್ಯಕ್ಷ ಸಾಕ್ಷ್ಯ. ಒಂದು ಕೊಲೆಯ ಮೊಕದ್ಮೆಯಲ್ಲಿ ಆಪಾದಿತ ಕೊಲೆಮಾಡಿದ್ದನ್ನು ತಾನೇ ಕಂಡೆನೆನ್ನುವುದು ಪ್ರತ್ಯಕ್ಷಸಾಕ್ಷ್ಯ. ಉಳಿದ ಸಾಕ್ಷ್ಯಗಳೆಲ್ಲ ಪಾರಿಸ್ಥಿತಿಕ. ಕೊಲೆಗೆ ಒಳಗಾದವನು ಬಿದ್ದ ಸ್ಥಳದಿಂದ ಅಪಾದಿತ ಹೊರಡುತ್ತಿರುವುದನ್ನು ಕಂಡದ್ದು ಪಾರಿಸ್ಥಿತಿಕ. ಪ್ರಧಾನ ವಿಷಯದಲ್ಲಿ ವಿವೇಕಯುಕ್ತ ತೀರ್ಮಾನಕ್ಕೆ ಬರಲು ಸಹಾಯವಾಗುವಂತೆ ಅದಕ್ಕೆ ಪಾರಿಸ್ಥಿತಿಕ ಸಾಕ್ಷ್ಯ ಹೊಂದಿಕೊಂಡಿರುತ್ತದೆ.

ನ್ಯಾಯಾಲಯದ ಒಳಗಿನದು ಮತ್ತು ಹೊರಗಿನದು (ಎಕ್ಸ್ಟ್ರಾ ಜುಡಿಷಿಯಲ್) ಎಂದೂ ಸಾಕ್ಷ್ಯಗಳನ್ನು ವಿಂಗಡಿಸಬಹುದು. ನ್ಯಾಯಾಲಯದ ಒಳಗೆ ನೀಡಿದ ಸಾಕ್ಷ್ಯಗಳೂ ನ್ಯಾಯಿಕ ಅಥವಾ ನ್ಯಾಯಾಲಯದೊಳಗಿನವು. ಎರಡನೆಯವು ನ್ಯಾಯಾಲಯದ ಮುಂದೆ ಬಾರದಿದ್ದರೂ, ಹಾಗೆ ಬಂದ ಸಾಕ್ಷ್ಯಕ್ಕೆ ಸಂಬಂಧವುಳ್ಳಂಥವಯ, ನ್ಯಾಯಿಕೇತರ ಸಾಕ್ಷ್ಯಗಳು, ನ್ಯಾಯಾಲಯದ ಮುಂದೆ ಒಬ್ಬ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ಇದು ನ್ಯಾಯಿಕ ಸಾಕ್ಷ್ಯ. ಅವನು ತಪ್ಪು ಮಾಡಿದ್ದನ್ನು ಒಬ್ಬ ಮಿತ್ರನಿಗೆ ವಿವೇದಿಸುತ್ತಾನೆ. ಅದನ್ನು ಕುರಿತು ನ್ಯಾಯಾಧೀಶನ ಸಮ್ಮುಖದಲ್ಲಿ ಆ ಮಿತ್ರ ಸಾಕ್ಷ್ಯ ಹೇಳುತ್ತಾನೆ. ಇದು ನ್ಯಾಯಾಲಯದ ಹೊರಗಿನ ಸಾಕ್ಷ್ಯ.

ಸಾಕ್ಷ್ಯಕ್ಕೆ ಸಂಬಂಧಿಸಿದ ಕಾನೂನನ್ನು ಸಾಕ್ಷ್ಯದ ಸ್ವೀಕಾರ ಮತ್ತು ಅದರ ಪ್ರಮಾಣಕ ಮೌಲ್ಯ (ಪ್ರೊಬೇಟಿವ್ ವ್ಯಾಲ್ಯೂ) ಎಂದು ಎರಡು ಭಾಗಗಳಾಗಿ ಮಾಡಬಹುದು. ಯಾವ ಕ್ರಮದಲ್ಲಿ ಸಾಕ್ಷ್ಯವನ್ನು ಪ್ರಮಾಣಕ ಮೌಲ್ಯದ ವಿಮರ್ಶೆಗಿಂತ, ಯಾವ ರೀತಿಯಲ್ಲಿ ಸಾಕ್ಷ್ಯವನ್ನು ಒದಗಿಸಬೇಕೆಂಬುದನ್ನು ಅನೇಕ ನಿಯಮಗಳ ಮೂಲಕ ಇಲ್ಲಿ ನಿಶ್ಚಯಿಸಲಾಗಿದೆ. ಸಾಕ್ಷ್ಯವನ್ನು ಒದಗಿಸಬೇಕೆಂಬುದನ್ನು ಅನೇಕ ನಿಯಮಗಳ ಮೂಲಕ ಇಲ್ಲಿ ನಿಶ್ಚಯಿಸಲಾಗಿದೆ. ಸಾಕ್ಷ್ಯದ ಪ್ರಮಾಣಕ ಮೌಲ್ಯ ಏನೇ ಇರಲಿ, ಅದನ್ನು ಈ ನಿಯಮಗಳಿಗೆ ವಿರೋಧವಾಗಿ ಒದಗಿಸುವುದು ಸಾಧ್ಯವಿಲ್ಲ. ಉದಾಹರಣೆಗೆ, ಸಕಾರದ ವಿಚಾರದಲ್ಲಿ ತಿಳಿದಿರುವ ಮತ್ತು ಅವನು ಬಹಿರಂಗಪಡಿಸಬಾರದ ವಿಚಾರಗಳು-ಇವು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಎಷ್ಟು ಬೆಳಕನ್ನು ಚೆಲ್ಲಬಹುದಾದರೂ ಇವನ್ನು ಸಾಕ್ಷ್ಯವಾಗಿ ಮಾಡುವುದು ಅಸಾಧ್ಯ. ನಿಯಮಗಳಲ್ಲಿ ಹೇಳಿದಂತೆ ನ್ಯಾಯಾಲಯಗಳಲ್ಲಿ ಸಾಕ್ಷ್ಯಗಳನ್ನು ಒದಗಿಸಬೇಕು. ಕೆಲವು ವಿಚಾರಗಳಲ್ಲಿ ಸಾಕ್ಷ್ಯ ಹೇಗೆಯೇ ಇರಬೇಕೆಂದು ಕಾನೂನು ಹೇಳುತ್ತದೆ. ಅದಕ್ಕೆ ವ್ಯತಿರಿಕ್ತವಾಗಿದ್ದುದನ್ನು ಸಾಕ್ಷ್ಯವೆಂದು ಪರಿಗಣೆಸಲಾಗುವುದಿಲ್ಲ. ಒಂದು ವ್ಯಾಜ್ಯಕ್ಕೆ ಸಂಭಂಧಿಸಿರದ ಸಾಕ್ಷ್ಯವೆಂದು ಪರಿಗಣಿಸಲಾವುದಿಲ್ಲ. ಒಂದು ವ್ಯಾಜ್ಯಕ್ಕೆ ಸಂಬಂಧಿಸಿರದ ಸಾಕ್ಷ್ಯವನ್ನು ತೆಗೆದುಕೊಳ್ಳುವುದು ನಿಷಿದ್ಧ. ನ್ಯಾಯಾಲಯದ ಮುಂದೆ ಹಾಜರು ಪಡಿಸಹುದಾದ ಸಾಕ್ಷ್ಯ ಮಾತ್ರ ಸ್ವೀಕರಾರ್ಹ. ಎಲ್ಲ ಸಾಕ್ಷ್ಯಗಳೂ ಮುಗಿದ ಬಳಿಕ ನ್ಯಾಯಾಲಯ ನ್ಯಾಯನಿರ್ಣಯ ಸಾಕ್ಷ್ಯಗಳ ಪ್ರಮಾಣಕ ಮೌಲ್ಯವನ್ನು ವಿರ್ಮರ್ಶಿಸುತ್ತದೆ. ಈ ವಿಮರ್ಶೆ ಮಾಡಲು ಅಥವ ಇವನ್ನು ಅಳೆಯಲು ಅನೇಕ ನಿಯಮಗಳನ್ನು ನ್ಯಾಯಾಲಯ ಅನುಸರಿಸಬೆಕು. ಆ ನಿಯಮಗಳನ್ನು ಅನುಸರಿಸುವುದರಿಂದ ನ್ಯಾಯನಿರ್ಣಯ ಸುಲಭವೂ ಕ್ರಮಬದ್ಧವೂ ಆಗುತ್ತದೆ. ಇದಕ್ಕೆ ಹೇಳಲಾಗಿರುವ ನಿಯಮಗಳು ಇವು:

1 ನಿರ್ಣಾಯಕ ರುಜುವಾತು (ಕನ್‍ಕ್ಲೂಸಿವ್ ಪ್ರೂಫ್): ಇರತಕ್ಕ ಒಂದು ಸಂಗತಿ ಇನ್ನೊಂದು ಸಂಗತಿಗೆ ರುಜುವಾತೆಂದು ಕಾನೂನಿನಲ್ಲಿ ಹಲವೆಡೆ ಹೇಳಲಾಗಿದೆ. ಆ ರುಜುವಾತನ್ನು ಅಲ್ಲಗೆಳೆಯುವ ಸಾಕ್ಷ್ಯನಿಲ್ಲತಕ್ಕದ್ದೂ ಅಲ್ಲ, ಗಮನಿಸತಕ್ಕದ್ದೂ ಅಲ್ಲ. ಅಂಥ ರುಜುವಾತು ನಿರ್ಣಾಯಕವಾದ್ದು. ಉದಾಹರಣೆಗೆ ಕೆಲವು ನ್ಯಾಯಾಲಯಗಳ ತೀರ್ಪುಗಳು.

2 ಪ್ರಕಲ್ಪಿತ (ಪ್ರಿಸಂಪ್ಯಿವ್) ಅಥವಾ ಷರತ್ತುಳ್ಳ ರುಜುವಾತು: ಕೆಲವು ವಿಷಯಗಳು ಸರಿಯಾದವೆಲ್ಲವೆಂದು ಖಚಿತವಾದ ಸಾಕ್ಷ್ಯ ಬರುವ ತನಕ, ಅವುಗಳ ರುಜುವಾತು ಅದರಂತೆ ತಿಳಿಯಬೇಕು ಎಂದೂ ಹೇಳಲಾಗಿದೆ. ಉದಾಹರಣೆಗೆ, ಒಬ್ಬನ ವಿಚಾರದಲ್ಲಿ ಏಳು ವರ್ಷಗಳ ಕಾಲ ಯಾವ ಸುದ್ದಿಯಾಗಲಿ ಸುಳಿವಾಗಲಿ ಅವನ ಬಗ್ಗೆ ಅರಿತಿರಬೇಕಾದವರಿಗೆ ತಿಳಿಯದಿದ್ದರೆ ಅವನು ತೀರಿಹೋಗಿರುವನೆಂದು ತಿಳಿದುಕೊಳ್ಳಬಹುದು. ಈ ರೀತಿಯ ಕಾನೂನಿನ ಪ್ರಕಲ್ಪನೆಯನ್ನು ಇದಕ್ಕೆ ವಿರೋಧವಾದ ರುಜುವಾತಿನಿಂದ ತೆಗೆದುಹಾಕಬಹುದು.

3 ಅಪರ್ಯಾಪ್ತ ಸಾಕ್ಷ್ಯ (ಇನ್‍ಸಫಿಷೆಂಟ್ ಎವಿಡೆನ್ಸ್): ಅನೇಕ ಸಂದರ್ಭಗಳಲ್ಲಿ ಸಾಕ್ಷ್ಯದ ಶಿಷ್ಯತೆಯನ್ನು ಕಾನೂನು ನಿರ್ದೇಶಿಸುತ್ತದೆ. ಅದಕ್ಕಿಂತ ಕಡಿಮೆಯಾದಲ್ಲಿ ರುಜುವಾತು ಅಗುವ ಸಂಭವವಿಲ್ಲ. ಉದಾಹರಣೆಗೆ ದಾನ ಪತ್ರಕ್ಕೆ ಇಬ್ಬರು ಸಾಕ್ಷಿ ಹಾಕಲೇಬೇಕು. ಅದಕ್ಕಿಂತ ಕಡಿಮೆಯಾದಲ್ಲಿ ಅದನ್ನು ನ್ಯಾಯಾಲಯ ಒಪ್ಪಲು ಸಾಧ್ಯವಿಲ್ಲ.

4 ಅನನ್ಯ ಸಾಕ್ಷ್ಯ (ಎಕ್ಸ್‍ಕ್ಲೂಸಿವ್ ಎವಿಡೆನ್ಸ್): ಕೆಲವು ವಿಚಾರಗಳಲ್ಲಿ ನಿಯಮದಲ್ಲಿ ಹೇಳಿದ ರೀತಿಯಲ್ಲೇ ಸಾಕ್ಷ್ಯವನ್ನು ಒದಗಿಸಬೇಕು. ಉದಾಹರಣೆಗೆ ಮರಣಶಾಸನವನ್ನು ನ್ಯಾಯಾಲಯದಲ್ಲಿ ರುಜುವಾತು ಪಡಿಸಲು ಅದಕ್ಕೆ ಸಾಕ್ಷಿ ಹಾಕಿದವರನ್ನೇ ವಿಚಾರಣೆ ಮಾಡಬೇಕು. ಅವರು ಸತ್ತು ಹೋಗಿದ್ದರೆ ಮಾತ್ರ ಬೇರೆ ರೀತಿಯಲ್ಲಿ ಅದನ್ನು ರುಜುವಾತುಪಡಿಸಬಹುದು. ಅನೇಕ ರೀತಿಯ ವ್ಯವಹಾರಗಳು ಬರವಣಿಗೆ, ನೋಂದಣಿ ಮುಂತಾದವುಗಳಿಂದ ಕೂಡಿರಬೇಕು. ಅವಿಲ್ಲದವಕ್ಕೆ ನಂಬಲರ್ಹವಾದ ಮೌಖಿಕ ಸಾಕ್ಷ್ಯಗಳಿದ್ದರೂ ರುಜುವಾತು ಆಗುವುದಿಲ್ಲ.

5. ರುಜುವಾತಾಗದ ವಿಚಾರಗಳು: ಕೆಲವು ನಿಯಮಗಳ ಪ್ರಕಾರ ಕೆಲವು ವಿಚಾರಗಳು ರುಜುವಾತಾಗುವುದೇ ಇಲ್ಲ. ಅವಕ್ಕೆ ಪ್ರಮಾಣಕ ಮೌಲ್ಯವೇ ಇರುವುದಿಲ್ಲ. ಅವನ್ನು ನ್ಯಾಯಾಲಯ ಸ್ವೀಕರಿಸುವುದಿಲ್ಲ. ಇನ್ನೊಬ್ಬರು ಹೇಳಿದ್ದನ್ನು ಕೇಳೀ, ಆದರ ಬಗ್ಗೆ ನೇರ ತಿಳಿವಳಿಕೆ ಇಲ್ಲದೆಯೇ ಹೇಳಿದ್ದು-ಅನುಶ್ರುತಿ ಅಥವಾ ವದಂತಿ (ಹಿಯರ್‍ಸೇ). ಅಪಾದಿತನ ಸಾಮಾನ್ಯ ದುರ್ಗುಣದ ಸಾಕ್ಷ್ಯ ಮುಂತಾದವು. (ಕೆ.ಜಿ.ಬಿ.)