ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರತಿನಿಧಿ

ವಿಕಿಸೋರ್ಸ್ದಿಂದ

ಪ್ರತಿನಿಧಿ - ಧಾರ್ಮಿಕವಾಗಿ, ತಿರುಸಭೆಯ ಕ್ರಮದಂತೆ ಧಾರ್ಮಿಕ ಕಾರ್ಯವ್ಯವಹಾರಗಳನ್ನು ನಿರ್ವಹಿಸಲು ಅಥವಾ ಬರೇ ಗೌರವಾರ್ಥವಾಗಿ ರಾಜರ ಆಸ್ಥಾನಗಳಿಗೆ ಮತ್ತು ಸ್ವತಂತ್ರ ರಾಷ್ಟ್ರಗಳಿಗೆ ಪೋಪನ ಪ್ರತಿನಿಧಿಯಾಗಿ, ಜಗದ್ಗುರುವಿಂದ ಕಳುಹಿಸಲ್ಪಟ್ಟ ಕ್ರೈಸ್ತ ವೈದಿಕ (ಲೆಗೆಟ್: ಲೆಗಾತಿ). ಚಾರಿತ್ರಿಕವಾಗಿ ಈ ಪ್ರತಿನಿಧಿಗಳನ್ನು ಅಫೊಕ್ರಿಸಿಯಾರಿಸ್, ಲೆಗಾತಿನಾತಿ, ಲೆಗಾತಿಮಿಸ್ಸಿ, ಲೆಗಾತಿ ಅಲಾತೆರೆ, ನುನ್ಸಿಯೊಸ್, ಇಂಟರ್ ನುನ್ಸಿಯೊಸ್ ಮತ್ತು ಪ್ರೊನುನ್ಸಿಯೊಸ್ ಎಂದು ಕರೆಯುತ್ತಾರೆ. ಇವರೆಲ್ಲರೂ ಧಾರ್ಮಿಕ ಗುರುಗಳು, ನುನ್ಸಿಯೊಸ್ ಮತ್ತು ಪ್ರೊನುನ್ಸಿಯೊಸ್‍ರವರು ರಾಯಭಾರಿಯ ಹುದ್ದೆಗೆ ಸರಿಸಮಾನರು. ಇಂಟರ್‍ನುನ್ಸಿಯೊಸ್ ಹುದ್ದೆ ರಾಯಭಾರಿಯ ಹುದ್ದೆಗಿಂತ ಕೆಳಮಟ್ಟದ್ದು. ಇದಲ್ಲದೆ ಜಗದ್ಗುರು ಕೆಲವು ಸಲ ತನ್ನ ವಿಶೇಷ ನಿಯೋಗವನ್ನು ಸಹ ಕಳುಹಿಸುವುದುಂಟು. ಪೂಜ್ಯ ಜೇಮ್ಸ್ ರಾಬರ್ಟ್‍ನಾಕ್ಸ್ ಭಾರತದಲ್ಲಿ ಇಂಥ ಪ್ರತಿನಿಧಿಗಳಲ್ಲೊಬ್ಬರು. (ಎ.ಪಿ.ಆರ್.)