ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಫ್ರೀಮನ್, ರಿಚರ್ಡ್ ಆಸ್ಟಿನ್

ವಿಕಿಸೋರ್ಸ್ದಿಂದ

ಫ್ರೀಮನ್, ರಿಚರ್ಡ್ ಆಸ್ಟಿನ್ 1862-1943. ಇಂಗ್ಲಿಷ್ ಪತ್ತೆದಾರಿ ಕತೆಗಾರ. ಲಂಡನ್ನಿನಲ್ಲಿ ಹುಟ್ಟಿ ಮಿಡಲ್‍ದೆಕ್ಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯ ಕಲಿತು 1886ರಲ್ಲಿ ಅಲ್ಲೇ ವೈದ್ಯನಾಗಿ ಕೆಲಸಕ್ಕೆ ಸೇರಿದ. 1889ರಲ್ಲಿ ವೈದ್ಯನಿಯೋಗದೊಡನೆ ಪಶ್ಚಿಮ ಆಫ್ರಿಕಾಕ್ಕೆ ಹೋಗಿ ಅದರ ವಿಚಾರವಾಗಿ ಟ್ಯ್ರಾವಲ್ಸ್ ಅಂಡ್ ಲೈಫ್ ಇನ್ ಆಶಂಟಿ ಅಂಡ್ ಜಮು (1898) ಎಂಬ ತನ್ನ ಮೊದಲ ಪುಸ್ತಕವನ್ನು ಬರೆದ. ಕಾಯಿಲೆಯಿಂದಾಗಿ ಅಲ್ಲಿಂದ ಹಿಂದಿರುಗಬೇಕಾಯಿತು. ಮೊದಲ ಮಹಾಯುದ್ಧದಲ್ಲಿ ವೈದ್ಯನಾಗಿ ಕೆಲಸಮಾಡಿದ. ಈತ ಸೃಷ್ಟಿಸಿದ ಡಾ. ತಾರ್ನ್‍ಡೈಕ್ ಪತ್ತೇದಾರ ತನ್ನ ವಿಜ್ಞಾನ ಚಾತುರ್ಯದಿಂದ ಲೋಕಪ್ರಸಿದ್ಧನಾದ.

ದಿ ರೆಡ್ ತಂಬ್ ಮಾರ್ಕ್ (1907), ಜಾನ್ ತಾರ್ನ್‍ಡೈಕ್ಸ್ ಕೇಸಸ್ (1909), ದಿ ಆಯ್ ಆಫ್ ಓಸಿರಿಸ್ (1911), ದಿ ಗ್ರ್ರೇಟ್ ಪೋರ್‍ಟ್ರೇಟ್ ಮಿಸ್ಟರಿ (1918), ಡಾ. ತಾರ್ನ್‍ಡೈಕ್ಸ್ ಕೇಸ್‍ಬುಕ್ (1923). ವೆನ್ ರೋಗ್ಸ್ ಫಾಲ್ ಔಟ್ (1932) ದಿ ಸಿಂಗಿಂಗ್ ಬೋನ್ (1912).

ಈ ಕೊನೆಯ ಕಾದಂಬರಿಯಲ್ಲಿ ಲೇಖಕ ನಡೆದ ಕೊಲೆಯನ್ನು ಮೊದಲು ವಿವರವಾಗಿ ತಿಳಿಸಿ ಅನಂತರ ನಿಪುಣ ಪತ್ತೇದಾರ ಅದನ್ನು ಹೇಗೆ ಬಿಡಿಸಿದ ಎಂಬುದನ್ನು ವಿವರವಾಗಿ ಸ್ವಾರಸ್ಯವಾಗಿ ವರ್ಣಿಸಿದ್ದಾನೆ. (ಎಜ್.ವಿ.ಎಸ್.)